ಬಂದೇಬಿಡ್ತು ಆದೇಶ ಪ್ರಧಾನಮಂತ್ರಿ ಪೋಷಣ ಅಭಿಯಾನದ ಅಕ್ಷರದಾಸೋಹ ಕಾರ್ಯಕ್ರಮದ ನಿರ್ವಹಣೆ


ಅಕ್ಷರ ದಾಸೋಹ ಕಾರ್ಯಕ್ರಮ ಅನೇಕ ರೀತಿಯಲ್ಲಿ ಶಾಲೆಗೆ ವಿದ್ಯಾರ್ಥಿಗಳು ಹಾಜರಾಗಲು ಅನುವು ಮಾಡಿಕೊಡುತ್ತದೆ. ಆದರೆ ಇದೇ ಕಾರ್ಯಕ್ರಮವು ಇದರ ನಿರ್ವಹಣೆಯಲ್ಲಿ ಅನೇಕ ಅಪವಾದಗಳನ್ನು ಎದುರಿದುತ್ತಿದೆ, ಈಗ ಸ್ಥಳೀಯ ಸುದ್ಧಿ ಪತ್ರಿಕೆ ಆಧರಿಸಿ ಜಿಲ್ಲಾಪಂಚಾಯತ ಸಿ.ಇ.ಓ.ರವರು ಇಡೀ ಜಿಲ್ಲೆಯ ಅಕ್ಷರ ದಾಸೋಹ ಕಾರ್ಯಕ್ರಮಕ್ಕೊಂದು ರೂಪುರೇಶೆಗಳನ್ನ ಹಾಕಿಕೊಟ್ಟಿರುತ್ತಾರೆ.

1. ಶಾಲಾ ಹಂತದಲ್ಲಿ ಮುಖ್ಯ ಶಿಕ್ಷಕರ ಮತ್ತು ಶಿಕ್ಷಕರ ಹಾಗೂ ಅಡುಗೆ ಸಿಬ್ಬಂದಿಗಳ ಜವಾಬ್ದಾರಿಯ ಬಗ್ಗೆ:

ದಾಸ್ತಾನು ದಾಖಲೆ ನಿರ್ವಹಣೆ: ಶಾಲೆಯಲ್ಲಿ ಆಹಾರ ಧಾನ್ಯಗಳ ಶಿಲ್ಕು ಇರದಿದ್ದಾಗ ಮುಂಜಾಗ್ರತಾ ಕ್ರಮವಾಗಿ ಹತ್ತಿರದ ಶಾಲೆಗಳಿಂದ ಪಡೆಯುವ ಆಹಾರ ಧಾನ್ಯಗಳ ಮಾಹಿತಿಯನ್ನು ಆಹಾರ ಧಾನ್ಯ ನೀಡುವ ಶಾಲೆಯ ದಾಸ್ತಾನು ವಹಿಯಲ್ಲಿ ಸದರಿ ಪ್ರಮಾಣದ ಆಹಾರಧಾನ್ಯವನ್ನು ಯಾವ ಶಾಲೆಗೆ ನೀಡಲಾಗಿದೆ ಮತ್ತು ಪ್ರಮಾಣವೆಷ್ಟು ಎಂಬುದರ ಬಗ್ಗೆ ಸ್ಪಷ್ಟವಾಗಿ ದಾಖಲು ಮಾಡುವುದು. 

ದಾಖಲೆ ಇಡುವುದು: ಮುಂದುವರೆದು ಆಹಾರ ಧಾನ್ಯ ಪಡೆದ ಶಾಲೆಯ ಮುಖ್ಯಾಧ್ಯಾಪಕರು ಎಷ್ಟು ಪ್ರಮಾಣ ಯಾವ ಶಾಲೆಯಿಂದ ಪಡೆಯಲಾಗಿದೆ ಎಂಬುವುದನ್ನು ಶಾಲಾ ದಾಸ್ತಾನು ವಹಿಯಲ್ಲಿ ನಮೂದಿಸತಕ್ಕದ್ದು. ಇದನ್ನು ಎಲ್ಲಾ ಹಂತದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲಾ ಭೇಟಿಯ ಸಂದರ್ಭದಲ್ಲಿ ಪರಿಶೀಲನೆ ಮಾಡುವುದು ಕಡ್ಡಾಯವಾಗಿರುತ್ತದೆ. ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ ಸಂಬಂಧಿಸಿದ ಮುಖ್ಯ ಶಿಕ್ಷಕರು ಹಾಗೂ ಸಿ.ಆರ್.ಪಿ. ರವರನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು.

ಪತ್ರ ದಾಖಲೆ ನಿರ್ವಹಣೆ: ಮೇಲಿನ ಬದಲಿ ವ್ಯವಸ್ಥೆ ಪ್ರಕ್ರಿಯೆಗೆ ಸಂಬಂಧಿಸಿ ಇಬ್ಬರು ಶಾಲಾ ಮುಖ್ಯಾಧ್ಯಾಪಕರು ಪತ್ರ ವ್ಯವಹಾರ ನಡೆಸಿದ ಮಾಹಿತಿಯನ್ನು ಸಹಾಯಕ ನಿರ್ದೇಶಕರು ಪಿ.ಎಂ.ಪೋಷಣ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ಕಡ್ಡಾಯವಾಗಿ ಪತ್ರದ ಮೂಲಕ ಸಲ್ಲಿಸುವುದು.

ಸಂಚಿತ ನಿಧಿ ಬಳಕೆ: ಶಾಲೆಯಲ್ಲಿ ಆಹಾರ ಧಾನ್ಯಗಳ ಕೊರತೆಯಾದ ಸಂದರ್ಭದಲ್ಲಿ ಇಲಾಖಾ ನಿರ್ದೇಶನದಂತೆ ಆಹಾರ ಧಾನ್ಯಗಳನ್ನು ಶಾಲಾ ಸಂಚಿತ ನಿಧಿಯಲ್ಲಿ ಉಳಿಕೆಯಾಗಿರುವ ಅನುದಾನವನ್ನು ಬಳಕೆ ಮಾಡಿ ಖರೀದಿಸಿದ್ದಲ್ಲಿ ದಾಸ್ತಾನು ವಹಿ ಮತ್ತು ನಗದು ವಹಿಯಲ್ಲಿ ಎಷ್ಟು ಪ್ರಮಾಣದ ಆಹಾರ ಧಾನ್ಯ ಖರೀದಿ ಮಾಡಿರುವ ಬಗ್ಗೆ ಸಂಬಂಧಪಟ್ಟ ರಶೀದಿ ದಾಖಲೆಗಳನ್ನು ಕಾಯ್ದಿರಿಸಿ ತಪಾಸಣಾ ಅವಧಿಯಲ್ಲಿ ಹಾಜರುಪಡಿಸುವುದು.

ದಾಸ್ತನು ದೃಢೀಕರಿಸುವಿಕೆ: ಮುಖ್ಯ ಶಿಕ್ಷಕರು 10 ಎಪ್ರಿಲ್ 2025 ರ ನಂತರ ಶಾಲೆಗಳಲ್ಲಿ ಉಳಿಕೆ ಇರುವ ಆಹಾರ ಧಾನ್ಯಗಳನ್ನು ಪರಿಶೀಲಿಸಿ ದಾಸ್ತಾನು ವಹಿಯಲ್ಲಿ ಉಳಿಕೆ ಪ್ರಮಾಣವನ್ನು ನಮೂದಿಸಿ ದಾಖಲಿಸಿ ದೃಢೀಕರಿಸುವುದು.

ಸೂಕ್ತ ರಕ್ಷಣೆ ಮತ್ತು ಪೂರ್ಣ ಸ್ವಚ್ಛತೆ: ಶಾಲಾ ದಾಸ್ತಾನಿನಲ್ಲಿರುವ ಆಹಾರ ಪದಾರ್ಥಗಳು ಕೆಡದಂತೆ, ಹುಳಹಿಡಿಯದಂತೆ ಸೂಕ್ತ ಸಂರಕ್ಷಣಾ ಕ್ರಮಗಳನ್ನು ಪಾಲಿಸಿ ಸುರಕ್ಷತೆಗಾಗಿ ಕ್ರಮವಹಿಸುವುದು. ಆಹಾರ ಧಾನ್ಯಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲು ವಾರಕೊಮ್ಮೆ ದಾಸ್ತಾನು ಕೊಠಡಿಗೆ ಭೇಟಿ ನೀಡಿ Deep Cleaning ಮಾಡಿಸಿ ಸ್ವಚ್ಛತೆಯನ್ನು ಕಾಪಾಡುವುದು.

ಅಕ್ಕಿ, ಗೋಧಿ, ತೊಗರಿಬೇಳೆ ಮುಂತಾದ ಆಹಾರ ಪದಾರ್ಥಗಳನ್ನು ಸ್ವಚ್ಚಗೊಳಿಸಿ ಬಿಸಿಲಿನಲ್ಲಿ ಒಣಹಾಕಿ ಕಳಪೆಯಾಗದಂತೆ ನೋಡಿಕೊಳ್ಳುವುದು. 


ಅಡುಗೆಯ ವಸುಗಳ ಕಾಳಜಿ: ಅಕ್ಕಿ, ಗೋಧಿ, ತೊಗರಿಬೇಳೆ ಮುಂತಾದ ಆಹಾರ ಪದಾರ್ಥಗಳನ್ನು ಮಳೆ ನೀರಿನಲ್ಲಿ ನೆನೆಯದಂತೆ ನೋಡಿಕೊಳ್ಳಲು ನೆಲದ ಮೇಲೆ ಪ್ಲಾಸ್ಟಿಕ್/ಮರದ ಮಣೆಗಳನ್ನು ಬಳಸಿ ಅದರ ಮೇಲೆ ಆಹಾರ ಧಾನ್ಯಗಳ ಮೂಟೆಗಳನ್ನು ಜೋಡಿಸುವುದು. ಹೀಗೆ ಜೋಡಿಸುವಾಗ ಮೂಟೆಗಳು ಗೋಡೆಗೆ ತಗಲದಂತೆ ಸುತ್ತಲೂ ಒಂದು ಆಡಿ ಅಂತರವನ್ನು ಕಾಯ್ದುಕೊಳ್ಳುವುದು. ಅಡುಗೆ ಕೋಣೆಗಳಲ್ಲಿ ಇಲಿಗಳು ಬರದಂತೆ ಕ್ರಮವಹಿಸುವುದು. ಗೋಡೆಗಳನ್ನು ಸ್ವಚ್ಚಗೊಳಿಸಿ ಜಾಡ ತೆಗೆದು, ಹಲ್ಲಿ, ಜಿರಲೆ, ನೊಣಗಳು ಬರದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು. ಕಿಟಕಿ, ಎಕ್ಸಾಸ್ಟ್ ಫ್ಯಾನ್ ಇರುವ ಜಾಗದಲ್ಲಿ ಕಬ್ಬಿಣದ ಮೆಶ್ ಹಾಕಿಸಿ ಹೊರಗಿನಿಂದ ಯಾವುದೇ ಕ್ರಿಮಿ-ಕೀಟಗಳು ಬರದಂತೆ ಭದ್ರಪಡಿಸುವುದು.

ದಾಸ್ತಾನಿನ ಬಳಕೆಯ ನಿರ್ವಹಣೆ: ಶಾಲೆಯಲ್ಲಿ ದಾಸ್ತಾನು ಇರುವ ಆಹಾರ ಪದಾರ್ಥಗಳನ್ನು FIFO ಮತ್ತು FEFO ಪದ್ಧತಿಯಲ್ಲಿ ಬಳಸುವುದು. ಅವಧಿ ಮುಗಿದ ಪದಾರ್ಥಗಳನ್ನು ಬಿಸಿ ಊಟದಲ್ಲಿ ಬಳಸುವಂತಿಲ್ಲ. ಆಹಾರ ಪದಾರ್ಥಗಳ ಪ್ಯಾಕೇಟ್ ಮತ್ತು ಮೂಟೆಗಳ ಮೇಲೆ ಯಾವ ದಿನದಂದು ಆಹಾರ ಪದಾರ್ಥಗಳನ್ನು ದಾಸ್ತಾನಿನಲ್ಲಿಡಲಾಗಿದೆ ಎಂಬ ಮಾಹಿತಿಗೆ ಅನುಗುಣವಾಗಿ ದಿನಾಂಕವನ್ನು ನಮೂದಿಸುವುದು. ಇದರಂತೆ ಪರಿಶೀಲಿಸಿ ಮೊದಲು ಬಂದ ಆಹಾರ ಪದಾರ್ಥಗಳನ್ನೇ ಮೊದಲು ಬಳಸುವುದನ್ನು ಖಚಿತಪಡಿಸಿಕೊಳ್ಳುವುದು. ಈ ಬಗ್ಗೆ ಮುಖ್ಯ ಆಡುಗೆಯವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು.

ಹಾಳಾದ ಆಹಾರ ಧಾನ್ಯದ ನಿರ್ವಹಣೆ:  ಕಳಪೆಯಾದ. ಹುಳ ತಿಂದ, ಗುಣಮಟ್ಟ ಹಾಳಾಗಿರುವ, ಕೊಳೆತಿರುವ ಆಹಾರ ಧಾನ್ಯಗಳು, ಆಹಾರ ಪದಾರ್ಥಗಳನ್ನು ದಾಸ್ತಾನಿನಿಂದ ನೋಡಿಕೊಳ್ಳುವುದು. ಬೇರ್ಪಡಿಸಿ ಬಳಸದಂತೆ ಹೊರ ಹಾಕುವುದು.

ಅಕ್ಷರ ದಾಸೋಹ ಉಗ್ರಾಣದ ನಿರ್ವಹಣೆ: ಶಾಲೆಯಲ್ಲಿ ದಾಸ್ತಾನು ಇಟ್ಟಿರುವ ಆಹಾರ ಧಾನ್ಯಗಳು, ಪದಾರ್ಥಗಳು, ಪಾತ್ರೆ-ಪರಿಕರಗಳು, ಸ್ಟವ್ -ಗ್ಯಾಸ್ ಸಿಲಿಂಡರಗಳು ಇರುವ ಅಡುಗೆ ಕೋಣೆ, ಉಗ್ರಾಣವನ್ನು ಬೇಸಿಗೆ ರಜೆಯಲ್ಲಿ ಸರಿಯಾಗಿ ಬೀಗ ಹಾಕಿ ಭದ್ರಪಡಿಸುವುದು. ಶಾಲೆಗೆ ಆಗಾಗ್ಗೆ ಭೇಟಿ ನೀಡಿ ಉಗ್ರಾಣ ಹಾಗೂ ಅಡುಗೆ ಕೋಣೆ ಪರಿಶೀಲನೆ ನಡೆಸುವುದು. ಸುರಕ್ಷತೆಯ ಬಗ್ಗೆ ಬೇಜವಾಬ್ದಾರಿ ತೋರದಂತೆ ಹಾಗೂ ಕಳ್ಳತನವಾಗುವುದಕ್ಕೆ ಅವಕಾಶವಾಗದಂತೆ ಸೂಕ್ತ ಕ್ರಮವಹಿಸುವುದು. ದಾಸ್ತಾನು ಕೊಠಡಿಯನ್ನು ಸುರಕ್ಷಿತವಾಗಿ ಸೂಕ್ತ ಕ್ರಮಗಳಿಂದ ಭದ್ರಪಡಿಸಿ ಆಹಾರ ಪದಾರ್ಥಗಳು ಅಪವ್ಯಯವಾಗದಂತೆ ನೋಡಿಕೊಳ್ಳುವುದು ಮುಖ್ಯ ಶಿಕ್ಷಕರ ಜವಾಬ್ದಾರಿಯಾಗಿರುತ್ತದೆ.

2. ಸಹಾಯಕ ನಿರ್ದೇಶಕರು ಪಿ.ಎಂ.ಪೋಷಣ್ (ಮ.ಉ.ಯೋ) ರವರ ಜವಾಬ್ದಾರಿಗಳು:


ಶಾಲೆಗಳಲ್ಲಿ ಆಹಾರ ಧಾನ್ಯ ಕೊರತೆಯಾದ ಸಂದರ್ಭದಲ್ಲಿ ಬೇರೆ ಶಾಲೆಯಿಂದ ಆಹಾರ ಧಾನ್ಯದ ಬದಲಿ ವ್ಯವಸ್ಥೆ ಮಾಡಿಕೊಂಡಿರುವ ಶಾಲೆಗಳ ದಾಸ್ತಾನು ಮಾಹಿತಿಯನ್ನು ಪರಿಶೀಲಿಸುವುದು. ಸದರಿ ಮಾಹಿತಿಯಲ್ಲಿ ಯಾವುದೇ ಲೋಪಕಂಡುಬಂದಲ್ಲಿ ಮೇಲಾಧಿಕಾರಿಗಳಿಗೆ ವರದಿಯನ್ನು ನೀಡುವುದು.

ಶಾಲಾ ಸಂದರ್ಶನ ವೇಳೆಯಲ್ಲಿ ಮೇಲಿನ ಅಂಶಗಳಿಗೆ ಸಂಬಂಧಪಟ್ಟಂತೆ ಪರಿಶೀಲನೆ ಮಾಡಿ ವರದಿಯನ್ನು ಜಿಲ್ಲಾ ಪಿ.ಎಂ.ಪೋಷಣ್ ಕಚೇರಿಗೆ ನೀಡುವುದು. 

ಪ್ರತಿ ತಿಂಗಳು 10 ರಿಂದ 15 ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುವುದು. 

ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಎಂ.ಐ.ಎಸ್. ಪೋರ್ಟಲ್‌ನಲ್ಲಿ ಹಿಂದಿನ ತಿಂಗಳ ಮಾಹಿತಿಯನ್ನು ಭರ್ತಿ ಮಾಡುವುದು. 

ಎಸ್.ಎ.ಟಿ.ಎಸ್. ಪೋರ್ಟಲನಲ್ಲಿ ಪ್ರತಿ ದಿನದ ಮಕ್ಕಳ ಹಾಜರಾತಿ, ಬಿಸಿಯೂಟ ಮತ್ತು ಕ್ಷೀರಭಾಗ್ಯ ಫಲಾನುಭವಿಗಳ ಮಾಹಿತಿಯನ್ನು 100% ಎಂಟ್ರಿ ಮಾಡುವಂತೆ ಸೂಕ್ತ ಕ್ರಮವಹಿಸುವುದು. 

ತ್ರೈಮಾಸಿಕವಾರು ತಾಲ್ಲೂಕಾ ಹಂತಕ್ಕೆ ಬಿಡುಗಡೆಯಾಗುವ ಅನುದಾನವನ್ನು ಶಾಲೆಗಳಿಗೆ, ಸಾಗಾಣಿಕಾ ವೆಚ್ಚ, ಇತರೆ ವೆಚ್ಚವನ್ನು ನಿಗದಿತ ಸಮಯದೊಳಗೆ ಬಿಲ್ಲುಗಳನ್ನು ತಯಾರಿಸುವುದು. ಯಾವುದೇ ಕಾರಣಕ್ಕೂ ವಿಳಂಭವಾಗದಂತೆ ಸೂಕ್ತ ಕ್ರಮಕೈಗೊಳ್ಳುವುದು.

ಆಹಾರ ಧಾನ್ಯಗಳ ಬೇಡಿಕೆಯನ್ನು ನೀಡುವಾಗ ಶಾಲೆಗಳಲ್ಲಿ ಮತ್ತು ಗೋದಾಮುಗಳಲ್ಲಿ ಇರುವ ಶಿಲ್ಕನ್ನು ಪರಿಶೀಲನೆ ಮಾಡಿ ನೀಡುವುದು.

ಹಾಲಿನ ಪುಡಿ ಬೇಡಿಕೆಯನ್ನು ನೀಡುವಾಗ ಶಾಲೆಗಳಲ್ಲಿ ಇರುವ ಶಿಲ್ಕನ್ನು ಪರಿಶೀಲನೆ ಮಾಡಿ ನೀಡುವುದು.

3. ಉಪನಿರ್ದೇಶಕರು(ಆ) ಶಾಲಾ ಶಿಕ್ಷಣ ಇಲಾಖೆ ಇವರ ಕರ್ತವ್ಯಗಳು:


ಉಪನಿರ್ದೇಶಕರು(ಆ) ಶಾಲಾ ಶಿಕ್ಷಣ ಇಲಾಖೆ ಕಾರವಾರ/ಶಿರಸಿ ರವರು ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಿ.ಎಂ.ಪೋಷಣ್ (ಮ.ಉ.ಯೋ) ಅಡುಗೆ ಕೇಂದ್ರಗಳಿಗೆ ಭೇಟಿ ನೀಡಿ ಬಿಸಿಯೂಟ, ಕ್ಷೀರಭಾಗ್ಯ ಮತ್ತು ಪೂರಕ ಪೌಷ್ಠಿಕಾಂಶದ ಕುರಿತು ಪರಿಶೀಲನೆ ಮಾಡಿ ಮುಖ್ಯ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದು.

ಸುತ್ತೋಲೆಯ ಪ್ರಕಾರ ಕ್ರಮಕೈಗೊಂಡಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು.

 ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿ.ಆರ್.ಪಿ., ಸಿ.ಆರ್.ಪಿ. ಮೂಲಕ ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಡುಗೆ ಕೇಂದ್ರಗಳಿಗೆ ಭೇಟಿ ನೀಡಿ ಬಿಸಿಯೂಟ, ಕ್ಷೀರಭಾಗ್ಯ ಮತ್ತು ಪೂರಕ ಪೌಷ್ಠಿಕಾಂಶದ ಕುರಿತು ಪರಿಶೀಲನೆ ಮಾಡಿ ಶಾಲಾ ಸಂದರ್ಶನ ವಹಿಯಲ್ಲಿ ದಾಖಲಿಸುವುದು. ಮುಖ್ಯ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಸೂಚಿಸುವುದು.

ಜಿಲ್ಲೆಯಲ್ಲಿ ಪಿ.ಎಂ.ಪೋಷಣ್(ಮ.ಉ.ಯೋ) ನಿರ್ವಹಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದ ರೀತಿ ಸೂಕ್ತ ಕ್ರಮಕೈಗೊಳ್ಳುವುದು. 

ಪಿ.ಎಂ.ಪೋಷಣ್ ಯೋಜನೆಯಡಿ ಆಹಾರ ಧಾನ್ಯದ ಕೊರತೆಯಾದ ಪಕ್ಷದಲ್ಲಿ ಬದಲಿ ವ್ಯವಸ್ಥೆ ಮಾಡಿಕೊಂಡ ಶಾಲೆಗಳಲ್ಲಿ ಆಹಾರ ಧಾನ್ಯಗಳು ಅದೇ ಪ್ರಮಾಣದಲ್ಲಿ ತೆಗೆದುಕೊಂಡಿರುವ ಬಗ್ಗೆ ಹಾಗೂ ವಾರ್ಷಿಕವಾಗಿ ತಾಲ್ಲೂಕಾ ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತ್ರತ್ವದಲ್ಲಿ 3 ಅಧಿಕಾರಿಗಳ ತಂಡಗಳನ್ನು ರಚಿಸಿ ಕನಿಷ್ಠ 25 ಶಾಲೆಗಳ ನಗದು ವಹಿ ಮತ್ತು ದಾಸ್ತಾನು ವಹಿಯನ್ನು ಪರಿಶೀಲಿಸಿ ವರದಿಸಲು ಕ್ರಮಕೈಗೊಳ್ಳುವುದು

 

Share:

0 Comments:

ಕಾಮೆಂಟ್‌‌ ಪೋಸ್ಟ್‌ ಮಾಡಿ

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels

Blog Archive