ಹಳಿಯಾಳ: 17 ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕ ಮಹಮ್ಮದ್‌ ಶಾಹೀದ್‌ರಿಗೆ ಹೃದಯಸ್ಫರ್ಶಿ ಬೀಳ್ಕೊಡುಗೆ.

 ಹಳಿಯಾಳ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ ಜೋಗನಕೊಪ್ಪ ಶಿಕ್ಷಕರಾದ ಶ್ರೀ ಮಹಮ್ಮದ್ ಶಾಹಿದ್ ಅವರು ವರ್ಗಾವಣೆಗೊಂಡ ನಿಮಿತ್ತ  ಬೀಳ್ಕೂಡುಗೆ ಸಮಾರಂಭವನ್ನು ಸರಕಾರಿ ಪ್ರಾಥಮಿಕ ಶಾಲೆ ಜೋಗನಕೊಪ್ಪದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶ್ರೀ ಶಕೀಲ್ ಚೌಕಿದಾರ್ ಅಧ್ಯಕ್ಷರು, SDMC, ಊರಿನ ಮುಖಂಡರಾದ ಶ್ರೀ ಅಬ್ದುಲ್ ರಜಾಕ್ ಸಕಾ೯ವಸ್‌, ಶ್ರೀಯುತ ಹಾಜಿ  ಮಹಮ್ಮದ್ ರಫಿಕ ಸಕಾ೯ವಸ  ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಶ್ರೀ ಸುಲೇಮಾನ ಶೇಖ ಹಾಗೂ ಹಳಿಯಾಳ ಉರ್ದು ಕ್ಲಸ್ಟರ CRP ಗಳಾದ ಶ್ರೀ ಶೇಖಸಾಬ ಹವಾಲ್ದಾರ, ವಿಶೇಷ ಅತಿಥಿಗಳಾದ ಶ್ರೀ ಖಾಸೀಮ ಸಾಬ ಹಳಿಯಾಳ ಹಾಗೂ ಊರ ನಾಗರಿಕರೆಲ್ಲರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಊರ ಮುಖಂಡರಾದ ಶ್ರೀ ಅಬ್ದುಲ್ ರಜಾಕ್ ಸರ್ಕಾವಸ್ ಹಾಗೂ ಶ್ರೀ ಸುಲೇಮಾನ್ ಶೇಕ್, ಶೇಕ್ ಸಾಬ್ ಹವಾಲ್ದಾರ್ ಅವರು ಕಾರ್ಯಕ್ರಮದ ಕುರಿತು ಮಾತನಾಡಿದರು. "ಶ್ರೀ ಮಹಮ್ಮದ್ ಶಾಹಿದ್ ಅವರು ಸತತ 17 ವರ್ಷಗಳ ಕಾಲ ಪ್ರಮಾಣಿಕ ಸೇವೆಯನ್ನು ಸಲ್ಲಿಸಿದ್ದಾರೆ. ಶಾಲೆಯ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಪರಿಸರ ಪ್ರೇಮಿಗಳಾದ ಅವರು ಲಕ್ಷಾಂತರ ರೂಪಾಯಿ ಬೆಲೆಬಾಳುವ ಸಾಗವಾನಿ ಮರಗಳನ್ನು ಬೆಳೆಸಿ ಶಾಲೆಗೆ ಅಮೂಲ್ಯವಾದ ಆಸ್ತಿಯನ್ನು ನೀಡಿದ್ದಾರೆ. ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿದ್ದಾರೆ, ಇವರು ತಾಲೂಕಾ ಮಟ್ಟ, ಜಿಲ್ಲಾ ಮಟ್ಟ ಹಾಗೂ ರಾಜ್ಯಮಟ್ಟದ ಇಂಗ್ಲಿಷ್ ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕರಿಗೆ ತರಬೇತಿಗಳನ್ನು ನೀಡಿದ್ದಾರೆ. ಇಂತಹ ಒಬ್ಬ ಆದರ್ಶ ಶಿಕ್ಷಕರು ತಮ್ಮ ಶಾಲೆಯಿಂದ ಬೇರೆ ಶಾಲೆಗೆ ವರ್ಗಾವಣೆ ಹೋಗುತ್ತಿರುವುದು ನಮಗೆಲ್ಲಾ ಬೇಸರವಾಗಿದೆ, ಊರಿನ ನಾಗರಿಕರು, ವಿದ್ಯಾರ್ಥಿಗಳು  SDMC ಯವರು ಹಾಗು ನೆರೆದವರಲ್ಲಿ ಕಂಡ ಕಣ್ಣಿರು ಶಿಕ್ಷಕರ ಪ್ರೀತ್ಯಾಧರಗಳಿಗೆ ಸಾಕ್ಷಿಯಾಯಿತು ಹಾಗು  ಬೀಳ್ಕೊಡುಗೆ ಸಮಾರಂಭದ ಭಾವುಕ ಕ್ಷಣಕ್ಕೆ ಸಾಕ್ಷಿಯಾದರು. ಮುಂದಿನ ದಿನಗಳಲ್ಲಿ ಇವರಿಗೆ ಉನ್ನತ ಹುದ್ದೆ ಸಿಗಲಿ ಹಾಗೂ ಭಗವಂತನು ಇವರ ಕುಟುಂಬಕ್ಕೆ ಆರೋಗ್ಯ ಆಯುಷ್ಯ ನೀಡಲಿ ಎಂದು ನಾವೆಲ್ಲರೂ ಆಶಿಸುತ್ತೇವೆ" ಎಂದು ಹೇಳಿದರು. 

ವರ್ಗಾವಣೆ ಹೊಂದಿದ ಶಿಕ್ಷಕರಾದ ಶ್ರೀ ಮಹಮ್ಮದ್ ಶಾಹಿದ್ ಮಾತನಾಡಿ 17 ವರ್ಷ ಸೇವೆ ಸಲ್ಲಿಸಿದ ಶಾಲೆಗೆ  ಹಾಗೂ ತಮಗೆ ತೋರಿಸಿದ ಪ್ರೀತಿ ವಿಶ್ವಾಸಕ್ಕೆ ಸದಾ ಚಿರಋಣಿಯಾಗಿದ್ದು ಊರಿನ ನಾಗರಿಕರಿಗೆ, SDMC ಯವರಿಗೆ ವಿದ್ಯಾರ್ಥಿಗಳಿಗೆ ಧನ್ಯವಾದ ಅರ್ಪಿಸಿದರು.

#Haliyal:Farewell to Transferred Teacher Mohammad Shahid of Joganakoppa after serving 17 years.

Share:

0 Comments:

ಕಾಮೆಂಟ್‌‌ ಪೋಸ್ಟ್‌ ಮಾಡಿ

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels

Blog Archive