ಕರ್ನಾಟಕ ನಾಗರಿಕ ಸೇವಾ ಸಿಬ್ಬಂದಿ ಡ್ರೆಸ್ ಕೋಡ್‌

    ನೌಕರರಿಗೆ ಸಾಮಾನ್ಯವಾಗಿ ಮೊದಲಿಗೆ ಎದುರಾಗುವ ಪ್ರಶ್ನೆ ನಮಗೆ ಯಾವುದಾದರೂ ವಸ್ತ್ರ ಸಂಹಿತೆ ಇದೆಯಾ ಎಂದು, ಮೊನ್ನೆ ಯಾವುದೋ ಶಾಲೆಯಲ್ಲಿ ಚರ್ಚೆಯಾಯಿತಂತೆ, ನಮ್ಮ ಕಲೀಗ್‌ ಒಬ್ಬರು ಚೂಡಿದಾರ್‌ ಹಾಕ್ಕೊಂಡ ಬರ್ತಾರೆ, ಸೀರೆ ಧರಿಸಿಕೊಂಡ ಬರೋಕೆ ಏನಾಗಿದೆ? ಶಾಲೆಲಿ ಶಿಕ್ಷಕರಿಗೆ ಚೂಡಿದಾರ ಎಷ್ಟು ಸರಿ? ಅದಕ್ಕೆ ಚೂಡಿದಾರ್‌ ದರಿಸಿದ ಶಿಕ್ಷಕಿಯರು ತಾವು ಧರಿಸಿದ್ದು ಕೂಡಾ ಸಭ್ಯ ಉಡುಪೇ ಆಗಿದೆ, ಇದು ಕೂಡ ನಮ್ಮ ದೇಶದ ಸಂಸ್ಕೃತಿಯೇ ಅಲ್ಲವೇ ಎಂದರಂತೆ. ಈ ಮೇಲಿನ ವಿಷಯದ ಮೇಲಿನಚರ್ಚೆ ಎಂದು ಮುಗಿಯುವುದಲ್ಲ. ಅದೇನೆ ಇದ್ದರೂ ಧರಿಸುವ ಉಡುಪುಗಳು ನಮ್ಮ ಪರವಾದ ವೃತ್ತಿ ಭಾವನೆ, ಶಿಸ್ತುಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ಪ್ರತಿಬಿಂಬಿಸುತ್ತವೆ. ಇರಲಿ ಹಾಗಾದರೆ ನಮ್ಮ ಸರಕಾರ, ಇಲಾಖೆ ವಸ್ತ್ರ ಸಂಹಿತೆ ಬಗ್ಗೆ ಏನು ಹೇಳುತ್ತೆ? ನೋಡೋಣ…

    ಕರ್ನಾಟಕ ಸರ್ಕಾರವು ತನ್ನ ನಾಗರಿಕ ಸೇವಾ ಸಿಬ್ಬಂದಿಗಳಿಗೆ ವೃತ್ತಿಪರತೆಯನ್ನು ಕಾಪಾಡುವ ನಿಟ್ಟಿನಲ್ಲಿ ವಿಶೇಷ ಡ್ರೆಸ್ ಕೋಡ್‌ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳು ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ವೃತ್ತಿ ಬೌದ್ಧಿಕತೆ, ಶಿಸ್ತು, ಮತ್ತು ಮಾನವೀಯ ಮೌಲ್ಯಗಳನ್ನು ಹೆಚ್ಚಿಸಲು ಪ್ರಮುಖ ಪಾತ್ರ ವಹಿಸುತ್ತವೆ.

    ಸರಕಾರಿ ನೌಕರರು ಕಾರ್ಯ ತತ್ಫರರಾದರೂ ತಮ್ಮ ದಿರಿಸಿನ ಬಗ್ಗೆ ಕೆಲವರು ಗಮನ ಹರಿಸುವುದಿಲ್ಲ, ಅದೊಂದು ಮಹತ್ವದ ವಿಚಾರವೆಂದು ಪರಿಗಣಿಸುವುದಿಲ್ಲ, ಅದಕ್ಕೆ ಕಾರಣ ತಮ್ಮ ಅನುಭವದ ಹಿನ್ನೆಲೆ ಇರಬಹುದು. ಆದರೆ ನಾವು ವೈಯಕ್ತಿಕ ನೆಲೆಗಟ್ಟಿನಲ್ಲಿ ನಿಂತು ಯೋಚಿಸುವುದಕ್ಕೂ, ಸಾರ್ವಜನಿಕವಲಯದಲ್ಲಿ ನಿಂತು ಯೋಚಿಸುವುದಕ್ಕೂ ಬಹಳ ಅಂತರವಿದೆ ಎಂಬುದನ್ನ ಅರ್ಥೈಸಿಕೊಳ್ಳುವುದಕ್ಕೆ ಬಹುಶಃ ಸೋಲುತ್ತಿದ್ದೇವಾ?

    ಸರ್ಕಾರಿ ಸೇವೆಗಳು ಸಾರ್ವಜನಿಕರಿಗೆ ಉದಾಹರಣೆಯಾಗಬೇಕು. ವೃತ್ತಿಪರತೆಯ ಹೊರತಾಗಿ, ನಿಲುವು, ಉಡುಪು, ನೈತಿಕ ಮೌಲ್ಯಗಳು, ಶಿಸ್ತು, ಮತ್ತು ಕರ್ತವ್ಯನಿಷ್ಠೆಗಳೇ ಒಬ್ಬ ಸರಕಾರಿ ನೌಕರನ ವೃತ್ತಿಗೆ ಬಲವನ್ನ ತುಂಬುತ್ತದೆ. ಸರ್ಕಾರದ ಆದೇಶದಲ್ಲಿ ಡ್ರೆಸ್ ಕೋಡ್‌ನ ಜಾರಿಗೆ ಸಂಬಂಧಿಸಿದಂತೆ ಹಲವು ಅಂಶಗಳನ್ನು ಎತ್ತಿಹಿಡಿಯಲಾಗಿದೆ. ಇದಕ್ಕೆ ಕುರಿತಂತೆ ಅನೇಕ ಚರ್ಚೆಗಳು ನಡೆಯುತ್ತಿದ್ದರೂ 2013 ರಲ್ಲಿ ಸರಕಾರ ಈ ಕುರಿತು ಸ್ಫಷ್ಟೀಕರಣ ನೀಡಿದೆ, ಅದರ ಪ್ರಕಾರ:

ಪುರುಷ ನೌಕರನಿಗೆ ಸಭ್ಯ ಎನಿಸುವ ಶರ್ಟ್ ಮತ್ತು ಪ್ಯಾಂಟ್, ಫೈಜಾಮ, ಖುರ್ತಾವನ್ನ ಧರಿಸಬಹುದಾಗಿದೆ.

ಇನ್ನು ಮಹಿಳಾ ನೌಕರರಿಗೆ ಸಭ್ಯವಾಗಿ ದರಿಸಿದ  ಸೀರೆ ಅಥವಾ ಚುಡಿದಾರ್-ಕುರ್ತಾವನ್ನು ಧರಿಸುವುದು ಸೂಕ್ತವಾಗಿದೆ.

    ಡ್ರೆಸ್ ಕೋಡ್‌ವು ನೈತಿಕ ಮತ್ತು ವೃತ್ತಿಪರ ಮೌಲ್ಯಗಳನ್ನು ಕಾಪಾಡುವ ಮೂಲಕ ಸಾರ್ವಜನಿಕರಿಗೆ ನಂಬಿಕೆ ಮೂಡಿಸುತ್ತದೆ. ಸರ್ಕಾರದ ಆದೇಶವನ್ನು ಸಕ್ರಿಯವಾಗಿ ಪಾಲನೆ ಮಾಡುವುದರ ಮೂಲಕ, ನಾಗರಿಕ ಸೇವಾ ಸಿಬ್ಬಂದಿ ಸಾಮಾಜಿಕವಾಗಿ ಪ್ರಭಾವಶೀಲ ವ್ಯಕ್ತಿತ್ವವನ್ನು ತೋರಿಸಬಲ್ಲರು.

    ಇಂತಹ ಡ್ರೆಸ್ ಕೋಡ್‌ಗಳು, ವೃತ್ತಿ ಬೌದ್ಧಿಕತೆ ಮತ್ತು ಶಿಸ್ತಿಗೆ ನಾಂದಿ ಹಾಡುತ್ತವೆ. ಕರ್ನಾಟಕ ಸರ್ಕಾರದ ಈ ಆದೇಶವು ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದ್ದು, ಇಂತಹ ನಿಯಮಗಳು ರಾಜ್ಯದ ಆಡಳಿತ ವ್ಯವಸ್ಥೆಗೆ ದಾರಿಯೆನಿಸಿವೆ.

ನೀವು ಈ ಹೊಸ ಡ್ರೆಸ್ ಕೋಡ್ ಕುರಿತು ನಿಮ್ಮ ಅಭಿಪ್ರಾಯ? ನಿಮ್ಮ ಅಭಿಪ್ರಾಯವನ್ನು ಶೇರ್ ಮಾಡಿ!

ಸರಕಾರಿ ಆದೇಶ




Share:

0 Comments:

ಕಾಮೆಂಟ್‌‌ ಪೋಸ್ಟ್‌ ಮಾಡಿ

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels