ISRO: ಸೂರ್ಯನ ರಹಸ್ಯ ಬೇಧಿಸಲಿರುವ ಆದಿತ್ಯ ಎಲ್1


ಸೆಪ್ಟೆಂಬರ್ 2ರ ಬೆಳಿಗ್ಗೆ 11.50ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ಆದಿತ್ಯ ಎಲ್ 1 (Aditya L1 Mission) ಉಡಾವಣೆಯಾಗಿದೆ. ಇಸ್ರೋ ಆದಿತ್ಯ ಎಲ್‌-1 ನೌಕೆಯನ್ನ ಭೂಮಿಯಿಂದ 1.5 ಮಿಲಿಯನ್‌ ಕಿಲೋಮೀಟರ್‌ ದೂರದ ಲಾಂಗ್ರೇಜ್‌ ಪಾಯಿಂಟ್‌ಗೆ ತಲುಪಿ ಸೂರ್ಯನ ಬಗ್ಗೆ ಅಧ್ಯಯನ ನಡೆಸಲಿದೆ. ಭಾರತೀಯರೆಲ್ಲರೂ ಹೆಮ್ಮೆಪಡುವ ಐತಿಹಾಸಿಕ ಯೋಜನೆ ಇದಾಗಿದೆ.


ಚಂದ್ರಯಾನ್, ಮಂಗಳಯಾನ್ ನಂತ್ರ ಇಸ್ರೋ ಕೈಗೊಳ್ಳುತ್ತಿರುವ ಅತ್ಯಂತ ಪ್ರಮುಖ ಯೋಜನೆ ಇದಾಗಿದೆ. ಭಾರತ ಇದೇ ಮೊದಲ ಬಾರಿ ಸೂರ್ಯನ ಅಧ್ಯಯನಕ್ಕೆ ಮುಂದಾಗಿದೆ. ಇದಕ್ಕೆ ಯುರೋಪಿಯನ್ ಸ್ಪೇಸ್ ಏಜೆನ್ಸಿ, ಆಸ್ಟ್ರೇಲಿಯಾ ಸೇರಿ ವಿವಿಧ ದೇಶಗಳ ಅಂತರಿಕ್ಷ ಸಂಸ್ಥೆಗಳ ನೆರವನ್ನು ಇಸ್ರೋ ಪಡೆಯುತ್ತಿದೆ. 

ಅಮೇರಿಕಾ ನಾಸಾದ ಪಾರ್ಕರ್ ಸೂರ್ಯನಿಗೆ 7.8 ಮಿಲಿಯನ್ ಕಿಲೋಮೀಟರ್ ಹತ್ತಿರ ಹೋಗಿತ್ತು.ಅದರೊಳಗಿನ ಕಣಗಳು ಮತ್ತು ಕಾಂತೀಯ ಕ್ಷೇತ್ರಗಳ ಅಧ್ಯಯನ ಇದು ನಡೆಸಿತ್ತು.

 ಮುಂದಿನ ಐದು ವರ್ಷಗಳ ಕಾಲ ಆದಿತ್ಯ L-1 ಮೂಲಕ ಇಸ್ರೋ ಸೂರ್ಯನ ಬಗ್ಗೆ ಅಧ್ಯಯನ ನಡೆಸಲಿದೆ. ಸೂರ್ಯನ ಕಿರಣಗಳು, ಸೂರ್ಯನ ಮೇಲ್ಮೈ, ಸೂರ್ಯನ ಶಾಖ ಸೇರಿದಂತೆ ಬೇರೆ ಬೇರೆ ವಿಷಯಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಇದುವರೆಗೂ ಆಮೆರಿಕಾದ ನಾಸಾ, ಯೂರೋಪ್ ಬಾಹ್ಯಾಕಾಶ ಏಜೆನ್ಸಿಗಳಿಂದ ಸೂರ್ಯನ ಬಗ್ಗೆ ಅಧ್ಯಯನ ನಡೆಸಲಾಗಿದೆ.

ಆದಿತ್ಯ L1 ರಾಕೆಟ್‌ನಲ್ಲಿ ಏಳು ಪೇ ಲೋಡ್‌ಗಳಿವೆ:

  • ಪೇ ಲೋಡ್ 1- ವಿಸಿಬಲ್ ಎಮಿಷನ್ ಲೈನ್ ಕೋರೊನಾ ಗ್ರಾಫ್
  • ಇದರ ಸಾಮರ್ಥ್ಯ— ಕೊರೊನಾಲ್‌/ಇಮೇಜಿಂಗ್‌, ಸ್ಪೆಕ್ಟ್ರೋಸ್ಕೋಪಿ
  • ಪೇ ಲೋಡ್ 2- ಸೋಲಾರ್‌ ಅಲ್ಟ್ರಾ ವೈಲೇಂಟ್‌ ಇಮೇಜಿಂಗ್ ಟೆಲಿಸ್ಕೋಪ್
  • ಇದರ ಸಾಮರ್ಥ್ಯ-ಪೋಟೋಸ್ಪೇರ್‌ ಮತ್ತು ಕ್ರೋಮೋಸಫೇರ್ ಇಮೇಜಿಂಗ್
  • ಪೇ ಲೋಡ್ 3- ಸೋಲಾರ್ ಲೋ ಎನರ್ಜಿ ಎಕ್ಸ್ ರೇ ಸ್ಪೆಕ್ಸೋಟ್ರೋಮೀಟರ್‌ (ಸೋಲೇಕ್ಸ್)
  • ಪೇ ಲೋಡ್ 4- ಹೈ ಎನರ್ಜಿ ಎಲ್‌-1 ಆರ್ಬಿಟಿಂಗ್‌ ಎಕ್ಸ್ ರೇ ಸ್ಪೆಕ್ಸೋಟ್ರೋಮೀಟರ್
  • ಪೇ ಲೋಡ್ 5- ಆದಿತ್ಯ ಸೋಲಾರ್ ವಿಂಡ್ ಪಾರ್ಟಿಕಲ್ ಎಕ್ಸಪೀರಿಮೆಂಟ್
  • ಪೇ ಲೋಡ್ 6- ಪ್ಮಾಸ್ಮಾ ಅನಲೈಜರ್ ಪ್ಯಾಕೇಜ್ ಫಾರ್ ಆದಿತ್ಯ
  • ಪೇ ಲೋಡ್ 7- ಅಡ್ವಾನ್ಸಡ್‌ ಟ್ರೈ ಆಕ್ಸಿಯಲ್ ಹೈ ರೆಸಲ್ಯೂಷನ್ ಡಿಜಿಟಲ್ ಮ್ಯಾಗ್ನೇಟೋಮೀಟರ್

ಆದಿತ್ಯ ಎಲ್1 ಬಾಹ್ಯಾಕಾಶ ನೌಕೆ 1,500 ಕೆಜಿ ತೂಕ ಹೊಂದಿರುವ ಒಂದು ಉಪಗ್ರಹವಾಗಿದ್ದು,  ಇದು ಸೂರ್ಯ ಮತ್ತು ಭೂಮಿಯ ನಡುವಿನ ಲ್ಯಾಗ್ರೇಂಜಿಯನ್ ಪಾಯಿಂಟ್ 1 (ಎಲ್-1) ಬಿಂದುವಿನ ಸುತ್ತಲೂ ಇರುವ 'ಹ್ಯಾಲೋ ಕಕ್ಷೆಯಿಂದ' ಸೂರ್ಯನನ್ನು ಗಮನಿಸಲಿದೆ. ಈ ಬಿಂದು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿದೆ. ಎಲ್1 ಬಿಂದುವಿನ ಈ ವಿಶಿಷ್ಟ ಕಕ್ಷೆ ಯಾವುದೇ ಅಡೆತಡೆಯಿಲ್ಲದೆ, ಗ್ರಹಣಗಳಿಂದಲೂ ಬಾಧಿತವಾಗದೆ, ನಿರಂತರವಾಗಿ ಸೂರ್ಯನನ್ನು ವೀಕ್ಷಿಸಲು ನೆರವಾಗುತ್ತದೆ.

ಲ್ಯಾಗ್ರೇಂಜ್ ಪಾಯಿಂಟ್ ಎಲ್-1 ಸುತ್ತಲಿನ ಹ್ಯಾಲೋ ಕಕ್ಷೆ ಆದಿತ್ಯ ಎಲ್1 ಬಾಹ್ಯಾಕಾಶ ನೌಕೆಯನ್ನು ಸೂರ್ಯನ ತಾಪಮಾನದಿಂದ ರಕ್ಷಿಸಲಿದೆ. ಅಂದರೆ, ಬಾಹ್ಯಾಕಾಶ ನೌಕೆ ನೇರವಾಗಿ ಸೂರ್ಯನ ತಾಪಮಾನಕ್ಕೆ ತೆರೆದುಕೊಳ್ಳುವುದಿಲ್ಲ. ಅದರೊಡನೆ, ಇದು ಭೂಮಿಯ ಗುರುತ್ವಾಕರ್ಷಣೆಯಿಂದಲೂ ರಕ್ಷಿಸಲ್ಪಡುತ್ತದೆ. ಈ ಮೂಲಕ ಮುಂದಿನ ದಿನಗಳಲ್ಲಿ ಭಾರತವು ಸೂರ್ಯನ ಅಂಗಳದ ರಹಸ್ಯವನ್ನು ಭೇದಿಸಲಿದೆ.

 KEY WORDS; #Aditya-L1-Mission, #Pay-loads-in-Aditya-L1-Mission, #SRO-ADITYA-L1, #AdityaL1Mission, #PSLVC57,ISRO, #AdityaL1Launch, #Aditya,satellite, #sun,#India,

Share:

0 Comments:

ಕಾಮೆಂಟ್‌‌ ಪೋಸ್ಟ್‌ ಮಾಡಿ

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels

Blog Archive