ಉತ್ತರ ಪ್ರದೇಶದ ಪ್ರಯಾಗರಾಜದಲ್ಲಿ 144 ವರ್ಷಕ್ಕೆ ಒಮ್ಮೆ ನಡೆಯುವ ಪೂರ್ಣ ಮಹಾ ಕುಂಭದ ಮಹೋತ್ಸವ ಜನವರಿ 13 ರಿಂದ ಭವ್ಯವಾಗಿ ಆರಂಭವಾಯಿತು. ಕೋಟ್ಯಾಂತರ ಸಾಧು ಸಂತರು ಭಕ್ತರು ಪವಿತ್ರ ಶಾಹಿ ಸ್ಥಾನದಲ್ಲಿ ಮಿಂದೆದಿದ್ದರೆ. ಭಾರತೀಯ ಪರಂಪರೆಯ ಮಹಾ ಸಂಗಮ ಇದು ಎಂದು ಹೇಳಲಾಗುತ್ತಿದೆ. ಆದರೆ, ಈ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಸಾದ್ವಿ ಹರ್ಷ ರಿಚ್ಹರಿಯಾ ಎಂಬ ಮಹಿಳೆ.
ಶಾಂತ ಸ್ವಭಾವ, ಕಂಗೊಳಿಸುವ ನೇತ್ರಗಳು, ಮತ್ತು ಅವರ ಆಕರ್ಷಕ ವ್ಯಕ್ತಿತ್ವವು ಲಕ್ಷಾಂತರ ಜನರಲ್ಲಿ ಕುತೂಹಲವನ್ನು ಹುಟ್ಟಿಸಿವೆ. ಈ ಹರ್ಷ ರಿಚ್ಹರಿಯಾ ಯಾರು? ಅವರ ಕಥೆ ಏನು? ತಿಳಿಯೋಣ ಬನ್ನಿ.
ಆಧ್ಯಾತ್ಮಿಕ ಮಾರ್ಗವನ್ನು ಸ್ವೀಕರಿಸುವ ಮೊದಲು, ಹರ್ಷ ರಿಚ್ಹರಿಯಾ ಗ್ಲಾಮರ್ ಜಗತ್ತಿನಲ್ಲಿ ಬದುಕು ನಡೆಸಿದವರು. ಅವರು ನಟಿ, ನಿರೂಪಕಿ, ಮತ್ತು ಫಿಟ್ನೆಸ್ ಇನ್ಫ್ಲುಯೆನ್ಸರ್ ಆಗಿ ಖ್ಯಾತಿಯನ್ನು ಪಡೆದು, ಪ್ರಪಂಚವನ್ನು ಸುತ್ತಿ ಹಾಕಿದ್ದಾರಂತೆ. ಹೆಸರು ಕೀರ್ತಿ ಹಣ ಎಲ್ಲವನ್ನು ಸಂಪಾದಿಸಿದ್ದ ಇವರು ಹೀಗೆ ಎಲ್ಲವನ್ನು ಬಿಟ್ಟು ಆಧ್ಯಾತ್ಮಿಕ ದತ್ತ ವಾಲಿದ್ದು ಹೇಗೆ..
ಅವರೇ ಹೇಳುವಂತೆ ಅವರ ಬದುಕಿನಲ್ಲಿ ಎಲ್ಲವೂ ಇದ್ದರೂ ಶಾಂತಿಯ ಕೊರತೆಯಿದ್ದಂತೆ. "'ನೀವು ಜೀವನದಲ್ಲಿ ಅದೆಷ್ಟೇ ಸಾಧನೆ ಮಾಡಿದರೂ—ನಟನೆ, ನಿರೂಪಣೆ, ಪ್ರವಾಸ—ಯಾವುದೂ ನಿಜವಾದ ಶಾಂತಿಯನ್ನು ನೀಡುವುದಿಲ್ಲ. ಖ್ಯಾತಿಯು ಶಾಂತಿಯನ್ನು ನೀಡುವುದಿಲ್ಲ. ಭಕ್ತಿ ನನ್ನನ್ನು ಪ್ರಾರ್ಥನೆ ಮತ್ತು ಆಧ್ಯಾತ್ಮಿಕತೆಯಲ್ಲಿ ತೊಡಗಿಸಿಕೊಂಡಂತೆ ಮಾಡಿತು.' ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
ಹರ್ಷ ರಿಚ್ಹರಿಯಾ ಕಳೆದ 2 ವರ್ಷಗಳಿಂದ ಸಾದ್ವಿಯಾಗಿ ಜೀವನ ನಡೆಸುತ್ತಿದ್ದಾರೆ. ಉತ್ತರಾಖಂಡದ ಆಚಾರ್ಯ ಮಹಾಮಂಡಲೇಶ್ವರರ ಶಿಷ್ಯೆಯಾಗಿ ಆಧ್ಯಾತ್ಮಿಕ ಜೀವನವನ್ನು ಪ್ರಾರಂಭಿಸಿದ್ದಾರೆ.
ಕೆಲವರು ಅವರ ಈ ಮಾರ್ಗವನ್ನು ಹಾಡಿ ಹೊಗಳಿದರೆ, ಇನ್ನು ಕೆಲವರು ಹೊಗಳಿಸಿಕೊಳ್ಳಲು ತೋರಿಕೆಗಾಗಿ ಈ ರೀತಿ ಮಾಡು ತಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅವರ ಗ್ಲಾಮರಸ್ ಬದುಕಿನ ಚಿತ್ರಗಳು ಮತ್ತು ವಿಡಿಯೋಗಳು ತುಂಬಾ ವೈರಲ್ ಆಗುತ್ತಿದೆ.
ಟೀಕೆಗಳ ನಡುವೆಯೂ, ಹರ್ಷ ಅವರ ನಂಬಿಕೆ ಮತ್ತು ಆಧ್ಯಾತ್ಮಿಕ ಪಥದಲ್ಲಿ ಅವರು ಶ್ರದ್ಧೆಯಿಂದ ಮುಂದುವರಿಯುತ್ತಿದ್ದಾರೆ. ಯಾರು ಏನೇ ಮಾಡಿದರು ಒಂದಿಷ್ಟು ಜನ ಹೊಗಳುವವರು ಒಂದಿಷ್ಟು ಜನ ತೇಗುಳುವವರು ಇದ್ದೇ ಇರುತ್ತಾರೆ. ಎಲ್ಲವೂ ಇದ್ದರೂ ಅದನ್ನು ತ್ಯಜಿಸಿ ಆಧ್ಯಾತ್ಮಿಕ ಮಾರ್ಗದ ಮೂಲಕ ಹೃದಯದ ಶಾಂತಿಯನ್ನು ಕಂಡುಕೊಳ್ಳಲು ಹೊರಟಿರುವ ಸಾಧ್ವಿ ಅವರ ಕಥೆ ಹಲವಾರು ಜನರಿಗೆ ಪ್ರೇರಣೆ ಎಂದು ನೀಡುತ್ತಿದೆ.
#UttarPradeshKumbhMela2025, #PurnaMahaKumbhFestival, #PrayagrajKumbhMela, #ShahiSnan, #IndianCulturalHeritage, #KumbhMelaHighlights, #SadhviHarshaRichharia, #WomensRoleInKumbhMela, #SpiritualGatheringIndia, #KumbhMela2025, #HolyShahiSnan, #MillionsAtKumbhMela, #HarshaRichhariaStory, #WomenLeadersKumbhMela, #NorthIndiaSpiritualFest, #KumbhMelaCelebration, #IndianTraditionFestival, #KumbhMelaDevotion, #SadhusAndSaints, #SpiritualFestivalsIndia
0 Comments:
ಕಾಮೆಂಟ್ ಪೋಸ್ಟ್ ಮಾಡಿ