- ಗಂಡುಮಕ್ಕಳಲ್ಲಿ ಪ್ರೌಢಾವಸ್ಥೆ
- ಹೆಣ್ಣುಮಕ್ಕಳು ವಯಸ್ಕರಾಗುವುದು
- ದೇಹ ಸಿದ್ದಗೊಳಿಸಿ
- ಪ್ರಾಪ್ತ ವಯಸ್ಸು ಆಗುವವರೆಗೂ ಮುಂದಿನ ಜೀವನಕ್ಕೆ ಅಣಿಯಾಗುವುದು ಕರ್ತವ್ಯ
ಗಂಡುಮಕ್ಕಳಲ್ಲಿ ಪ್ರೌಢಾವಸ್ಥೆ

ಗಂಡಸರಲ್ಲಿ ವೀರ್ಯ ೧೪-೧೫ ನೇ ವರ್ಷಕ್ಕೇ ವಿಸರ್ಜನೆ ಪ್ರಾರಂಭವಾಗುವುದು. ಹಾಗಂದ ಮಾತ್ರಕ್ಕೆ ಮದುವೆಯಾಗಿ ಸಂಸಾರ ನಡೆಸಲು, ಕಾಮ ಜೀವನ ನಡೆಸಲು ಪ್ರಾರಂಭ ಎಂದರ್ಥವಲ್ಲ. ಅದಕ್ಕೆ ಅರ್ಹತೆ ಕೂಡಾ ಇರುವುದಿಲ್ಲ. ನದಿ ಹುಟ್ಟಿದ ಕೂಡಲೆ ನೀರನ್ನ ಖಾಲಿ ಮಾಡಿದರೆ ಸಾಗರ ಸೇರುವುದು ಎಂತು? ಸಾಗರ, ಸಮುದ್ರ ಸೇರದೇ ಅದನ್ನ ನದಿ ಅಂತ ಕರಿಯಲು ಬರುತ್ತದೋ? ಮಗುವಿಗೆ ಹಲ್ಲು ಹುಟ್ಟಿದೆ ಅಂದ ತಕ್ಷಣ ಚಕ್ಕಲಿ ನೀಡಲು ಸಾಧ್ಯವೇ? ವೀರ್ಯ ಉದ್ಭವವಾಗಿದೆ ಅಂದರೆ ಅವನು ನರಮನುಷ್ಯನ ಅರ್ಹತೆ ಬಂತು ಎಂದರ್ಥ. ದೇಹ ತನ್ನ 25 ನೇ ವಯಸ್ಸಿನವರೆಗೂ ಬೆಳೆಯುತ್ತದೆ. ಹಾಗಾಗಿ ಅವು ಚನ್ನಾಗಿ ಬೆಳೆದು ಬಲಿತು ಬಲಗೊಳ್ಳುವವರೆಗೆ ಅವುಗಳಮೇಲೆ ಯಾವ ಒತ್ತಾಯವೂ ಆಗಬಾರದು.
ಹೆಣ್ಣುಮಕ್ಕಳು ವಯಸ್ಕರಾಗುವುದು

ಸಾಮಾನ್ಯವಾಗಿ ಊಷ್ಣ ಪ್ರದೇಶಗಳಲ್ಲಿ ಹುಡುಗಿಯರು ಸುಮಾರು ೧೨-೧೩ನೇ ವಯಸ್ಸಿಗೇ ಋತುಮತಿಯರಾಗುತ್ತಾರೆ. ಅಂದ ಮಾತ್ರಕ್ಕೆ ಅವರು ಮದುವೆಗೆ ಮತ್ತು ಕಾಮ ಜೀವನಕ್ಕೆ ಯೋಗ್ಯರಲ್ಲ. ಹುಡುಗಿಯರು ಕಾಮದ ವಿಚಾರಕ್ಕೆ ಬಂದರೆ ತುಂಬಾ ಪ್ರೌಢರಾಗಿರುತ್ತಾರೆ. ಆ ವಯಸ್ಸಿನಲ್ಲಿ ಅವರಲ್ಲಿ ಕಾಮವಿಚಾರಗಳು ಕೂಡ ಹುಟ್ಟುವದಿಲ್ಲ. ಸಂಯೋಗಕ್ಕೆ ಯೋಗ್ಯವಾಗುವಂತೆ ಅವರ ಯೋನಿ ಗರ್ಭಾಶಯಗಳೂ, ಅವುಗಳನ್ನು ಧರಿಸಿರುವ ಸ್ನಾಯುಗಳೂ ಸಾಕಷ್ಟು ಬಲವನ್ನೂ ವಿಕಾಸವನ್ನೂ ಹೊಂದಿರುವದಿಲ್ಲ. ಮತ್ತು ಗರ್ಭಧಾರಣವಾದರೆ ಅದನ್ನು ಪೋಷಿಸುವಷ್ಟು ಚೈತನ್ಯವೂ ಅವಳಿಗಿರುವದಿಲ್ಲ ಮತ್ತು ಗರ್ಭದ ಭಾರವನ್ನು ತಡೆಯುವಷ್ಟು ಶಕ್ತಿಯೂ ಅವಳ ಶ್ರೋಣಿಯ ಅಸ್ಥಿ (Pelvic Bone) ಗಳಿಗಿರುವುದಿಲ್ಲ. ಆದ್ದರಿಂದ ಆಗಲೇ ಅವಳನ್ನು ಸಂಭೋಗಕ್ಕೆ ಜಗ್ಗಿದರೆ ಗರ್ಭಾಶಯದ ಮತ್ತು ಮುಟ್ಟಿನ ಸಂಬಂಧದ ಎಷ್ಟೋ ರೋಗಗಳಿಗೆ ಅವಳನ್ನು ಬಲಿಗೊಟ್ಟಂತಾಗುವದು. ಆದ್ದರಿಂದ ಅವಳು ತನ್ನ ಅಂಗಾಂಗಗಳಿಂದ ಬಲಗೊಂಡು, ನೈಜವಾದ ಕಾಮವು ಅವಳಲ್ಲಿ ಹುಟ್ಟುವವರೆಗೆ ಅಂದರೆ ಸುಮಾರು ೧೮-೨೧ ವರ್ಷಗಳವರೆಗಾದರೂ ಕಾಮವಿಲಾಸಕ್ಕೆ ಅವಳು ಮನಸ್ಸು ಕೊಡಬಾರದು.
ದೇಹ ಸಿದ್ದಗೊಳಿಸಿ

ದೇಹದ ಅಂಗಗಳನ್ನು ಪ್ರಾಣಿಗಳ ತರಹ ಕೂಡಲೆ ಸಂಭೋಗಕ್ಕೆ ಉಪಯೋಗಿಸಿದರೆ ಅವುಗಳ ಬೆಳೆವಣಿಗೆ ಕುಗ್ಗಿ ನಾನಾ ವಿಧದ ರೋಗಗಳಿಗೆ ನಾವೇ ಆಮಂತ್ರಣ ಕೊಟ್ಟಂತಾಗುವದು. ದೇಹದ ಮತ್ತು ಬುದ್ದಿಯ ಬೆಳವಣಿಗೆ ಆಗಬೇಕಿರುವ ಕಾಲ ಅದು. ವೀರ್ಯ ಶಕ್ತಿಯಾಗಿ ಬದಲಾಗಿ ದೇಹ ಮಿರಿ ಮಿರಿ ಮಿಂಚಬೇಕು. ವೀರ್ಯ ಮತ್ತು ಶುಕ್ರಗಳು ದೇಹಕ್ಕೆ ಬೇಕಾದ ಅತಿ ಅಪರೂಪದ ದ್ರವ್ಯಗಳು. ಆ ವಯಸ್ಸಿನಲ್ಲಿ ಕ್ರೀಡೆ, ವ್ಯಾಯಾಮ, ದೇಹದಂಡನೆ, ಸಂಗೀತ, ನೃತ್ಯ, ಕಠಿಣ ದೇಹ ಕಾರ್ಯ, ಕೃಷಿ ಇತ್ಯಾದಿ ಕೆಲಸ ಮಾಡಿ ದೇಹ ಸಿದ್ದಗೊಳಿಸಿಕೊಳ್ಳಬೇಕು. ಚೆನ್ನಾಗಿ ದೇಹವನ್ನ ನಿರ್ವಹಿಸಿದ್ದೇ ಹೌದಾದರೆ, ದೇಹ ದಷ್ಟಪುಷ್ಟವಾಗಿಯೂ ಬುದ್ದಿಯೂ ಬಲಿಷ್ಟವಾಗಿ ಬೆಳೆಯುವದು. ಒಟ್ಟಿನಲ್ಲಿ ಹೇಳುವುದಾದರೆ ಕನಿಷ್ಠ ೨೫ ವರ್ಷಗಳವರೆಗಾದರೂ ಕಾಮಬಯಕೆಯಿಂದ ದೂರ ಇರುವದು ಅತ್ಯುತ್ತಮ.
ಪ್ರಾಪ್ತ ವಯಸ್ಸು ಆಗುವವರೆಗೂ ಮುಂದಿನ ಜೀವನಕ್ಕೆ ಅಣಿಯಾಗುವುದು ಕರ್ತವ್ಯ

ಆದ್ದರಿಂದ ಇದರ ಬಗ್ಗೆ ಕೊನೆಯದಾಗಿ ಹೇಳಬೇಕೆಂದರೆ ದೇಶ ಕಟ್ಟಬೇಕೆನ್ನುವ ವಿಚಾರ ಹೊಂದಿರುವ ನಾವುಗಳು ಯಾವುದರ ಬಗ್ಗೆ ಯೋಚಿಸಬೇಕು, ಸಿದ್ದರಾಗಬೇಕು ಎನ್ನುವುದು ಮುಖ್ಯ. ತಕ್ಕ ವಯಸ್ಸಿಗೆ ಬಂದ ಕೂಡಲೆ ಬೇಡವೆಂದರೂ ಹೆತ್ತವರು, ಊರವರು, ಆಪ್ತರು ಸೇರಿ ಗಂಡಿಗೆ ಒಂದು ಹೆಣ್ಣು, ಹೆಣ್ಣಿಗೆ ಒಂದು ಗಂಡನ್ನ ಗೊತ್ತು ಪಡಿಸಿ ಮದುವೆ ಮಾಡಿಸಿ ಕಾಮ ಜೀವನಕ್ಕೆ ತಳ್ಳುತ್ತಾರೆ. ನಮ್ಮಲ್ಲಿ ಕಾಮ ಜೀವನದ ಪ್ರಾರಂಭವನ್ನ ಮದುವೆ ಎನ್ನುವ ಅದ್ದೂರಿ ಕಾರ್ಯಕ್ರಮ ಮೂಲಕ ಆಯೋಜಿಸುತ್ತಾರೆ. ಹಾಗಾದರೆ ಗಂಡು ಮತ್ತು ಹೆಣ್ಣಿನ ಕೆಲಸವೇನೆಂದರೆ ಪ್ರಾಪ್ತ ವಯಸ್ಸು ಆಗುವವರೆಗೂ ಮುಂದಿನ ಜೀವನಕ್ಕೆ ಅಣಿಯಾಗುವುದು ಕರ್ತವ್ಯ. ಅದೇನೇ ಸಾಧನೆ ಮಾಡುವುದಿದ್ದರೂ ಮದುವೆಗೂ ಮೊದಲೇ ಮಾಡಿ ಮುಗಿಸಿ.
Keywords: right age for sexual life, puberty in boys and girls, physical maturity, mental preparation for marriage, healthy relationships, sexual health in Kannada, marriage age in India, body development stages
0 Comments:
ಕಾಮೆಂಟ್ ಪೋಸ್ಟ್ ಮಾಡಿ