ಬ್ರಹ್ಮಚರ್ಯ ಹಾಗೆಂದರೇನು

News Image 1

ಬ್ರಹ್ಮಚರ್ಯ ಎಂದರೇನು?

ಬ್ರಹ್ಮಚರ್ಯ ಎನ್ನುವ ಶಬ್ದ ಒಬ್ಬ ವಯಸ್ಸಿಗೆ ಬಂದ ಸ್ತ್ರೀ ಪುರುಷರಿಗೆ ಬಹುವಾಗಿ ಕಾಡುವ ಪ್ರಶ್ನೆ. ಇದು ಎಲ್ಲಾ ಸ್ಥಳಗಳಲ್ಲೂ ಎಲ್ಲಾ ಧರ್ಮಗಳಲ್ಲೂ ಈ ವಿಚಾರ ಚರ್ಚೆಯಾಗುತ್ತದೆ. ನಮ್ಮ ಪುರಾತನ ಧರ್ಮದ ಅಡಿಯಲ್ಲಿ ಇದನ್ನು ಬ್ರಹ್ಮಚರ್ಯ ಎಂದು ಕರೆಯುತ್ತಾರೆ. ಇದರ ಬಗ್ಗೆಯೇ ಧರ್ಮದ ಪುಸ್ತಕಗಳು ರಚಿತವಾಗಿದೆ.

News Image 2

ವ್ಯಾಖ್ಯಾನದ ರೀತಿ

ಇದನ್ನು ವ್ಯಾಖ್ಯಾನಿಸುವವರು ತಮಗೆ ತಿಳಿದಂತೆ ವ್ಯಾಖ್ಯಾನಿಸುತ್ತಾ ಹೋಗುತ್ತಾರೆ. ಮನುಷ್ಯನ ಸ್ವಭಾವ ಅದೇ ಅಲ್ಲವೇ ಕಂಡದ್ದನ್ನು ಮತ್ತು ಕೇಳಿದ್ದನ್ನು ತನ್ನ ಅನುಭವದ ಆಧಾರದ ಮೇಲೆ ಇನ್ನೊಬ್ಬರಿಗೆ ತಿಳಿಸುವ ಕೆಲಸವನ್ನು ಮಾಡುತ್ತಾನೆ. ಅದೇ ರೀತಿಯಲ್ಲಿ ಬ್ರಹ್ಮಚರ್ಯ ಕೂಡ. ಅದರ ಅರ್ಥವನ್ನು ಇನ್ನೊಬ್ಬರಿಂದ ಕೇಳಿ ನಾವು ತಿಳಿದುಕೊಂಡಿದ್ದೇ ಹೆಚ್ಚು ಹೊರತು ಅದರ ಜಿಜ್ಞಾಸೆ ಅಥವಾ ನೈಜ ಅರ್ಥವನ್ನು ತಿಳಿಯುವ ಪ್ರಯತ್ನವನ್ನು ನಾವು ಮಾಡಿದ್ದು ತೀರ ಅಪರೂಪ.

News Image 3

ಆನಂದ ಮೂರ್ತಿಗಳ ವ್ಯಾಖ್ಯೆ

ಇದರಲ್ಲಿ ಆನಂದ ಮಾರ್ಗ ಸಂಸ್ಥೆಯ ಸ್ಥಾಪಕರಾದಂತಹ ಶ್ರೀ ಶ್ರೀ ಪಿ.ಆರ್. ಸರ್ಕಾರ್‌ರವರು ಹೇಳುವಂತೆ ಬ್ರಹ್ಮಚರ್ಯ ಶಬ್ದದದಲ್ಲಿ ಅರ್ಥದಲ್ಲಿ ಅರ್ಥ ಇದೆ. ಇಲ್ಲಿ ಬ್ರಹ್ಮಚರ್ಯ ಅನ್ನುವಂಥದ್ದು ಎರಡು ಶಬ್ದಗಳಿಂದ ರಚಿತವಾದ ಶಬ್ದ ಬ್ರಹ್ಮ ಮತ್ತು ಚರ್ಯ. ಬ್ರಹ್ಮ ಅಂದರೆ ದೇವರು ಅಥವಾ ಸೃಷ್ಠಿಕರ್ತ ಎಂಬುದಾಗಿಯೂ ಚರ್ಯ ಎಂದರೆ ಕಾರ್ಯ. ನಾವು ಮಾಡುವ ಯಾವತ್ತೂ ಕಾರ್ಯವು ಬ್ರಹ್ಮನ ಹೆಸರಿನಡಿಯಲ್ಲಿ ಮತ್ತು ಬ್ರಹ್ಮನ ಬಗ್ಗೆಯೇ ಕುರಿತಾಗಿ ಇದ್ದರೆ ಅದನ್ನು ಬ್ರಹ್ಮಚರ್ಯ ಎಂದು ಕರೆಯುತ್ತಾರೆ.

News Image 4

ಕಾಮದ ಸ್ಥಾನ

ಬ್ರಹ್ಮಚರ್ಯದಲ್ಲಿ ಕಾಮದ ವಿಚಾರಕ್ಕೆ ತೀರಾ ಇಲ್ಲವೆನ್ನಬಹುದಾದ ಅಂಶವನ್ನು ಕಾಣುತ್ತೇವೆ. ಬ್ರಹ್ಮಚರ್ಯ ಎನ್ನುವುದನ್ನ ಬಹಳ ಜನರು ಕಾಮದೊಡನೆ ಜೋಡಿಸುತ್ತಾರೆ. ನಿಜ ಹೇಳಬೇಕೆಂದರೆ ಕಾಮದ ಆಸಕ್ತಿಯು ಮನಸ್ಸನ್ನು ಚಂಚಲ ಮಾಡುತ್ತದೆ ಒಮ್ಮೆ ಕಾಮದ ಆಸೆ ಮನದಲ್ಲಿ ಹುಟ್ಟಿತು ಎಂದರೆ ಅದನ್ನು ನಿಗ್ರಹಿಸುವುದು ಮಹಾದೊಡ್ಡ ಕಷ್ಟ.

News Image 5

ವಿಚಿತ್ರವೆಂದರೆ

ಸರಿಯಾದ ಮಾರ್ಗದರ್ಶನ ಸರಿಯಾದ ತಿಳುವಳಿಕೆ ಸರಿಯಾದ ಜೀವನ ಶೈಲಿ, ಸರಿಯಾದ ರೀತಿ-ನೀತಿ, ನಮ್ಮ ಮನೆಗಳಿಂದ, ನಮ್ಮ ಹೊರಗಿನ ಪರಿಸರಗಳಿಂದ, ಹಿರಿಯರಿಂದ, ತಂದೆ ತಾಯಿಗಳಿಂದ ದೊರೆತದ್ದೆ ಹೌದಾದರೆ ಈ ಕಾಮದ ನಿಗ್ರಹ ಕಷ್ಟವೇನಲ್ಲ. ಅದಕ್ಕೆ ಹೇಳಿದ್ದಾರೆ, ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಅಂತ. ಆದರೆ ಜಗತ್ತಿನ ಪ್ರಾಣಿ ಸಂಕುಲ ಕಾಮವನ್ನು ನಿಗ್ರಹಿಸುವುದಕ್ಕೆ ತಮ್ಮ ಪೂರ್ತಿ ಜೀವನವನ್ನೇ ಮುಡುಪಾಗಿಡುತ್ತದೆ ಎಷ್ಟು ವಿಚಿತ್ರವಲ್ಲೇ!!!

News Image 5

ಮುಂದುವರಿಕೆ

ಕಾಮದ ವಿಷಯಕ್ಕೆ ಸಂಬಂದಿಸಿದ ಸರಣಿಲೇಖನ ಮಾಲಿಕೆ ನಿಮಗಾಗಿ ಇಡಲಾಗುತ್ತದೆ, ಇಂದಿನ ಯುವ ಜನತೆಗೆ ಮಾರ್ಗದರ್ಶನವಾಗಿ ಈ ಲೇಖನ ಮಾಲೆಯನ್ನ ಬರೆಯಲಾಗುತ್ತದೆ. ಪ್ರಶ್ನೆಗಳನ್ನ ಕೇಳುವವರು ಕಮೆಂಟ್‌ ಬಾಕ್ಸನಲ್ಲಿ ಕೇಳಬಹುದು. ಇಲ್ಲವೆಂದರೆ ನಮಗೆ ನೇರವಾಗಿ ಇಮೇಲ್‌ ಕೂಡಾ ಮಾಡಬಹುದು

Share:

0 Comments:

ಕಾಮೆಂಟ್‌‌ ಪೋಸ್ಟ್‌ ಮಾಡಿ

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels

Blog Archive