ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು

ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ಮಾರ್ಗದರ್ಶಿ

ಉತ್ತರ ಕನ್ನಡ ಜಿಲ್ಲೆಯ ಪರಿಚಯ

ಉತ್ತರ ಕನ್ನಡ ಜಿಲ್ಲೆ ಕರ್ನಾಟಕ ರಾಜ್ಯದ ಪಶ್ಚಿಮ ಭಾಗದಲ್ಲಿರುವ ಒಂದು ಪ್ರಮುಖ ತಾಲೂಕು. 10,291 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿರುವ ಈ ಜಿಲ್ಲೆ ಅರಬ್ಬೀ ಸಮುದ್ರ ತೀರದಿಂದ ಪಶ್ಚಿಮ ಘಟ್ಟಗಳವರೆಗೆ ವಿಸ್ತರಿಸಿದೆ. 11 ತಾಲೂಕುಗಳು (ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಸಿರ್ಸಿ, ಯಲ್ಲಾಪುರ, ಮುಂಡಗೋಡು, ಸಿದ್ದಾಪುರ, ಹಳಿಯಾಳ ಮತ್ತು ಜೊಯ್ಡಾ) ಮತ್ತು 1,353 ಗ್ರಾಮಗಳನ್ನು ಒಳಗೊಂಡಿರುವ ಈ ಜಿಲ್ಲೆಯ 2011 ರ ಜನಗಣತಿಯಂತೆ 14,37,169 ಜನಸಂಖ್ಯೆ ಹೊಂದಿದೆ.

ಐತಿಹಾಸಿಕವಾಗಿ, ಉತ್ತರ ಕನ್ನಡ ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ವಿಜಯನಗರ ಸಾಮ್ರಾಜ್ಯ ಮತ್ತು ಶಿವಾಜಿಯ ಮರಾಠಾ ಸಾಮ್ರಾಜ್ಯದ ಭಾಗವಾಗಿತ್ತು. ಬ್ರಿಟಿಷ್ ಆಡಳಿತದಲ್ಲಿ ಇದು ಕ್ಯಾನರಾ ಜಿಲ್ಲೆಯ ಭಾಗವಾಗಿತ್ತು. ಜಿಲ್ಲೆಯು ತನ್ನ ಸಸ್ಯ ಸಂಪತ್ತು, ಜೈವಿಕ ವೈವಿಧ್ಯತೆ ಮತ್ತು ಖನಿಜ ಸಂಪತ್ತಿಗೆ ಹೆಸರುವಾಸಿ. ಸುಮಾರು 80% ಪ್ರದೇಶ ಅರಣ್ಯಗಳಿಂದ ಆವೃತವಾಗಿದೆ.

ಜಿಲ್ಲೆಯ ಪ್ರಮುಖ ಆರ್ಥಿಕ ಚಟುವಟಿಕೆಗಳಲ್ಲಿ ಮೀನುಗಾರಿಕೆ, ಕೃಷಿ (ಅಡಿಕೆ, ಕೋಕೋ, ಮೆಣಸು), ಖನಿಜ ಸಂಸ್ಕರಣೆ (ಮ್ಯಾಂಗನೀಸ್, ಬಾಕ್ಸೈಟ್) ಮತ್ತು ಜಲವಿದ್ಯುತ್ ಉತ್ಪಾದನೆ ಸೇರಿವೆ. ಕಾಳಿ, ಗಂಗಾವಳಿ ಮತ್ತು ಶರಾವತಿ ನದಿಗಳು ಜಿಲ್ಲೆಯ ಮುಖ್ಯ ಜಲಸಂಪತ್ತು. ಜಿಲ್ಲೆಯು ಹಲವಾರು ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ - ಸುಂದರ ಬೀಚ್ಗಳು, ಜಲಪಾತಗಳು, ಪ್ರಾಚೀನ ದೇವಾಲಯಗಳು, ವನ್ಯಜೀವಿ ಅಭಯಾರಣ್ಯಗಳು ಮತ್ತು ಜಲಾಶಯಗಳು.

ಸಾಂಸ್ಕೃತಿಕವಾಗಿ, ಉತ್ತರ ಕನ್ನಡ ಭೂತಾರಾಧನೆ, ಯಕ್ಷಗಾನ, ದಾಸರ ಪದಗಳು ಮತ್ತು ಹಳ್ಳಿ ಜಾತ್ರೆಗಳಿಗೆ ಹೆಸರುವಾಸಿ. ಜಿಲ್ಲೆಯ ವಿಶೇಷ ಆಹಾರ ಪದಾರ್ಥಗಳಲ್ಲಿ ಕೊಂಕಣಿ ಥಾಲಿ, ಕಣ್ವಾಸ್, ಕಡಂಬುತೋಳು ಮತ್ತು ಸೀಫುಡ್ ವಿಶೇಷಗಳು ಸೇರಿವೆ.

ಕಾರವಾರ ತಾಲೂಕು

ಪ್ರಮುಖ ಪ್ರವಾಸಿ ತಾಣಗಳು:

🌊 ಬೀಚ್ಗಳು

  • ಕಾರವಾರ ಬೀಚ್
  • ದೇವಬಾಗ್ ಬೀಚ್
  • ತಿಲ್ಲಾತಿ ಬೀಚ್

🛕 ದೇವಾಲಯಗಳು

  • ಸದಾಶಿವಗಡ ದುರ್ಗಾ ದೇವಿ
  • ನಾರಾಯಣ ಗುಡ್ಡ
  • ಶಂಕರಾಚಾರ್ಯ ಮಠ

🏞️ ಇತರೆ

  • ಕಾಳಿ ನದಿ ಕ್ರೂಜ್
  • ನವಲ್ ಸಂಗ್ರಹಾಲಯ
  • ಕಾರವಾರ ಲೈಟ್ ಹೌಸ್
ಕಾರವಾರ ಬೀಚ್

ಕಾರವಾರ ಬೀಚ್

ಕಾರವಾರ ಬೀಚ್ ಅರಬ್ಬೀ ಸಮುದ್ರದ ತೀರದಲ್ಲಿರುವ ಅತ್ಯಂತ ಸುಂದರವಾದ ಬೀಚ್ಗಳಲ್ಲಿ ಒಂದು. ಸುಣ್ಣದ ಕಲ್ಲುಗಳಿಂದ ಕೂಡಿರುವ ಈ ಬೀಚ್ ಸೂರ್ಯಾಸ್ತ ನೋಡಲು ಉತ್ತಮ ಸ್ಥಳ.

ಪ್ರಯಾಣ ಮಾಹಿತಿ:

ದೂರ: ಕಾರವಾರ ನಗರದಿಂದ 2 ಕಿ.ಮೀ
ರಸ್ತೆ: NH66 ಮೂಲಕ ಉತ್ತಮ ಸಂಪರ್ಕ
ರೈಲು: ಕಾರವಾರ ರೈಲ್ವೆ ಸ್ಟೇಷನ್ (3 ಕಿ.ಮೀ)
ವಿಮಾನ: ಗೋವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (100 ಕಿ.ಮೀ)

ಸೌಲಭ್ಯಗಳು:

🚕 ಟ್ಯಾಕ್ಸಿ ಸೌಲಭ್ಯ 🏨 3-5 ಸ್ಟಾರ್ ಹೋಟೆಲ್ಗಳು 🏡 ಹೋಮ್ಸ್ಟೇ ♿ ವಿಶೇಷ ಸೌಲಭ್ಯ 🍽️ ಸೀಫುಡ್ ರೆಸ್ಟೋರೆಂಟ್ಗಳು

ಅಂಕೋಲಾ ತಾಲೂಕು

ಪ್ರಮುಖ ಪ್ರವಾಸಿ ತಾಣಗಳು:

🌊 ಬೀಚ್ಗಳು

  • ಬೆಳೆಕೆರೆ ಬೀಚ್
  • ಕಡ್ಲೆ ಬೀಚ್

🛕 ದೇವಾಲಯಗಳು

  • ವೆಂಕಟರಮಣ ದೇವಸ್ಥಾನ
  • ಮಹಾಲಾಸ ಮಂದಿರ

🏞️ ಇತರೆ

  • ಅಂಕೋಲಾ ಕೋಟೆ
  • ಅಡಿಕೆ ತೋಟಗಳು
ಬೆಳೆಕೆರೆ ಬೀಚ್

ಬೆಳೆಕೆರೆ ಬೀಚ್

ಬೆಳೆಕೆರೆ ಬೀಚ್ ಅದರ ಶುದ್ಧವಾದ ಮರಳು ಮತ್ತು ನೀಲಿ ನೀರಿಗೆ ಹೆಸರುವಾಸಿ. ಇಲ್ಲಿ ಸುಮಾರು 3 ಕಿ.ಮೀ ಉದ್ದದ ಬೀಚ್ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಪ್ರಯಾಣ ಮಾಹಿತಿ:

ದೂರ: ಅಂಕೋಲಾದಿಂದ 10 ಕಿ.ಮೀ
ರಸ್ತೆ: NH66 ಮತ್ತು ಸ್ಥಳೀಯ ರಸ್ತೆಗಳು
ರೈಲು: ಅಂಕೋಲಾ ರೈಲ್ವೆ ಸ್ಟೇಷನ್ (12 ಕಿ.ಮೀ)
ವಿಮಾನ: ಹುಬ್ಬಳ್ಳಿ ವಿಮಾನ ನಿಲ್ದಾಣ (180 ಕಿ.ಮೀ)

ಸೌಲಭ್ಯಗಳು:

🚗 ಕಾರು ಪಾರ್ಕಿಂಗ್ 🏨 ಬಜೆಟ್ ಹೋಟೆಲ್ಗಳು 🏡 ಹೋಮ್ಸ್ಟೇ ಸೌಲಭ್ಯ 🚿 ಸಾರ್ವಜನಿಕ ಶೌಚಾಲಯ
 
 ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ, ಮಿರ್ಜಾನ್ ಎನ್ನುವ ಊರಿನಲ್ಲಿ ಇರುವ ಅತ್ಯಂತ ಪ್ರಾಚೀನ ಕೋಟೆಯ ಚಿತ್ರ. ಉತ್ತರ ಕನ್ನಡಕ್ಕೆ ಬಂದಾಗ ಭೇಟಿ ನೀಡಲು ಮರೆಯಬೇಡಿ.
 
 
Share:

ಉತ್ತರ ಕನ್ನಡದ ಪ್ರತಿಷ್ಟಿತ ಶಾಲೆಗಳಲ್ಲಿ ಉಚಿತವಾಗಿ ಕಲಿಯಿರಿ

ಪರಿಶಿಷ್ಟ ಪಂಗಡ ಪ್ರವೇಶ ಅರ್ಜಿ

ಸುವರ್ಣಾವಕಾಶ ತಪ್ಪಿಸಿಕೊಂಡರೆ ಮತ್ತೆ ಸಿಗದು ಅವಕಾಶ

2025-26 ನೇ ಶೈಕ್ಷಣಿಕ ವರ್ಷಕ್ಕೆ ಅರ್ಜಿ ಆಹ್ವಾನ

Education Opportunity

ಕಾರವಾರ, ಏಪ್ರಿಲ್ 20: ಪರಿಶಿಷ್ಟ ಪಂಗಡದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜ್ಯದ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶಾವಕಾಶ ಕಲ್ಪಿಸಲು ಕರ್ನಾಟಕ ಸರ್ಕಾರ ಹೊಸ ಯೋಜನೆ ಘೋಷಿಸಿದೆ. 2025-26 ನೇ ಶೈಕ್ಷಣಿಕ ವರ್ಷದ 5ನೇ ತರಗತಿಗೆ ಏಪ್ರಿಲ್ 19 ರಿಂದ ಮೇ 3 ರವರೆಗೆ ಅರ್ಜಿ ಸ್ವೀಕರಿಸಲಾಗುವುದು.

⚠️ ಪ್ರವೇಶ ಷರತ್ತುಗಳು:

  • ವಿದ್ಯಾರ್ಥಿಯು ಕರ್ನಾಟಕ ರಾಜ್ಯದವರಾಗಿರಬೇಕು.
  • ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ (RD ಪ್ರಮಾಣಪತ್ರ ಕಡ್ಡಾಯ)
  • 2024-25 ನೇ ಸಾಲಿನಲ್ಲಿ 5ನೇ ತರಗತಿಯಲ್ಲಿ 60% ಅಂಕಗಳು (SATS ದೃಢೀಕೃತ ಅಂಕಪಟ್ಟಿ ಲಗತ್ತಿಸುವುದು ಅಗತ್ಯ)
  • ಕುಟುಂಬದ ವಾರ್ಷಿಕ ಆದಾಯ ₹2.5 ಲಕ್ಷದೊಳಗೆ ಇರಬೇಕು. (ತಹಶೀಲ್ದಾರರಿಂದ ವಡದ ಇತ್ತೀಚಿನ ಆದಾಯ ಪ್ರಮಾಣ ಪತ್ರದ ದೃಢೀಕೃತ ಪ್ರತಿ ಲಗತ್ತಿಸಬೇಕು)
  • ಒಂದು ಕುಟುಂಬದಲ್ಲಿ ಎರಡು ಮಕ್ಕಳಿಗೆ ಮಾತ್ರ ಅವಕಾಶವಿರುತ್ತದೆ. ಅಂದರೆ ಒಬ್ಬ ಬಾಲಕ ಮತ್ತು ಒಬ್ಬ ಬಾಲಕಿಗೆ ಅವಕಾಶ ಕಲ್ಪಿಸುವುದು. ಬಾಲಕ ಇಲ್ಲದಿದ್ದಲ್ಲಿ ಇಬ್ಬರು ಬಾಲಕಿಯರಿಗೆ ಅವಕಾಶ ನೀಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ: ತಾಲ್ಲೂಕು ಸಮಾಜ ಕಲ್ಯಾಣ ಕಚೇರಿಯ ಸಹಾಯಕ ನಿರ್ದೇಶಕರಿಂದ ಅರ್ಜಿ ಪತ್ರ ಪಡೆದು, ಭರ್ತಿ ಮಾಡಿ ಅದೇ ಕಚೇರಿಗೆ ಸಲ್ಲಿಸಬೇಕು. ಅರ್ಜಿ ನಮೂನೆ ಮತ್ತು ವಿವರಗಳಿಗೆ KREIS ವೆಬ್ಸೈಟ್ (kreis.karnataka.gov.in) ನೋಡಿ.

📞 ಸಂಪರ್ಕಿಸಿ:

ಜಿಲ್ಲಾ ಪರಿಶಿಷ್ಟ ವರ್ಗ ಕಲ್ಯಾಣಾಧಿಕಾರಿ
ಉತ್ತರ ಕನ್ನಡ, ಕಾರವಾರ
☎ 08382-226575 | ✉ dtwo.karwar@gmail.com

ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಪ್ರವೇಶ ಅರ್ಜಿ ನಮೂನೆ

ಸೂಚನೆಗಳು: ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ ಪಡೆಯಲು ಕಛೇರಿಯವರು ನೀಡಿದ ಅರ್ಜಿಯಲ್ಲಿ ಭರ್ತಿ ಮಾಡಿ ಅರ್ಜಿಯನ್ನು ಕಛೇರಿಯಲ್ಲಿ ಸಲ್ಲಿಸಿ
ಅರ್ಜಿ ಡೌನ್ಲೋಡ್ ಮಾಡಲು "ಡೌನ್ಲೋಡ್" ಬಟನ್ ಕ್ಲಿಕ್ ಮಾಡಿ.

ಡೌನ್ಲೋಡ್ ಪ್ರಾರಂಭವಾಗುತ್ತಿದೆ... 10 ಸೆಕೆಂಡ್‌ಗಳು
Share:

ಕರ್ನಾಟಕ ವಸತಿ ಶಾಲೆಗಳಿಗೆ ಪ್ರವೇಶ ಪರೀಕ್ಷೆ ಇಲ್ಲದೇ ನೇರ ದಾಖಲಾತಿ

ಶಿಕ್ಷಣ ವಂಚಿತರಿಗೊಂದು ಸುವರ್ಣಾವಕಾಶ

ಶಿಕ್ಷಣ ವಂಚಿತರಿಗೆ ಮೂಲಭೂತ ಸೌಕರ್ಯಗಳೊಂದಿಗೆ ಉಚಿತ ಶಿಕ್ಷಣ

A. ವಿಶೇಷ ವರ್ಗಗಳ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೇ ನೇರ ದಾಖಲಾತಿ

ಹಿನ್ನೆಲೆ 

ದುರ್ಬಲ ವರ್ಗಗಳ ಶಿಕ್ಷಣ ಸಮಸ್ಯೆಗಳು ಮತ್ತು ಸಾಂವಿಧಾನಿಕ ತತ್ವಗಳು:

ದುರ್ಬಲ ವರ್ಗಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಇತರ ಹಿಂದುಳಿದವರು ಶಿಕ್ಷಣದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳ ಕೊರತೆ, ಪೋಷಕರ ಆರ್ಥಿಕ ಸಂಕಷ್ಟ, ಸಾಮಾಜಿಕ ತಾರತಮ್ಯ, ಮೂಲಭೂತ ಸೌಕರ್ಯಗಳ ಅಭಾವ ಮುಂತಾದವು ಪ್ರಮುಖ ಅಡೆತಡೆಗಳಾಗಿವೆ. ಅನೇಕ ಕುಟುಂಬಗಳಲ್ಲಿ ಮಕ್ಕಳನ್ನು ಹೆತ್ತವರ ಕೆಲಸಕ್ಕೆ ನಿಯೋಜಿಸುವ ಪರಂಪರೆಯಿಂದಾಗಿ ಶಾಲೆಗಳಿಂದ ಹೊರಬೀಳುವ ಸಂಭವ ಹೆಚ್ಚು. ಇದರಿಂದ ಶಾಲೆಯಿಂದ ಹೊರಗುಳಿದವರ ಸಂಖ್ಯೆ ಹೆಚ್ಚಾಗಿ, ಸಮಾಜದ ಮುನ್ನೆಲೆಗೆ ಬರದೇ ತಮ್ಮದೆ ಪರಿದಿಯಲ್ಲಿ ತಳಮಟ್ಟದ ಜೀವನ ನಡೆಸುತ್ತಿದ್ದಾರೆ.
ಭಾರತದ ಸಂವಿಧಾನ ಈ ಸಮಸ್ಯೆಗಳನ್ನು ಪರಿಹರಿಸಲು ಹಲವಾರು ನಿಯಮಗಳನ್ನು ತನ್ಸಿನೊಳಗೆ ಅಡಕಗೊಳಿಸಿದೆ:

  • ಆರ್ಟಿಕಲ್: 15(4) & 15(5): ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ವಿಶೇಷ ಏರ್ಪಾಡು ಮಾಡಲು ಅನುವು.
  • ಆರ್ಟಿಕಲ್: 21A: 6-14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು.
  • ಆರ್ಟಿಕಲ್: 46: ಪರಿಶಿಷ್ಟ ಜಾತಿ/ಪಂಗಡಗಳ ಶೈಕ್ಷಣಿಕ ಹಿತಾಸಕ್ತಿಗಳನ್ನು ಪ್ರೋತ್ಸಾಹಿಸುವುದು.
  • ಆರ್ಟಿಕಲ್: 338 & 338A: SC/STಗಳ ಶಿಕ್ಷಣ ಅಧಿಕಾರಿಗಳ ನೇಮಕ.
ಕರ್ನಾಟಕ ವಸತಿ ಶಾಲೆಗಳ ಸವಲತ್ತುಗಳು:
  • ಸಂಪೂರ್ಣ ಉಚಿತ ಶಿಕ್ಷಣ: ಶಿಕ್ಷಣ, ವಸತಿ, ಊಟ, ಯೂನಿಫಾರ್ಮ್ ಮತ್ತು ಪಠ್ಯಪುಸ್ತಕಗಳು ಉಚಿತ
  • ವಿಶೇಷ ವರ್ಗಗಳಿಗೆ ಆದ್ಯತೆ: SC/ST, OBC, ಅಲೆಮಾರಿ ಸಮುದಾಯ ಮತ್ತು ಅಂಗವಿಕಲರ ಮಕ್ಕಳಿಗೆ ಮೊದಲ ಆಧ್ಯತೆಯ ಸೀಟು ಮೀಸಲು
  • ಆಧುನಿಕ ಸೌಲಭ್ಯಗಳು: ಸ್ಮಾರ್ಟ್ ಕ್ಲಾಸ್‌ಗಳು, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್‌ಗಳು
  • ಸಮಗ್ರ ಅಭಿವೃದ್ಧಿ: NCC, ಸ್ಕೌಟ್ಸ್, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು
  • ವೃತ್ತಿಪರ ತರಬೇತಿ: 9-10ನೇ ತರಗತಿಗಳಲ್ಲಿ ಕೈಗಾರಿಕಾ ತರಬೇತಿ (ITI ಯೋಜನೆ)
  • ಪ್ರತ್ಯೇಕತೆ: ಗುರುಕುಲ ಮಾದರಿ: ಗುರು-ಶಿಷ್ಯ ಸಂಪ್ರದಾಯದ ಆಧುನಿಕ ಅನುಷ್ಠಾನ
  • ಸ್ಥಳೀಯ ಭಾಷೆ: ಕನ್ನಡ ಮಾಧ್ಯಮದೊಂದಿಗೆ ಇಂಗ್ಲಿಷ್ ಶಿಕ್ಷಣದ ಸಮತೋಲನ
  • ಉದ್ದೇಶ: ಗ್ರಾಮೀಣ ಮತ್ತು ಸಾಮಾಜಿಕವಾಗಿ ಹಿಂದುಳಿದ ಮಕ್ಕಳಿಗೆ ನಗರದ ಖಾಸಗಿ ಶಾಲೆಗಳಿಗೆ ಸಮಾನ ಅವಕಾಶಗಳನ್ನು ಒದಗಿಸುವುದು.
  • ಸಂಕ್ಷಿಪ್ತ: 1960ರ ದಶಕದ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಹುಟ್ಟಿ, ಇಂದು ರಾಜ್ಯದ 500+ ವಸತಿ ಶಾಲೆಗಳು 50,000+ ಮಕ್ಕಳ ಜೀವನವನ್ನು ಬದಲಾಯಿಸಿವೆ.
  • ಸರ್ಕಾರವು ವಸತಿ ಶಾಲೆಗಳು, ಶಿಷ್ಯವೇತನ, ಮೀಸಲಾತಿ ಮುಂತಾದ ಯೋಜನೆಗಳ ಮೂಲಕ ಇದನ್ನು ಕಾರ್ಯರೂಪಕ್ಕೆ ತರುತ್ತಿದೆ. ಆದರೆ, ಸಾಮಾಜಿಕ ಜಾಗೃತಿ ಮತ್ತು ಸರ್ಕಾರಿ ಯೋಜನೆಗಳ ಸಕ್ರಿಯ ಅನುಷ್ಠಾನ ಅತ್ಯಗತ್ಯ.

ಸದರಿ ಸರಕಾರ ಈ ಕೆಳಕಂಡ ವಿಶೇಷ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳಲ್ಲಿ ಶೇ.50 ರಷ್ಟು (20.750) ಸೀಟುಗಳನ್ನು ನೇರವಾಗಿ ಅದೂ ಯಾವುದೇ ಪ್ರವೇಶ ಪರೀಕ್ಷೆ ನಡೆಸದೇ ಅರ್ಹ ವಿದ್ಯಾರ್ಥಿಗಳಿಗೆ ದಾಖಲಾತಿ ಮಾಡಿಕೊಳ್ಳಲು ಕ್ರಮವಹಿಸಲಾಗಿದೆ. ಇದೊಂದು ಸುವರ್ಣಾವಕಾಶ, ಇದನ್ನ ಬಳಸಿಕೊಳ್ಳಲು ವಿನಂತಿಸಿದೆ. ಯಾರಿಗೆ ಗೊತ್ತು ನಿಮ್ಮ ಮನೆಯ ಮಗ/ಮಗಳು ದೊಡ್ಡ ವ್ಯಕ್ತಿಯಾಗಬಹುದು. ತಡಮಾಡದೆ ನೇರ ಪ್ರವೇಶಾತಿಗಾಗಿ ಪ್ರತ್ಯೇಕವಾಗಿ KREIS ವೆಬ್‌ಸೈಟ್ https://kreis.karnataka.gov.in

ಆ) ವಿಶೇಷ ವರ್ಗಗಳು ಮತ್ತು ಮೀಸಲಾತಿ:

ಕ್ರ ಸಂ ವರ್ಗ ಹಂಚಿಕೆ
A ಸಫಾಯಿ ಕರ್ಮಚಾರಿ/ಗುರುತಿಸಿರುವ ಮ್ಯಾನ್ಯುಯಲ್ ಸ್ಕ್ಯಾವೆಂಜರ್/ಚಿಂದಿ ಆಯುವವರು/ಸ್ಮಶಾನ ಕಾರ್ಮಿಕರ ಮಕ್ಕಳಿಗೆ ಶೇ.10
B ಬಾಲ ಕಾರ್ಮಿಕರು/ಜೀತ ವಿಮುಕ್ತ ಕಾರ್ಮಿಕರ ಮಕ್ಕಳು/ಗುರುತಿಸಿರುವ ಮಾಜಿ ದೇವದಾಸಿಯರ ಮಕ್ಕಳು ಶೇ.10
C 25% ಕ್ಕಿಂತ ಹೆಚ್ಚಿನ ಅಂಗಲವಿಕಲತೆ ಹೊಂದಿರುವ ಮಕ್ಕಳು/ ಹೆಚ್.ಐ.ವಿ.ಗೆ ತುತ್ತಾದ ಪೋಷಕರ ಮಕ್ಕಳು, ಒಬ್ಬ ಪೋಷಕರನ್ನು ಮಾತ್ರ ಹೊಂದಿರುವ ಅಥವಾ ಅನಾಥ ಮಕ್ಕಳು. ಶೇ.10
D ಗುರುತಿಸಿರುವ ಅಲೆಮಾರಿ/ಅರೆ ಅಲೆಮಾರಿ/ಸೂಕ್ತ-ಅತೀ ಸೂಕ್ತ ಸಮುದಾಯದ/ ಸೈನಿಕರು ಮತ್ತು ಮಾಜಿ ಸೈನಿಕರು/ಸರ್ಕಾರಿ ಯೋಜನೆಗಳಿಂದ ಸ್ಥಳಾಂತರಗೊಂಡ ಪೋಷಕರ ಮಕ್ಕಳು. ಶೇ.10
E ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಆಶ್ರಮ ವಸತಿ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ಉತ್ತೀರ್ಣರಾದ ಮಕ್ಕಳು. ಶೇ.10
ಒಟ್ಟು ಶೇ.50

B. ವಿಶೇಷ ವರ್ಗಗಳ ಅರ್ಥ:

1. ಸಫಾಯಿ ಕರ್ಮಚಾರಿ/ ಗುರುತಿಸಿರುವ ಮ್ಯಾನ್ಯುಯಲ್ ಸ್ಕ್ಯಾವೆಂಜರ್/ಚಿಂದಿ ಆಯುವವರು/ಸ್ಮಶಾನ ಕಾರ್ಮಿಕರ ಮಕ್ಕಳು

  • ಸಫಾಯಿ ಕರ್ಮಚಾರಿ ಮಕ್ಕಳು
  • ಗುರುತಿಸಿರುವ ಮ್ಯಾನ್ಯುಯಲ್ ಸ್ಯಾವೆಂಜರ್ ಮಕ್ಕಳು
  • ಚಿಂದಿ ಆಯುವವರು ಮಕ್ಕಳು
  • ಸ್ಮಶಾನ ಕಾರ್ಮಿಕರ ಮಕ್ಕಳು

2. ಬಾಲ ಕಾರ್ಮಿಕರು/ಜೀತ ವಿಮುಕ್ತ ಕಾರ್ಮಿಕರ ಮಕ್ಕಳು/ ಗುರುತಿಸಿರುವ ಮಾಜಿ ದೇವದಾಸಿಯರ ಮಕ್ಕಳು

  • ಬಾಲ ಕಾರ್ಮಿಕರ ಮಕ್ಕಳು
  • ಜೀತ ವಿಮುಕ್ತ ಕಾರ್ಮಿಕರ ಮಕ್ಕಳು
  • ಗುರುತಿಸಿರುವ ಮಾಜಿ ದೇವದಾಸಿಯರ ಮಕ್ಕಳು

3. 25% ಕ್ಕಿಂತ ಹೆಚ್ಚಿನ ಅಂಗಲವಿಕಲತೆ ಹೊಂದಿರುವ ಮಕ್ಕಳು/ ಹೆಚ್.ಐ.ವಿಗೆ ತುತ್ತಾದ ಪೋಷಕರ ಮಕ್ಕಳು, ಒಬ್ಬ ಪೋಷಕರನ್ನು ಮಾತ್ರ ಹೊಂದಿರುವ ಅಥವಾ ಅನಾಥ ಮಕ್ಕಳು

  • 25% ಕ್ಕಿಂತ ಹೆಚ್ಚಿನ ಅಂಗಲವಿಕಲತೆ ಹೊಂದಿರುವ ಮಕ್ಕಳು (ಮಂದ ದೃಷ್ಟಿ, ದುರ್ಬಲ ಶ್ರವಣಶಕ್ತಿ, ವಾಸಿಯಾಗಿರುವ ಕುಷ್ಠರೋಗ, ಚಲನಶಕ್ತಿ ಇಲ್ಲದಿರುವುದು)
  • ಹೆಚ್.ಐ.ವಿ ಗೆ ತುತ್ತಾದ ಪೋಷಕರ ಮಕ್ಕಳು
  • ಒಬ್ಬ ಪೋಷಕರನ್ನು ಮಾತ್ರ ಹೊಂದಿರುವ/ಅನಾಥ ಮಕ್ಕಳು

4. ಗುರುತಿಸಿರುವ ಅಲೆಮಾರಿ/ಅರೆ ಅಲೆಮಾರಿ/ಸೂಕ್ಷ-ಅತೀ ಸೂಕ್ಷ್ಮ ಸಮುದಾಯದ/ಸೈನಿಕರು ಮತ್ತು ಮಾಜಿ ಸೈನಿಕರು/ಸರ್ಕಾರಿ ಯೋಜನೆಗಳಿಂದ ಸ್ಥಳಾಂತರಗೊಂಡ ಪೋಷಕರ ಮಕ್ಕಳು

  • ಗುರುತಿಸಿರುವ ಅಲೆಮಾರಿ/ಅರೆ ಅಲೆಮಾರಿ/ಸೂಕ್ತ-ಆತೀ ಸೂಕ್ತ ಸಮುದಾಯದ ಮಕ್ಕಳು
  • ಸೈನಿಕರು ಮತ್ತು ಮಾಜಿ ಸೈನಿಕರ ಮಕ್ಕಳು
  • ಸರ್ಕಾರಿ ಯೋಜನೆಗಳಿಂದ ಸ್ಥಳಾಂತರಗೊಂಡ ಪೋಷಕರ ಮಕ್ಕಳು

5. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಆಶ್ರಮ ವಸತಿ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ಉತ್ತೀರ್ಣರಾದ ಮಕ್ಕಳು

ಮೇಲ್ಕಂಡ ವಿಶೇಷ ವರ್ಗಗಳಿಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ದೃಢೀಕೃತ ಪ್ರಮಾಣ ಪತ್ರ ಪಡೆದಿರಬೇಕು. ಈ ಮೇಲ್ಕಂಡ ವಿಶೇಷ ವರ್ಗಕ್ಕೆ ದೃಢೀಕರಣ ಪತ್ರ ನೀಡಲು ಸರ್ಕಾರದಿಂದ ಅಧಿಕೃತವಾಗಿ ಯಾವುದೇ ಪ್ರಾಧಿಕಾರವನ್ನು ಘೋಷಿಸಿರದಿದ್ದರೆ, ಪ್ರಕಟಿಸಲಾಗಿರುವ ನಮೂನೆ-2ರಲ್ಲಿ ಕನಿಷ್ಠ ಗ್ರೂಪ್-ಬಿ ದರ್ಜೆಯ ಅಧಿಕಾರಿಯಿಂದ ದೃಢೀಕರಿಸಲ್ಪಟ್ಟ ಪ್ರಮಾಣ ಪತ್ರ ಹಾಜರುಪಡಿಸುವುದು.

ಹೆಚ್ಚಿನ ವಿವರಗಳಿಗಾಗಿ:

  1. ಆಯಾ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ/ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ/ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ/ಸಂಘದ ಆಡಿ ಕಾರ್ಯ ನಿರ್ವಹಿಸುತ್ತಿರುವ ಹತ್ತಿರದ ವಸತಿ ಶಾಲೆಗಳನ್ನು/ಕಾಲೇಜುಗಳನ್ನು ಸಂಪರ್ಕಿಸುವುದು.
  2. ಕರ್ನಾಟಕ ಪರೀಕ್ಷಾ ಪ್ರಾಧಿಕಾರ,
    18ನೇ ಅಡ್ಡರಸ್ತೆ, ಸಂಪಿಗೆ ರಸ್ತೆ, ಮಲ್ಲೇಶ್ವರಂ, ಬೆಂಗಳೂರು - 560 012
    keauthority-ka@nic.in | http://kea.kar.nic.in
    ಸಹಾಯವಾಣಿ: ☎ 080-23 460 460 (5 ಲೈನ್‌ಗಳು) (ಬೆಳಿಗ್ಗೆ 9.30.-ಸಂಜೆ: 6.00 ರವರೆಗೆ
  3. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ
    (ಕರ್ನಾಟಕ ಸರ್ಕಾರದ ಅಂಗ ಸಂಸ್ಥೆ)
  4. ನಂ.8, ಎಂ.ಎಸ್.ಬಿ. 1. 6 ಮತ್ತು 7ನೇ ಮಹಡಿ, ಕನ್ನಿಂಗ್‌ ಹ್ಯಾಮ್ ರಸ್ತೆ, ಬೆಂಗಳೂರು-560052.
    ☎: 080-22283366, 22265755, 22204466, 22207722.
    ✉: ed.kreis@ka.gov.in
    🌐: https://kreis.karnataka.gov.in

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಸಹಾಯವಾಣಿ ಕೇಂದ್ರ ಸಮಾಜ ಕಲ್ಯಾಣ ಇಲಾಖೆ
☎ 9482300400

Share:

ಕಾಮ ಜೀವನಕ್ಕೆ ಯಾವ ವಯಸ್ಸು ಸೂಕ್ತ ತಿಳಿಯಿರಿ

  • ಗಂಡುಮಕ್ಕಳಲ್ಲಿ ಪ್ರೌಢಾವಸ್ಥೆ
  • ಹೆಣ್ಣುಮಕ್ಕಳು ವಯಸ್ಕರಾಗುವುದು
  • ದೇಹ ಸಿದ್ದಗೊಳಿಸಿ
  • ಪ್ರಾಪ್ತ ವಯಸ್ಸು ಆಗುವವರೆಗೂ ಮುಂದಿನ ಜೀವನಕ್ಕೆ ಅಣಿಯಾಗುವುದು ಕರ್ತವ್ಯ

Keywords: right age for sexual life, puberty in boys and girls, physical maturity, mental preparation for marriage, healthy relationships, sexual health in Kannada, marriage age in India, body development stages

Share:

ಗುಣವಂತೆ ಶಂಭು ಲಿಂಗೇಶ್ವರ ಜಾತ್ರೆ ಸಂಪನ್ನ

ಗುಣವಂತೆ ಕ್ಷೇತ್ರದ ಪವಿತ್ರತೆ ಮತ್ತು ಪೌರಾಣಿಕ ಮಹತ್ವ

Highlight News Image

ಗುಣವಂತೆ ಪಂಚಲಿಂಗ ಕ್ಷೇತ್ರಗಳಲ್ಲಿ ಒಂದು: ಗುಣವಂತೆ ಕ್ಷೇತ್ರವು ಅತೀ ಪ್ರಾಚೀನ ಸಹ್ಯಾದ್ರಿ ಪುರಾಣದಲ್ಲಿ ಉಲ್ಲೇಖಗೊಂಡಿರುವ ಪಂಚಲಿಂಗ ಕ್ಷೇತ್ರಗಳಲ್ಲಿ ಒಂದಾಗಿದೆ. ಇತರ ನಾಲ್ಕು ಕ್ಷೇತ್ರಗಳು: ಗೋಕರ್ಣದ ಶ್ರೀ ಮಹಾಬಲೇಶ್ವರ, ಸಿದ್ದೇಶ್ವರ, ಧಾರೇಶ್ವರ ಮತ್ತು ಮುರುಡೇಶ್ವರ.

Read Full Story Below ↓
News Image 1

ಪೌರಾಣಿಕ ಹಿನ್ನೆಲೆ

ರಾಮಾಯಣ ಕಾಲದಲ್ಲಿ ಲಂಕಾಧಿಪತಿ ರಾವಣನು ಭೂಕೈಲಾಸ ಎಂದು ಕರೆಯಲ್ಪಡುತ್ತಿದ್ದ ಗೋಕರ್ಣೆಯ ಸಮುದ್ರ ತಟದಲ್ಲಿ ಸಾವಿರ ವರ್ಷಗಳ ಕಾಲ ಶಿವನ ಕುರಿತು ತಪಸ್ಸನ್ನ ಆಚರಿಸಿ ಶಿವನಿಂದ ಆತ್ಮ ಲಿಂಗವನ್ನು ಪಡೆಯುತ್ತಾನೆ. ಇದರಿಂದ ವಿಚಲಿತರಾದ ದೇವಾನು ದೇವತೆಗಳು ಬ್ರಹ್ಮ-ವಿಷ್ಣು-ಮಹೇಶ್ವರರ ಮೊರೆ ಹೋದಾಗ ಆತ್ಮಲಿಂಗವನ್ನು ರಕ್ಷಣೆ ಮಾಡುವ ಜವಾಬ್ದಾರಿಯನ್ನು ಗಣಪತಿಗೆ ವಹಿಸುತ್ತಾರೆ.

ಸಂಜೆಯ ವೇಳೆಗೆ ರಾವಣನು ಆತ್ಮ ಲಿಂಗವನ್ನು ಪೂಜೆ ಮಾಡುವ ಮೊದಲು ಸ್ನಾನ ಮಾಡಬೇಕೆಂಬ ನಿಯಮ ಇದ್ದದರಿಂದ ಮತ್ತು ಕೆಲಗಡೆ ಇರಿಸುವಂತಿಲ್ಲ ಎಂಬ ನಿಯಮದಡಿಯಲ್ಲಿ ಹಾಗೆಯೇ ಆತ್ಮಲಿಂಗವನ್ನು ಕೈಯಲ್ಲಿ ಹಿಡಿದುಕೊಂಡು ಸ್ನಾನ ಮಾಡುವುದು ಸರಿಯಲ್ಲ ಎನಿಸಿ ಬಾಲ ವಟುವಿನ ವೇಷ ದಾರಿಯಾಗಿ ಬಂದ ಗಣಪತಿಯನ್ನು ಗುರುತಿಸದೆ ಕರೆದು ಗಣಪನಿಗೆ ಆತ್ಮಲಿಂಗವನ್ನು ಕೈಯಲ್ಲಿ ಕೊಟ್ಟು ನಾನು ಸ್ನಾನ ಮಾಡಿ ಬರುವೆ ಅಲ್ಲಿಯವರೆಗೂ ಕಾಯ್ದುಕೊಂಡಿರು ಎಂದು ಹೇಳಿ ಹೊರಡುತ್ತಾನೆ. ಗಣಪತಿಯು ಕೂಡ ಷರತ್ತನ ವಿಧಿಸುತ್ತಾನೆ. ನಾನು ಮೂರು ಬಾರಿ ಕರೆಯುವುದರೊಳಗೆ ನೀನು ಬರಬೇಕು ನಾಲ್ಕನೇ ಬಾರಿ ನಾನು ಕರೆಯುವುದಿಲ್ಲ ಬರದೇ ಇದ್ದರೆ ಕೆಳಗೆ ಆತ್ಮಲಿಂಗ ಇಡುತ್ತೇನೆ ಎಂದು ಹೇಳುತ್ತಾನೆ.

ಆತ್ಮ ಲಿಂಗ ದೊರೆತು ಖುಷಿಯಲ್ಲಿದ್ದ ಮತ್ತು ಪೂಜೆಯ ಗಡಿಬಿಡಿಯಲ್ಲಿದ್ದ ರಾವಣನು ಹಿಂದೆ ಮುಂದೆ ಏನು ಯೋಚಿಸಿದೆ ಸ್ನಾನ ಮಾಡಲು ಹೊರಡುತ್ತಾನೆ. ಇದೆಲ್ಲ ಅರಿತಿದ್ದ ಗಣಪತಿ ರಾವಣ ನೀರಿಗೆ ಇಳಿಯ ಬೇಕೆನ್ನುವ ಸಮಯದಲ್ಲಿ ಮೊದಲನೇ ಕೂಗನ್ನ ಹಾಕುತ್ತಾನೆ, ಸ್ನಾನ ಮಾಡುವಾಗ ಮತ್ತೊಮ್ಮೆ ಕೂಗನ್ನು ಹಾಕುತ್ತಾನೆ, ಇನ್ನೇನು ನೀರಿನ ಮೇಲೆ ಎದ್ದು ಬಂದೇ ಬಿಡುತ್ತಾನೆ ಎಂದು ತಿಳಿದು ತಕ್ಷಣವೇ ಇನ್ನೊಮ್ಮೆ ಕೊನೆಯ ಕೂಗನ್ನ ಹಾಕಿ ಆತ್ಮಲಿಂಗವನ್ನು ಗೋಕರ್ಣದ ತಟದಲ್ಲಿ ಇಟ್ಟುಬಿಡುತ್ತಾನೆ.

ನೆಲದ ಸ್ಪರ್ಷವಾದದ್ದೇ ತಡ ಆತ್ಮ ಲಿಂಗ ಬಲವಾಗಿ ನೆಲವನ್ನ ಹಿಡಿದುಕೊಂಡು ಹಿಡಿದುಕೊಂಡು ಬಿಡುತ್ತದೆ. ರಾವಣ ಎಷ್ಟೇ ಪ್ರಯತ್ನಿಸಿದರು ಆತ್ಮ ಲಿಂಗವನ್ನು ಕೀಳುವುದು ಅವನಿಂದ ಸಾಧ್ಯವೇ ಆಗಲಿಲ್ಲ. ಇದರಿಂದ ಕೋಪಗೊಂಡ ರಾವಣನು ಆತ್ಮಲಿಂಗವನ್ನು ಜಾಡಿಸಿ ಜೋರಾಗಿ ಒದೆಯುತ್ತಾನೆ, ಇದರ ಪರಿಣಾಮ ಆತ್ಮಲಿಂಗ ಐದು ಚೂರುಗಳಾಗಿ ನಾನಾ ದಿಕ್ಕುಗಳಿಗೆ ಹಾರಿಹೋಗುತ್ತದೆ. ಒಂದು ಚೂರು ಇವತ್ತಿನ ಗೋಕರ್ಣದಲ್ಲಿ ಬಿದ್ದು ಮಹಾಬಲೇಶ್ವರ ಎಂದು ಹೆಸರಾಗುತ್ತದೆ, ಗೋಕರ್ಣದ ಸಮೀಪದಲ್ಲಿರುವ ಸಿದ್ದೇಶ್ವರ ಹಾಗೆ ಮುಂದುವರೆದು ಸಮುದ್ರ ತೀರದಲ್ಲಿರುವ ಧಾರೆಶ್ವರ, ಹೊನ್ನಾವರ ತಾಲೂಕಿನ ಶರಾವತಿ ನದಿಯನ್ನು ದಾಟಿ ಮುಂದೆ ಸಾಗಿ ಸಿಗುವ ಗುಣವಂತೆಯ ಗುಣವಂತೇಶ್ವರ ಕೊನೆಯದಾಗಿ ಸಿಗುವ ಮುರುಡೇಶ್ವರ ಇವುಗಳು ಪಂಚ ಕ್ಷೇತ್ರಗಳಾಗಿ ಪುರಾಣ ಪ್ರಸಿದ್ಧಿಯನ್ನು ಪಡೆದು ಭಕ್ತಾದಿಗಳನ್ನ ಆಶೀರ್ವದಿಸುತ್ತಿರುತ್ತದೆ.

News Image 2

ಶ್ರೀ ಗುಪ್ತಿ ದೇವಿಯ ಮಹತ್ವ:

ಗುಣವಂತೆಯ ಗುಣವಂತೇಶ್ವರ ಅರ್ಥಾತ್ ಶಂಭುಲಿಂಗೇಶ್ವರ‌ ಮತ್ತು ಶ್ರೀಗುಪ್ತಿ ದೇವಸ್ಥಾನಗಳ ಸಮುಚ್ಚಯಗಳನ್ನ ಒಳಗೊಂಡ ಇದು ರಾಷ್ಟ್ರೀಯ ಹೆದ್ದಾರಿಯ ಸಮೀಪ ನೆಲೆಗೊಂಡಿರುತ್ತದೆ. ಗುಣವಂತೆಯ ಶಂಭುಲಿಂಗೇಶ್ವರ, ಜ್ಯೋತಿರ್ಲಿಂಗನೂ, ಮೃತ್ಯುಂಜಯ ಸ್ವರೂಪಿಯಾಗಿಯೂ ಗುಣವಂತೆಯಲ್ಲಿ ನೆಲೆ ನಿಂತು, ಗುಣವಂತೆಗೆ ಬರುವ ಭಕ್ತರ ಸದಾ ಕಾಲ ಬಿಡದೆ ಪೋರೆಯುವ ಶುಭಕರ, ಶಂಕರನಾಗಿದ್ದಾನೆ,

ಗುಣವಂತೆ ಎಂಬ ನಾಮದ ಮೂಲ: "ಗುಣವಂತೆ" ಎಂಬ ನಾಮವು "ಗುಣ" ಮತ್ತು "ವಂತೆ" ಎಂಬ ಶಬ್ದಗಳಿಂದ ರೂಪುಗೊಂಡಿದ್ದು, "ಗುಣಗಳ ಸಮೂಹದಿಂದ ಕೂಡಿದ ಪವಿತ್ರ ಸ್ಥಳ" ಎಂಬ ಅರ್ಥವಿದೆ. ಈ ನಾಮದ ಹಿಂದಿನ ಕಥೆಯು ಶ್ರೀ ಗುಪ್ತಿ ದೇವಿಯೊಂದಿಗೆ ಸಂಬಂಧಿಸಿದೆ.
ಶ್ರೀ ಗುಪ್ತಿ ದೇವಿಯ ಪೌರಾಣಿಕ ಹಿನ್ನೆಲೆ: ಗುಣವಂತೆ ಎಂಬ ನಾಮದಿಂದ ಊರು ಉಲ್ಲೇಖಗೊಳ್ಳಲು ಕಾರಣರಾದ ಮಾತೆ ಶ್ರೀ ಗುಪ್ತಿಯಾಗಿ, ದೇವಾಲಯದ ಎಡ ಬಾಗದಲ್ಲಿ ನೆಲೆ ನಿಂತು, ಈ ಕ್ಷಣಕ್ಕೂ ಗುಣವಂತೆಯಾಗಿಯೇ ಇದ್ದಾಳೆ. ಕ್ಷೇತ್ರದ ಪ್ರಾಚೀನ ಹಿನ್ನಲೆ ತಿಳಿಯಲು ಅಷ್ಟಮಂಗಳದ ಮೋರೆ ಹೋದಾಗ, ಶಿವನ ಆತ್ಮ ಲಿಂಗ ಗುಣವಂತೆಯಲ್ಲಿ ನೆಲೆಸುವ ಮೊದಲು ಇದ್ದ ಪ್ರಾಚೀನ ಶಕ್ತಿ ಸ್ವರೂಪಿಣಿ ಈ ಶ್ರೀ ಗುಪ್ತಿ ಆತ್ಮಲಿಂಗ ಈ ಸ್ಥಳದಲ್ಲಿ ನೆಲೆ ನಿಲ್ಲಲು ಅವಕಾಶ ಕಲ್ಪಿಸಿ ಗುಣವಂತೆಯಾದಳು ಎನ್ನುವ ಮಾಹಿತಿ ದೊರೆಯಿತು. ಈ ಸತ್ಯ ಊರಿಗೆ ಮನವರಿಕೆ ಆಗುತ್ತಿದ್ದಂತೆ ಅಂದಿನಿಂದ ಇಂದಿನ ತನಕ ಪ್ರತಿ ದಿನ ಅತ್ಯಂತ ಭಕ್ತಿ ಭಾವದ ಪೂಜೆಯನ್ನು ಪಡೆಯುತ್ತಿದ್ದಾಳೆ.
ಅಪಾರ ಶಕ್ತಿಯ ಕ್ಷೇತ್ರ, ನಂಬಿದವರ ಜೊತೆ ಇರುವ ದೇವಿ ಈ ಶ್ರೀಗುಪ್ತಿ. ಬನ್ನಿ ತಾಯಿಯ ದರುಶನ ಪಡೆದು ಪುನಿತರಾಗಿ. ಭಕ್ತರ ಅಂತರಂಗ ಬಹಿರಂಗ ಶುದ್ಧಿಯೇ ಈ ಕ್ಷೇತ್ರದ ಭಗವಂತ ಭಗವತಿಯ ಅನುಗ್ರಹ ಪಡೆಯಲು ಇರುವ ದೊಡ್ಡ ಸಾಧನ ಎಂಬುದು ಸಾವಿರಾರು ಭಕ್ತರ ಅನುಭವದ ಮಾತು.

News Image 3

ದೇವಾಲಯದ ವೈಶಿಷ್ಟ್ಯತೆಗಳು ಮತ್ತು ಭಕ್ತರ ಅನುಭವಗಳು

ಕಳೆದ ವರ್ಷ ಕಾವಿಧಾರಿಯೊಬ್ಬರು ಪುಣ್ಯ ಕ್ಷೇತ್ರ ದರ್ಶನದ ಉದ್ದೇಶದಿಂದ ಗುಣವಂತೆಗೆ ಬಂದಿದ್ದರು, ಮುಸ್ಸಂಜೆ ಹೊತ್ತಲ್ಲಿ ದೇವಾಲಯದ ಅವಾರದಲ್ಲಿ ಧ್ಯಾನಕ್ಕೆ ಕುಂತಿದ್ದರು. ಧ್ಯಾನದಿಂದ ಹೊರಬಂದ ಅವರು ದೇಗುಲದಲ್ಲಿ ಇದ್ದ ನಮ್ಮಲ್ಲಿ “ಇಲ್ಲಿ ಭವಂತ ಅತ್ಯಂತ ಶಕ್ತಿಪೂರ್ಣನಾಗಿ ನಿಂತಿದ್ದಾನೆ, ಆದರೆ ಇಲ್ಲಿ ಕಾಯಕ- ಪೂಜೆ ವಿಧಿ ವಿಧಾನಗಳು ಸುಧಾರಿಸಬೇಕಿದೆ” ಎಂದಿದ್ದರು.

ದೇವಾಲಯದ ಎದುರು ಇರುವ ಪುಷ್ಕರಣಿಯಲ್ಲಿ ನವ ಧಾನ್ಯವನ್ನು ಹರಕೆಯಾಗಿ ಬಿರುವ ಭಕ್ತರಿಗೆ, ಚಿಮಕಲು ಚರ್ಮ ಅಥವಾ ನರೋಲಿ (Skin Tag) ಕಾಯಿಲೆ ಕೆಲವೇ ದಿನಗಳಲ್ಲಿ ಕಡಿಮೆಯಾಗುತ್ತದೆ. ದುಬೈನಲ್ಲಿ ಇರುವ ಮುಸ್ಲಿಂ ವ್ಯಕ್ತಿಯ ಮೈಮೇಲಿನ ಚಮಕಲು ಮಂಗಮಾಯವಾಗುತ್ತದೆ ಎಂದರೆ ಕ್ಷೇತ್ರದ ಶಕ್ತಿಯ ತರಂಗ ಎಷ್ಟು ಶಕ್ತಿಯುತ ಎಂದು ಹೇಳಸಾಧ್ಯ.

ಈ ಷ್ಕರಣಿಯಲ್ಲಿ, ಪೂಜೆಯ ಸಮಯಕ್ಕೆ ಜೋಡಿ ಪಾರಿವಾಳಗಳು ಸ್ನಾನ ಮಾಡುವುದನ್ನು ಕಾಣಬಹುದು. ಇದು ಶಿವಪಾರ್ವತಿಯರು ಎಂಬ ನಂಬಿಕೆಯಿದೆ.

“ಈ ಕ್ಷಣಕ್ಕೂ ಮದ್ಯ ರಾತ್ರಿ, ದೇವಾಲಯದ ಘಂಟೆ ಭಾರಿಸಿದ ಧ್ವನಿ,ದೇವಾಲಯದ ಒಳಗೆ ನಡೆದಾದುವ ಸಪ್ಪಳ, ಕೇಳುವ ಪರಿ ಅಚ್ಛರಿಯ ಸಂಗತಿ ನನ್ನ ಸ್ವಂತ ಅನುಭವ. ಹೇಳಿಕೆಯ ಮಾತಲ್ಲ, ಇಲ್ಲಿರುವ 9 ಶಾಸನ ಅನಾದಿಯಿಂದ ಶಂಭುಲಿಂಗನ ಮಹಾಬಲವನ್ನು ಸಾರುತ್ತ ಬಂದಿದೆ”, ಎಂದು ಭಕ್ತರೆಂದರು

News Image 4

ಇತಿಹಾಸಿಕ ಉಲ್ಲೇಖಗಳು ಮತ್ತು ಶಾಸನಗಳು:

ಶಾಸನಗಳು: ಇಲ್ಲಿ ಇರುವ 9 ಶಾಸನಗಳು ಅನಾದಿಯಿಂದ ಶಂಭುಲಿಂಗನ ಮಹಾಬಲವನ್ನು ಸಾರುತ್ತಿವೆ. ವಿಜಯನಗರದ ರಾಜ ಕೃಷ್ಣದೇವರಾಯನು ಗುಣವಂತೇಶ್ವರನ ಪದತಲಕ್ಕೆ ಶರಣಾದ ಸಂಗತಿ, ಈ ಶಾಸನಗಳಲ್ಲಿ ಉಲ್ಲೇಖಗೊಂಡಿದೆ.

ಕೇರಳದ ರವಿವರ್ಮನ ದಾನ: ಕೇರಳದ ರವಿವರ್ಮನು ದೇವಾಲಯದ ಎದುರು ಇರುವ ಪುಷ್ಕರಣಿಯ ಜೀರ್ಣೋದ್ದಾರ ಮಾಡಿದ್ದಾನೆ ಎಂಬ ಉಲ್ಲೇಖವೂ ಇದೆ.

ಶಿವನು ಭಕ್ತ ಪ್ರಿಯ ಮತ್ತು ಆಂತರಿಕ ಭಾವಿ:

ದೇವಾಲಯದ ಒಳಗೆ ಒಂದು ಭಾವಿ ಇದೆ, ಇದರಿಂದ ನಿತ್ಯ ಶಿವನಿಗೆ ಅಭಿಷೇಕ ಮಾಡಲಾಗುತ್ತದೆ. ವರ್ಷದಲ್ಲಿ ನಾಲ್ಕು ಬಾರಿ, ಭಕ್ತರು ತೀರ್ಥ ಸ್ನಾನ ಮಾಡುವ ದೇಗುಳದ ಹೊರಗಿನ ಪುಷ್ಕರಣಿಯ ನೀರನ್ನು ಒಳಗಿನ ಆತ್ಮಲಿಂಗಕ್ಕೆ ಅಭಿಷೇಕ ಮಾಡುತ್ತಾರೆ. ಅಂದರೆ ಇಲ್ಲಿಯ ಶಿವನಿಗೆ ಭಕ್ತರೆಂದರೆ ಎಷ್ಟು ಪ್ರಿಯರು ಎಂಬುದಕ್ಕೆ ಇದೊಂದು ದೊಡ್ಡ ಜೀವಂತ ಸಾಕ್ಷಿಯಾಗಿ ನಿಲ್ಲುತ್ತದೆ. ಹಿಂದೂ ಮುಸ್ಲಿಂ ಕ್ರೈಸ್ತ್ ಎನ್ನದೇ ಇಲ್ಲಿಗೆ ಬರುವ ಭಕ್ತರನ್ನು ಕಂಡಾಗ, ಅವನ ಶಕ್ತಿಗೆ ಸರ್ವ ಧರ್ಮ ಸಮನ್ವಯತೆಯ ಮಹತ್ವ ಸಂಗಮಸ್ಥಾನವಾಗಿದೆ ಎಂದು ಎನಿಸುತ್ತದೆ.

News Image 7

ಜಾತ್ರಾಮಹೋತ್ಸವ ಮತ್ತು ಭಕ್ತರ ಆಹ್ವಾನ

ಜಾತ್ರಾಮಹೋತ್ಸವ: 2025ರ ಏಪ್ರಿಲ್ 18ರಂದು, ಶುಕ್ರವಾರದಂದು, ಗುಣವಂತೆಯ ಈಶ್ವರ, ಶುಭಕರ ಶಂಭುಲಿಂಗೇಶ್ವರನ ಜಾತ್ರಾಮಹೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ, ಶಿವನ ದರ್ಶನ ಪಡೆದು, ಪುಣ್ಯವನ್ನು ಸಂಪಾದಿಸಬಹುದು.
ಭಕ್ತರು ಕ್ಷೇತ್ರಕ್ಕೆ ಆಗಮಿಸಿ, ಪರಶಿವನ ದರ್ಶನ ಪಡೆದು, ಪಾವನರಾಗಬಹುದು. ಶ್ರೀ ಗುಪ್ತಿ ದೇವಿಯ ದರ್ಶನ ಪಡೆದು, ಭಕ್ತಿಯ ಪ್ರಾರ್ಥನೆ ಗೈದು, ಇಷ್ಟಾರ್ಥವನ್ನು ಪಡೆಯಬಹುದು.

ಶ್ಲೋಕ:

 

ತ್ರಿಧಳಂ ತ್ರಿಗುಣಾಕಾರಂ  

ತ್ರಿನೇತ್ರಂ ಚಕ್ರಿಯಾಯುದಂ 

ತ್ರಿಜನ್ಮ ಪಾಪ ಸಂಹಾರಂ  

ಏಕ ಬಿಲ್ವಂ ಶಿವಾರ್ಪಣಂ

--- ಓಂ ನಮಃ ಶಿವಾಯಃ

Share:

ಅಮರಾವತಿ ವಿಮಾನ ನಿಲ್ದಾಣ, IMEC ಕಾರ್ಯ, ಸ್ವಚ್ಛತಾ ಪಕ್ವಾಡ ಸುದ್ಧಿಗಳು

ಸಾರಿಗೆ

ಅಮರಾವತಿ ವಿಮಾನ ನಿಲ್ದಾಣದ ಉದ್ಘಾಟನೆ

Space Mission
  • ಮಾನ್ಯ ಮುಖ್ಯಮಂತ್ರಿ ದೇವ್‌ ಫಡ್ನವೀಸ್‌ ಅವರೊಂದಿಗೆ ಅಮರಾವತಿ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಶ್ರೀ ರಾಮ್ ಮೋಹನ್ ನಾಯ್ಡು ಕಿಂಜರಪು
  • ಈ RCS-VGF ಅನುದಾನಿತ ವಿಮಾನ ನಿಲ್ದಾಣವು ಮೊದಲ ಬಾರಿಗೆ ಅಲೈಯನ್ಸ್ ಏರ್‌ನ ಉದ್ಘಾಟನಾ ಅಮರಾವತಿ-ಮುಂಬೈ ವಿಮಾನದೊಂದಿಗೆ ಹಾರಾಟ ನಡೆಸಿತು
  • ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಮರಾವತಿ ವಿಮಾನ ನಿಲ್ದಾಣದ ಉದ್ಘಾಟನೆಯನ್ನು ಕೊಂಡಾಡಿದರು

ಇಂದು ವಿದರ್ಭಕ್ಕೆ ಐತಿಹಾಸಿಕ ಮೈಲಿಗಲ್ಲು! ಮಾನ್ಯ ಮುಖ್ಯಮಂತ್ರಿ ದೇವ್‌ ಫಡ್ನವೀಸ್‌ ಅವರೊಂದಿಗೆ ಅಮರಾವತಿ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಶ್ರೀ ರಾಮ್ ಮೋಹನ್ ನಾಯ್ಡು ಕಿಂಜರಪು. ಈ RCS-VGF ಅನುದಾನಿತ ವಿಮಾನ ನಿಲ್ದಾಣವು ಮೊದಲ ಬಾರಿಗೆ ಅಲೈಯನ್ಸ್ ಏರ್‌ನ ಉದ್ಘಾಟನಾ ಅಮರಾವತಿ-ಮುಂಬೈ ವಿಮಾನದೊಂದಿಗೆ ಹಾರಾಟ ನಡೆಸಿತು.

ಶೀಘ್ರದಲ್ಲೇ ದಕ್ಷಿಣ ಏಷ್ಯಾದ ಅತಿದೊಡ್ಡ ಏರ್ ಇಂಡಿಯಾ ಫ್ಲೈಯಿಂಗ್ ಟ್ರೈನಿಂಗ್ ಆರ್ಗನೈಸೇಶನ್ (FTO) ಆಗಲಿರುವ ಸ್ಥಳದಲ್ಲಿ ಡೆಮೊ ಹಾರಾಟವನ್ನು ಸಹ ವೀಕ್ಷಿಸಲಾಯಿತು, ಇದು ಭಾರತದ ಒಟ್ಟಾರೆ ವಾಯುಯಾನ ಪರಿಸರ ವ್ಯವಸ್ಥೆಗೆ ಒಂದು ದೊಡ್ಡ ಮುನ್ನಡೆಯಾಗಿದೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಶ್ರೀ ರಾಮ್ ಮೋಹನ್ ನಾಯ್ಡು ಕಿಂಜರಪು ಅವರ X ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಮರಾವತಿ ವಿಮಾನ ನಿಲ್ದಾಣದ ಉದ್ಘಾಟನೆಯನ್ನು ಕೊಂಡಾಡಿದ ಅವರು ಮಹಾರಾಷ್ಟ್ರಕ್ಕೆ, ವಿಶೇಷವಾಗಿ ವಿದರ್ಭ ಪ್ರದೇಶಕ್ಕೆ ಉತ್ತಮ ಸುದ್ದಿ ಎಂದು ಶ್ಲಾಘಿಸಿದ್ದಾರೆ, ಅಮರಾವತಿಯಲ್ಲಿ ಸಕ್ರಿಯ ವಿಮಾನ ನಿಲ್ದಾಣವು ವಾಣಿಜ್ಯ ಮತ್ತು ಸಂಪರ್ಕವನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.

ಏಫ್ರೀಲ್‌ ೧೬, 2025 • 5 min read
Read More
ಅಂತರಾಷ್ಟ್ರೀಯ

IMEC ದುಂಡುಮೇಜಿನ ಸಭೆ

Space Mission

ಹೈಲೈಟ್ಸಗಳು: IMEC ಯ ಮೂಲಕ

  • IMEC ಕೇವಲ ವ್ಯಾಪಾರ ಮಾರ್ಗವಲ್ಲ, ಬದಲಾಗಿ ಆಧುನಿಕ ದಿನದ ಸಿಲ್ಕ್ ರೂಟ್ - ಸಮಾನರ ಪಾಲುದಾರಿಕೆ
  • ಇದು ಲಾಜಿಸ್ಟಿಕ್ಸ್ ವೆಚ್ಚವನ್ನು 30% ವರೆಗೆ ಕಡಿಮೆ ಮಾಡುತ್ತದೆ
  • ಸಾರಿಗೆ ಸಮಯವನ್ನು 40% ರಷ್ಟು ಕಡಿಮೆ ಮಾಡುತ್ತದೆ
  • ಖಂಡಗಳಾದ್ಯಂತ ತಡೆರಹಿತ ವ್ಯಾಪಾರ ಸಂಪರ್ಕಗಳನ್ನು ಸೃಷ್ಟಿಸುತ್ತದೆ

ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (IMEC: India-Middle East-Europe Economic Corridor ಭಾರತ) ಮೂಲಕ ಜಾಗತಿಕ ಸಂಪರ್ಕದ ವಿಶ್ವಾಸಾರ್ಹ ಸೇತುವೆಯಾಗಲು ಭಾರತ ಸಜ್ಜಾಗಿದೆ: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್.

ಹೈಲೈಟ್ಸಗಳು: IMEC ಯ ಮೂಲಕ

  • IMEC ಕೇವಲ ವ್ಯಾಪಾರ ಮಾರ್ಗವಲ್ಲ, ಬದಲಾಗಿ ಆಧುನಿಕ ದಿನದ ಸಿಲ್ಕ್ ರೂಟ್ - ಸಮಾನರ ಪಾಲುದಾರಿಕೆ - ಇದು ಸಹಶಕ್ತಿ, ಸಂಪರ್ಕ ಮತ್ತು ಸಮಗ್ರ ಸಮೃದ್ಧಿಯನ್ನು ಬೆಳೆಸುತ್ತದೆ.
  • ಇದು ಲಾಜಿಸ್ಟಿಕ್ಸ್ ವೆಚ್ಚವನ್ನು 30% ವರೆಗೆ ಕಡಿಮೆ ಮಾಡುತ್ತದೆ
  • ಸಾರಿಗೆ ಸಮಯವನ್ನು 40% ರಷ್ಟು ಕಡಿಮೆ ಮಾಡುತ್ತದೆ.
  • ಖಂಡಗಳಾದ್ಯಂತ ತಡೆರಹಿತ ವ್ಯಾಪಾರ ಸಂಪರ್ಕಗಳನ್ನು ಸೃಷ್ಟಿಸುತ್ತದೆ.
  • ಆಗ್ನೇಯ ಏಷ್ಯಾದಿಂದ ಕೊಲ್ಲಿವರೆಗೆ, ಮಧ್ಯಪ್ರಾಚ್ಯದಿಂದ ಮಧ್ಯ ಯುರೋಪ್ ವರೆಗೆ ವ್ಯಾಪಾರವನ್ನು ಸಂಪರ್ಕಿಸುವುದಲ್ಲದೆ; ನಾಗರಿಕತೆಗಳು ಮತ್ತು ಸಂಸ್ಕೃತಿಗಳನ್ನು ಸಂಪರ್ಕಿಸುತ್ತದೆ.
  • ಮಧ್ಯಪ್ರಾಚ್ಯದ ಮೂಲಕ ಆಫ್ರಿಕಾಕ್ಕೆ ಸಂಪರ್ಕವನ್ನು ಹೆಚ್ಚಿಸಬಹುದು

ಕಾರಿಡಾರ್ ಮೂಲಸೌಕರ್ಯ:

  • ರೈಲ್ವೆಗಳು
  • ರಸ್ತೆಮಾರ್ಗಗಳು
  • ಇಂಧನ ಪೈಪ್‌ಲೈನ್‌ಗಳು
  • ಸಮುದ್ರದೊಳಗಿನ ಕೇಬಲ್‌ಗಳು
  • ಶುದ್ಧ ಇಂಧನ ಮೂಲಸೌಕರ್ಯವನ್ನು

ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (IMEC: India-Middle East-Europe Economic Corridor ಭಾರತ) ಮೂಲಕ ಜಾಗತಿಕ ಸಂಪರ್ಕದ ವಿಶ್ವಾಸಾರ್ಹ ಸೇತುವೆಯಾಗಲು ಭಾರತ ಸಜ್ಜಾಗಿದೆ: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್.

IMEC ಉಪಕ್ರಮಕ್ಕೆ ಮುಂದಿನ ದಾರಿಯಾಗಿ ಐದು ಪ್ರಮುಖ ಸಲಹೆಗಳು:
ಮೊದಲನೆಯದಾಗಿ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ದ ಮೂಲಕ IMEC ಅನ್ನು ನೋಡುವ. ಈ ಉಪಕ್ರಮವನ್ನು ಸರ್ಕಾರಕ್ಕೆ ಮಾತ್ರ ಬಿಡುವುದರಿಂದ ಅದರ ದಕ್ಷತೆ ಮತ್ತು ಆರ್ಥಿಕ ಕಾರ್ಯಸಾಧ್ಯತೆ ಸೀಮಿತವಾಗುತ್ತದೆ. ಹಾಗಾಗಿ, ಖಾಸಗಿ ವಲಯವು ಮುನ್ನಡೆಸುವ ಸಹಯೋಗದ ಮಾದರಿ.
ಎರಡನೆಯದಾಗಿ, ಭೌತಿಕ ಮೂಲಸೌಕರ್ಯವನ್ನು ಮೀರಿ ನಿಯಂತ್ರಕ ಸಂಪರ್ಕದ ಮೇಲೆ ಗಮನಹರಿಸುವ ಅಗತ್ಯ ಕಾರಿಡಾರ್‌ನ ಯಶಸ್ವಿ ಅನುಷ್ಠಾನಕ್ಕೆ ಅತಿಯಾದ ಚೆಕ್‌ಪಾಯಿಂಟ್‌ಗಳಿಲ್ಲದೆ ಗಡಿಯಾಚೆಗಿನ ಸುಗಮ ಚಲನೆಯ ಅಗತ್ಯ. ಡಿಜಿಟಲೀಕರಣ, ವಿದ್ಯುತ್ ವಾಹನ ಚಾರ್ಜಿಂಗ್ ಪರಿಸರ ವ್ಯವಸ್ಥೆಗಳು ಮತ್ತು ಸಿಂಕ್ರೊನೈಸ್ ಮಾಡಿದ ನಿಯಮಗಳು. ಭಾರತದ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ನಂತಹ ಸಾಮಾನ್ಯ ಡಿಜಿಟಲ್ ಪಾವತಿ ವ್ಯವಸ್ಥೆಗಳು ತಡೆರಹಿತ ಹಣಕಾಸು ವಹಿವಾಟುಗಳನ್ನು ಸಕ್ರಿಯಗೊಳಿಸಲು ಒಂದು ಮಾದರಿಯಾಗಿ ಕಾರ್ಯನಿರ್ವಹಿಸಬಹುದು. ಜಿಸಿಸಿ ಮತ್ತು ಇಯು ದೇಶಗಳೊಂದಿಗೆ ಎಫ್‌ಟಿಎಗಳಂತಹ ವಿಶಾಲ ಒಪ್ಪಂದಗಳನ್ನು ಬೆಂಬಲಿಸುತ್ತವೆ ಮತ್ತು ಹಸಿರು ಹೈಡ್ರೋಜನ್, ನವೀಕರಿಸಬಹುದಾದ ಇಂಧನ ಮತ್ತು ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವದಲ್ಲಿ ಜಂಟಿ ಕೆಲಸವನ್ನು ಬಲಪಡಿಸುತ್ತವೆ.
ಮೂರನೆಯದಾಗಿ, ಕಾರಿಡಾರ್‌ನ ಅಭಿವೃದ್ಧಿ ಮತ್ತು ಅದು ಉತ್ಪಾದಿಸುವ ವ್ಯಾಪಾರ ಎರಡನ್ನೂ ಬೆಂಬಲಿಸಲು ನವೀನ ಹಣಕಾಸು ಮಾದರಿಗಳ ಅಗತ್ಯ ಹಸಿರು ಬಾಂಡ್‌ಗಳಂತಹ ಸಾಧನಗಳನ್ನು ಅನ್ವೇಷಿಸಲು ಮತ್ತು ದೀರ್ಘಾವಧಿಯ "IMEC ಬಾಂಡ್‌ಗಳ" ರಚನೆ, ಈ ಖಂಡಾಂತರ ಮೂಲಸೌಕರ್ಯವನ್ನು ಸುಸ್ಥಿರ ಮತ್ತು ಭವಿಷ್ಯ-ನಿರೋಧಕ ರೀತಿಯಲ್ಲಿ ಹಣಕಾಸು ಒದಗಿಸಲು.
ನಾಲ್ಕನೆಯದಾಗಿ, ಅವರು ಉದ್ಯಮ ಸಂಸ್ಥೆಗಳು ಮತ್ತು ವ್ಯಾಪಾರ ಸಂಘಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವಿಕೆ. ವ್ಯವಹಾರಗಳ ನೈಜ ಅಗತ್ಯಗಳಿಗೆ ಹೊಂದಿಕೆಯಾಗುವ ಕಾರಿಡಾರ್ ಅನ್ನು ವಿನ್ಯಾಸಗೊಳಿಸಲು , ಉತ್ತಮ ಅಭ್ಯಾಸಗಳನ್ನು ಉತ್ತೇಜಿಸಲು ಮತ್ತು ವ್ಯಾಪಾರ ಘರ್ಷಣೆಗಳನ್ನು ತೆಗೆದುಹಾಕುವ ಮೂಲಕ ಆರ್ಥಿಕತೆಗಳನ್ನು ಉತ್ತಮವಾಗಿ ಸಂಯೋಜಿಸಲು ಸಹಾಯ ಮಾಡುತ್ತದೆ.
ಕೊನೆಯದಾಗಿ, ಥಿಂಕ್ ಟ್ಯಾಂಕ್‌ಗಳು ಮತ್ತು ಅಕಾಡೆಮಿಯಾವನ್ನು ದೃಷ್ಟಿಕೋನ ಮತ್ತು ವಿನ್ಯಾಸ ಪ್ರಕ್ರಿಯೆಗೆ ತರುವುದು. ಈ ಸಂಸ್ಥೆಗಳು, ಸೃಜನಶೀಲತೆ, ಸಂಶೋಧನಾ ಶಕ್ತಿ ಮತ್ತು ದೀರ್ಘಾವಧಿಯ ನಮ್ಯತೆಯನ್ನು ತರುತ್ತವೆ.

ಎಫ್ರೀಲ್ 16, 2025 • 6 min read
Read More
Economic Policy
ಈಶಾನ್ಯ ಭಾರತ

ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಪ್ರಮುಖ ಉಪಕ್ರಮ

  • ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವೆ ಶ್ರೀಮತಿ ಸಾವಿತ್ರಿ ಠಾಕೂರ್
  • ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಸುದ್ದಿ
  • ಮೌರೋಹ್‌ನಲ್ಲಿರುವ ಶಕ್ತಿ ಸದನ್ ಎಂಬ ಒನ್ ಸ್ಟಾಪ್ ಸೆಂಟರ್

ಭೇಟಿಯ ಭಾಗವಾಗಿ, ಸಚಿವರು ಮೌರೋಹ್‌ನಲ್ಲಿರುವ ಶಕ್ತಿ ಸದನ್ ಎಂಬ ಒನ್ ಸ್ಟಾಪ್ ಸೆಂಟರ್ (One Stop Centre, Shakti Sadan, in Mawroh) ಅನ್ನು ಪರಿಶೀಲಿಸಿದರು. 18 ರಿಂದ 50 ವರ್ಷ ವಯಸ್ಸಿನ ಹದಿನೆಂಟು ಜನರು ವಸತಿ ಇದ್ದು ಪ್ರಸ್ತುತ ವೃತ್ತಿಪರ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಸಚಿವರು ಕೈದಿಗಳೊಂದಿಗೆ ಸಂವಹನ ನಡೆಸಿದರು ಮತ್ತು ಸಬಲೀಕರಣ ಮತ್ತು ಪುನರ್ವಸತಿಗಾಗಿ ಅವರ ಪ್ರಯತ್ನಗಳನ್ನು ಪ್ರೋತ್ಸಾಹಿಸಿದರು.

ಎಂಜಿಎನ್‌ಆರ್‌ಇಜಿಎಸ್ ಮತ್ತು ಪಿಎಂಎವೈ-ಜಿ ಅಡಿಯಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆಗಳ ಪರಿಶೀಲನೆಯೂ ಸೇರಿದೆ. ಸಚಿವರು ಫಲಾನುಭವಿಗಳೊಂದಿಗೆ ಸಂವಹನ ನಡೆಸಿದರು ಮತ್ತು ಈ ಉಪಕ್ರಮಗಳ ಪ್ರಗತಿ ಮತ್ತು ಪ್ರಭಾವವನ್ನು ಪರಿಶೀಲಿಸಿದರು. ಗ್ರಾಮೀಣ ಜೀವನೋಪಾಯ ಮತ್ತು ಮೂಲಸೌಕರ್ಯ ವೃದ್ಧಿಗೆ ಕೊಡುಗೆ ನೀಡುವ ಅಂತರ-ಇಲಾಖೆಯ ಸಮನ್ವಯವನ್ನು ಅವರು ಶ್ಲಾಘಿಸಿದರು.

ಏಫ್ರೀಲ್ 16, 2025 • 4 min read
Economic Policy
ಸ್ವಚ್ಛತಾ ಪಕ್ವಾಡ

ಸಂಸದೀಯ ವ್ಯವಹಾರಗಳ ಸಚಿವಾಲಯವು ಸ್ವಚ್ಛತಾ ಪ್ರತಿಜ್ಞೆಯೊಂದಿಗೆ ಸ್ವಚ್ಛತಾ ಪಖ್ವಾಡ 2025 ಅನ್ನು ಪ್ರಾರಂಭಿಸಿದೆ

  • ಸ್ವಚ್ಛ ಭಾರತದ ಮನೋಭಾವವನ್ನು ಉತ್ತೇಜಿಸುವ ಗುರಿ
  • ಸ್ವಚ್ಛ ಮತ್ತು ಸುಸ್ಥಿರ ಕೆಲಸದ ವಾತಾವರಣವನ್ನು ಬೆಳೆಸುವ ಉದ್ದೇಶ

ಸಂಸದೀಯ ವ್ಯವಹಾರಗಳ ಸಚಿವಾಲಯವು ಇಂದು ಸ್ವಚ್ಛ ಭಾರತದ ಮನೋಭಾವವನ್ನು ಉತ್ತೇಜಿಸುವ ಮತ್ತು ಸ್ವಚ್ಛ ಮತ್ತು ಸುಸ್ಥಿರ ಕೆಲಸದ ವಾತಾವರಣವನ್ನು ಬೆಳೆಸುವ ಗುರಿಯನ್ನು ಹೊಂದಿರುವ ಹದಿನೈದು ದಿನಗಳ ಸ್ವಚ್ಛತಾ ಪಖ್ವಾಡ 2025 ಅನ್ನು ಉದ್ಘಾಟಿಸಿತು

ಏಫ್ರೀಲ್ 16, 2025 • 2 min read
Read More
Economic Policy
ಆರ್ಥಿಕತೆ

ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು NPS ಮೇಲ್ವಿಚಾರಣಾ ಕಾರ್ಯವಿಧಾನದ ಕುರಿತು ಪರಿಶೀಲನಾ ಸಭೆ

  • ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಮೇಲ್ವಿಚಾರಣೆ
  • ಕೇಂದ್ರ ಸರ್ಕಾರಿ ಪಿಂಚಣಿದಾರರ ಕಲ್ಯಾಣಕ್ಕೆ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (DoPPW)
  • ಕೇಂದ್ರ ಸರ್ಕಾರಿ ನೌಕರರ NPS ಹಣಕಾಸು ಮತ್ತು ಕುಂದುಕೊರತೆಗಳ ಪರಿಹಾರ
  • https://pensionersportal.gov.in/NPS URL ನೊಂದಿಗೆ ಆನ್‌ಲೈನ್ ಪೋರ್ಟಲ್ ಅನ್ನು ಅಭಿವೃದ್ಧಿ

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಅಡಿಯಲ್ಲಿ ಬರುವವರು ಸೇರಿದಂತೆ ಕೇಂದ್ರ ಸರ್ಕಾರಿ ಪಿಂಚಣಿದಾರರ ಕಲ್ಯಾಣಕ್ಕೆ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (DoPPW) ಬದ್ಧವಾಗಿದೆ. ಈ ನಿಟ್ಟಿನಲ್ಲಿ, NPS ಮೇಲ್ವಿಚಾರಣಾ ಕಾರ್ಯವಿಧಾನದ ಸ್ಥಾಪನೆಯ ಸ್ಥಿತಿಯ ಕುರಿತು ಮೂರನೇ ಪರಿಶೀಲನಾ ಸಭೆಯನ್ನು 16.04.2025 ರಂದು ಕಾರ್ಯದರ್ಶಿ (ಪಿಂಚಣಿ) ಶ್ರೀ ವಿ. ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಹಣಕಾಸು ಸಲಹೆಗಾರ ಮತ್ತು 11 ಸಚಿವಾಲಯಗಳು/ಇಲಾಖೆಗಳ ನೋಡಲ್ ಅಧಿಕಾರಿಗಳೊಂದಿಗೆ ನಡೆಸಲಾಯಿತು. ಮೆಸರ್ಸ್ ಪ್ರೋಟೀನ್ ಪ್ರತಿನಿಧಿಯೂ ಸಭೆಯಲ್ಲಿ ಭಾಗವಹಿಸಿದ್ದಾರೆ.

ಸಭೆಯಲ್ಲಿ, ಕಾರ್ಯದರ್ಶಿ (ಪಿಂಚಣಿ) ಅವರು ಕೇಂದ್ರ ಸರ್ಕಾರಿ ನೌಕರರ ವೇತನದಿಂದ NPS ಗೆ ನೀಡಿದ ಕೊಡುಗೆಯ ಸಕಾಲಿಕ ಜಮಾ ಹಾಗೂ ಕೇಂದ್ರ ಸರ್ಕಾರಿ ನೌಕರರ NPS ಹಣಕಾಸು ಮತ್ತು ಕುಂದುಕೊರತೆಗಳ ಪರಿಹಾರಕ್ಕೆ ಕೇಂದ್ರ ಸರ್ಕಾರದ ಅನ್ವಯವಾಗುವ ಕೊಡುಗೆಯನ್ನು ಪರಿಶೀಲಿಸಿದರು ಮತ್ತು ಒತ್ತಿ ಹೇಳಿದರು. ಇದಲ್ಲದೆ, ಸಚಿವಾಲಯಗಳು/ಇಲಾಖೆಗಳು NPS ಮೇಲ್ವಿಚಾರಣಾ ಕಾರ್ಯವಿಧಾನವನ್ನು ರಚಿಸಬೇಕು ಮತ್ತು ಸಮಿತಿಯ ಆವರ್ತಕ ಸಭೆಗಳನ್ನು ನಡೆಸಬೇಕು ಮತ್ತು PRAN ನ ಸಕಾಲಿಕ ಉತ್ಪಾದನೆ ಮತ್ತು ಮಾಸಿಕ ಕೊಡುಗೆಯ ರವಾನೆಯೊಂದಿಗೆ ತಮ್ಮ ಆರು ಮಾಸಿಕ ವರದಿಯನ್ನು ಸಲ್ಲಿಸಬೇಕು ಎಂದು ಕೋರಲಾಯಿತು.

ಉತ್ತಮ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು, DoPPW ಆರು ಮಾಸಿಕ ವರದಿಗಳನ್ನು ಸಲ್ಲಿಸಲು https://pensionersportal.gov.in/NPS URL ನೊಂದಿಗೆ ಆನ್‌ಲೈನ್ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ. NPS ಅನುಷ್ಠಾನದ ನಿರಂತರ ಪರಿಶೀಲನೆಯು NPS ವ್ಯವಸ್ಥೆಗೆ ಸಕಾಲಿಕವಾಗಿ ನಿಧಿಯ ರವಾನೆಯನ್ನು ಹೆಚ್ಚಿಸುತ್ತದೆ ಮತ್ತು NPS ಅಡಿಯಲ್ಲಿ ಒಳಗೊಳ್ಳುವ ನೌಕರರ ಕುಂದುಕೊರತೆಗಳನ್ನು ಕಡಿಮೆ ಮಾಡುತ್ತದೆ.

ಏಫ್ರೀಲ್ 16, 2023 • 5 min read
Read More
Economic Policy
ಸರಕಾರಿ ಕಾರ್ಯಕ್ರಮ

ಆಯುಷ್ ಸಚಿವಾಲಯವು ರಾಷ್ಟ್ರೀಯ ಕರ್ಮಯೋಗಿ ಜನ ಸೇವಾ ಕಾರ್ಯಕ್ರಮ

  • ಉದ್ಯೋಗಿಗಳ ಸೇವಾ ದೃಷ್ಟಿಕೋನ ಮತ್ತು ವೃತ್ತಿಪರ ಕೌಶಲ್ಯಗಳನ್ನು ಹೆಚ್ಚಿಸುವ ಗುರಿ
  • ತಕ್ಷಣ ಸ್ಪಂದಿಸುವ ಮತ್ತು ದಕ್ಷ ಕಾರ್ಯಪಡೆಯನ್ನು ನಿರ್ಮಿಸುವ ಮಹತ್ವ
  • ದೈನಂದಿನ ಜವಾಬ್ದಾರಿಗಳಲ್ಲಿ ತರಬೇತಿ

ಆಯುಷ್ ಸಚಿವಾಲಯವು ಇಂದು ಆಯುಷ್ ಭವನದಲ್ಲಿ ರಾಷ್ಟ್ರೀಯ ಕರ್ಮಯೋಗಿ ಜನ ಸೇವಾ ಕಾರ್ಯಕ್ರಮದ ಅಧಿವೇಶನವನ್ನು ನಡೆಸಿತು, ಇದು ತನ್ನ ಉದ್ಯೋಗಿಗಳ ಸೇವಾ ದೃಷ್ಟಿಕೋನ ಮತ್ತು ವೃತ್ತಿಪರ ಕೌಶಲ್ಯಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮವನ್ನು ಮಿಷನ್ ಕರ್ಮಯೋಗಿ ಚೌಕಟ್ಟಿನ ಅಡಿಯಲ್ಲಿ ಸಾಮರ್ಥ್ಯ ನಿರ್ಮಾಣ ಆಯೋಗದ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.

ತಕ್ಷಣ ಸ್ಪಂದಿಸುವ ಮತ್ತು ದಕ್ಷ ಕಾರ್ಯಪಡೆಯನ್ನು ನಿರ್ಮಿಸುವ ಮಹತ್ವದ ಕುರಿತು ತಿಳಿಸಲಾಯಿತು. ಸೇವಾ ವಿತರಣೆಯನ್ನು ಸುಧಾರಿಸಲು ಭಾಗವಹಿಸುವವರು ತಮ್ಮ ದೈನಂದಿನ ಜವಾಬ್ದಾರಿಗಳಲ್ಲಿ ತರಬೇತಿಯನ್ನು ಅನ್ವಯಿಸುವಂತೆ ಪ್ರೋತ್ಸಾಹಿಸಲಾಯಿತು. ವೈಯಕ್ತಿಕ ಜವಾಬ್ದಾರಿಗಳ ಅರಿವು ಮತ್ತು ಸಾರ್ವಜನಿಕ ಸೇವೆಯ ವಿಶಾಲ ಪರಿಣಾಮದ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಹೊಂದಿರುವ ಕಾರ್ಯಕ್ರಮದಲ್ಲಿ ಸಚಿವಾಲಯದ ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿದರು. ಆಯುಷ್ ಸಚಿವಾಲಯವು ತನ್ನ ಕಾರ್ಯಪಡೆಯೊಳಗೆ ಸಾಮರ್ಥ್ಯ ಮತ್ತು ದಕ್ಷತೆಯನ್ನು ಬಲಪಡಿಸುವ ಪ್ರಯತ್ನಗಳನ್ನು ಮುಂದುವರೆಸಿದೆ.

ಏಫ್ರೀಲ್ 16, 2023 • 7 min read
Read More
ಪ್ರಶಸ್ತಿ ಪುರಸ್ಕಾರ

ನವದೆಹಲಿಯಲ್ಲಿ ಮ್ಯಾಕ್‌ಗ್ರೆಗರ್ ಸ್ಮಾರಕ ಪದಕ ಪ್ರಶಸ್ತಿ.

Space Mission
  • ಯುನೈಟೆಡ್ ಸರ್ವಿಸ್ ಇನ್‌ಸ್ಟಿಟ್ಯೂಷನ್ ಆಫ್ ಇಂಡಿಯಾದಲ್ಲಿ ನಡೆದ ಮ್ಯಾಕ್‌ಗ್ರೆಗರ್ ಸ್ಮಾರಕ ಪದಕ ಪ್ರಶಸ್ತಿ ಪ್ರದಾನ ಸಮಾರಂಭ
  • ಅತ್ಯುತ್ತಮ ಕೊಡುಗೆಗಳಿಗಾಗಿ ಐದು ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಮ್ಯಾಕ್‌ಗ್ರೆಗರ್ ಸ್ಮಾರಕ ಪದಕ ಪ್ರಶಸ್ತಿ
  • ಜೀವನ ಮತ್ತು ಪ್ರಯಾಣದ ಕುರಿತಾದ ಪುಸ್ತಕ ಬ್ರೇವೆಸ್ಟ್ ಆಫ್ ದಿ ಬ್ರೇವ್ (Bravest of the Brave ಬಿಡುಗಡೆ
  • ಪ್ರಶಸ್ತಿ ಇತಿಹಾಸ

2023 ರ ಪ್ರಶಸ್ತಿ ಪುರಸ್ಕೃತರಲ್ಲಿ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಡಿ ಪಾಂಡಾ ಮತ್ತು ಭಾರತೀಯ ನೌಕಾಪಡೆಯ ಇಎ (ಆರ್) ರಾಹುಲ್ ಕುಮಾರ್ ಪಾಂಡೆ ಸೇರಿದ್ದಾರೆ. 2024 ಕ್ಕೆ, ಭಾರತೀಯ ನೌಕಾಪಡೆಯ ಸಿಇಎಎ(ಆರ್) ರಾಮ್ ರತನ್ ಜಾಟ್ ಮತ್ತು ಭಾರತೀಯ ವಾಯುಪಡೆಯ ಸಾರ್ಜೆಂಟ್ ಜುಮರ್ ರಾಮ್ ಪೂನಿಯಾ ಅವರಿಗೆ ಮ್ಯಾಕ್‌ಗ್ರೆಗರ್ ಸ್ಮಾರಕ ಪದಕವನ್ನು ನೀಡಿ ಗೌರವಿಸಲಾಯಿತು. NIMAS ನಿರ್ದೇಶಕ ಕರ್ನಲ್ ರಣವೀರ್ ಸಿಂಗ್ ಜಮ್ವಾಲ್ ಅವರಿಗೆ 2024 ರ ಮ್ಯಾಕ್ ಗ್ರೆಗರ್ ಪ್ರಶಸ್ತಿಯನ್ನು ನೀಡಲಾಗಿದೆ.

ಪ್ರಶಸ್ತಿ ಇತಿಹಾಸ:
ಜುಲೈ 03, 1888 ರಂದು ಸ್ಥಾಪಿಸಲಾದ ಮ್ಯಾಕ್‌ಗ್ರೆಗರ್ ಸ್ಮಾರಕ ಪದಕವು ಮೇಜರ್ ಜನರಲ್ ಸರ್ ಚಾರ್ಲ್ಸ್ ಮೆಟ್‌ಕಾಲ್ಫ್ ಮ್ಯಾಕ್‌ಗ್ರೆಗರ್, ಕೆಸಿಬಿ, ಸಿಎಸ್‌ಐ, ಸಿಐಇ - 1870 ರಲ್ಲಿ ಸ್ಥಾಪಿಸಲಾದ ಯುನೈಟೆಡ್ ಸರ್ವಿಸ್ ಇನ್‌ಸ್ಟಿಟ್ಯೂಷನ್ ಆಫ್ ಇಂಡಿಯಾದ ಸ್ಥಾಪಕರನ್ನು ಸ್ಮರಿಸುತ್ತದೆ.
ಮೂಲತಃ ಮಿಲಿಟರಿ ವಿಚಕ್ಷಣ ಮತ್ತು ಪರಿಶೋಧನಾ ಪ್ರಯಾಣಗಳ ಕಾರ್ಯಗಳನ್ನು ಗುರುತಿಸಲು ಉದ್ದೇಶಿಸಲಾಗಿತ್ತು, ಆದರೆ ಸ್ವಾತಂತ್ರ್ಯದ ನಂತರ 1986 ರಲ್ಲಿ ಮಿಲಿಟರಿ ದಂಡಯಾತ್ರೆಗಳು ಮತ್ತು ಸಾಹಸ ಚಟುವಟಿಕೆಗಳನ್ನು ಸೇರಿಸಲು ಪದಕದ ವ್ಯಾಪ್ತಿಯನ್ನು ವಿಸ್ತರಿಸಲಾಯಿತು.
ಮಿಲಿಟರಿ ವಿಚಕ್ಷಣ ಮತ್ತು ಪರಿಶೋಧನೆಯು ಪ್ರಮುಖ ಮಾನದಂಡವಾಗಿ ಉಳಿದಿದ್ದರೂ, ಸಶಸ್ತ್ರ ಪಡೆಗಳು, ಪ್ರಾದೇಶಿಕ ಸೇನೆ, ಮೀಸಲು ಪಡೆಗಳು, ರಾಷ್ಟ್ರೀಯ ರೈಫಲ್ಸ್ ಮತ್ತು ಅಸ್ಸಾಂ ರೈಫಲ್ಸ್‌ನ ಎಲ್ಲಾ ಶ್ರೇಣಿಗಳಿಗೆ (ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತ) ಪದಕವು ಮುಕ್ತವಾಗಿದೆ. ಇಲ್ಲಿಯವರೆಗೆ, ಸ್ವಾತಂತ್ರ್ಯಕ್ಕೆ ಮೊದಲು 103 ಪದಕಗಳನ್ನು ಒಳಗೊಂಡಂತೆ 127 ಪದಕಗಳನ್ನು ನೀಡಲಾಗಿದೆ.
ಕ್ಯಾಪ್ಟನ್ ಎಫ್‌ಇ ಯಂಗ್‌ಹಸ್ಬೆಂಡ್ (1890), ಮೇಜರ್ ಜನರಲ್ ಓರ್ಡೆ ಚಾರ್ಲ್ಸ್ ವಿಂಗೇಟ್ (1943), ಮೇಜರ್ ಝಡ್‌ಸಿ ಬಕ್ಷಿ, ವಿಆರ್‌ಸಿ (1949), ಸಿಯಾಚಿನ್ ಗ್ಲೇಸಿಯರ್ ಪರಿಶೋಧನೆಗಾಗಿ ಕರ್ನಲ್ ನರಿಂದರ್ ಕುಮಾರ್ (1978–81) ಮತ್ತು ಏಕವ್ಯಕ್ತಿ ಜಾಗತಿಕ ಸುತ್ತಾಟಕ್ಕಾಗಿ ಕಮಾಂಡರ್ ದಿಲೀಪ್ ದೋಂಡೆ ಮತ್ತು ಲೆಫ್ಟಿನೆಂಟ್ ಕಮಾಂಡರ್ ಅಭಿಲಾಷ್ ಟೋಮಿ ಅವರು ಪ್ರಶಸ್ತಿ ಪಡೆದ ಗಮನಾರ್ಹ ವ್ಯಕ್ತಿಗಳು.

ಈ ಗೌರವವು ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಧೈರ್ಯಶಾಲಿ ಸಾಹಸಗಳನ್ನು ಕೈಗೊಳ್ಳಲು ಮತ್ತು ಶೌರ್ಯ, ಪರಿಶ್ರಮ ಮತ್ತು ಆವಿಷ್ಕಾರದ ಸಂಪ್ರದಾಯವನ್ನು ಎತ್ತಿಹಿಡಿಯಲು ಸ್ಫೂರ್ತಿ ಮತ್ತು ಪ್ರೇರಣೆ ನೀಡುತ್ತಲೇ ಇದೆ.
ಈ ಸಮಾರಂಭದಲ್ಲಿ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರು ನೈಬ್ ಸುಬೇದಾರ್ ಚುನ್ನಿ ಲಾಲ್, AC, VrC, SM ಅವರ ಜೀವನ ಮತ್ತು ಪ್ರಯಾಣದ ಕುರಿತಾದ ಪುಸ್ತಕ ಬ್ರೇವೆಸ್ಟ್ ಆಫ್ ದಿ ಬ್ರೇವ್ (Bravest of the Brave ಬಿಡುಗಡೆ ಮಾಡಿದರು. ಮಾಜಿ ಮುಖ್ಯಸ್ಥ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ (ಸಿಐಎಸ್‌ಸಿ) ಲೆಫ್ಟಿನೆಂಟ್ ಜನರಲ್ ಸತೀಶ್ ದುವಾ (ನಿವೃತ್ತ) ಅವರು ಈ ಪುಸ್ತಕದ ಲೇಖಕರಾಗಿದ್ದಾರೆ. ಕೃತಿಯಲ್ಲಿ ಸೈನಿಕನ ವೈಯಕ್ತಿಕ ಪ್ರಕ್ಷುಬ್ಧತೆ, ಪ್ರತಿಕೂಲ ಪರಿಸ್ಥಿತಿಯಲ್ಲಿ ಅವರ ಅಚಲ ದೃಢಸಂಕಲ್ಪ ಮತ್ತು ಅವರ ಅದಮ್ಯ ಚೈತನ್ಯದ ಎದ್ದುಕಾಣುವ ಮತ್ತು ಹೃತ್ಪೂರ್ವಕ ಚಿತಿಸಿದ್ದಾರೆ.

ಎಫ್ರೀಲ್ 16, 2025 • 8 min read
Read More
Economic Policy
ಆವಿಷ್ಕಾರ

ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಹೈಡ್ರೋಜನ್ ಇಂಧನ ಸಮುದ್ರ ಹಡಗು.

  • CSIR ಉಪಾಧ್ಯಕ್ಷ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ರವರಿಂದ ಸಾಧನೆ
  • ದೇಶದ ಮೊದಲ ಸ್ಥಳೀಯ ಹಸಿರು ಹೈಡ್ರೋಜನ್ ಇಂಧನ ಕೋಶ ಒಳನಾಡಿನ ಜಲಮಾರ್ಗ
  • ಹಡಗನ್ನು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ
  • NMITLI ಕಾರ್ಯಕ್ರಮದಡಿಯಲ್ಲಿ ಬೆಂಬಲಿತವಾದ ಎರಡು ಕಾರ್ಯಕ್ರಮಗಳು

ಹಡಗು ಸಾಗಣೆ ಮತ್ತು ಒಳನಾಡಿನ ಜಲಮಾರ್ಗ ಸಾಗಣೆಯಲ್ಲಿ ಪ್ರಮುಖ ಪ್ರಗತಿಯಾಗಿ, ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಹೈಡ್ರೋಜನ್ ಇಂಧನ ಸಮುದ್ರ ಹಡಗನ್ನು CSIR ಉಪಾಧ್ಯಕ್ಷ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಡಾ. ಜಿತೇಂದ್ರ ಸಿಂಗ್ ಶ್ಲಾಘಿಸಿದ್ದಾರೆ; ಇದನ್ನು ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಜಂಟಿ ಪ್ರಯತ್ನದಿಂದ ಹೊರಹೊಮ್ಮುವ ಯಶಸ್ಸಿನ ಕಥೆ ಎಂದು ವಿವರಿಸಿದ್ದಾರೆ.

ದೇಶದ ಮೊದಲ ಸ್ಥಳೀಯ ಹಸಿರು ಹೈಡ್ರೋಜನ್ ಇಂಧನ ಕೋಶ ಒಳನಾಡಿನ ಜಲಮಾರ್ಗ ಹಡಗನ್ನು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ, KPIT ನಿರ್ಮಿಸಿದ ಹೈಡ್ರೋಜನ್ ಇಂಧನ ಕೋಶ ಆಧಾರಿತ ಡ್ರೈವ್‌ಟ್ರೇನ್ ಅನ್ನು ಒಳಗೊಂಡಿದೆ. ಇದರ ಜೋತೆ CSIR-ನ್ಯೂ ಮಿಲೇನಿಯಂ ಇಂಡಿಯನ್ ಟೆಕ್ನಾಲಜಿ ಲೀಡರ್‌ಶಿಪ್ ಇನಿಶಿಯೇಟಿವ್ (NMITLI: New Millennium Indian Technology Leadership Initiative) ಸಹಯೋಗವಿದೆ.
NMITLI ಕಾರ್ಯಕ್ರಮದಡಿಯಲ್ಲಿ ಬೆಂಬಲಿತವಾದ ಎರಡು ಕಾರ್ಯಕ್ರಮಗಳು: .
ಮೊದಲನೆಯದು CSIR-TECHNOS ರಾಮನ್ ಸ್ಪೆಕ್ಟ್ರೋಮೀಟರ್‌ಗಳ (CTR-300 ಮತ್ತು CTR-150) ಅಭಿವೃದ್ಧಿ ಮತ್ತು ವಾಣಿಜ್ಯೀಕರಣ, ಇದನ್ನು CSIR–ಅಡ್ವಾನ್ಸ್ಡ್ ಮೆಟೀರಿಯಲ್ಸ್ ಮತ್ತು ಪ್ರೊಸೆಸಸ್ ರಿಸರ್ಚ್ ಇನ್ಸ್ಟಿಟ್ಯೂಟ್ (CSIR–AMPRI), ಭೋಪಾಲ್ ಮತ್ತು M/s TechnoS ಇನ್ಸ್ಟ್ರುಮೆಂಟ್ಸ್, ಜೈಪುರ ನಡುವಿನ ಪಾಲುದಾರಿಕೆಯ ಮೂಲಕ ಸಾಧಿಸಲಾಗಿದೆ.
ಎರಡನೆಯದು, ಕಡಿಮೆ-ತಾಪಮಾನದ PEM ಇಂಧನ ಕೋಶ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಪ್ರದರ್ಶಿಸಲು KPIT ಪುಣೆಯ CSIR-ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿ (CSIR-NCL) ಮತ್ತು ಕೇಂದ್ರ ಎಲೆಕ್ಟ್ರೋಕೆಮಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ (CSIR-CECRI) ನೊಂದಿಗೆ ಸಹಯೋಗ ಹೊಂದಿದೆ. ಈ ಪ್ರಯತ್ನದ ಪ್ರಮುಖ ಫಲಿತಾಂಶವೆಂದರೆ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ತೂತುಕುಡಿಯಲ್ಲಿ ಹರಿತ್ ನೌಕಾ ಉಪಕ್ರಮದಡಿಯಲ್ಲಿ ದೇಶದ ಮೊದಲ ಸ್ಥಳೀಯ ಹಸಿರು ಹೈಡ್ರೋಜನ್ ಇಂಧನ ಕೋಶ ಒಳನಾಡಿನ ಜಲಮಾರ್ಗ ಹಡಗನ್ನು ಉದ್ಘಾಟಿಸಿದರು. ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಈ ಹಡಗಿನಲ್ಲಿ, ಸಿಎಸ್‌ಐಆರ್ ಸಕ್ರಿಯಗೊಳಿಸಿದ ಅಡಿಪಾಯದ ಕೆಲಸವನ್ನು ಬಳಸಿಕೊಂಡು ಕೆಪಿಐಟಿ ನಿರ್ಮಿಸಿದ ಹೈಡ್ರೋಜನ್ ಇಂಧನ ಕೋಶ ಆಧಾರಿತ ಡ್ರೈವ್‌ಟ್ರೇನ್ ಇದೆ.

October 13, 2023 • 7 min read
Read More
Share:

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels

Blog Archive