ಇತ್ತೀಚೆಗೆ ನಂದಿನಿ ತುಪ್ಪದ ಸರಬರಾಜನ್ನ ತಿರುಪತಿ ತಿಮ್ಮಪ್ಪನ ಲಾಡು ತಯಾರಿಕೆಗೆ ಪೂರೈಸಿದ್ದನ್ನ ನಿಲ್ಲಿಸಿದ ಕುರಿತು ವೃತ್ತ ಪತ್ರಿಕೆಗಳಲ್ಲಿ ಪ್ರಕಟವಾದುದರ ಕುರಿತು. ಸ್ಫಷ್ಟೀಕರಣವನ್ನು ಕೆ.ಎಮ್.ಎಫ ಅಧ್ಯಕ್ಷರು ಸರಣಿ ಟ್ವೀಟ್ ಮಾಡುವುದರ ಮೂಲಕ ನೀಡಿದ್ದಾರೆ.
ತಿರುಪತಿ ತಿರುಮಲ ದೇವಸ್ಥಾನಕ್ಕೆ ನಂದಿನಿ ತುಪ್ಪ ಸರಬರಾಜಿಗೆ ಸಂಬಂಧಿಸಿದಂತೆ, ಈ ಕೆಳಕಂಡ ಮಾಹಿತಿಯನ್ನು ನೀಡಬಯಸುತ್ತೇನೆ.
1) ಕಳೆದ 20 ವರ್ಷಗಳಿಂದಲೂ ಕೆ.ಎಂ.ಎಫ್ ವತಿಯಿಂದ ತಿರುಪತಿ ತಿರುಮಲ ದೇವಸ್ಥಾನದ ಪ್ರಸಿದ್ಧ ಲಡ್ಡು ಪ್ರಸಾದ ತಯಾರಿಕೆಗೆ ನಮ್ಮ ನಂದಿನಿ ತುಪ್ಪವನ್ನು ಸರಬರಾಜು ಮಾಡಿಕೊಂಡು ಬರಲಾಗುತ್ತಿತ್ತು, ಆದರೆ ಕಳೆದ ಕೆಲವು ವರ್ಷಗಳಿಂದ ಟೆಂಡರ್ ಪ್ರಕ್ರಿಯೆಯಲ್ಲಿ ಹೆಚ್ಚಿನ ಸ್ಪರ್ಧೆ ಏರ್ಪಟ್ಟ ಕಾರಣ ನಮ್ಮ ನಂದಿನಿ ತುಪ್ಪದ ಉತ್ಪಾದನಾ ವೆಚ್ಚವೂ ಸಹ ನಮಗೆ ದೊರಕುವುದು ತುಂಬಾ ಕಷ್ಟಕರವಾಗಿದೆ.
2)ಹೀಗಿದ್ದರೂ 2021-22 ನೇ ಸಾಲಿನ ಟೆಂಡರ್ ಪ್ರಕ್ರಿಯೆಯಲ್ಲಿ L-3 ಸ್ಪರ್ಧೆದಾರರಾದರೂ ಸಹ ದೇವಾಲಯದಿಂದ 1000 ಮೆ.ಟನ್ ತುಪ್ಪಕ್ಕೆ ಬೇಡಿಕೆ ಇದ್ದರೂ ಸಹ 345 ಮೆಟ್ರಿಕ್ ಟನ್ ನಷ್ಟು ನಂದಿನಿ ತುಪ್ಪವನ್ನು ಪ್ರತಿ ಲೀಟರ್ ಗೆ ರೂ.392/- ಗಳಂತೆ ತಿರುಪತಿ ತಿರುಮಲ ದೇವಸ್ಥಾನಕ್ಕೆ ಸರಬರಾಜು ಮಾಡಿಕೊಡಲಾಗಿರುತ್ತದೆ.
3)ನಂತರ 2020-21 ಹಾಗೂ 2022-23ನೇ ಸಾಲುಗಳಲ್ಲಿ ಟೆಂಡರ್ ಪ್ರಕ್ರಿಯೆ ವೇಳೆ ತೀವೃ ಸ್ಪರ್ಧೆ ಏರ್ಪಟ್ಟ ಕಾರಣ ಒಂದು ಲೀಟರ್ ನಷ್ಟು ನಂದಿನಿ ತುಪ್ಪವೂ ಸಹ ತಿರುಪತಿ ತಿರುಮಲ ದೇವಸ್ಥಾನಕ್ಕೆ ಸರಬರಾಜಾಗಿರುವುದಿಲ್ಲ. ಈ ಎರಡು ವರ್ಷಗಳ ಅವಧಿಯಲ್ಲಿ ತಮ್ಮ ಬಿ.ಜೆ.ಪಿ ಸರ್ಕಾರವೇ ಅಧಿಕಾರದಲ್ಲಿದ್ದಿದ್ದು ಗೊತ್ತಿಲ್ಲವೇ? ಸದರಿ ಅವಧಿಗಳಲ್ಲಿ ತಮ್ಮ ಸರ್ಕಾರವೇ ಇದ್ದು, ಅದು ಹಿಂದೂ ವಿರೋಧಿ ಸರ್ಕಾರವೇ?
4)ನಂದಿನಿ ತುಪ್ಪದ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡುವುದರಿಂದ ನಮ್ಮ ರಾಜ್ಯದ ರೈತಾಪಿ ಬಂಧುಗಳಿಗೆ ನ್ಯಾಯ ದೊರಕಿಸಿದಂತಾಗುವುದೇ?
ಈ ಹಿಂದೆ ಸದರಿ ನಿರ್ಧಾರದ ಕುರಿತು ಚಕ್ರವರ್ತಿ ಸುಲಿಬೇಲೆಯವರು ಟ್ವೀಟ್ ಮಾಡಿ ಇದೊಂದು ಕೆಟ್ಟ ಸುದ್ಧಿ ಎಂದಿದ್ದರು.
ಟ್ವೀಟ್‌ಗಳ ಜಲಕ್‌ನ್ನು ಒಮ್ಮೆ ನೋಡಿ:
0 Comments:
ಕಾಮೆಂಟ್ ಪೋಸ್ಟ್ ಮಾಡಿ