ಉತ್ತರ ಕನ್ನಡದ ಪ್ರತಿಷ್ಟಿತ ಶಾಲೆಗಳಲ್ಲಿ ಉಚಿತವಾಗಿ ಕಲಿಯಿರಿ

ಪರಿಶಿಷ್ಟ ಪಂಗಡ ಪ್ರವೇಶ ಅರ್ಜಿ

ಸುವರ್ಣಾವಕಾಶ ತಪ್ಪಿಸಿಕೊಂಡರೆ ಮತ್ತೆ ಸಿಗದು ಅವಕಾಶ

2025-26 ನೇ ಶೈಕ್ಷಣಿಕ ವರ್ಷಕ್ಕೆ ಅರ್ಜಿ ಆಹ್ವಾನ

Education Opportunity

ಕಾರವಾರ, ಏಪ್ರಿಲ್ 20: ಪರಿಶಿಷ್ಟ ಪಂಗಡದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜ್ಯದ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶಾವಕಾಶ ಕಲ್ಪಿಸಲು ಕರ್ನಾಟಕ ಸರ್ಕಾರ ಹೊಸ ಯೋಜನೆ ಘೋಷಿಸಿದೆ. 2025-26 ನೇ ಶೈಕ್ಷಣಿಕ ವರ್ಷದ 5ನೇ ತರಗತಿಗೆ ಏಪ್ರಿಲ್ 19 ರಿಂದ ಮೇ 3 ರವರೆಗೆ ಅರ್ಜಿ ಸ್ವೀಕರಿಸಲಾಗುವುದು.

⚠️ ಪ್ರವೇಶ ಷರತ್ತುಗಳು:

  • ವಿದ್ಯಾರ್ಥಿಯು ಕರ್ನಾಟಕ ರಾಜ್ಯದವರಾಗಿರಬೇಕು.
  • ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ (RD ಪ್ರಮಾಣಪತ್ರ ಕಡ್ಡಾಯ)
  • 2024-25 ನೇ ಸಾಲಿನಲ್ಲಿ 5ನೇ ತರಗತಿಯಲ್ಲಿ 60% ಅಂಕಗಳು (SATS ದೃಢೀಕೃತ ಅಂಕಪಟ್ಟಿ ಲಗತ್ತಿಸುವುದು ಅಗತ್ಯ)
  • ಕುಟುಂಬದ ವಾರ್ಷಿಕ ಆದಾಯ ₹2.5 ಲಕ್ಷದೊಳಗೆ ಇರಬೇಕು. (ತಹಶೀಲ್ದಾರರಿಂದ ವಡದ ಇತ್ತೀಚಿನ ಆದಾಯ ಪ್ರಮಾಣ ಪತ್ರದ ದೃಢೀಕೃತ ಪ್ರತಿ ಲಗತ್ತಿಸಬೇಕು)
  • ಒಂದು ಕುಟುಂಬದಲ್ಲಿ ಎರಡು ಮಕ್ಕಳಿಗೆ ಮಾತ್ರ ಅವಕಾಶವಿರುತ್ತದೆ. ಅಂದರೆ ಒಬ್ಬ ಬಾಲಕ ಮತ್ತು ಒಬ್ಬ ಬಾಲಕಿಗೆ ಅವಕಾಶ ಕಲ್ಪಿಸುವುದು. ಬಾಲಕ ಇಲ್ಲದಿದ್ದಲ್ಲಿ ಇಬ್ಬರು ಬಾಲಕಿಯರಿಗೆ ಅವಕಾಶ ನೀಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ: ತಾಲ್ಲೂಕು ಸಮಾಜ ಕಲ್ಯಾಣ ಕಚೇರಿಯ ಸಹಾಯಕ ನಿರ್ದೇಶಕರಿಂದ ಅರ್ಜಿ ಪತ್ರ ಪಡೆದು, ಭರ್ತಿ ಮಾಡಿ ಅದೇ ಕಚೇರಿಗೆ ಸಲ್ಲಿಸಬೇಕು. ಅರ್ಜಿ ನಮೂನೆ ಮತ್ತು ವಿವರಗಳಿಗೆ KREIS ವೆಬ್ಸೈಟ್ (kreis.karnataka.gov.in) ನೋಡಿ.

📞 ಸಂಪರ್ಕಿಸಿ:

ಜಿಲ್ಲಾ ಪರಿಶಿಷ್ಟ ವರ್ಗ ಕಲ್ಯಾಣಾಧಿಕಾರಿ
ಉತ್ತರ ಕನ್ನಡ, ಕಾರವಾರ
☎ 08382-226575 | ✉ dtwo.karwar@gmail.com

ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಪ್ರವೇಶ ಅರ್ಜಿ ನಮೂನೆ

ಸೂಚನೆಗಳು: ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ ಪಡೆಯಲು ಕಛೇರಿಯವರು ನೀಡಿದ ಅರ್ಜಿಯಲ್ಲಿ ಭರ್ತಿ ಮಾಡಿ ಅರ್ಜಿಯನ್ನು ಕಛೇರಿಯಲ್ಲಿ ಸಲ್ಲಿಸಿ
ಅರ್ಜಿ ಡೌನ್ಲೋಡ್ ಮಾಡಲು "ಡೌನ್ಲೋಡ್" ಬಟನ್ ಕ್ಲಿಕ್ ಮಾಡಿ.

ಡೌನ್ಲೋಡ್ ಪ್ರಾರಂಭವಾಗುತ್ತಿದೆ... 10 ಸೆಕೆಂಡ್‌ಗಳು
Share:

0 Comments:

ಕಾಮೆಂಟ್‌‌ ಪೋಸ್ಟ್‌ ಮಾಡಿ

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels

Blog Archive