ಗುಣವಂತೆ ಶಂಭು ಲಿಂಗೇಶ್ವರ ಜಾತ್ರೆ ಸಂಪನ್ನ

ಗುಣವಂತೆ ಕ್ಷೇತ್ರದ ಪವಿತ್ರತೆ ಮತ್ತು ಪೌರಾಣಿಕ ಮಹತ್ವ

Highlight News Image

ಗುಣವಂತೆ ಪಂಚಲಿಂಗ ಕ್ಷೇತ್ರಗಳಲ್ಲಿ ಒಂದು: ಗುಣವಂತೆ ಕ್ಷೇತ್ರವು ಅತೀ ಪ್ರಾಚೀನ ಸಹ್ಯಾದ್ರಿ ಪುರಾಣದಲ್ಲಿ ಉಲ್ಲೇಖಗೊಂಡಿರುವ ಪಂಚಲಿಂಗ ಕ್ಷೇತ್ರಗಳಲ್ಲಿ ಒಂದಾಗಿದೆ. ಇತರ ನಾಲ್ಕು ಕ್ಷೇತ್ರಗಳು: ಗೋಕರ್ಣದ ಶ್ರೀ ಮಹಾಬಲೇಶ್ವರ, ಸಿದ್ದೇಶ್ವರ, ಧಾರೇಶ್ವರ ಮತ್ತು ಮುರುಡೇಶ್ವರ.

Read Full Story Below ↓
News Image 1

ಪೌರಾಣಿಕ ಹಿನ್ನೆಲೆ

ರಾಮಾಯಣ ಕಾಲದಲ್ಲಿ ಲಂಕಾಧಿಪತಿ ರಾವಣನು ಭೂಕೈಲಾಸ ಎಂದು ಕರೆಯಲ್ಪಡುತ್ತಿದ್ದ ಗೋಕರ್ಣೆಯ ಸಮುದ್ರ ತಟದಲ್ಲಿ ಸಾವಿರ ವರ್ಷಗಳ ಕಾಲ ಶಿವನ ಕುರಿತು ತಪಸ್ಸನ್ನ ಆಚರಿಸಿ ಶಿವನಿಂದ ಆತ್ಮ ಲಿಂಗವನ್ನು ಪಡೆಯುತ್ತಾನೆ. ಇದರಿಂದ ವಿಚಲಿತರಾದ ದೇವಾನು ದೇವತೆಗಳು ಬ್ರಹ್ಮ-ವಿಷ್ಣು-ಮಹೇಶ್ವರರ ಮೊರೆ ಹೋದಾಗ ಆತ್ಮಲಿಂಗವನ್ನು ರಕ್ಷಣೆ ಮಾಡುವ ಜವಾಬ್ದಾರಿಯನ್ನು ಗಣಪತಿಗೆ ವಹಿಸುತ್ತಾರೆ.

ಸಂಜೆಯ ವೇಳೆಗೆ ರಾವಣನು ಆತ್ಮ ಲಿಂಗವನ್ನು ಪೂಜೆ ಮಾಡುವ ಮೊದಲು ಸ್ನಾನ ಮಾಡಬೇಕೆಂಬ ನಿಯಮ ಇದ್ದದರಿಂದ ಮತ್ತು ಕೆಲಗಡೆ ಇರಿಸುವಂತಿಲ್ಲ ಎಂಬ ನಿಯಮದಡಿಯಲ್ಲಿ ಹಾಗೆಯೇ ಆತ್ಮಲಿಂಗವನ್ನು ಕೈಯಲ್ಲಿ ಹಿಡಿದುಕೊಂಡು ಸ್ನಾನ ಮಾಡುವುದು ಸರಿಯಲ್ಲ ಎನಿಸಿ ಬಾಲ ವಟುವಿನ ವೇಷ ದಾರಿಯಾಗಿ ಬಂದ ಗಣಪತಿಯನ್ನು ಗುರುತಿಸದೆ ಕರೆದು ಗಣಪನಿಗೆ ಆತ್ಮಲಿಂಗವನ್ನು ಕೈಯಲ್ಲಿ ಕೊಟ್ಟು ನಾನು ಸ್ನಾನ ಮಾಡಿ ಬರುವೆ ಅಲ್ಲಿಯವರೆಗೂ ಕಾಯ್ದುಕೊಂಡಿರು ಎಂದು ಹೇಳಿ ಹೊರಡುತ್ತಾನೆ. ಗಣಪತಿಯು ಕೂಡ ಷರತ್ತನ ವಿಧಿಸುತ್ತಾನೆ. ನಾನು ಮೂರು ಬಾರಿ ಕರೆಯುವುದರೊಳಗೆ ನೀನು ಬರಬೇಕು ನಾಲ್ಕನೇ ಬಾರಿ ನಾನು ಕರೆಯುವುದಿಲ್ಲ ಬರದೇ ಇದ್ದರೆ ಕೆಳಗೆ ಆತ್ಮಲಿಂಗ ಇಡುತ್ತೇನೆ ಎಂದು ಹೇಳುತ್ತಾನೆ.

ಆತ್ಮ ಲಿಂಗ ದೊರೆತು ಖುಷಿಯಲ್ಲಿದ್ದ ಮತ್ತು ಪೂಜೆಯ ಗಡಿಬಿಡಿಯಲ್ಲಿದ್ದ ರಾವಣನು ಹಿಂದೆ ಮುಂದೆ ಏನು ಯೋಚಿಸಿದೆ ಸ್ನಾನ ಮಾಡಲು ಹೊರಡುತ್ತಾನೆ. ಇದೆಲ್ಲ ಅರಿತಿದ್ದ ಗಣಪತಿ ರಾವಣ ನೀರಿಗೆ ಇಳಿಯ ಬೇಕೆನ್ನುವ ಸಮಯದಲ್ಲಿ ಮೊದಲನೇ ಕೂಗನ್ನ ಹಾಕುತ್ತಾನೆ, ಸ್ನಾನ ಮಾಡುವಾಗ ಮತ್ತೊಮ್ಮೆ ಕೂಗನ್ನು ಹಾಕುತ್ತಾನೆ, ಇನ್ನೇನು ನೀರಿನ ಮೇಲೆ ಎದ್ದು ಬಂದೇ ಬಿಡುತ್ತಾನೆ ಎಂದು ತಿಳಿದು ತಕ್ಷಣವೇ ಇನ್ನೊಮ್ಮೆ ಕೊನೆಯ ಕೂಗನ್ನ ಹಾಕಿ ಆತ್ಮಲಿಂಗವನ್ನು ಗೋಕರ್ಣದ ತಟದಲ್ಲಿ ಇಟ್ಟುಬಿಡುತ್ತಾನೆ.

ನೆಲದ ಸ್ಪರ್ಷವಾದದ್ದೇ ತಡ ಆತ್ಮ ಲಿಂಗ ಬಲವಾಗಿ ನೆಲವನ್ನ ಹಿಡಿದುಕೊಂಡು ಹಿಡಿದುಕೊಂಡು ಬಿಡುತ್ತದೆ. ರಾವಣ ಎಷ್ಟೇ ಪ್ರಯತ್ನಿಸಿದರು ಆತ್ಮ ಲಿಂಗವನ್ನು ಕೀಳುವುದು ಅವನಿಂದ ಸಾಧ್ಯವೇ ಆಗಲಿಲ್ಲ. ಇದರಿಂದ ಕೋಪಗೊಂಡ ರಾವಣನು ಆತ್ಮಲಿಂಗವನ್ನು ಜಾಡಿಸಿ ಜೋರಾಗಿ ಒದೆಯುತ್ತಾನೆ, ಇದರ ಪರಿಣಾಮ ಆತ್ಮಲಿಂಗ ಐದು ಚೂರುಗಳಾಗಿ ನಾನಾ ದಿಕ್ಕುಗಳಿಗೆ ಹಾರಿಹೋಗುತ್ತದೆ. ಒಂದು ಚೂರು ಇವತ್ತಿನ ಗೋಕರ್ಣದಲ್ಲಿ ಬಿದ್ದು ಮಹಾಬಲೇಶ್ವರ ಎಂದು ಹೆಸರಾಗುತ್ತದೆ, ಗೋಕರ್ಣದ ಸಮೀಪದಲ್ಲಿರುವ ಸಿದ್ದೇಶ್ವರ ಹಾಗೆ ಮುಂದುವರೆದು ಸಮುದ್ರ ತೀರದಲ್ಲಿರುವ ಧಾರೆಶ್ವರ, ಹೊನ್ನಾವರ ತಾಲೂಕಿನ ಶರಾವತಿ ನದಿಯನ್ನು ದಾಟಿ ಮುಂದೆ ಸಾಗಿ ಸಿಗುವ ಗುಣವಂತೆಯ ಗುಣವಂತೇಶ್ವರ ಕೊನೆಯದಾಗಿ ಸಿಗುವ ಮುರುಡೇಶ್ವರ ಇವುಗಳು ಪಂಚ ಕ್ಷೇತ್ರಗಳಾಗಿ ಪುರಾಣ ಪ್ರಸಿದ್ಧಿಯನ್ನು ಪಡೆದು ಭಕ್ತಾದಿಗಳನ್ನ ಆಶೀರ್ವದಿಸುತ್ತಿರುತ್ತದೆ.

News Image 2

ಶ್ರೀ ಗುಪ್ತಿ ದೇವಿಯ ಮಹತ್ವ:

ಗುಣವಂತೆಯ ಗುಣವಂತೇಶ್ವರ ಅರ್ಥಾತ್ ಶಂಭುಲಿಂಗೇಶ್ವರ‌ ಮತ್ತು ಶ್ರೀಗುಪ್ತಿ ದೇವಸ್ಥಾನಗಳ ಸಮುಚ್ಚಯಗಳನ್ನ ಒಳಗೊಂಡ ಇದು ರಾಷ್ಟ್ರೀಯ ಹೆದ್ದಾರಿಯ ಸಮೀಪ ನೆಲೆಗೊಂಡಿರುತ್ತದೆ. ಗುಣವಂತೆಯ ಶಂಭುಲಿಂಗೇಶ್ವರ, ಜ್ಯೋತಿರ್ಲಿಂಗನೂ, ಮೃತ್ಯುಂಜಯ ಸ್ವರೂಪಿಯಾಗಿಯೂ ಗುಣವಂತೆಯಲ್ಲಿ ನೆಲೆ ನಿಂತು, ಗುಣವಂತೆಗೆ ಬರುವ ಭಕ್ತರ ಸದಾ ಕಾಲ ಬಿಡದೆ ಪೋರೆಯುವ ಶುಭಕರ, ಶಂಕರನಾಗಿದ್ದಾನೆ,

ಗುಣವಂತೆ ಎಂಬ ನಾಮದ ಮೂಲ: "ಗುಣವಂತೆ" ಎಂಬ ನಾಮವು "ಗುಣ" ಮತ್ತು "ವಂತೆ" ಎಂಬ ಶಬ್ದಗಳಿಂದ ರೂಪುಗೊಂಡಿದ್ದು, "ಗುಣಗಳ ಸಮೂಹದಿಂದ ಕೂಡಿದ ಪವಿತ್ರ ಸ್ಥಳ" ಎಂಬ ಅರ್ಥವಿದೆ. ಈ ನಾಮದ ಹಿಂದಿನ ಕಥೆಯು ಶ್ರೀ ಗುಪ್ತಿ ದೇವಿಯೊಂದಿಗೆ ಸಂಬಂಧಿಸಿದೆ.
ಶ್ರೀ ಗುಪ್ತಿ ದೇವಿಯ ಪೌರಾಣಿಕ ಹಿನ್ನೆಲೆ: ಗುಣವಂತೆ ಎಂಬ ನಾಮದಿಂದ ಊರು ಉಲ್ಲೇಖಗೊಳ್ಳಲು ಕಾರಣರಾದ ಮಾತೆ ಶ್ರೀ ಗುಪ್ತಿಯಾಗಿ, ದೇವಾಲಯದ ಎಡ ಬಾಗದಲ್ಲಿ ನೆಲೆ ನಿಂತು, ಈ ಕ್ಷಣಕ್ಕೂ ಗುಣವಂತೆಯಾಗಿಯೇ ಇದ್ದಾಳೆ. ಕ್ಷೇತ್ರದ ಪ್ರಾಚೀನ ಹಿನ್ನಲೆ ತಿಳಿಯಲು ಅಷ್ಟಮಂಗಳದ ಮೋರೆ ಹೋದಾಗ, ಶಿವನ ಆತ್ಮ ಲಿಂಗ ಗುಣವಂತೆಯಲ್ಲಿ ನೆಲೆಸುವ ಮೊದಲು ಇದ್ದ ಪ್ರಾಚೀನ ಶಕ್ತಿ ಸ್ವರೂಪಿಣಿ ಈ ಶ್ರೀ ಗುಪ್ತಿ ಆತ್ಮಲಿಂಗ ಈ ಸ್ಥಳದಲ್ಲಿ ನೆಲೆ ನಿಲ್ಲಲು ಅವಕಾಶ ಕಲ್ಪಿಸಿ ಗುಣವಂತೆಯಾದಳು ಎನ್ನುವ ಮಾಹಿತಿ ದೊರೆಯಿತು. ಈ ಸತ್ಯ ಊರಿಗೆ ಮನವರಿಕೆ ಆಗುತ್ತಿದ್ದಂತೆ ಅಂದಿನಿಂದ ಇಂದಿನ ತನಕ ಪ್ರತಿ ದಿನ ಅತ್ಯಂತ ಭಕ್ತಿ ಭಾವದ ಪೂಜೆಯನ್ನು ಪಡೆಯುತ್ತಿದ್ದಾಳೆ.
ಅಪಾರ ಶಕ್ತಿಯ ಕ್ಷೇತ್ರ, ನಂಬಿದವರ ಜೊತೆ ಇರುವ ದೇವಿ ಈ ಶ್ರೀಗುಪ್ತಿ. ಬನ್ನಿ ತಾಯಿಯ ದರುಶನ ಪಡೆದು ಪುನಿತರಾಗಿ. ಭಕ್ತರ ಅಂತರಂಗ ಬಹಿರಂಗ ಶುದ್ಧಿಯೇ ಈ ಕ್ಷೇತ್ರದ ಭಗವಂತ ಭಗವತಿಯ ಅನುಗ್ರಹ ಪಡೆಯಲು ಇರುವ ದೊಡ್ಡ ಸಾಧನ ಎಂಬುದು ಸಾವಿರಾರು ಭಕ್ತರ ಅನುಭವದ ಮಾತು.

News Image 3

ದೇವಾಲಯದ ವೈಶಿಷ್ಟ್ಯತೆಗಳು ಮತ್ತು ಭಕ್ತರ ಅನುಭವಗಳು

ಕಳೆದ ವರ್ಷ ಕಾವಿಧಾರಿಯೊಬ್ಬರು ಪುಣ್ಯ ಕ್ಷೇತ್ರ ದರ್ಶನದ ಉದ್ದೇಶದಿಂದ ಗುಣವಂತೆಗೆ ಬಂದಿದ್ದರು, ಮುಸ್ಸಂಜೆ ಹೊತ್ತಲ್ಲಿ ದೇವಾಲಯದ ಅವಾರದಲ್ಲಿ ಧ್ಯಾನಕ್ಕೆ ಕುಂತಿದ್ದರು. ಧ್ಯಾನದಿಂದ ಹೊರಬಂದ ಅವರು ದೇಗುಲದಲ್ಲಿ ಇದ್ದ ನಮ್ಮಲ್ಲಿ “ಇಲ್ಲಿ ಭವಂತ ಅತ್ಯಂತ ಶಕ್ತಿಪೂರ್ಣನಾಗಿ ನಿಂತಿದ್ದಾನೆ, ಆದರೆ ಇಲ್ಲಿ ಕಾಯಕ- ಪೂಜೆ ವಿಧಿ ವಿಧಾನಗಳು ಸುಧಾರಿಸಬೇಕಿದೆ” ಎಂದಿದ್ದರು.

ದೇವಾಲಯದ ಎದುರು ಇರುವ ಪುಷ್ಕರಣಿಯಲ್ಲಿ ನವ ಧಾನ್ಯವನ್ನು ಹರಕೆಯಾಗಿ ಬಿರುವ ಭಕ್ತರಿಗೆ, ಚಿಮಕಲು ಚರ್ಮ ಅಥವಾ ನರೋಲಿ (Skin Tag) ಕಾಯಿಲೆ ಕೆಲವೇ ದಿನಗಳಲ್ಲಿ ಕಡಿಮೆಯಾಗುತ್ತದೆ. ದುಬೈನಲ್ಲಿ ಇರುವ ಮುಸ್ಲಿಂ ವ್ಯಕ್ತಿಯ ಮೈಮೇಲಿನ ಚಮಕಲು ಮಂಗಮಾಯವಾಗುತ್ತದೆ ಎಂದರೆ ಕ್ಷೇತ್ರದ ಶಕ್ತಿಯ ತರಂಗ ಎಷ್ಟು ಶಕ್ತಿಯುತ ಎಂದು ಹೇಳಸಾಧ್ಯ.

ಈ ಷ್ಕರಣಿಯಲ್ಲಿ, ಪೂಜೆಯ ಸಮಯಕ್ಕೆ ಜೋಡಿ ಪಾರಿವಾಳಗಳು ಸ್ನಾನ ಮಾಡುವುದನ್ನು ಕಾಣಬಹುದು. ಇದು ಶಿವಪಾರ್ವತಿಯರು ಎಂಬ ನಂಬಿಕೆಯಿದೆ.

“ಈ ಕ್ಷಣಕ್ಕೂ ಮದ್ಯ ರಾತ್ರಿ, ದೇವಾಲಯದ ಘಂಟೆ ಭಾರಿಸಿದ ಧ್ವನಿ,ದೇವಾಲಯದ ಒಳಗೆ ನಡೆದಾದುವ ಸಪ್ಪಳ, ಕೇಳುವ ಪರಿ ಅಚ್ಛರಿಯ ಸಂಗತಿ ನನ್ನ ಸ್ವಂತ ಅನುಭವ. ಹೇಳಿಕೆಯ ಮಾತಲ್ಲ, ಇಲ್ಲಿರುವ 9 ಶಾಸನ ಅನಾದಿಯಿಂದ ಶಂಭುಲಿಂಗನ ಮಹಾಬಲವನ್ನು ಸಾರುತ್ತ ಬಂದಿದೆ”, ಎಂದು ಭಕ್ತರೆಂದರು

News Image 4

ಇತಿಹಾಸಿಕ ಉಲ್ಲೇಖಗಳು ಮತ್ತು ಶಾಸನಗಳು:

ಶಾಸನಗಳು: ಇಲ್ಲಿ ಇರುವ 9 ಶಾಸನಗಳು ಅನಾದಿಯಿಂದ ಶಂಭುಲಿಂಗನ ಮಹಾಬಲವನ್ನು ಸಾರುತ್ತಿವೆ. ವಿಜಯನಗರದ ರಾಜ ಕೃಷ್ಣದೇವರಾಯನು ಗುಣವಂತೇಶ್ವರನ ಪದತಲಕ್ಕೆ ಶರಣಾದ ಸಂಗತಿ, ಈ ಶಾಸನಗಳಲ್ಲಿ ಉಲ್ಲೇಖಗೊಂಡಿದೆ.

ಕೇರಳದ ರವಿವರ್ಮನ ದಾನ: ಕೇರಳದ ರವಿವರ್ಮನು ದೇವಾಲಯದ ಎದುರು ಇರುವ ಪುಷ್ಕರಣಿಯ ಜೀರ್ಣೋದ್ದಾರ ಮಾಡಿದ್ದಾನೆ ಎಂಬ ಉಲ್ಲೇಖವೂ ಇದೆ.

ಶಿವನು ಭಕ್ತ ಪ್ರಿಯ ಮತ್ತು ಆಂತರಿಕ ಭಾವಿ:

ದೇವಾಲಯದ ಒಳಗೆ ಒಂದು ಭಾವಿ ಇದೆ, ಇದರಿಂದ ನಿತ್ಯ ಶಿವನಿಗೆ ಅಭಿಷೇಕ ಮಾಡಲಾಗುತ್ತದೆ. ವರ್ಷದಲ್ಲಿ ನಾಲ್ಕು ಬಾರಿ, ಭಕ್ತರು ತೀರ್ಥ ಸ್ನಾನ ಮಾಡುವ ದೇಗುಳದ ಹೊರಗಿನ ಪುಷ್ಕರಣಿಯ ನೀರನ್ನು ಒಳಗಿನ ಆತ್ಮಲಿಂಗಕ್ಕೆ ಅಭಿಷೇಕ ಮಾಡುತ್ತಾರೆ. ಅಂದರೆ ಇಲ್ಲಿಯ ಶಿವನಿಗೆ ಭಕ್ತರೆಂದರೆ ಎಷ್ಟು ಪ್ರಿಯರು ಎಂಬುದಕ್ಕೆ ಇದೊಂದು ದೊಡ್ಡ ಜೀವಂತ ಸಾಕ್ಷಿಯಾಗಿ ನಿಲ್ಲುತ್ತದೆ. ಹಿಂದೂ ಮುಸ್ಲಿಂ ಕ್ರೈಸ್ತ್ ಎನ್ನದೇ ಇಲ್ಲಿಗೆ ಬರುವ ಭಕ್ತರನ್ನು ಕಂಡಾಗ, ಅವನ ಶಕ್ತಿಗೆ ಸರ್ವ ಧರ್ಮ ಸಮನ್ವಯತೆಯ ಮಹತ್ವ ಸಂಗಮಸ್ಥಾನವಾಗಿದೆ ಎಂದು ಎನಿಸುತ್ತದೆ.

News Image 7

ಜಾತ್ರಾಮಹೋತ್ಸವ ಮತ್ತು ಭಕ್ತರ ಆಹ್ವಾನ

ಜಾತ್ರಾಮಹೋತ್ಸವ: 2025ರ ಏಪ್ರಿಲ್ 18ರಂದು, ಶುಕ್ರವಾರದಂದು, ಗುಣವಂತೆಯ ಈಶ್ವರ, ಶುಭಕರ ಶಂಭುಲಿಂಗೇಶ್ವರನ ಜಾತ್ರಾಮಹೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ, ಶಿವನ ದರ್ಶನ ಪಡೆದು, ಪುಣ್ಯವನ್ನು ಸಂಪಾದಿಸಬಹುದು.
ಭಕ್ತರು ಕ್ಷೇತ್ರಕ್ಕೆ ಆಗಮಿಸಿ, ಪರಶಿವನ ದರ್ಶನ ಪಡೆದು, ಪಾವನರಾಗಬಹುದು. ಶ್ರೀ ಗುಪ್ತಿ ದೇವಿಯ ದರ್ಶನ ಪಡೆದು, ಭಕ್ತಿಯ ಪ್ರಾರ್ಥನೆ ಗೈದು, ಇಷ್ಟಾರ್ಥವನ್ನು ಪಡೆಯಬಹುದು.

ಶ್ಲೋಕ:

 

ತ್ರಿಧಳಂ ತ್ರಿಗುಣಾಕಾರಂ  

ತ್ರಿನೇತ್ರಂ ಚಕ್ರಿಯಾಯುದಂ 

ತ್ರಿಜನ್ಮ ಪಾಪ ಸಂಹಾರಂ  

ಏಕ ಬಿಲ್ವಂ ಶಿವಾರ್ಪಣಂ

--- ಓಂ ನಮಃ ಶಿವಾಯಃ

Share:

0 Comments:

ಕಾಮೆಂಟ್‌‌ ಪೋಸ್ಟ್‌ ಮಾಡಿ

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels

Blog Archive