S.S.L.C. ಪರೀಕ್ಷಾ ಪೂರ್ವ ಸಿದ್ಧತಾ ವಿಡಿಯೋ ಕಾನ್ಫರೆನ್ಸ.
High lights:
S.S.L.C. exam preparation process has been initiated by conducting video conference by the department in Karnataka. The exam will be held under the intent of "Complete Education for Life" for the year 2023-24. So there is a need of reformation in the system of exam in Karnataka.
Drone to be used in the exam center.
Opinions of the DD's
Exam center with in the distance of 10 K.M.
Exam Hall should be at first floor of the building.
Appearing exam without shoe
To get quick notification of all our publications kindly join in to following
ಬೆಂಗಳೂರು: ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ, ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಸಮರ್ಪಕ ರೀತಿಯಲ್ಲಿ ನಿರ್ವಹಿಸುವ ಕುರಿತಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಂಗಳೂರು, ಇವರ ಅಧ್ಯಕ್ಷತೆಯಲ್ಲಿ ದಿನಾಂಕ: 01/07/2023 ರಂದು ಬೆಳಿಗ್ಗೆ 11-00 ಗಂಟೆಗೆ ಸಭಾಂಗಣ ಕೊಠಡಿ 642, 6ನೇ ಮಹಡಿ, ಬಹುಮಹಡಿಗಳ ಕಟ್ಟಡ, ಬೆಂಗಳೂರು- ಇಲ್ಲಿ ನಡೆದ ವಿಡಿಯೋ ಸಂವಾದ ಸಭೆಯು ನಡೆಯಿತು.
ವಿಡಿಯೋ ಸಂವಾದ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳ ಹೆಸರು ಮತ್ತು ಪದನಾಮ
- ಶ್ರೀ ರಿತೇಶ್ ಕುಮಾರ್ ಸಿಂಗ್, ಭಾ.ಆ.ಸೇ. ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಬೆಂಗಳೂರು.
- ಶ್ರೀ ಎಸ್. ರಾಮಚಂದ್ರನ್, ಭಾ.ಆ.ಸೇ. ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಮಲ್ಲೇಶ್ವರಂ, ಬೆಂಗಳೂರು,
- ಶ್ರೀಮತಿ ಬಿ.ಬಿ, ಕಾವೇರಿ, ಭಾ.ಅ.ಸೇ.. ರಾಜ್ಯಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು.
- ಶ್ರೀಮತಿ ಸಿಂಧು ರೂಪೇಶ್, ಭಾ.ಆ.ಸೇ., ನಿರ್ದೇಶಕರು. ಪದವಿ ಪೂರ್ವ ಶಿಕ್ಷಣ ಇಲಾಖೆ, 18ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು.
- ಶ್ರೀ ಆನಂದ್' ಪ್ರಕಾಶ್ ಮೀನಾ, ಭಾ.ಆ.ಸೇ., ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಕಲಬುರಗಿ ವಿಭಾಗ, ಕಲಬುರಗಿ
- ಶ್ರೀಮತಿ ಜಯಶ್ರೀ ಶಿಂತ್ರಿ, ಕ.ಆ.ಸೇ. ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಧಾರವಾಡ ವಿಭಾಗ, ಧಾರವಾಡ,
- ಶ್ರೀ ಹೆಚ್.ಎನ್. ಗೋಪಾಲಕೃಷ್ಣ, ನಿರ್ದೇಶಕರು(ಪರೀಕ್ಷೆಗಳು), ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಮಲ್ಲೇಶ್ವರಂ ಬೆಂಗಳೂರು.
- ರಾಜ್ಯದ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು(ಆಡಳಿತ) ಶಾಲಾ ಶಿಕ್ಷಣ ಇಲಾಖೆ,
- ರಾಜ್ಯದ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ,
- ಶ್ರೀ ಪಾಲಾಕ್ಷಪ್ಪ ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ಉತ್ತರ ಜಿಲ್ಲೆ,
- ಶ್ರೀ ಪ್ರಸನ್ನ ಕುಮಾರ, ಉಪನಿರ್ದೇಶಕರು(ಪರೀಕ್ಷೆ), ಪ್ರಭಾರ, ಪದವಿ ಪೂರ್ವ ಶಾಖೆ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಬೆಂಗಳೂರು:
- ಶ್ರೀ ಸ್ವಾಮಿ. ಸಹಾಯಕ ನಿರ್ದೇಶಕರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಮಲ್ಲೇಶ್ವರಂ, ಬೆಂಗಳೂರು.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಿಂದ ಇನ್ನು ಮುಂದೆ ನಡೆಸಲಾಗುವ ಪರೀಕ್ಷೆಗಳ ಸಮರ್ಪಕ ನಿರ್ವಹಣೆ ಕುರಿತಂತೆ ಚರ್ಚಿಸಲು ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದ ಇಲಾಖೆಯ ಎಲ್ಲಾ ಅಧಿಕಾರಿಗಳನ್ನು ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ರವರು ಸಭೆಗೆ ಸ್ವಾಗತಿಸಿ, ಈ ಕೆಳಕಂಡ ಅಂಶಗಳನ್ನು ಚರ್ಚಿಸಿದರು.
1. ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ರವರು ವಿಡಿಯೋ ಸಂವಾದದಲ್ಲಿ ಮಾತನಾಡುತ್ತಾ, ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆಯುವ ಸಂದರ್ಭದಲ್ಲಿ ನಕಲು/ಅವ್ಯವಹಾರಗಳು ಹೆಚ್ಚಾಗಿ ನಡೆಯುತ್ತಿದ್ದು, ಈಗಾಗಲೇ ಈ ಬಾರಿ 38 ಶಿಕ್ಷಕರುಗಳನ್ನು ಅಮಾನತ್ತು ಮಾಡಲಾಗಿದೆ. ಇದು ಅತ್ಯಂತ ನೋವಿನ ಸಂಗತಿಯಾಗಿದ್ದು, ಉತ್ತರ ಕರ್ನಾಟಕದ ಭಾಗದಲ್ಲಿ ಇದು ಅವ್ಯಾಹತವಾಗಿ ನಡೆಯುತ್ತಿರುವುದನ್ನು ಪ್ರಸ್ತಾಪಿಸಿದರು, ತಾಂತ್ರಿಕತೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದ್ದು, ಇದರಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ದೂಷಿಸದೆ, ಮೇಲಿನ ಹಂತದ ಅಧಿಕಾರಿಗಳಾದ ನಾವುಗಳು ಇದರ ಜವಾಬ್ದಾರಿಯನ್ನು ಹೊರಬೇಕಿದೆ. ಎಂದು ತಿಳಿಸಿದರು. ವಿಜಯಪುರ, ಯಾದಗಿರಿ, ಬೆಳಗಾವಿ, ಬೀದರ್, ಚಿಕ್ಕೋಡಿ, ಇತ್ಯಾದಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಕಲು ನಡೆಯುತ್ತಿದೆ. ಪರೀಕ್ಷಾ ಪಾವಿತ್ರ್ಯತೆ ಬಗ್ಗೆ ಈಗಾಗಲೇ ಆಯ್ದ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಇತರರೊಂದಿಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ/ಸಭೆಯನ್ನು ನಡೆಸಿದ್ದೇವೆ. ಪರೀಕ್ಷೆಗಳಲ್ಲಿನ ನಕಲು/ಅವ್ಯವಹಾರದ ಪಿಡುಗನ್ನು ಹೋಗಲಾಡಿಸಲು ತಮ್ಮ ಸಲಹೆ, ಸೂಚನೆಗಳನ್ನು ನೀಡುವಂತೆ ಸಭೆಯಲ್ಲಿ ತಿಳಿಸಿದರು.
2, ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಮಲ್ಲೇಶ್ವರಂ, ಬೆಂಗಳೂರು ರವರು ವಿಡಿಯೋ ಸಂವಾದದಲ್ಲಿ ಮಾತನಾಡುತ್ತಾ, ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಹಂತದ ಪರೀಕ್ಷೆಗಳ ಅಕ್ರಮಗಳನ್ನು ತಡೆಗಟ್ಟುವ ಸಲುವಾಗಿ ಕೆಳಕಂಡ ಅಂಶಗಳು ಸಹಾಯಕವಾಗುತ್ತವೆಂದು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
a) ಪ್ರಶ್ನೆ ಪತ್ರಿಕೆಗಳಲ್ಲಿ ಎ,ಬಿ,ಸಿ,ಡಿ' ವರ್ಷನ್ ಹಾಗೂ ಕ್ಯುಆರ್,ಬಾರ್ ಕೋಡ್ಗಳನ್ನು ಅಳವಡಿಸುವುದು.
b) ವಿದ್ಯಾರ್ಥಿಗಳ ಪೋಷಕರು ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಕಾರ್ಯದಲ್ಲಿ ಭಾಗವಹಿಸದಂತೆ 2023-24ನೇ ಸಾಲಿನಲ್ಲಿ ಕ್ರಮ ಕೈಗೊಳ್ಳುವುದು.
c)ಪರೀಕ್ಷೆಗಳಲ್ಲಿ ನಕಲು/ಆವ್ಯವಹಾರಗಳು ಆಗದಂತೆ ಜಾಗೃತಿ ಕಾರ್ಯಕ್ರಮಗಳನ್ನು ಶಾಲಾ ವರ್ಷದ ಪ್ರಾರಂಭದಲ್ಲಿಯೇ ಆರಂಭಿಸಿ, ಪರೀಕ್ಷಾ ವಿಶ್ಯತೆ: ಬಗ್ಗೆ ವಿದ್ಯಾರ್ಥಿಗಳಿಗೆ ಅಗತ್ಯ ಸಂದೇಶ ರವಾನಿಸುವುದು ಹಾಗೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಜಿಲ್ಲೆಗಳನ್ನು ಪ್ರೋತ್ಸಾಹಿಸಿ ಅಹಿತಕರ ಘಟನೆಗಳು ಆಗದಂತೆ ಮುನ್ನೆಚ್ಚರಿಕೆ ವಹಿಸುವುದು.
d)ಹೆಚ್ಚು ಫಲಿತಾಂಶ ಪಡೆಯುಲು ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರ ಮೇಲೆ ಒತ್ತಡ ಹಾಕದೇ ಫಲಿತಾಂಶ ಹೆಚ್ಚಳಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು.
e) ಹೋಬಳಿ ಮತ್ತು ತಾಲ್ಲೂಕು ಹಂತದಲ್ಲಿ ಹೆಚ್ಚಿನ ಸಾಮರ್ಥ್ಯದ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡುವುದು, ಈ ಪ್ರಕ್ರಿಯೆಯನ್ನು ಆಗಸ್ಟ್ ಮಾಹೆಯಲ್ಲಿ ಪ್ರಾರಂಭಿಸಿ ನವೆಂಬರ್ ಒಳಗೆ ಅಂತಿಮಗೊಳಿಸಿ ವೆಬ್ಸೈಟ್ನಲ್ಲಿ ಪ್ರಕಟಿಸುವುದು. ಪರೀಕ್ಷೆಗಳನ್ನು ನೆಲಮಹಡಿಯಲ್ಲಿ ನಡೆಸದೆ ಮೊದಲನೇ ಮಹಡಿಯಲ್ಲಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವುದು, ಜರಾಕ್ಸ್ ಅಂಗಡಿಗಳನ್ನು ಬೆಳಿಗ್ಗೆಯಿಂದ ಮಧ್ಯಾಹ್ನ ಪರೀಕ್ಷೆ ಮುಕ್ತಾಯದವರೆಗೆ ಮುಚ್ಚಲು ಅಗತ್ಯಕ್ರಮ ವಹಿಸುವುದು.
f)ನೀಟ್ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಿ ಪರೀಕ್ಷಯಲ್ಲಿ ವಿದ್ಯಾರ್ಥಿಗಳು ಶೂಗಳನ್ನು ಧರಿಸದೇ ಪರೀಕ್ಷೆ ಬರೆಯುವ ನಿಟ್ಟಿನಲ್ಲಿ ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸುವುದು.
g) ಪರೀಕ್ಷಾ ಸಂದರ್ಭದಲ್ಲಿ ಮತ್ತು ಫಲಿತಾಂಶದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪೋಷಕರಿಗೆ ಮತ್ತು ಶಿಕ್ಷಕರಿಗೆ ಮಾರ್ಗದರ್ಶನ ನೀಡಲು ಜಿಲ್ಲಾ ಮತ್ತು ತಾಲ್ಲೂಕು ಹಂತಗಳಲ್ಲಿ ಸಹಾಯವಾಣಿ ಆರಂಭಿಸಿ ಸಾರ್ವಜನಿಕರು ದೂರು ನೀಡಿದ್ದಲ್ಲಿ ಅದನ್ನು ಬಹಿರಂಗ ಪಡಿಸದೇ ಅಗತ್ಯ ಕ್ರಮವಹಿಸುವುದು.
h) ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಗ್ರಾಮ ಲೆಕ್ಕಿಗರು, ಪಿ.ಡಿ.ಓ.ರವರನ್ನು ಸೇರಿದಂತೆ ಇತರೆ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳನ್ನು ಸ್ಥಾನಿಕ ಜಾಗೃತ ದಳದ ಅಧಿಕಾರಿಗಳನ್ನಾಗಿ ನೇಮಿಸಿ ಕಾರ್ಯ ನಿರ್ವಹಿಸುವುದು. ಪೊಲೀಸ್ ಠಾಣೆ ವತಿಯಿಂದ ಮಫ್ತಿ ಮೂಲಕ ವಿಡಿಯೋ ರೆಕಾರ್ಡ್ ಮಾಡಲು ಕ್ರಮವಹಿಸಲಾಗುವುದು.
i)ಪರೀಕ್ಷೆಯ ಸಂದರ್ಭಗಳಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಕೊಡು ಮೇಲ್ವಿಚಾರಕರನ್ನಾಗಿ ನೇಮಿಸಿ ಪ್ರೌಢಶಾಲಾ ಶಿಕ್ಷಕರಿಗೆ ಪರೀಕ್ಷಾ ದಿನದಂದು ಡಯಟ್ ಹಂತದಲ್ಲಿ ತರಬೇತಿಗೆ ನಿಯೋಜಿಸುವ ಬಗ್ಗೆ ಯೋಜನೆಯನ್ನು ಸಿದ್ಧಪಡಿಸುವುದು.
j) ಪರೀಕ್ಷಾ ಕೇಂದ್ರಗಳ ಪ್ರತಿ ಕೊಠಡಿಗಳಲ್ಲೂ ಸಿಸಿಟಿವಿ ಮತ್ತು ಡಿವಿಆರ್ ಅಳವಡಿಸಿ ದೃಶ್ಯಾವಳಿಗಳನ್ನು ಡಯಟ್ ಅಧಿಕಾರಿಗಳಿಂದ ಪರಿಶೀಲಿಸುವ ಬಗ್ಗೆ ವ್ಯವಸ್ಥೆ ಮಾಡುವುದು.
k) ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆಪತ್ರಿಕೆ ಬಂಡಲ್ ತೆರೆಯುವುದನ್ನು ಮತ್ತು ಕೊನೆಯಲ್ಲಿ ಸೀಲ್ ಮಾಡುವುದನ್ನು ವೆಬ್ ಕಾಸ್ಟಿಂಗ್ ಮಾಡುವ ಕುರಿತಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು.
l) ಪರೀಕ್ಷಾ ಕಾರ್ಯಗಳಿಗೆ ಅದೇ ಶಾಲೆಯ, ಪ್ರದಸ, ದ್ವಿದಸ, ವಾಟರ್ ಬಾಯ್, ಗ್ರೂಪ್ "ಡಿ" ಹಾಗೂ ಇತರೆ ಸಿಬ್ಬಂದಿಗಳನ್ನು ನೇಮಿಸಿಕೊಳ್ಳದಿರುವ ಬಗ್ಗೆ ಕ್ರಮವಹಿಸುವುದು.
m) ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಬಾಡಿಗೆ ಆಧಾರದ ಮೇಲೆ ಡ್ರೋ ಕ್ಯಾಮೆರಾ ಅಳವಡಿಸಿ ನಕಲು ಅಕ್ರಮಗಳನ್ನು ನಡೆಯದಂತೆ ಮಾಡುವುದು.
n) ಮೌಲ್ಯಮಾಪನ ಪ್ರಕ್ರಿಯೆಯನ್ನು ಸಬಲಗೊಳಿಸಲು ಮೌಲ್ಯಮಾಪಕರಿಗೆ ಜಿಲ್ಲಾ ತರಬೇತಿ ಆಯೋಜಿಸುವುದಲ್ಲದೆ, ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿ ಪರಿಹಾರ ಬೋಧನೆ ಮಾಡುವ ಕುರಿತು “ಕ್ರಿಯಾಯೋಜನೆ" ಸಿದ್ಧಪಡಿಸುವುದು.
3. ಪ್ರಸ್ತುತ 2023-24ನೇ ಸಾಲಿನಿಂದ ಪರೀಕ್ಷಾ ನಕಲು, ಅಕ್ರಮಗಳನ್ನು ತಡೆಗಟ್ಟಲು ಶಾಲಾ ಪ್ರಾರಂಭದಿಂದಲೇ ಕ್ರಮವಹಿಸುವುದಲ್ಲದೆ, ಯಾವ ರೀತಿಯ ಬದಲಾವಣೆ ತರಬೇಕು ಎಂಬ ಬಗ್ಗೆ ಅಗತ್ಯ ಸಲಹೆ, ಸೂಚನೆಗಳನ್ನು ನೀಡುವಂತೆ ಹಾಗೂ ಮೇಲಿನ ಎಲ್ಲಾ ಅಂಶಗಳ ಪ್ರಾತ್ಯಕ್ಷಿಕೆಯ ಅಂಶಗಳನ್ನು ರಾಜ್ಯದ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರುಗಳಿಗೆ ಇ-ಮೇಲ್ ಮಾಡಿ ಆ ನಂತರ “ಕ್ರಿಯಾಯೋಜನೆ" ಸಿದ್ಧಪಡಿಸುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು ಸಭೆಯಲ್ಲಿ ಸೂಚಿಸಿದರು. ಅಲ್ಲದೆ, ತಾಲ್ಲೂಕು ಮತ್ತು ಜಿಲ್ಲಾ ಹಂತದಲ್ಲಿ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳ ಸಭೆಯನ್ನು ಕರೆದು ಪರಿಶೀಲಿಸಲು ತಿಳಿಸಲಾಯಿತು. ಯಾದಗಿರಿ, ಬಿಜಾಪುರ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಪರೀಕ್ಷೆಗಳಲ್ಲಿ ಅಕ್ರಮ ಹಾಗೂ ನಕಲು ಕುರಿತಂತೆ ದೂರುಗಳು ಜಾಸ್ತಿ ಇದ್ದು, ಈ ಜಿಲ್ಲೆಗಳು ವಿಶೇಷ ಗಮನ ಹರಿಸಬೇಕೆಂದು ಸೂಚಿಸಿದರು.
4. ನಂತರ ರಾಜ್ಯದ ವಿವಿಧ ಜಿಲ್ಲೆಗಳ ಉಪನಿರ್ದೇಶಕರಿಂದ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವ ಕುರಿತಂತೆ ಸಲಹೆ, ಸೂಚನೆಗಳನ್ನು ಪಡೆಯಲಾಯಿತು.
(1) ಕಲಬುರ್ಗಿ ಜಿಲ್ಲೆಯ ಉಪನಿರ್ದೇಶಕರು(ಆಡಳಿತ) ರವರು ಮಾತನಾಡುತ್ತಾ, ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರಗಳನ್ನು ತಾಲ್ಲೂಕಿನ ಸರ್ಕಾರಿ ಪದವಿ ಕಾಲೇಜನ್ನು ಆಯ್ಕೆ ಮಾಡಿ ನೆಲ ಮಹಡಿಯಲ್ಲಿ ಪರೀಕ್ಷೆ ನಡೆಸದೆ ಮೊದಲನೇ ಮಹಡಿಯಲ್ಲಿ ಪರೀಕ್ಷೆ ನಡೆಸುವುದು ಸೂಕ್ತ ಎಂದು ಅಭಿಪ್ರಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು ಇದೊಂದು ಉತ್ತಮ ಅಭಿಪ್ರಾಯ ಎಲ್ಲಾ ಜಿಲ್ಲೆಗಳಲ್ಲಿ ಬಿ.ಇ.ಓ ರವರ ಸಭೆ ಕರೆದು ಚರ್ಚಿಸಿ ವರದಿ ನೀಡುವಂತೆ ಸೂಚಿಸಿದರು. ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಕಡಿಮೆ ಮಾಡುವಂತೆ ಸೂಚಿಸಿದರು.
(2) ಮೈಸೂರು ಜಿಲ್ಲೆಯ ನೋಡಲ್ ಅಧಿಕಾರಿಗಳು ಮಾತನಾಡುತ್ತಾ, ಪಿಯುನಲ್ಲಿ ಸಿಸಿಟಿವಿ ಅಳವಡಿಸಿರುವಂತೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲೂ ಸಹ ಸಿಸಿಟಿವಿ ಅಳವಡಿಸಿದಲ್ಲಿ ಪರೀಕ್ಷಾ ನಕಲು ಕಡಿಮೆ ಮಾಡಬಹುದೆಂದು ಅಲ್ಲದೆ ಸಿಟ್ಟಿಂಗ್ ಸ್ಟಾಡ್ ಅಧಿಕಾರಿಗಳನ್ನಾಗಿ ಕಾಲೇಜು ಹಂತದ ಅಧಿಕಾರಿಗಳನ್ನು ನೇಮಿಸಬೇಕು ಹಾಗೂ ಖಾಸಗಿ ಅಭ್ಯರ್ಥಿಗಳಿಗೆ ಪ್ರತ್ಯೇಕ ಕೇಂದ್ರಗಳು ಅವಶ್ಯವಿಲ್ಲವೆಂದು ಅವರನ್ನೂ ಸಹ ರೆಗ್ಯುಲರ್ ವಿದ್ಯಾರ್ಥಿಗಳೊಂದಿಗೆ ಸೇರ್ಪಡೆ ಮಾಡುವುದು ಸೂಕ್ತವೆಂದು ಅಭಿಪ್ರಾಯಿಸಿದರು.
(3) ದಾವಣಗೆರೆ ಜಿಲ್ಲೆಯ ಉಪನಿರ್ದೇಶಕರು(ಆಡಳಿತ) ರವರು ಮಾತನಾಡುತ್ತಾ, ಎಸ್.ಎಸ್.ಎಲ್.ಸಿ. ಪರೀಕ್ಷೆ ಮತ್ತು ಪಿಯು ಮೌಲ್ಯಮಾಪನ ಏಕ ಕಾಲದಲ್ಲಿ ಒಂದೇ ಕೇಂದ್ರಲ್ಲಿ ನಡೆಯುವುದರಿಂದ, ಗೊಂದಲವುಂಟಾಗುತ್ತದೆ. ಜೊತೆಗೆ ಅಗತ್ಯ ಮೂಲಭೂತ ಸೌಕರ್ಯಗಳು ಲಭ್ಯವಾಗುವುದಿಲ್ಲವೆಂದು ಅಭಿಪ್ರಾಯಪಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು, ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಮಂಡಲಿ ಅಧಿಕಾರಿಗಳಿಗೆ ಸೂಚಿಸಿದರು.
(4) ವಿಜಯಪುರ ಜಿಲ್ಲೆಯ ಉಪನಿರ್ದೇಶಕರು(ಆಡಳಿತ) ರವರು ಮಾತನಾಡುತ್ತಾ, ಕ್ಲಸ್ಟರ್ ಹಂತದ ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸುವುದು ಸೂಕ್ತ. ದೊಡ್ಡ ಊರು/ಹೋಬಳಿ ಹಂತದಲ್ಲಿ ಪರೀಕ್ಷೆಗಳನ್ನು ನಡೆಸುವುದು ಸೂಕ್ತ ಎಂದು ಅಭಿಪ್ರಾಯಿಸಿದರು.
(5) ಯಾದಗಿರಿ ಜಿಲ್ಲೆಯ ಉಪನಿರ್ದೇಶಕರು(ಆಡಳಿತ) ರವರು ಮಾತನಾಡುತ್ತಾ, ಸಾಧ್ಯವಾದಷ್ಟು ಪರೀಕ್ಷಾ ಕೇಂದ್ರಗಳನ್ನು ಕಡಿಮೆ ಮಾಡಬೇಕು. ಕೇಂದ್ರಗಳು ಜಾಸ್ತಿಯಾದಲ್ಲಿ ಗಮನಹರಿಸುವುದು. ಕಷ್ಟ. ಸಿ.ಆರ್.ಪಿ. ರವರನ್ನೂ ಸಹ ಸೇರ್ಪಡೆ ಮಾಡುವಂತೆ ತಿಳಿಸಿದರು. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಟ್ಟಿಗೆ ಸಭೆಗಳನ್ನು ನಡೆಸಲಾಗಿದೆ. ಎಂದು ತಿಳಿಸಿದರು.
(6) ಬೀದರ್ ಜಿಲ್ಲೆಯ ಎಸ್.ಎಸ್.ಎಲ್.ಸಿ. ನೋಡಲ್ ಅಧಿಕಾರಿಯಾದ ಶ್ರೀ ಸೈಯದ್ ಫುರಖಾನ ಪಾಷ ರವರು ಜಿಲ್ಲೆಯ ಪರವಾಗಿ ಮಾತನಾಡುತ್ತಾ, ತಮ್ಮ ಜಿಲ್ಲೆಯಲ್ಲಿ ಶಿಕ್ಷಕರು ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿಲ್ಲವೆಂದು ಪ್ರತಿಪಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು ಈ ರೀತಿಯ ಬೇಜವಾಬ್ದಾರಿ ಹೇಳಿಕೆಗಳನ್ನು ಸಭೆಯಲ್ಲಿ ಹೇಳಬಾರದು, ಇವರಿಗೆ ತಕ್ಷಣವೇ "ಕಾರಣ ಕೇಳುವ ನೋಟಿಸ್ ಜಾರಿಮಾಡುವಂತೆ ಸಭೆಯಲ್ಲಿದ್ದ ಆಯುಕ್ತರು. ಶಾಲಾ ಶಿಕ್ಷಣ, ಬೆಂಗಳೂರು, ಇವರಿಗೆ ಸೂಚಿಸಿದರು.
(7) ವಿಜಯನಗರ ಜಿಲ್ಲೆಯ ಉಪನಿರ್ದೇಶಕರು(ಆಡಳಿತ) ರವರು ಸಭೆಯಲ್ಲಿ ಮಾತನಾಡುತ್ತಾ, ಸ್ವತಂತ್ರ ಕೇಂದ್ರಗಳನ್ನು ಕಡಿಮೆ ಮಾಡಿ ಖಾಸಗಿ ಅಭ್ಯರ್ಥಿಗಳನ್ನು ರೆಗ್ಯುಲರ್ ಅಭ್ಯರ್ಥಿಗಳೊಂದಿಗೆ ಸೇರ್ಪಡೆ ಮಾಡಿದಲ್ಲಿ ಪರೀಕ್ಷಾ ನಕಲು ಕಡಿಮೆ ಮಾಡಬಹುದೆಂದು ತಿಳಿಸಿದರು.
(8) ಶಿರಸಿ ಜಿಲ್ಲೆಯ ಉಪನಿರ್ದೇಶಕರು(ಆಡಳಿತ) ರವರು ಮಾತನಾಡುತ್ತಾ, ಕ್ಲಸ್ಟರ್ ಸಂಖ್ಯೆ ಜಾಸ್ತಿ ಇದ್ದು, ಹೋಬಳಿ ಮಟ್ಟದಲ್ಲಿ 8-10 ಶಾಲೆಗಳನ್ನು ಹೊಂದಿಕೆ ಮಾಡಿದಲ್ಲಿ ಮಾತ್ರ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಸ್ಪರ್ಧೆ ಉಂಟಾಗಿ ಮನಸ್ಥಿತಿ ಬದಲಾವಣೆ ಸಾಧ್ಯವೆಂದು ತಿಳಿಸಿದರು.
(9) ಉಡುಪಿ ಜಿಲ್ಲೆಯ ಉಪನಿರ್ದೇಶಕರು(ಆಡಳಿತ) ರವರು ಮಾತನಾಡುತ್ತಾ, ವಿದ್ಯಾರ್ಥಿಗಳನ್ನು ಸರಿದಾರಿಯಲ್ಲಿ. ಶಾಲಾ ಪ್ರಾರಂಭದ ಹಂತದಲ್ಲಿಯೇ ತಯಾರಿ ಮಾಡಿಕೊಂಡಲ್ಲಿ ಪರೀಕ್ಷಾ ಸುಧಾರಣೆ ಸಾಧ್ಯವೆಂದು ಅಭಿಪ್ರಾಯಿಸಿದರು. ಮಾಡಿ ಪೂರ್ವಸಿದ್ಧತೆ ಶಿಕ್ಷಕರು ಹಾಗೂ ಪೋಷಕರ ಮನಸ್ಥಿತಿಯನ್ನು ಬದಲಾಯಿಸುವಲ್ಲಿ ಅಗತ್ಯ ಮಾರ್ಗದರ್ಶನ ನೀಡುವುದು ಅಗತ್ಯವೆಂದು ತಿಳಿಸಿದರು. ಇದಕ್ಕೆ ಉದಾಹರಣೆಯನ್ನು ನೀಡುತ್ತಾ ದಿನಾಂಕ:29/6/2023 ರಂದು ಬಕ್ರೀದ್ ಹಬ್ಬದ ರಜಾ ದಿನದಂದು ತಮ್ಮ ಜಿಲ್ಲೆಯ ಒಂದು ಶಾಲೆಯಲ್ಲಿ ಗಣಿತ ಬೋಧನೆ ಮಾಡುವ ಶಿಕ್ಷಕರು ವಿಶೇಷ ತರಗತಿಯನ್ನು ನಡೆಸಿ ಗಣಿತ ವಿಷಯದಲ್ಲಿ ವಿದ್ಯಾರ್ಥಿಗಳ ಕಲಿಕಾ ಆಸಕ್ತಿ ಹಾಗೂ ಕಾರ್ಯನಿರ್ವಹಣೆ ಸಮರ್ಪಕವಾಗಿಲ್ಲದಿರುವುದನ್ನು ಗಮನಿಸಿ ವಿಶೇಷ ಕಾಳಜಿ ವಹಿಸಿದುವುದನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.
(10) ಗದಗ ಜಿಲ್ಲೆಯ ಉಪನಿರ್ದೇಶಕರು(ಆಡಳಿತ) ರವರು ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರನ್ನು ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸುವುದು ಸ್ವಾಗತಾರ್ಹ. ಪಾಥಮಿಕ ಶಾಲಾ ಮತ್ತು ಡಿಗ್ರಿ ಕಾಲೇಜುಗಳನ್ನು ಪರೀಕ್ಷಾ ಕೇಂದ್ರಗಳನ್ನಾಗಿ ಗುರುತಿಸುವುದು ಮತ್ತು ಖಾಸಗಿ ಪರೀಕ್ಷಾ ಕೇಂದ್ರಗಳನ್ನು ಪ್ರತ್ಯೇಕವಾಗಿ ರಚಿಸಬಾರದು ಎಂದು ಅಭಿಪ್ರಾಯಪಟ್ಟರು.
(11) ಬೆಂಗಳೂರು ದಕ್ಷಿಣ ಜಿಲ್ಲೆಯ ಉಪನಿರ್ದೇಶಕರು(ಆಡಳಿತ) ರವರು ಮಾತನಾಡುತ್ತಾ, ಪರೀಕ್ಷಾ ಕೇಂದ್ರಗಳಿರುವ ಶಾಲೆಗಳ ಖಾಸಗಿ ಆಡಳಿತ ಮಂಡಳಿಗಳ ಸಹಕಾರದಿಂದಾಗಿ ಜಿಲ್ಲೆಯಲ್ಲಿ ಯಾವುದೇ ಪರೀಕ್ಷಾ ಅಕ್ರಮಗಳಿಲ್ಲದೆ ಪರೀಕ್ಷೆಯನ್ನು ವ್ಯವಸ್ಥಿತವಾಗಿ ಮತ್ತು ಪಾರದರ್ಶಕವಾಗಿ ನಡೆಸಲಾಗಿರುತ್ತದೆ. ಇದಕ್ಕೆ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು ಪ್ರತಿಕ್ರಿಯಿಸುತ್ತಾ, ಬೆಂಗಳೂರಿನಲ್ಲಿ ಮಾಧ್ಯಮಗಳ ಭಯದಿಂದಾಗಿ ನಕಲು ನಡೆದಿರುವುದಿಲ್ಲ ಎಂದು ತಿಳಿಸಿದರು.
5. ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆಮತ್ತು ಮೌಲ್ಯನಿರ್ಣಯ ಮಂಡಲಿ, ರವರು ಕ್ಲಸ್ಟರ್ ಹಂತದಲ್ಲಿ ಪರೀಕ್ಷಾ ಕೇಂದ್ರಗಳನ್ನು ರಚಿಸಿ ಪರೀಕ್ಷೆ ನಡೆಸುವ ಕುರಿತು ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು ಯಾವುದೇ ವಿದ್ಯಾರ್ಥಿಯು ಪರೀಕ್ಷೆ ಬರೆಯಲು 10 ಕಿಮೀ ವ್ಯಾಪ್ತಿಯೊಳಗೆ ಪರೀಕ್ಷಾ ಕೇಂದ್ರಗಳನ್ನು ರಚಿಸಬೇಕು. ಇದಕ್ಕೆ ಜಿಪಿಎಸ್ ವ್ಯವಸ್ಥೆಯನ್ನು ಬಳಸಿ, ಅಗತ್ಯ ಕ್ರಮವಹಿಸಲು ಸೂಚಿಸಿದರು. ಬೆಳಗಾವಿ ಮತ್ತು ಕಲಬುರ್ಗಿ ವಿಭಾಗದಲ್ಲಿ ದೂರುಗಳು/ಅಕ್ರಮಗಳು ಜಾಸ್ತಿ ಇದ್ದು, ಶೈಕ್ಷಣಿಕವಾಗಿ ಹಿಂದುಳಿದಿರುವುದರಿಂದ ಈ ವಿಭಾಗಗಳಿಗೆ ಹೆಚ್ಚಿನ ಗಮನಹರಿಸುವುದು ಅಗತ್ಯವೆಂದು ಸಭೆಯಲ್ಲಿ ಸೂಚ್ಯವಾಗಿ ತಿಳಿಸಿದರು.
6. ನಂತರ ಪದವಿ ಪೂರ್ವ ಪರೀಕ್ಷೆಯ ಆಕ್ರಮಗಳ ಕುರಿತಂತೆ ಸುಧಾರಣೆಗಳಿದ್ದಲ್ಲಿ ತಿಳಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಪದವಿ ಪೂರ್ವ ಮಟ್ಟದಲ್ಲಿ ನಕಲು ಮಾಡುವ ಪದ್ಧತಿ ಹೆಚ್ಚಿನ ಪ್ರಮಾಣದಲ್ಲಿ ಇಲ್ಲದಿರುವುದನ್ನು ಸಭೆಯ ಗಮನಕ್ಕೆ ತಂದರು. ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ರವರು ಮಾತನಾಡುತ್ತಾ, ಉಪನ್ಯಾಸಕರು ಹಾಗೂ ಶಿಕ್ಷಕರ ಜೊತೆ ಈ ಬಗ್ಗೆ ಜಿಲ್ಲೆಗಳಲ್ಲಿ ಮಾತನಾಡಿ ಪರೀಕ್ಷಾ ಆಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ “ಕ್ರಿಯಾಯೋಜನೆ" ಸಿದ್ಧಪಡಿಸಿ ಅದನ್ನು ಕಾರ್ಯರೂಪಕ್ಕೆ ತರುವುದು ಅಗತ್ಯವೆಂದು ತಿಳಿಸಿದರು. ಜಿಲ್ಲೆಗಳಲ್ಲಿನ ಉತ್ತಮ ಆಚರಣೆ/ಬೆಳವಣಿಗೆಗಳನ್ನು ಪಟ್ಟಿ ಮಾಡಿ ಅವುಗಳ ಅನುಷ್ಠಾನಕ್ಕೆ ಪ್ರಯತ್ನಿಸಬೇಕಿದೆ ಎಂದು ಸಭೆಗೆ ತಿಳಿಸಿದರು.
7, ಕಲಬುರ್ಗಿ ಜಿಲ್ಲೆಯ ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ರವರು ಮಾತನಾಡುತ್ತಾ, ಜಿಲ್ಲೆಯಲ್ಲಿ ಪಿಯು ಪರೀಕ್ಷೆಗಳು ಸುಸೂತ್ರವಾಗಿ ನಡೆಯುತ್ತಿವೆ. ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಸಹ ಆ ನಿಟ್ಟಿನಲ್ಲಿ ನಡೆಯಬೇಕೆಂದು ತಿಳಿಸಿದರು. ಪರೀಕ್ಷಾ ನಕಲು ಮಾಡದಿರುವಂತೆ ವಿದ್ಯಾರ್ಥಿಗಳ ಹೃದಯ ಪರಿವರ್ತನೆ ಅಗತ್ಯವೆಂದು ಪ್ರತಿಪಾದಿಸಿದರು.
8. ಮೈಸೂರು ಜಿಲ್ಲೆಯ ನೋಡಲ್ ಅಧಿಕಾರಿಗಳು ಮಾತನಾಡುತ್ತಾ, ಗ್ರಾಮೀಣ ಪ್ರದೇಶದಲ್ಲಿ ಪರೀಕ್ಷಾ ಅಕ್ರಮ ಜಾಸ್ತಿ ಇದ್ದು, ನಗರ ಪ್ರದೇಶ/ಕಾರ್ಪೊರೇಟ್ ಪ್ರದೇಶಗಳಲ್ಲಿ ಕಡಿಮೆ ಇರುತ್ತದೆ, ಇದಕ್ಕಾಗಿ ಪ್ರಾರಂಭದಲ್ಲಿಯೇ ಈ ನಿಟ್ಟಿನಲ್ಲಿ ಕ್ರಮವಹಿಸಿ ವಿದ್ಯಾರ್ಥಿಗಳ ಕಲಿಕ ಪ್ರಗತಿ ಪರಿಶೀಲಿಸಿ, ಕಲಿಕೆಯ ಸುಧಾರಣೆಗೆ ಕ್ರಮಕೈಗೊಳ್ಳಬೇಕಿದೆ. ಮತ್ತು ಪ್ರಾಥಮಿಕ ತರಗತಿಗಳ ಹಂತದಿಂದಲೇ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ವಿದ್ಯಾರ್ಥಿಗಳು ಮತ್ತು ಶಿಕ್ಷಕರುಗಳಿಗೆ ಜಾಗೃತಿ ಮೂಡಿಸಬೇಕಿದೆ ಎಂದು ಸಭೆಗೆ ತಿಳಿಸಿದರು.
9. ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು ಮಾತನಾಡಿ, ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಪಾರದರ್ಶಕವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲು ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ರವರು, ಜಿಲ್ಲಾ ಹಂತದಲ್ಲಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳ ಸಭೆಯನ್ನು ಆಯೋಜಿಸಿ “ಕ್ರಿಯಾಯೋಜನೆ” ಸಿದ್ಧಪಡಿಸಲು ಕ್ರಮವಹಿಸುವಂತೆ ಸೂಚಿಸಿದರು.
10, ಜಿಲ್ಲಾ ಉಪನಿರ್ದೇಶಕರು(ಆಡಳಿತ), ಶಾಲಾ ಶಿಕ್ಷಣ ಇಲಾಖೆ ಭವರು, ಆಯಾ ಜಿಲ್ಲಾ ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಭೆಯನ್ನು ಆಯೋಜಿಸಿ, ಪರೀಕ್ಷೆಯಲ್ಲಿ ನಕಲು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕ್ರಿಯಾಯೋಜನೆಯನ್ನು ಸಿದ್ಧಪಡಿಸಲು ಸೂಚಿಸಿದರು. ಪ್ರತಿ ಎರಡು ತಿಂಗಳಿಗೊಮ್ಮೆ ಈ ರೀತಿಯ ಸಭೆಯನ್ನು ಕರೆಯಲಾಗುವುದಲ್ಲದೆ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತರಲಾಗುವುದೆಂದು ತಿಳಿಸಿದರು. “ಜೀವನಕ್ಕಾಗಿ ಸಂಪೂರ್ಣ ಶಿಕ್ಷಣ" ಎಂಬ ಆಶಯದಂತೆ ಪರೀಕ್ಷಾ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆ ತರುವಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು ಸೂಚಿಸಿದರು.
ನಂತರ ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಇವರ ವಂದನಾರ್ಪಣೆಯೊಂದಿಗೆ ವಿಡಿಯೋ ಸಂವಾದ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
0 Comments:
ಕಾಮೆಂಟ್ ಪೋಸ್ಟ್ ಮಾಡಿ