ಭಾರತವೇ ನಮ್ಮ ಮೂಲ
"ಮಹತ್ವದ ಅಂಶವೆಂದರೆ ನಮ್ಮ ಭಾಷೆಯಲ್ಲಿನ ಹೆಸರುಗಳು ಸಂಸ್ಕೃತ ಮೂಲದಿಂದ ಬಂದಿದೆ. ಇಂಡೋನೇಷ್ಯಾದ ಅನೇಕ ಹೆಸರುಗಳೆಲ್ಲವೂ ಸಂಸ್ಕೃತ ಭಾಷೆಯದ್ದು. ನಮ್ಮ ದಿನ ನಿತ್ಯದ ಜೀವನದಲ್ಲಿ ಭಾರತದ ಪುರಾತನ ನಾಗರೀಕತೆಯ ಪ್ರಭಾವ ಬಹಳ ಗಟ್ಟಿಯಾಗಿದೆ. ಇದು ನಮ್ಮ ಜೀನ್ಸ್‌ಗೂ ಸಂಬಂದಿಸಿದೆ. ಹಾಗೇ ನನ್ನ ಡಿ.ಎನ್.ಎ. ವರದಿಯೂ ನನ್ನ ಭಾರತೀಯ ಮೂಲದ ಬಗ್ಗೆ ಹೇಳಿದೆ. ಅದಕ್ಕೆ ಇರಬೇಕು ಭಾರತೀಯ ಸಂಗೀತ ಕೇಳಿದಾಗ ನನಗೆ ನೃತ್ಯ ಮಾಡಬೇಕು ಎಂದು ಬಹಳ ಅನಿಸುತ್ತದೆ." ಎಂದು ಇಂಡೋನೇಷಿಯಾದ ಅಧ್ಯಕ್ಷ ಪಬಾವೋ ಸುಬಿಯಾನಟೋ ಎರಡೂ ದೇಶಗಳ ಸಭೆಯಲ್ಲಿ ರಾಷ್ಟ್ರಪತಿ, ಪ್ರಧಾನಿ ಮತ್ತು ಉಪರಾಷ್ಟ್ರಪತಿಯವರ ಸಮ್ಮುಖದಲ್ಲಿ ಮಾತನಾಡಿದರು.
2. ಇಂಡೋನೇಷ್ಯಾದ ಮೂಲ ಭಾರತದ ಓಡಿಸ್ಸಾ
ಇಂಡೋನೇಷಿಯಾದ ಜನರ ಮೂಲ, ಆಚಾರ, ವಿಚಾರ, ಹೆಸರುಗಳಲ್ಲಿ ಭಾರತೀಯತೆಯನ್ನು ಒಳಗೊಂಡಿದೆ ಮತ್ತು ಭಾರತವೇ ನಮ್ಮ ಮೂಲ ತಾಯಿ ಬೇರು ಹಾಗೂ ಇಂಡೋನೇಷಿಯಾದ ಪ್ರತಿಯೊಂದು ಹೆಸರಿನಲ್ಲಿಯೂ ಕೂಡ ಸಂಸ್ಕೃತದ ಛಾಯೆ ಇದೆ, ಸ್ನೇಹಕ್ಕೂಟದಲ್ಲಿ ಇಂಡೋನೇಷ್ಯಾದ ಅಧ್ಯಕ್ಷರು ವಿಚಾರವನ್ನು ಹಂಚಿಕೊಂಡರು. ಇನ್ನು ಮುಂದುವರೆದು ಪ್ರಧಾನಿಗಳಾದ ಶ್ರೀ ಮೋದೀಜಿಯವರು ಇಂಡೋನೇಷ್ಯಾದ ಮೂಲ ಭಾರತದ ಓಡಿಸ್ಸಾ ಎಂದು ತಮ್ಮ ಭಾಷಣದಲ್ಲಿ ಹಂಚಿಕೊಂಡಿದ್ದಾರೆ.
3. ಸನಾತನ ಸಂಸ್ಕೃತಿಯೇ ನಮಗೆಲ್ಲಾ ಜೀವಕಳೆ
ಭಾರತದ ಸನಾತನ ಸಂಸ್ಕೃತಿಯೇ ನಮಗೆಲ್ಲಾ ಜೀವಕಳೆ ತುಂಬಿದ್ದು, ದಾರಿದೀಪವಾಗಿದ್ದು, ಜೀವನ ಶೈಲಿ ಹೇಳಿಕೊಟ್ಟಿದ್ದು. ಹಾಗೆಯೇ ನಮ್ಮ ಕರ್ತವ್ಯವಾಗಿ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಿದೆ. ಓಶೋರವರು ತಮ್ಮ ಪ್ರವಚನದಲ್ಲಿ ಭಾರತ ವಿವರವಾದ ಸೂಕ್ಷ್ಮ ಸಂಗತಿಗಳನ್ನೆಲ್ಲ ಒಳಗೊಂಡಿದ್ದು ಸನಾತನ ಹಿಂದೂ ಧರ್ಮ ನೀವೆಲ್ಲ ತಿಳಿದ ಹಾಗೆ ಒಂದು ಧರ್ಮ ಅಲ್ಲ ಅದೊಂದು ಜೀವನ ಶೈಲಿ ಹಾಗಾಗಿ ಉಳಿದವುಗಳೆಲ್ಲವೂ ರಿಲೀಜಿಯನ್ನಗಳು, ಭಾರತೀಯ ಧರ್ಮ ಮಾತ್ರ ಬದುಕುವ, ಜೀವಿಸುವ, ಮಾತನಾಡುವ ಪೂಜಿಸುವ ಆರಾಧಿಸುವ ಪ್ರತಿಯೊಂದು ಜೀವನದ ಕ್ರಮಗಳನ್ನು ತಿಳಿಸಿಕೊಡುವ ಒಂದು ವ್ಯವಸ್ಥೆ.
4. ಸಂಸ್ಕೃತದ ಹೆಸರುಗಳು ದೇಶದ ತುಂಬೆಲ್ಲಾ ಇದೆ.

ಇಂಡೋನೇಷಿಯಾವು ವಿಶ್ವದಲ್ಲಿ ಅತ್ಯಂತ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವಂತಹ ದೇಶ. ಸಂಸ್ಖೃತಿ ಬಗ್ಗೆ ಮಾತನಾಡುವುದಾದರೆ ಆ ದೇಶದ ಜನರ ರಕ್ತದಲ್ಲಿ ಇಂದಿಗೂ ಮಹಾಭಾರತವಿದೆ, ರಾಮಾಯಣ ಕಥೆಗಳು ಜೀವನದಲ್ಲಿ ಹಾಸು ಹೊಕ್ಕಾಗಿದೆ, ಅವರ ನೋಟಿನ ಮೇಲೆ ಗಣೇಶನ ಚಿತ್ರಗಳು ರಾರಾಜಿಸುತ್ತಿವೆ. ವಿಮಾನಯಾನಕ್ಕೆ ಗರುಡನ ಹೆಸರು ಇಟ್ಟಿದ್ದಾರೆ, ಇತ್ಯಾದಿ ಹುಡುಕುತ್ತಾ ಹೋದರೆ ಸನಾತನ ಸಂಸ್ಕೃತಿಯ ಹೆಸರುಗಳು ಅವರ ದೇಶ ತುಂಬೆಲ್ಲಾ ಕಾಣಬಹುದು. ಇದು ತಮ್ಮ ದೇಶದ ನೆಲಮೂಲ ಸಂಸ್ಕೃತಿಯಲ್ಲಿಯೇ ಉಳಿಯುವ ಮತ್ತು ಉಳಿಸುವ ವಿಚಾರಧಾರೆಗಳನ್ನು ಹೊಂದಿರುವ ಇಂಡೋನೇಷಿಯಾದ ಜನತೆಗೆ ಸನಾತನದ ತಾಯಿಬೇರಾದ ಭಾರತದ ಪರವಾಗಿ ಸಾವಿರ ಸಾವಿರ ಪ್ರಣಾಮಗಳು.
0 Comments:
ಕಾಮೆಂಟ್ ಪೋಸ್ಟ್ ಮಾಡಿ