ಸಿರ್ಸಿ ಜಿಲ್ಲೆಯಲ್ಲಿ 1ನೇ ರ್ಯಾಂಕ್, ಉತ್ತರ ಕನ್ನಡ ಜಿಲ್ಲೆಗೆ 2ನೇ ಸ್ಥಾನ!
ಜೋಯಿಡಾ ತಾಲೂಕಿನ ಗುಂದದ ಹಳೆಯ ವಿದ್ಯಾರ್ಥಿನಿ ಕನ್ನಿಕಾ ಭಟ್ ಅದ್ಭುತ ಯಶಸ್ಸು!
ಸಿರ್ಸಿ: ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿಯ (KSEAB) II PUC ಪರೀಕ್ಷೆಯಲ್ಲಿ ಜೋಯಿಡಾ ತಾಲೂಕಿನ ಗುಂದ ಸರಕಾರಿ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿನಿ ಕನ್ನಿಕಾ ಗಜಾನನ್ ಭಟ್ ಅಸಾಧಾರಣ ಯಶಸ್ಸು ಸಾಧಿಸಿದ್ದಾರೆ.
ಹಾರ್ದಿಕ ಅಭಿನಂದನೆಗಳು!
ಕನ್ನಿಕಾ ಗಜಾನನ್ ಭಟ್ ರವರಿಗೆ
592/600 ಮಾರ್ಕ್ಸ್ ಸಾಧನೆಗೆ!

|ಶಿರ್ಸಿ ಶೈ.ಜಿಲ್ಲೆಗೆ 1ನೇ ಸ್ಥಾನ |
|ಉತ್ತರ ಕನ್ನಡ ಜಿಲ್ಲೆಗೆ 2ನೇ ಸ್ಥಾನ |
|ಕರ್ನಾಟಕ ರಾಜ್ಯಕ್ಕೆ 8ನೇ ಸ್ಥಾನ|
ಅವರು 592/600 ಮಾರ್ಕ್ಸ್ (98.66%) ಪಡೆದು ಸಿರ್ಸಿ ಶೈ.ಜಿಲ್ಲೆಗೆ 1ನೇ ಸ್ಥಾನ ಮತ್ತು ಅಖಂಡ ಉತ್ತರ ಕನ್ನಡ ಜಿಲ್ಲೆಗೆ 2ನೇ ಸ್ಥಾನ ಗಳಿಸಿ ಕರ್ನಾಟಕಕ್ಕೆ 8 ನೇ ಸ್ಥಾನ ದಲ್ಲಿದ್ದಾರೆ!
ಪೂರ್ಣ ಹೆಸರು: ಕನ್ನಿಕಾ ಗಜಾನನ್ ಭಟ್
ಕನ್ನಡ: 99/100 ,ಇಂಗ್ಲಿಷ್: 95/100, ಭೌತಶಾಸ್ತ್ರ: 99/100, ರಸಾಯನಶಾಸ್ತ್ರ: 99/100,
ಗಣಿತ: 100/100, ಜೀವಶಾಸ್ತ್ರ: 100/100 ಅಂತೂ ಒಟ್ಟು ಮಾರ್ಕ್ಸ್: 592/600 ಫಲಿತಾಂಶ: ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಕನ್ನಡ ಮಾಧ್ಯಮದಲ್ಲಿ ಓದಿಯೂ ಸಾಧನೆ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ.
ಕನ್ನಿಕಾ ಭಟ್‌ರವರ ಅಂಕ ಪಟ್ಟಿ ನೋಡಿದವರೆಲ್ಲರೂ ಕಣ್ಣೂ ಬಾಯಿ ಬಿಟ್ಟು ನೋಡುತ್ತಿದ್ದು ಆಶ್ಚರ್ಯಚಕಿತರಾಗಿದ್ದಾರೆ, ಈ ಹಿಂದೆ ಎಸ್.ಎಸ್.ಎಲ್.ಸಿ ಪರೀಕ್ಷೆಗಳಲ್ಲಷ್ಟೇ ಅತೀ ಹೆಚ್ಚು ಅಂಕ ಕಾಣಬಹುದಾಗಿತ್ತು ಆದರೆ ಈಗ ಅಂಕಗಳಿಸುವ ರೀತಿ ಪಿ.ಯೂ.ಸಿಗೂ ಹಬ್ಬಿಬಿಟ್ಟಿದೆ. ಅದೇನು ಅಂಕಗಳೋ ಅಥವಾ ಅಂಕಿಗಳೋ ಎಂದು ಹಲವರು ಗೊಂದಲಕ್ಕೀಡಾಗಿದ್ದಾರೆ. ಒಟ್ಟಿನಲ್ಲಿ ಅತ್ಯುತ್ತಮ ಅಂಕಗಳಿಸಿ ತನಗೆ, ತನ್ನ ಮನೆಮಂದಿಗೆ, ತನ್ನೂರಿಗೆ, ತಾನು ಕಲಿತ ಶಾಲೆಗೆ ತಾಲೂಕಿಗೆ ಜಿಲ್ಲೆಗೆ ಹೆಮ್ಮೆ ತಂದಿರುತ್ತಾರೆ. ಹಿಂದುಳಿದಿರುವ ಜಿಲ್ಲೆ ಎಂಬ ಹಣೆ ಪಟ್ಟಿ ಹೊತ್ತಿರುವ ಜೋಯಿಡಾದ ಹೆಸರನ್ನ ಇನ್ನೊಮ್ಮೆ ಮುನ್ನೆಲೆಗೆ ತಂದ ಕೀರ್ತಿ ಕನ್ನಿಕಾರದ್ದು. ಈ ಹಿಂದೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಜೋಯಿಡಾ ಟಾಪರ್ ಆಗಿ ಗಮನ ಸೆಳೆದಿತ್ತು.
ಸರಕಾರಿ ಹೈಸ್ಕೂಲಿನ ಮುಖ್ಯಶಿಕ್ಷಕರಾದ ಶ್ರೀ ಜೋಸೆಫ್ ರವರು: "ಕನ್ನಿಕಾ ಯಾವಾಗಲೂ ಅತ್ಯಂತ ಶಿಸ್ತುಬದ್ಧ ವಿದ್ಯಾರ್ಥಿನಿಯಾಗಿದ್ದು ಪ್ರೌಢ ಶಾಲೆಯಲ್ಲಿ ಅವಳ ಸಾಧನೆ ಗಮನಾರ್ಹವಾಗಿತ್ತು. ಈಗ ಇವಳ ಸಾಧನೆ ನಮಗೆಲ್ಲ ಸಂತಸ ತಂದಿದೆ ಅವಳ ಸಾಧನೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಸ್ಪೂರ್ತಿ!" ಎಂದರು
ಪೋಷಕರಾದ ಶ್ರೀ ಗಜಾನನ ಭಟ್‌ರವರು: "ನಮ್ಮ ಮಗಳ ಸಾಧನೆಗೆ ನಾವು ಹೆಮ್ಮೆ ಪಡುತ್ತೇವೆ. ಗುಂದದಂತಹ ಸಣ್ಣ ಗ್ರಾಮದವಳಾದ ನಮ್ಮ ಮಗಳು ಇಂತಹ ಯಶಸ್ಸು ಸಾಧಿಸಿದ್ದು ಅಪಾರ ಸಂತೋಷ. ತಂದಿದೆ" ಎಂದರು
ಕನ್ನಿಕಾ NEET/JEE ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ ಮತ್ತು ವೈದ್ಯಕೀಯ ಶಿಕ್ಷಣದತ್ತ ಹೆಜ್ಜೆ ಇಡಲು ಉದ್ದೇಶಿಸಿದ್ದಾರೆ.
"ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಹ ಸರಿಯಾದ ಮಾರ್ಗದರ್ಶನ ಮತ್ತು ಪರಿಶ್ರಮದಿಂದ ಉನ್ನತ ಶಿಕ್ಷಣದಲ್ಲಿ ಮುನ್ನಡೆಯಬಹುದು ಎಂಬುದಕ್ಕೆ ಕನ್ನಿಕಾ ಉದಾಹರಣೆ!"
#KannikaBhat #PUCResult2025 #SirsiTopper #UttaraKannada #GundajoidaPride
KSEAB ಲಿಂಕ್: https://kseab.karnataka.gov.in
ಫಲಿತಾಂಶ ಮತ್ತು ಮರುಮೌಲ್ಯೀಕರಣ ಪ್ರಕ್ರಿಯೆಗಾಗಿ:
ಫಲಿತಾಂಶ ಪರಿಶೀಲಿಸಿ | ಮರುಮೌಲ್ಯೀಕರಣ ಅರ್ಜಿ
ಗಮನಿಸಿ: ಈ ಫಲಿತಾಂಶ 8 ಏಪ್ರಿಲ್ 2025ರಂದು KSEAB ವೆಬ್ಸೈಟ್ನಲ್ಲಿ ಪ್ರಕಟವಾಗಿದೆ. ರೀವ್ಯಾಲ್ಯೂಯೇಶನ್/ರಿಟೋಟಲಿಂಗ್ಗಾಗಿ ಅಧಿಕೃತ ನೋಟಿಫಿಕೇಶನ್ಗಳನ್ನು ಪರಿಶೀಲಿಸಿ.
0 Comments:
ಕಾಮೆಂಟ್ ಪೋಸ್ಟ್ ಮಾಡಿ