ಡೆನ್ಮಾರ್ಕಿನ ಪ್ರಧಾನಿ ಜೊತೆ ಭಾರತದ ಪ್ರಧಾನಿ ದೂರವಾಣಿ ಮಾತುಕತೆ
ಪ್ರಮುಖ ಅಂಶಗಳು
- ಇಂಡಿಯಾ ನಾರ್ಡಿಕ್ ಶೃಂಗಸಭೆಯ ವಿವರಗಳು
- ಹಸಿರು ಕಾರ್ಯತಂತ್ರದ ಪಾಲುದಾರಿಕೆ
- ಕಾರ್ಬನ್ ಹೊರಸೂಸುವ ದೇಶಗಳ ಪಟ್ಟಿ
- ಇಂಡೋ-ಡ್ಯಾನಿಶ್ ಸಭೆಯ ಫಲಶೃತಿ
ಪ್ರಮುಖ ಒಪ್ಪಂದಗಳು
- ನವೀಕರಿಸಬಹುದಾದ ಶಕ್ತಿ ಒಪ್ಪಂದ
- ತಂತ್ರಜ್ಞಾನ ವಿನಿಮಯ ಒಪ್ಪಂದ
- ಶಿಕ್ಷಣ ಮತ್ತು ಸಂಶೋಧನೆ ಒಪ್ಪಂದ
- ವ್ಯಾಪಾರ ಮತ್ತು ಹೂಡಿಕೆ ಒಪ್ಪಂದ
ಭವಿಷ್ಯದ ಯೋಜನೆಗಳು
- ಹಸಿರು ಶಕ್ತಿ ಸಹಯೋಗ
- ಸ್ಮಾರ್ಟ್ ನಗರಗಳ ಅಭಿವೃದ್ಧಿ
- ಕೃಷಿ ತಂತ್ರಜ್ಞಾನ ಸಹಯೋಗ
- ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ
Glad to speak with PM Mette Frederiksen today. Reaffirmed our strong support for the India-Denmark Green Strategic Partnership and enhancing cooperation across sectors for the benefit of our people. We also discussed regional and global developments of mutual interest.@Statsmin
— Narendra Modi (@narendramodi) April 15, 2025
ಪ್ರಮುಖ ಅಂಶಗಳು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಡೆನ್ಮಾರ್ಕ್ ಪ್ರಧಾನ ಮಂತ್ರಿ ಮಿಸ್. ಮೆಟ್ ಪ್ರೆಡ್ರಿಕ್ಸನ್ ಅವರು ದಿನಾಂಕ: 15-04-2025 ರಂದು ದೂರವಾಣಿ ಸಂಭಾಷಣೆ ನಡೆಸಿದರು. ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳು ಮತ್ತು ಜಾಗತಿಕ ಬೆಳವಣಿಗೆಗಳ ವಿವಿಧ ಅಂಶಗಳನ್ನು ಚರ್ಚಿಸಿದರು.

ಹಸಿರು ಕಾರ್ಯತಂತ್ರದ ಪಾಲುದಾರಿಕೆ ವಿವರ:
ಸಧ್ಯ ಭಾರತವು ವಿಶ್ವದ ಮೂರನೇ ಅತಿದೊಡ್ಡ ಕಾರ್ಬನ್ ಡೈ ಆಕ್ಸೈಡ್ (CO2) ಅನ್ನು ಹೊರ ಸೂಸುವ ದೇಶವಾಗಿದೆ. ದೇಶಗಳ ಪಟ್ಟಿ ನೋಡಿ
2030 ವೇಳೆಗೆ ದೇಶವು ತನ್ನ ಇಂಗಾಲದ ಹೊರಸುವಿಕೆಯನ್ನು ಎರಡು ಪಟ್ಟು ಸೂಚಿಕೆ ಎರಡು ಪಟ್ಟು ಹೆಚ್ಚಾಗುವ ಒಂದು ಲೆಕ್ಕಾಚಾರವಿದೆ.
2030 ವೇಳೆಗೆ ಕಾರ್ಬನ್ ಡೈಆಕ್ಸೈಡ್ CO2 ಸೂವಿಕೆಯನ್ನು ಶೇಕಡ 70 ರಷ್ಟು ಕಡಿಮೆ ಮಾಡುವ ಮಹತ್ವಕಾಂಕ್ಷೆಯನ್ನು ಸರಕಾರ ಹೊಂದಿದೆ ಈ ಒಂದು ಕಾರ್ಯಯೋಜನೆಯಲ್ಲಿ ಭಾರತವು ಹಸಿರು ಕಾರ್ಯತಂತ್ರದ ಪಾಲುದಾರಿಕೆ ಕಾರ್ಯಕ್ರಮವನ್ನು ಡೆನ್ಮಾರ್ಕ ನೊಡನೆ ಜಂಟಿಯಾಗಿ ಹಮ್ಮಿಕೊಂಡಿದೆ.
ಸುಲಭವಾಗಿ ಕೈಗೆಟುಕುವ ರೀತಿಯಲ್ಲಿ ಮತ್ತು ಶುದ್ಧ ಇಂಧನದ ಕುರಿತು ಸುಸ್ಥಿರ ಬೆಳವಣಿಗೆ ಗುರಿಗಳಿಗೆ ಸಂಬಂದಿಸಿದಂತೆ ಅಂತರಾಷ್ಟ್ರೀಯ ನಾಯಕತ್ವವನ್ನು ವಹಿಸಿಕೊಳ್ಳುವ ಗುರಿಯನ್ನು ಹೊಂದಿದೆ.
ಪಾಲುದಾರಿಕೆ ಹೊಂದುವ ಮೂಲಕ ಮಹತ್ವಕಾಂಕ್ಷೆಯ ಹವಾಮಾನ ಮತ್ತು ಸುಸ್ಥಿರ ಇಂಧನ ಗುರಿಗಳನ್ನು ಸಾಧಿಸುವುದು ಸಾಧ್ಯ ಎಂದು ಭಾರತ ಮತ್ತು ಡೆನ್ಮಾರ್ಕ್ ಜಗತ್ತಿಗೆ ಸಾರಿ ಹೇಳಲು ಈ ಮೂಲಕ ಯತ್ನಿಸುತ್ತಿದೆ
ಸೆಪ್ಟೆಂಬರ್ 28, 2020 ರಂದು ಡೆನ್ಮಾರ್ಕ ಪ್ರಧಾನಿ ಮೆಟ್ಟೆ ಫ್ರೆಡ್ರಿಕ್ಷನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಭಾರತ ಮತ್ತು ಡೆನ್ಮಾರ್ಕ್ ನಡುವಿನ ವರ್ಚುಯಲ್ ಶೃಂಗಸಭೆಯ ಸಹ ಅಧ್ಯಕ್ಷತೆ ವಹಿಸಿದ್ದರು
ಇಬ್ಬರು ಪ್ರಧಾನ ಮಂತ್ರಿಗಳು ವಿಪಕ್ಷೀಯ ಸಂಬಂಧಗಳು, ಕೋವಿಡ್ 19 ಸಾಂಕ್ರಾಮಿಕ ರೋಗ ಮತ್ತು ಹವಾಮಾನ ಬದಲಾವಣೆ ಕುರಿತು ಹಾಗು ಹಸಿರು ಪರಿವರ್ತನೆ ಸೇರಿದಂತೆ ಜಾಗತಿಕ ವಿಷಯಗಳ ಅಭಿಪ್ರಾಯಗಳ ವಿನಿಮಯ ಮಾಡಿದ್ದರು.
ಅದೇ ವರ್ಚುವಲ್ ಸಭೆಯಲ್ಲಿ ಹಸಿರು ಕಾರ್ಯತಂತ್ರದ ಪಾಲುದಾರಿಕೆ ಕೈಗೊಳ್ಳುವ ಒಪ್ಪಂದಕ್ಕೆ ಇಂಡೋ-ಡ್ಯಾನಿಶ್ ಪ್ರಧಾನಿಗಳು ಸಹಿ ಹಾಕಿದರು.
ಸಭೆಯ ಮೂಲಕ ನಿರ್ಧರಿಸಿದ ವಿಷಯಗಳು:
- ಉತ್ತಮ ಸಂಪರ್ಕ ವ್ಯವಸ್ಥೆ.
- ಪ್ರಜಾಪ್ರಭುತ್ವದ ಸವಾಲುಗಳನ್ನ ಎದುರಿಸುವುದು.
- ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಶಾಂತಿ ಕಾಪಾಡುವುದು
- ಸುಸ್ಥಿರ ಬೆಳವಣಿಗೆ ಗುರಿಗಳಿಗೆ ಕಾರ್ಯವನ್ನು ಹಂಚಿಕೊಳ್ಳುವುದು.
- ನಿರಂತರ ಅಭಿವೃದ್ಧಿಯನ್ನು ಹೊಂದುವಂತೆ ಪರಸ್ಪರ ಸಹಕರಿಸುವುದು
- ಆರ್ಥಿಕ ಸಂಬಂಧಗಳನ್ನು ಸುಧಾರಿಸಲು & ಉದ್ಯೋಗಗಳನ್ನು ಸೃಷ್ಟಿಸಲು
- ಜಾಗತಿಕ ಸವಾಲುಗಳು ಮತ್ತು ಅವಕಾಶಗಳನ್ನು ಎದುರಿಸುವಲ್ಲಿ ಪರಸ್ಪರ ಸಹಕಾರವನ್ನು ಬಲಪಡಿಸುತ್ತದೆ.
- ನಿರಂತರ ಅಭಿವೃದ್ಧಿಯನ್ನು ಹೊಂದುವಂತೆ ಪರಸ್ಪರ ಸಹಕರಿಸುವುದು
ಕಾರ್ಬನ್ ಹೊರಸೂಸುವ ದೇಶಗಳ ಪಟ್ಟಿ
Rank | Country | CO₂ Emissions (tons, 2022) | 1 Year Change | Population (2022) | Per Capita | Share of World |
---|
ಪ್ಯಾರಿಸ್ ಒಪ್ಪಂದ ಯು.ಎನ್. ಇದರ ಸುಸ್ಥಿರ ಅಭಿವೃದ್ಧಿ ಗುರಿಗಳ (SDG’s) ಮಹತ್ವಕಾಂಕ್ಷೆಯ ಅನುಷ್ಠಾನದ ಮೇಲೆ ಇದು ಕೇಂದ್ರೀಕರಿಸುತ್ತದೆ. ಇದರ ಜೊತೆಗೆ ಇಂಧನ, ಹವಮಾನ ಬದಲಾವಣೆ, ಪರಿಸರ ನೀರು, ಹಸಿರು ವೃತ್ತಗಳು ಮತ್ತು ಸ್ಮಾರ್ಟ್ ಸಿಟಿ ಗಳು ಸೇರಿದಂತೆ ನಗರಗಳ ಸುಸ್ಥಿರ ಅಭಿವೃದ್ಧಿ ಹಾಗು ವ್ಯಾಪಾರ ವ್ಯವಹಾರ, ಸಾಗಾಣಿಕಾ ಕ್ಷೇತ್ರಗಳಲ್ಲಿನ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಇಬ್ಬರೂ ಪ್ರಧಾನಮಂತ್ರಿಗಳು ಪರಸ್ಪರ ಒಪ್ಪಿ ಜಂಟಿ ಹೇಳಿಕೆಯನ್ನು ನೀಡಿದರು.
ಓದಿದ್ದನ್ನ ನೆನಪಿಸಿಕೊಳ್ಳಿ
1. ಮೊದಲನೇ ಇಂಡಿಯಾ ನಾಡಿಕ್ ಶೃಂಗಸಭೆಯ ನಡೆದದ್ದು?
ಮೊದಲ ಇಂಡಿಯಾ-ನಾರ್ಡಿಕ್ ಶೃಂಗಸಭೆ ಎಲ್ಲಿ ನಡೆಯಿತು?
3ನೇ ಇಂಡಿಯಾ-ನಾರ್ಡಿಕ್ ಶೃಂಗಸಭೆ ಎಲ್ಲಿ ನಡೆಯಲಿದೆ?
ಡೆನ್ಮಾರ್ಕ್‌ನೊಡನೆ ಹಸಿರು ಕಾರ್ಯತಂತ್ರದ ಪಾಲುದಾರಿಕೆ ಯಾವ ವರ್ಷದಲ್ಲಿ ಪ್ರಾರಂಭವಾಯಿತು?
ಭಾರತವು 2030 ವೇಳೆಗೆ CO2 ಸೂಸುವಿಕೆಯನ್ನು ಎಷ್ಟು ಶೇಕಡಾ ಕಡಿಮೆ ಮಾಡುವ ಗುರಿ ಹೊಂದಿದೆ?
ಡೆನ್ಮಾರ್ಕ್‌ನೊಡನೆ ವರ್ಚುವಲ್ ಶೃಂಗಸಭೆಯಲ್ಲಿ ಯಾವುದನ್ನು ಒಪ್ಪಂದ ಮಾಡಲಾಯಿತು?
ಪ್ಯಾರಿಸ್ ಒಪ್ಪಂದ ಯಾವುದರ ಮೇಲೆ ಕೇಂದ್ರೀಕರಿಸುತ್ತದೆ?
0 Comments:
ಕಾಮೆಂಟ್ ಪೋಸ್ಟ್ ಮಾಡಿ