ಕರ್ನಾಟಕ ವಸತಿ ಶಾಲೆಗಳಿಗೆ ಪ್ರವೇಶ ಪರೀಕ್ಷೆ ಇಲ್ಲದೇ ನೇರ ದಾಖಲಾತಿ

ಶಿಕ್ಷಣ ವಂಚಿತರಿಗೊಂದು ಸುವರ್ಣಾವಕಾಶ

ಶಿಕ್ಷಣ ವಂಚಿತರಿಗೆ ಮೂಲಭೂತ ಸೌಕರ್ಯಗಳೊಂದಿಗೆ ಉಚಿತ ಶಿಕ್ಷಣ

A. ವಿಶೇಷ ವರ್ಗಗಳ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೇ ನೇರ ದಾಖಲಾತಿ

ಹಿನ್ನೆಲೆ 

ದುರ್ಬಲ ವರ್ಗಗಳ ಶಿಕ್ಷಣ ಸಮಸ್ಯೆಗಳು ಮತ್ತು ಸಾಂವಿಧಾನಿಕ ತತ್ವಗಳು:

ದುರ್ಬಲ ವರ್ಗಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಇತರ ಹಿಂದುಳಿದವರು ಶಿಕ್ಷಣದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳ ಕೊರತೆ, ಪೋಷಕರ ಆರ್ಥಿಕ ಸಂಕಷ್ಟ, ಸಾಮಾಜಿಕ ತಾರತಮ್ಯ, ಮೂಲಭೂತ ಸೌಕರ್ಯಗಳ ಅಭಾವ ಮುಂತಾದವು ಪ್ರಮುಖ ಅಡೆತಡೆಗಳಾಗಿವೆ. ಅನೇಕ ಕುಟುಂಬಗಳಲ್ಲಿ ಮಕ್ಕಳನ್ನು ಹೆತ್ತವರ ಕೆಲಸಕ್ಕೆ ನಿಯೋಜಿಸುವ ಪರಂಪರೆಯಿಂದಾಗಿ ಶಾಲೆಗಳಿಂದ ಹೊರಬೀಳುವ ಸಂಭವ ಹೆಚ್ಚು. ಇದರಿಂದ ಶಾಲೆಯಿಂದ ಹೊರಗುಳಿದವರ ಸಂಖ್ಯೆ ಹೆಚ್ಚಾಗಿ, ಸಮಾಜದ ಮುನ್ನೆಲೆಗೆ ಬರದೇ ತಮ್ಮದೆ ಪರಿದಿಯಲ್ಲಿ ತಳಮಟ್ಟದ ಜೀವನ ನಡೆಸುತ್ತಿದ್ದಾರೆ.
ಭಾರತದ ಸಂವಿಧಾನ ಈ ಸಮಸ್ಯೆಗಳನ್ನು ಪರಿಹರಿಸಲು ಹಲವಾರು ನಿಯಮಗಳನ್ನು ತನ್ಸಿನೊಳಗೆ ಅಡಕಗೊಳಿಸಿದೆ:

  • ಆರ್ಟಿಕಲ್: 15(4) & 15(5): ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ವಿಶೇಷ ಏರ್ಪಾಡು ಮಾಡಲು ಅನುವು.
  • ಆರ್ಟಿಕಲ್: 21A: 6-14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು.
  • ಆರ್ಟಿಕಲ್: 46: ಪರಿಶಿಷ್ಟ ಜಾತಿ/ಪಂಗಡಗಳ ಶೈಕ್ಷಣಿಕ ಹಿತಾಸಕ್ತಿಗಳನ್ನು ಪ್ರೋತ್ಸಾಹಿಸುವುದು.
  • ಆರ್ಟಿಕಲ್: 338 & 338A: SC/STಗಳ ಶಿಕ್ಷಣ ಅಧಿಕಾರಿಗಳ ನೇಮಕ.
ಕರ್ನಾಟಕ ವಸತಿ ಶಾಲೆಗಳ ಸವಲತ್ತುಗಳು:
  • ಸಂಪೂರ್ಣ ಉಚಿತ ಶಿಕ್ಷಣ: ಶಿಕ್ಷಣ, ವಸತಿ, ಊಟ, ಯೂನಿಫಾರ್ಮ್ ಮತ್ತು ಪಠ್ಯಪುಸ್ತಕಗಳು ಉಚಿತ
  • ವಿಶೇಷ ವರ್ಗಗಳಿಗೆ ಆದ್ಯತೆ: SC/ST, OBC, ಅಲೆಮಾರಿ ಸಮುದಾಯ ಮತ್ತು ಅಂಗವಿಕಲರ ಮಕ್ಕಳಿಗೆ ಮೊದಲ ಆಧ್ಯತೆಯ ಸೀಟು ಮೀಸಲು
  • ಆಧುನಿಕ ಸೌಲಭ್ಯಗಳು: ಸ್ಮಾರ್ಟ್ ಕ್ಲಾಸ್‌ಗಳು, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್‌ಗಳು
  • ಸಮಗ್ರ ಅಭಿವೃದ್ಧಿ: NCC, ಸ್ಕೌಟ್ಸ್, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು
  • ವೃತ್ತಿಪರ ತರಬೇತಿ: 9-10ನೇ ತರಗತಿಗಳಲ್ಲಿ ಕೈಗಾರಿಕಾ ತರಬೇತಿ (ITI ಯೋಜನೆ)
  • ಪ್ರತ್ಯೇಕತೆ: ಗುರುಕುಲ ಮಾದರಿ: ಗುರು-ಶಿಷ್ಯ ಸಂಪ್ರದಾಯದ ಆಧುನಿಕ ಅನುಷ್ಠಾನ
  • ಸ್ಥಳೀಯ ಭಾಷೆ: ಕನ್ನಡ ಮಾಧ್ಯಮದೊಂದಿಗೆ ಇಂಗ್ಲಿಷ್ ಶಿಕ್ಷಣದ ಸಮತೋಲನ
  • ಉದ್ದೇಶ: ಗ್ರಾಮೀಣ ಮತ್ತು ಸಾಮಾಜಿಕವಾಗಿ ಹಿಂದುಳಿದ ಮಕ್ಕಳಿಗೆ ನಗರದ ಖಾಸಗಿ ಶಾಲೆಗಳಿಗೆ ಸಮಾನ ಅವಕಾಶಗಳನ್ನು ಒದಗಿಸುವುದು.
  • ಸಂಕ್ಷಿಪ್ತ: 1960ರ ದಶಕದ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಹುಟ್ಟಿ, ಇಂದು ರಾಜ್ಯದ 500+ ವಸತಿ ಶಾಲೆಗಳು 50,000+ ಮಕ್ಕಳ ಜೀವನವನ್ನು ಬದಲಾಯಿಸಿವೆ.
  • ಸರ್ಕಾರವು ವಸತಿ ಶಾಲೆಗಳು, ಶಿಷ್ಯವೇತನ, ಮೀಸಲಾತಿ ಮುಂತಾದ ಯೋಜನೆಗಳ ಮೂಲಕ ಇದನ್ನು ಕಾರ್ಯರೂಪಕ್ಕೆ ತರುತ್ತಿದೆ. ಆದರೆ, ಸಾಮಾಜಿಕ ಜಾಗೃತಿ ಮತ್ತು ಸರ್ಕಾರಿ ಯೋಜನೆಗಳ ಸಕ್ರಿಯ ಅನುಷ್ಠಾನ ಅತ್ಯಗತ್ಯ.

ಸದರಿ ಸರಕಾರ ಈ ಕೆಳಕಂಡ ವಿಶೇಷ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳಲ್ಲಿ ಶೇ.50 ರಷ್ಟು (20.750) ಸೀಟುಗಳನ್ನು ನೇರವಾಗಿ ಅದೂ ಯಾವುದೇ ಪ್ರವೇಶ ಪರೀಕ್ಷೆ ನಡೆಸದೇ ಅರ್ಹ ವಿದ್ಯಾರ್ಥಿಗಳಿಗೆ ದಾಖಲಾತಿ ಮಾಡಿಕೊಳ್ಳಲು ಕ್ರಮವಹಿಸಲಾಗಿದೆ. ಇದೊಂದು ಸುವರ್ಣಾವಕಾಶ, ಇದನ್ನ ಬಳಸಿಕೊಳ್ಳಲು ವಿನಂತಿಸಿದೆ. ಯಾರಿಗೆ ಗೊತ್ತು ನಿಮ್ಮ ಮನೆಯ ಮಗ/ಮಗಳು ದೊಡ್ಡ ವ್ಯಕ್ತಿಯಾಗಬಹುದು. ತಡಮಾಡದೆ ನೇರ ಪ್ರವೇಶಾತಿಗಾಗಿ ಪ್ರತ್ಯೇಕವಾಗಿ KREIS ವೆಬ್‌ಸೈಟ್ https://kreis.karnataka.gov.in

ಆ) ವಿಶೇಷ ವರ್ಗಗಳು ಮತ್ತು ಮೀಸಲಾತಿ:

ಕ್ರ ಸಂ ವರ್ಗ ಹಂಚಿಕೆ
A ಸಫಾಯಿ ಕರ್ಮಚಾರಿ/ಗುರುತಿಸಿರುವ ಮ್ಯಾನ್ಯುಯಲ್ ಸ್ಕ್ಯಾವೆಂಜರ್/ಚಿಂದಿ ಆಯುವವರು/ಸ್ಮಶಾನ ಕಾರ್ಮಿಕರ ಮಕ್ಕಳಿಗೆ ಶೇ.10
B ಬಾಲ ಕಾರ್ಮಿಕರು/ಜೀತ ವಿಮುಕ್ತ ಕಾರ್ಮಿಕರ ಮಕ್ಕಳು/ಗುರುತಿಸಿರುವ ಮಾಜಿ ದೇವದಾಸಿಯರ ಮಕ್ಕಳು ಶೇ.10
C 25% ಕ್ಕಿಂತ ಹೆಚ್ಚಿನ ಅಂಗಲವಿಕಲತೆ ಹೊಂದಿರುವ ಮಕ್ಕಳು/ ಹೆಚ್.ಐ.ವಿ.ಗೆ ತುತ್ತಾದ ಪೋಷಕರ ಮಕ್ಕಳು, ಒಬ್ಬ ಪೋಷಕರನ್ನು ಮಾತ್ರ ಹೊಂದಿರುವ ಅಥವಾ ಅನಾಥ ಮಕ್ಕಳು. ಶೇ.10
D ಗುರುತಿಸಿರುವ ಅಲೆಮಾರಿ/ಅರೆ ಅಲೆಮಾರಿ/ಸೂಕ್ತ-ಅತೀ ಸೂಕ್ತ ಸಮುದಾಯದ/ ಸೈನಿಕರು ಮತ್ತು ಮಾಜಿ ಸೈನಿಕರು/ಸರ್ಕಾರಿ ಯೋಜನೆಗಳಿಂದ ಸ್ಥಳಾಂತರಗೊಂಡ ಪೋಷಕರ ಮಕ್ಕಳು. ಶೇ.10
E ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಆಶ್ರಮ ವಸತಿ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ಉತ್ತೀರ್ಣರಾದ ಮಕ್ಕಳು. ಶೇ.10
ಒಟ್ಟು ಶೇ.50

B. ವಿಶೇಷ ವರ್ಗಗಳ ಅರ್ಥ:

1. ಸಫಾಯಿ ಕರ್ಮಚಾರಿ/ ಗುರುತಿಸಿರುವ ಮ್ಯಾನ್ಯುಯಲ್ ಸ್ಕ್ಯಾವೆಂಜರ್/ಚಿಂದಿ ಆಯುವವರು/ಸ್ಮಶಾನ ಕಾರ್ಮಿಕರ ಮಕ್ಕಳು

  • ಸಫಾಯಿ ಕರ್ಮಚಾರಿ ಮಕ್ಕಳು
  • ಗುರುತಿಸಿರುವ ಮ್ಯಾನ್ಯುಯಲ್ ಸ್ಯಾವೆಂಜರ್ ಮಕ್ಕಳು
  • ಚಿಂದಿ ಆಯುವವರು ಮಕ್ಕಳು
  • ಸ್ಮಶಾನ ಕಾರ್ಮಿಕರ ಮಕ್ಕಳು

2. ಬಾಲ ಕಾರ್ಮಿಕರು/ಜೀತ ವಿಮುಕ್ತ ಕಾರ್ಮಿಕರ ಮಕ್ಕಳು/ ಗುರುತಿಸಿರುವ ಮಾಜಿ ದೇವದಾಸಿಯರ ಮಕ್ಕಳು

  • ಬಾಲ ಕಾರ್ಮಿಕರ ಮಕ್ಕಳು
  • ಜೀತ ವಿಮುಕ್ತ ಕಾರ್ಮಿಕರ ಮಕ್ಕಳು
  • ಗುರುತಿಸಿರುವ ಮಾಜಿ ದೇವದಾಸಿಯರ ಮಕ್ಕಳು

3. 25% ಕ್ಕಿಂತ ಹೆಚ್ಚಿನ ಅಂಗಲವಿಕಲತೆ ಹೊಂದಿರುವ ಮಕ್ಕಳು/ ಹೆಚ್.ಐ.ವಿಗೆ ತುತ್ತಾದ ಪೋಷಕರ ಮಕ್ಕಳು, ಒಬ್ಬ ಪೋಷಕರನ್ನು ಮಾತ್ರ ಹೊಂದಿರುವ ಅಥವಾ ಅನಾಥ ಮಕ್ಕಳು

  • 25% ಕ್ಕಿಂತ ಹೆಚ್ಚಿನ ಅಂಗಲವಿಕಲತೆ ಹೊಂದಿರುವ ಮಕ್ಕಳು (ಮಂದ ದೃಷ್ಟಿ, ದುರ್ಬಲ ಶ್ರವಣಶಕ್ತಿ, ವಾಸಿಯಾಗಿರುವ ಕುಷ್ಠರೋಗ, ಚಲನಶಕ್ತಿ ಇಲ್ಲದಿರುವುದು)
  • ಹೆಚ್.ಐ.ವಿ ಗೆ ತುತ್ತಾದ ಪೋಷಕರ ಮಕ್ಕಳು
  • ಒಬ್ಬ ಪೋಷಕರನ್ನು ಮಾತ್ರ ಹೊಂದಿರುವ/ಅನಾಥ ಮಕ್ಕಳು

4. ಗುರುತಿಸಿರುವ ಅಲೆಮಾರಿ/ಅರೆ ಅಲೆಮಾರಿ/ಸೂಕ್ಷ-ಅತೀ ಸೂಕ್ಷ್ಮ ಸಮುದಾಯದ/ಸೈನಿಕರು ಮತ್ತು ಮಾಜಿ ಸೈನಿಕರು/ಸರ್ಕಾರಿ ಯೋಜನೆಗಳಿಂದ ಸ್ಥಳಾಂತರಗೊಂಡ ಪೋಷಕರ ಮಕ್ಕಳು

  • ಗುರುತಿಸಿರುವ ಅಲೆಮಾರಿ/ಅರೆ ಅಲೆಮಾರಿ/ಸೂಕ್ತ-ಆತೀ ಸೂಕ್ತ ಸಮುದಾಯದ ಮಕ್ಕಳು
  • ಸೈನಿಕರು ಮತ್ತು ಮಾಜಿ ಸೈನಿಕರ ಮಕ್ಕಳು
  • ಸರ್ಕಾರಿ ಯೋಜನೆಗಳಿಂದ ಸ್ಥಳಾಂತರಗೊಂಡ ಪೋಷಕರ ಮಕ್ಕಳು

5. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಆಶ್ರಮ ವಸತಿ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ಉತ್ತೀರ್ಣರಾದ ಮಕ್ಕಳು

ಮೇಲ್ಕಂಡ ವಿಶೇಷ ವರ್ಗಗಳಿಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ದೃಢೀಕೃತ ಪ್ರಮಾಣ ಪತ್ರ ಪಡೆದಿರಬೇಕು. ಈ ಮೇಲ್ಕಂಡ ವಿಶೇಷ ವರ್ಗಕ್ಕೆ ದೃಢೀಕರಣ ಪತ್ರ ನೀಡಲು ಸರ್ಕಾರದಿಂದ ಅಧಿಕೃತವಾಗಿ ಯಾವುದೇ ಪ್ರಾಧಿಕಾರವನ್ನು ಘೋಷಿಸಿರದಿದ್ದರೆ, ಪ್ರಕಟಿಸಲಾಗಿರುವ ನಮೂನೆ-2ರಲ್ಲಿ ಕನಿಷ್ಠ ಗ್ರೂಪ್-ಬಿ ದರ್ಜೆಯ ಅಧಿಕಾರಿಯಿಂದ ದೃಢೀಕರಿಸಲ್ಪಟ್ಟ ಪ್ರಮಾಣ ಪತ್ರ ಹಾಜರುಪಡಿಸುವುದು.

ಹೆಚ್ಚಿನ ವಿವರಗಳಿಗಾಗಿ:

  1. ಆಯಾ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ/ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ/ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ/ಸಂಘದ ಆಡಿ ಕಾರ್ಯ ನಿರ್ವಹಿಸುತ್ತಿರುವ ಹತ್ತಿರದ ವಸತಿ ಶಾಲೆಗಳನ್ನು/ಕಾಲೇಜುಗಳನ್ನು ಸಂಪರ್ಕಿಸುವುದು.
  2. ಕರ್ನಾಟಕ ಪರೀಕ್ಷಾ ಪ್ರಾಧಿಕಾರ,
    18ನೇ ಅಡ್ಡರಸ್ತೆ, ಸಂಪಿಗೆ ರಸ್ತೆ, ಮಲ್ಲೇಶ್ವರಂ, ಬೆಂಗಳೂರು - 560 012
    keauthority-ka@nic.in | http://kea.kar.nic.in
    ಸಹಾಯವಾಣಿ: ☎ 080-23 460 460 (5 ಲೈನ್‌ಗಳು) (ಬೆಳಿಗ್ಗೆ 9.30.-ಸಂಜೆ: 6.00 ರವರೆಗೆ
  3. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ
    (ಕರ್ನಾಟಕ ಸರ್ಕಾರದ ಅಂಗ ಸಂಸ್ಥೆ)
  4. ನಂ.8, ಎಂ.ಎಸ್.ಬಿ. 1. 6 ಮತ್ತು 7ನೇ ಮಹಡಿ, ಕನ್ನಿಂಗ್‌ ಹ್ಯಾಮ್ ರಸ್ತೆ, ಬೆಂಗಳೂರು-560052.
    ☎: 080-22283366, 22265755, 22204466, 22207722.
    ✉: ed.kreis@ka.gov.in
    🌐: https://kreis.karnataka.gov.in

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಸಹಾಯವಾಣಿ ಕೇಂದ್ರ ಸಮಾಜ ಕಲ್ಯಾಣ ಇಲಾಖೆ
☎ 9482300400

Share:

0 Comments:

ಕಾಮೆಂಟ್‌‌ ಪೋಸ್ಟ್‌ ಮಾಡಿ

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels

Blog Archive