ಪದೇ ಪದೆ ಕಾಮದ ಭಾವನೆ ಕಾಡಿದರೇ

News Image 1

ಕಾಮದ ಭಾವನೆ ಪದೇ ಪದೇ ಕಾಡುತ್ತಿದೆ

ಕಾಮದ ಭಾವನೆ ಪದೇ ಪದೇ ಕಾಡುತ್ತಿದೆ ಎಂದರೆ ಅದೊಂದು ವ್ಯಾದಿ ಎನ್ನಬಹುದು. ಇದಕ್ಕೆ ಚಿಕಿತ್ಸೆ ಅಗತ್ಯ. ಆ ಭಾವನೆ ಪದೇ ಪದೇ ಬಂದು ಅದನ್ನೇ ಜೀವನವನ್ನಾಗಿಸಿಕೊಂಡು ಬಂದವನು ಮುಂದೆ ಬರಿ ಪಶ್ಚಾತ್ತಾಪದ ಉರಿಯಲ್ಲೆ ಬೇಯಬೇಕಾಗುತ್ತದೆ ಎಂದರೆ ಎಷ್ಟು ಬೇಜಾರಾಗುತ್ತೆ ಅಲ್ಲವಾ? ಸತ್ಯ ಯಾವಾಗಲೂ ಸ್ಥಿರ. ಹಾಗಂತ ಆ ಒಂದು ಭಾವನೆ ಕೆಟ್ಟದಲ್ಲ. ಆ ಭಾವನೆ ಇಲ್ಲದೇ ಹೋದರೆ ನಮ್ಮ ಸೃಷ್ಠಿಯೇ ಆಗುತ್ತಿರಲಿಲ್ಲ. ಹಸಿವೆ ಸಿಕ್ಕಾಪಟ್ಟೆ ಆಗ್ತಿದೆ ಅಂದರೂ, ಅತಿ ಕಾಮದ ಭಾವನೆ ಬಂದರೂ ಚಿಕಿತ್ಸೆ ಬೇಕು.

News Image 2

ಅರ್ಥ ಕೊಟ್ಟವರ್ಯಾರು

ಅದರಲ್ಲಿ ಮನವು ಕಾಮುಕವಾಗಿ ನಿರಂತರವೂ ಕಾಮ ವಿಲಾಸದ ಚಿತ್ರಗಳನ್ನೇ ಕಲ್ಪಿಸುತ್ತಿದ್ದರೂ ಕೂಡ ಕಾಮವನ್ನು ತಡೆದುಕೊಂಡವನನ್ನು ನೀವು ಬ್ರಹ್ಮಚಾರಿ ಅಂತ ಕರೆಯುತ್ತೀರಾ!!! ಮನದಲ್ಲಿ ಕಾಮ ಭಾವ ಭಾವನೆಯು ಹುಟ್ಟಿದ ಕೂಡಲೇ ಪಶುಗಳಂತೆ ಸ್ಥಳ, ಕಾಲ, ವ್ಯಕ್ತಿ ಹೀಗೆ ಏನನ್ನೂ ನೋಡದೆ ಸಂಭೋಗಿಸಿ ನಂತರ ಮತ್ತೆ ಭಯ-ಭಕ್ತಿಗೆ ಒಳಪಡುವುದನ್ನ ಬ್ರಹ್ಮಚರ್ಯ ಎನ್ನುವುದಿಲ್ಲವಾ? ಅರ್ಥ ಕೊಟ್ಟವರು, ನಾವು-ನೀವು.

News Image 3

ಕಾಮ ಭಾವನೆಯ ಹಿಂದೆ ಮುಂದೆ?

ಉತ್ತೇಜನ ಸಿಕ್ಕಿದಾಗ ಮಾತ್ರ ಯಾವುದೇ ಕಾರ್ಯ ಸಾಧ್ಯ. ಅದು ಕಾಮವೇ ಆಗಿರಲಿ, ಸಹಾಯ ಸಹಕಾರ, ಸಮಾಜಿಕ ಸೇವೆಯೇ ಆಗಿರಲಿ, ಪ್ರತಿಯೊಂದಕ್ಕೂ ಉತ್ತೇಜನ ಬೇಕೇ ಬೇಕು. ಒಬ್ಬ ವ್ಯಕ್ತಿ ಕಾಮಕ್ಕೆ ಸಂಬಂಧಪಟ್ಟ ವಸ್ತುಗಳನ್ನ ಅವನ ಕಣ್ಣಿಗೆ ಬಿದ್ದ ಕೂಡಲೇ ಅವನು ಕಾಮುಕನಾಗುತ್ತಾನೆ ಎಂದರೆ ಬಹುಶಃ ಆ ವ್ಯಕ್ತಿ ಚಿಕ್ಕವರಿದ್ದಾಗಲೇ ಅವರಿಗೆ ಅದು ಉತ್ತೇಜನವಾಗಿ ಸಿಕ್ಕಿರಬೇಕು. ನಿಜವಾಗಲೂ ಬ್ರಹ್ಮಚರ್ಯ ಪಾಲಿಸುವವರು ಕಾಮದ ಬಗ್ಗೆ ಚಿಂತಿಸುವುದ ಬಿಟ್ಟು, ಸರಿಯಾದ ದೃಷ್ಟಿಕೋನದಲ್ಲಿ ನಿಂತು ವಿಚಾರ ಮಾಡುವುದನ್ನು ರೂಢಿಸಿಕೊಳ್ಳಬೇಕು ಅದೇ ಉತ್ತೇಜನವಾಗಿ ಬರಬೇಕು.

News Image 4

ಕಾಣುವ ದೃಷ್ಠಿ ಸರಿಯಿದ್ದರೆ...

ನಾವು ನೋಡುವ ದೃಷ್ಟಿಯಲ್ಲಿ ನಮ್ಮ ವ್ಯಕ್ತಿತ್ವ ಅಡಗಿದೆ ತಾಯಿ ಮಗುವಿಗೆ ಮೊಲೆ ಹಾಲನ್ನು ಕುಡಿಸುತ್ತಾಳೆ. ಅದು ಪ್ರಕೃತಿಯ ರಹಸ್ಯ‌ ಸಹಜ ಕ್ರಿಯೆ. ಕೆಲವರಿಗೆ ದೇಹದ ಅಂಗಾಂಗಗಳು ಮತ್ತೆ ಕೆಲವರಿಗೆ ಬೇರೆಯದೇ, ಚಪಲದ ವಿಷಯಗಳಾಗುತ್ತವೆ. ಈ ಭಾವನೆ ಬರಲು ಗಂಡಿಗೂ ಹೆಣ್ಣಿಗೂ ಯಾವುದೇ ವ್ಯತ್ಯಾಸವಿಲ್ಲ. ಇನ್ನು ಕೆಲವರಲ್ಲಿ ಮೇಲೆ ಹೇಳಿದ ಯಾವುದೇ ವಿಷಯಗಳನ್ನು ಅಥವಾ ವಸ್ತುಗಳನ್ನ ನೋಡಿದರೆ ಅವರಿಗೆ ಯಾವುದೇ ಕಾಮದ ಭಾವನೆ ಹುಟ್ಟುವುದಿಲ್ಲ, ಅದು ಒಂದು ಮಾನಸಿಕ ಸ್ಥಿತಿ ಇರಬಹುದಾ?

News Image 5

ವ್ಯತ್ಯಾಸಗಳು ನಮ್ಮೊಳಗೆ ಏಕೆ?

ಉತ್ತರ ಸಿಗಬೇಕಿದ್ದರೆ ನಿಮ್ಮ ಬಾಲ್ಯ ನೆನಪಿಸಿ. ನಿಮ್ಮ ಮನೆಯ ವಾತಾವರಣ, ಟಿವಿಯ ಚಿತ್ರಗಳು, ಸಿನಿಮಾಗಳು, ಧಾರಾವಾಹಿಗಳು, ಹಾಡುಗಳು ಹಾಗು ಮೊಬೈಲ್‌ನಲ್ಲಿ ಉಚಿತವಾಗಿ ಸಿಗುತ್ತಿರುವ ಅನೇಕ ವೆಬ್ಸೈಟ್ಗಳು ಅಥವಾ ಆ ವಿಷಯದ ಬಗ್ಗೆ ಚರ್ಚೆ ಮಾಡುವ ಒಬ್ಬ ಗೆಳೆಯನೋ ಗೆಳತಿಯೋ ಹೀಗೆ ಹುಡುಕುತ್ತಾ ಹೋದರೆ ನಿಮ್ಮ ದೃಷ್ಠಿಕೋನಕ್ಕೆ ಕಾರಣ ಸಿಗುತ್ತದೆ. ಕಾಮದ ಭಾವನೆ ಆಗಬಹುದು ಅಥವಾ ಕಾಮರಹಿತ ಭಾವನೆಗಳೇ ಆಗಿರಬಹುದು ಒಮ್ಮೆ ನಿಂತು ಯೋಚಿಸುವುದಾದರೆ ನನ್ನ ಮನಸ್ಸು ನನ್ನ ಕೈಲಿ ಇಲ್ಲವೆಂದಮೇಲೆ ನೀನ್ಯಾರು?

News Image 5

ಎರಡು ವ್ಯತ್ಯಾಸಗಳು ನಮ್ಮೊಳಗೆ ಏಕೆ?

ದಾರಿಲಿ ಹೋಗುತ್ತಿರುವ ಆ ಬೀದಿನಾಯಿಗೂ ನಿನಗೂ ಏನು ವ್ಯತ್ಯಾಸ ಉಳಿಯಿತು? ಮನುಷ್ಯ ಎಂದ ಮೇಲೆ ಪ್ರತಿಯೊಂದನ್ನ ಕಲಿಯಲೇಬೇಕು ಈಗ ನನ್ನ ಕಣ್ಣೋಟ ಸರಿಪಡಿಸಿಕೊಳ್ಳುವ ಜವಾಬ್ದಾರಿಯು ನನ್ನದೇ, ಇಲ್ಲದೆ ಹೋದರೆ ಸಾಧ್ಯವಿಲ್ಲದಷ್ಟು ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಹಾಗಾಗಿ ಕಾಮ ಎನ್ನುವುದು ಜೀವನದ ಚೌಕಟ್ಟಿನ ಒಳಗಿದ್ದರೆ ಬಹಳ ಚಂದ. ಅದು ಜೀವನ ಚೌಕಟ್ಟನ್ನ ದಾಟಿದರೆ ನಿನಗೆ ಚೌಕಟ್ಟಿನ ಒಳಗೇ ಬೆಲೆ ಇಲ್ಲ. ಹಾಗಾಗಿ ಕಾಮದ ಯೋಚನೆ ಎಂಬುದು ನದಿ ಇದ್ದ ಹಾಗೆ, ಅದು ಒಂದು ಶಕ್ತಿ ಅದರಲ್ಲಿ ನೀ ಜಾಣನಾಗಿ ಯೋಚಿಸು

News Image 5

ಮುಂದಿನ ಪ್ರಶ್ನೆ

ಕಾಮಕ್ಕೆ ವಯಸ್ಸು ಇದೆಯೇ?
ಮುಂದಿನ ಸರಣಿಗೆ ನಿರೀಕ್ಷಿಸಿ,
ನಮ್ಮ ವಾಟ್ಸಾಪ್‌ ಗುಂಪಿಗೆ ಸೇರಿ ನೋಟಿಫಿಕೇಶನ್‌ಗೆ ಕಾಯಿರಿ
https://chat.whatsapp.com/L4utl9emGdA4dGiTGWShJO

Share:

0 Comments:

ಕಾಮೆಂಟ್‌‌ ಪೋಸ್ಟ್‌ ಮಾಡಿ

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels

Blog Archive