ಹಾಯ್, ನಿಮಗಾಗಿ ವಿಶೇಷ ಸುದ್ದಿ,
![]() |
ಸಾಂಧರ್ಭಿಕ ಚಿತ್ರ |
ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಹುದ್ದೆಗೆ ಶೀಘ್ರದಲ್ಲೇ ಅಧಿಸೂಚನೆ ಹೊರಬೀಳುವುದರಲ್ಲಿದೆ, ಇದು ವಿಶೇ಼ ಯಾಕೆಂದರೆ ಈ ಹುದ್ದೆಗೆ ಪರೀಕ್ಷೆಯನ್ನ ಹತ್ತು ವರ್ಷಗಳ ಹಿಂದೆ ಕರೆಯಲಾಗಿತ್ತು, ಈ ಹುದ್ದೆಯನ್ನ ಕೆಇಎಸ್ ಪರೀಕ್ಷೆ ಎಂದು ಕರೆಯಲಾಗುತ್ತದೆ, ಅದೇ ಪರೀಕ್ಷೆಯನ್ನು ಮತ್ತೆ ಈಗ ಕರೆಯಲಾಗಿದೆ. ಮುಖ್ಯ ಶಿಕ್ಷಕ ಹುದ್ದೆ ತುಂಬಾ ವಿಶೇಷವಾದ ಹುದ್ದೆ, ಇದು ಸಮಾಜ ಸೇವೆಯ ರೀತಿಯ ಹುದ್ದೆ, ಈ ಹುದ್ದೆಯನ್ನ ಅನೇಕರು ಇಷ್ಟಪಡಲು ತುಂಬಾ ಕಾರಣಗಳಿವೆ. ಪ್ರೌಢ ಶಾಲೆಯೆಂದು ಒಂದು ಗ್ರಾಮೀಣ ಭಾಗದ ಶಾಲೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಬಂದರೆ ಹರುಷವೋ ಹರುಷ, ಯಕೆಂದರೆ ಆ ಊರಿನಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಇವರೇ ಮಾರ್ಗದರ್ಶಕರಾಗಿರುತ್ತಾರೆ, ಈ ಹುದ್ದೆಗೇ ಬರಬೇಕೆಂದು ಟೊಂಕ ಕಟ್ಟಿ ನಿಂತವರೆಷ್ಟೋ, ಇರಲಿ ಇದೊಂದು ಬಲು ಅಪರೂಪದ ಹುದ್ದೆ, ಈಗ ತಾವೆಲ್ಲರೂ ಆ ಆನಂದವನ್ನ ಇತರರಿಗೂ ಹಂಚಬಹುದು. ಈ ಒಂದೊಳ್ಳೆ ಸುದ್ದಿ ಹಂಚಿದ ಪುಣ್ಯ ನಿಮಗೆ ಸಿಗುತ್ತದೆ. ಇರಲಿ ಹುದ್ದೆಯ ವಿವರ ನಿಮಗಾಗಿ.....
ದಿನಾಂಕ 7-11.2023 ರಂದು ಕೆಪಿಎಸ್ಸಿ ಮುಖಾಂತರ ಹೊರಡಿಸಿದ ಪರೀಕ್ಷಾ ಶಾಖೆ 01 ರಲ್ಲಿ ಇರುವ ಪ್ರಸ್ತಾವನೆಗೆ ಬಾಕಿ ಇರುವ ಹುದ್ದೆಗಳ ವಿವರಗಳ ಪತ್ರದಲ್ಲಿ ಕ್ರಮ ಸಂಖ್ಯೆ 2 ರಲ್ಲಿ "ಅಧಿಸೂಚನೆ ಬಾಕಿ ಇರುತ್ತದೆ" ಎಂಬ ವಿವರದಡಿಯಲ್ಲಿ ಇಲಾಖೆ "ಸಾರ್ವಜನಿಕ ಶಿಕ್ಷಣ ಇಲಾಖೆ" ಅನ್ನುವ ಹೆಸರಿನಲ್ಲಿ ಹುದ್ದೆಗಳ ಪದನಾಮ ಎಂದಿದ್ದಲ್ಲಿ "ಮುಖ್ಯೋಪಾಧ್ಯಾಯರು" ಎಂದಿದ್ದು, ಈ ಹುದ್ದೆಯ ಪ್ರಸ್ತುತ ಹಂತದ ಬಗ್ಗೆ ಕೇಳಿದಾಗ "ಕೆಲವು ಅಂಶಗಳ ಕುರಿತು ಮಾಹಿತಿ/ಸ್ಫಷ್ಠೀಕರಣ ಒದಗಿಸುವಂತೆ ಇಲಾಖೆಯವರಿಗೆ ದಿನಾಂಕ 13-10- 23 ರಂದು ಪತ್ರ ಜಾರಿ ಮಾಡಲಾಗಿರುತ್ತದೆ" ಎನ್ನುವಂತಹ ಮಾಹಿತಿಯನ್ನು ನಮಗೆ ನೀಡಿರುತ್ತಾರೆ.
ಹುದ್ದೆಗೆ ಅಧಿಸೂಚನೆ ಬರುವುದಂತೂ ಸ್ಫಷ್ಟವಾಗಿದ್ದು ಆಕಾಂಕ್ಷಿಗಳು ತಮ್ಮ ಅಗತ್ಯ ತಯಾರಿಯಲ್ಲಿರಬಹುದಾಗಿದೆ. ಕರ್ನಾಟಕದಲ್ಲಿ ಒಟ್ಟು 140 ಹುದ್ದೆಗಳಿಗಾಗಿ ಪ್ರಸ್ತಾವನೆಗೆ ಈಗಾಗಲೇ ಅಗತ್ಯ ಸಿದ್ದತೆ ಮಾಡಿಕೊಂಡಿರುವುದು ಗೊತ್ತಾಗಿದೆ. RPC: 12 ಮತ್ತು HK: 128 ಹುದ್ದೆಗಳಿದ್ದ ಕಾರಣ ಮುಖ್ಯೋಪಾಧ್ಯಾಯ ಹುದ್ದೆಯ ಆಕಾಂಕ್ಷಿಗಳೆಲ್ಲರೂ ಕೂಡ ತಮ್ಮ ತಯಾರಿಯಲ್ಲಿ ಇರಲು ಶುರು ಮಾಡಲು ತಿಳಿಸಲಾಗಿದೆ. ನೀವು ಕೂಡ ತಡ ಮಾಡಬೇಡಿ ಯಾಕೆಂದರೆ ಈಗಾಗಲೇ ತುಂಬಾ ಅಪರೂಪದ ಹುದ್ದೆಯಾಗಿದ್ದು ಇದರ ಮುಖೇನ ನೀವುಗಳು ಮುಖ್ಯ ಶಿಕ್ಷಕರಾದ ಮೇಲೆ ಬಿ.ಇ.ಒ ಆಗಲು ಬಹಳ ದಿನಗಳು ಬೇಕಾಗಿಲ್ಲ.
ಈ ಹಿಂದೆ ಪ್ರಥಮವಾಗಿ ಪ್ರಿಲಿಮನರಿ ಪರೀಕ್ಷೆಯಾದ ನಂತರ ಮುಖ್ಯ ಪರೀಕ್ಷೆ ಇದ್ದು, ಇದರಲ್ಲಿ 1:5 ರ ಹುದ್ದೆಯಂತೆ ಆರಿಸಲಾಗುತ್ತದೆ, ತದನಂತರ ವ್ಯಕ್ತಿತ್ವ ಪರೀಕ್ಷೆಯಲ್ಲಿ ಮೌಖಿಕ ಪ್ರಶ್ನೆಗಳನ್ನ ಕೇಳಲಾಗುತ್ತದೆ. ಅಂತಿಮವಾಗಿ ಆಯ್ಕೆ ಪಟ್ಟಿ ಹೊರಡಿಸಿ, ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಹೊಸಾ ಪರೀಕ್ಷಾ ಪದ್ದತಿ ಏನಾದರೂ ಬಂದಿದೆಯಾ ಎಂಬುದನ್ನ ಕಾದು ನೋಡಬೇಕಿದೆ, ಅಂತೂ ಬಿ.ಎಡ್ ಮಾಡಿದವರಲ್ಲಿ ಹರಷ ಮನೆಮಾಡಿದ್ದು ಅಧಿಸೂಚನೆಗೆ ಎದುರು ನೋಡುತ್ತಿರುತ್ತಾರೆ.
The Karnataka Education Service Head Master post, a crucial leadership role in the state's education system, is an esteemed position responsible for steering schools towards excellence. This role is at the forefront of shaping the future of education in Karnataka. With a master's degree and teaching experience as prerequisites, aspiring candidates can follow a specific application process to enter the selection process, which includes a written examination and an interview. Once appointed, Head Masters are entrusted with the responsibility of managing schools, developing curricula, overseeing staff, and maintaining discipline. Their impact extends beyond the classroom, as they play a vital role in enhancing the quality of education and contributing to the growth of the state's youth.
0 Comments:
ಕಾಮೆಂಟ್ ಪೋಸ್ಟ್ ಮಾಡಿ