ಶುದ್ಧ ಕುಡಿಯುವ ನೀರು ಇಂದು ಎಲ್ಲರಿಗೂ ಬೇಕೇ ಬೇಕು. ಅಶುದ್ಧ ನೀರಿನಿಂದಾಗಿ ಅನೇಕ ಖಾಯಿಲೆಗಳ ಬಂದು ನಮ್ಮನ್ನ ಕಾಡುತ್ತವೆ. ಉತ್ತಮ ಆರೋಗ್ಯಕರ ಜೀವನಕ್ಕಾಗಿ ಶುದ್ಧ ನೀರಿನ ಅವಶ್ಯಕತೆ ಇದ್ದೇ ಇದೆ. ಮನೆಗೆ ಬಂದು ತಲುಪುವ ನಳದ ನೀರಿನ ಶುದ್ಧತೆಯ ಪ್ರಶ್ನೆ ನಮ್ಮನ್ನ ಕಾಡುತ್ತದೆ. ಎಷ್ಠೋ ಜನರು ಅಸಹಾಯಕರಾಗಿಯೇ ಬಂದ ನೀರನ್ನೇ ಕುಡಿದು ಜೀವನ ನಡೆಸುತ್ತಾರೆ. ಕೆಲವರಿಗಂತೂ ನೀರನ್ನ ಶುದ್ಧಮಾಡುವ ಪ್ರಕ್ರಿಯೆಗಳೇ ತಿಳಿದಿರುವುದಿಲ್ಲ. ನೀರಿನ ಅಶುದ್ಧತೆಯ ಆಧಾರದ ಮೇಲೆ ಬೇರೆ ಬೇರೆ ಹಂತದ ಜೀರಿನ ಫಿಲ್ಟರ್ಗಳನ್ನ ಮನೆಯಲ್ಲಿ ಇನ್ಸ್ಟಾಲ್ ಮಾಡಿಕೊಂಡರೆ ಸಾಕು, ಶುದ್ಧ ಕುಡಿಯುವ ನೀರು ನಮಗೆ ದೊರೆಯುತ್ತದೆ. ಹಾಗಾದರೆ ಅಂತಹ ಫಿಲ್ಟರ್ ಯಾವುದು? ನಿಮಗೆ ಸೂಕ್ತವಾದದ್ದು ಯಾವುದು? ತಿಳಿಯಬೇಕೆಂದರೆ ಈ ಲೇಖನ ಓದಿ.
ನಿಮ್ಮ ಮನೆಗೆ ಉತ್ತಮವಾದ ವಾಟರ್ ಫಿಲ್ಟರ್ ಅನ್ನು ಹುಡುಕಲು ನೀವು ಅನ್ವೇಷಣೆಯಲ್ಲಿದ್ದರೆ, ಲಭ್ಯವಿರುವ ಹಲವು ಆಯ್ಕೆಗಳೊಂದಿಗೆ, ಪರಿಪೂರ್ಣ ನೀರಿನ ಫಿಲ್ಟರ್ ಅನ್ನು ಆಯ್ಕೆ ಮಾಡುವುದು ದೊಡ್ಡ ಪ್ರಕ್ರಿಯೆಯಂತೆ ತೋರುತ್ತದೆ. ಅದೇನು ಅಂತಹ ಕಷ್ಟದ್ದೇನಲ್ಲ, ಏಕೆಂದರೆ ನಿಮ್ಮ ಕುಟುಂಬಕ್ಕೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಜ್ಞಾನವನ್ನು ಹೊಂದಲು ಹಾಗೇ ಸರಿಯಾದ ಫಿಲ್ಟರ್ನ್ನು ಆಯ್ಕೆ ಮಾಡುವ ನಿರ್ಧಾರವನ್ನು ಮಾಡಲು ನಿಮಗೆ ಸಹಾಯ ಮಾಡಲು ನಾವು ಅತ್ಯುತ್ತಮ ಫಿಲ್ಟರ್ಗಳ ಯಾದಿಯನ್ನೇ ಮಾಡಿದ್ದೇವೆ. ಮತ್ತು ಅದು ನಿಮ್ಮ ಮನೆಗೆ ಸರಿಹೊಂದುತ್ತದೆಯೋ ಎನ್ನುವುದನ್ನ ಹೇಳುತ್ತೇವೆ.
ನಿಮಗೆ ಉತ್ತಮ ವಾಟರ್ ಫಿಲ್ಟರ್ ಏಕೆ ಬೇಕು?
ಮೊದಲಾದರೋ ಮಾನವ ನೀರಿರುವ ಕಡೆ ಹೋಗಿ ವಾಸ್ತವ್ಯ ಮಾಡುತ್ತಿದ್ದ. ಇದ್ದ ಜನಸಂಖ್ಯೆಯೂ ಕಡಿಮೆ ಇತ್ತು. ನೀರಿನ ಬಳಕೆಯೂ ಕಮ್ಮಿ ಇತ್ತು. ಆದರೆ ಈಗ ಹಾಗಲ್ಲ ಮಾನವನ ವಸತಿ ಇರುವ ಕಡೆಯಲ್ಲೆಲ್ಲಾ ನೀರಿನ ಪೂರೈಕೆಯನ್ನು ಆಡಳಿತ ವ್ಯವಸ್ಥೆ ಮಾಡಿಕೊಡುತ್ತದೆ. ಹಾಗೆ ಪೂರೈಕೆಯಾಗುವ ನೀರಿನ ಗುಣಮಟ್ಟದ ಬಗ್ಗೆ ನಂಬಿಕೆಯೂ ಕಡಿಮೆಯೆ. ಆದರೂ ಒಂದು ವಿಶ್ವಾಸದ ಮೇಲೆ ನೀರಿನ ಬಳಕೆ ನಡೆಯುತ್ತಿರುತ್ತದೆ. ನಮ್ಮ ಮನೆಯನ್ನು ಉತ್ತಮ ಗುಣಮಟ್ಟದ ಕುಡಿಯುವ ನೀರಿನ ಪ್ರವೇಶವನ್ನು ಹೊಂದಿರುವ ಕಡೆ ಕಟ್ಟಿಸುವ ಮಾತು ನಿಲುಕದ್ದಾಗಿರುತ್ತದೆ.
ಮಾಲಿನ್ಯಕಾರಕಗಳು ಮತ್ತು ಕಲ್ಮಶಗಳು ನಿಮ್ಮ ಮನೆಯ ನಳದ ಅಥವಾ ಪೈಪಿನ ಉದ್ದಕ್ಕೂ ಅಡಗಿಕೊಳ್ಳಬಹುದು. ಈ ರೀತಿಯ ಕಲುಷಿತ ನೀರು, ರುಚಿ, ವಾಸನೆ ಮತ್ತು ಮುಖ್ಯವಾಗಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಸಂದರ್ಭಗಳಲ್ಲಿಯೇ ನೀರಿನ ಫಿಲ್ಟರ್ ಉಪಯೋಗಕ್ಕೆ ಬರುತ್ತದೆ. ಕ್ಲೋರಿನ್, ಸೀಸ, ಬ್ಯಾಕ್ಟೀರಿಯಾ ಮತ್ತು ಹೆಚ್ಚಿನವುಗಳಂತಹ ಹಾನಿಕಾರಕ ಪದಾರ್ಥಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕುವ ಮೂಲಕ, ಈ ಫಿಲ್ಟರ್ಗಳು ನಿಮಗೆ ನೆಮ್ಮದಿ ಮತ್ತು ಆರೋಗ್ಯವನ್ನು ಫ್ರೆಶ್ ಗ್ಲಾಸ್ ನೀರನ್ನು ಒದಗಿಸುವ ಮೂಲಕ ನೀಡುತ್ತದೆ..
ಅತ್ಯುತ್ತಮ ನೀರಿನ ಫಿಲ್ಟರ್ಗಳಿಂದ ಸೋಸಲ್ಪಡುವ ಮಾಲಿನ್ಯಕಾರಕಗಳ ವಿಧಗಳು
ನೀರಿನ ಫಿಲ್ಟರ್ಗಳನ್ನು, ಕುಡಿಯುವ ನೀರಿನ ಗುಣಮಟ್ಟವನ್ನು ಬಳಸಲು ಮತ್ತು ಕುಡಿಯಲು ಯೋಗ್ಯವನ್ನಾಗಿ ಮಾಡಲು ವಿನ್ಯಾಸಗೊಳಿಸಲಾಗಿದೆ. ಬ್ಯಾಕ್ಟೀರಿಯಾ ಮತ್ತು ವೈರಸ್ಗಳಂತಹ ಜೈವಿಕ ಮಾಲಿನ್ಯಕಾರಕಗಳು, ಕೀಟನಾಶಕಗಳು ಮತ್ತು ಲೋಹಗಳಂತಹ ರಾಸಾಯನಿಕ ಮಾಲಿನ್ಯಕಾರಕಗಳವರೆಗೆ, ಈ ಫಿಲ್ಟರ್ಗಳು ಎಲ್ಲವನ್ನೂ ಸೋಸಿ ಶುದ್ಧ ನೀರನ್ನ ನಿಮಗೆ ನೀಡಲು ಸಜ್ಜುಗೊಂಡಿವೆ. ವಿಜ್ಞಾನಿಗಳ ಸಂಶೋಧನೆಯು ನಿಮಗೆ ಶುದ್ಧವಾದ, ತಾಜಾ ನೀರನ್ನು ಒದಗಿಸಲು ಖಂಡಿತವಾಗಿಯೂ ಸಹಾಯ ಮಾಡುತ್ತದೆ.
ಫಿಲ್ಟರ್ಗಳಲ್ಲಿನ ವಿಧಗಳು ಯಾವುವು?
ಅತ್ಯುತ್ತಮ ನೀರಿನ ಫಿಲ್ಟರ್ಗಳ ವಿಷಯಕ್ಕೆ ಬಂದಾಗ, ನೀವು ಆಯ್ಕೆ ಮಾಡಲು ಹಲವಾರು ನಿಮ್ಮ ಮುಂದೆ ಫಿಲ್ಟರ್ಗಳ ಶ್ರೇಣಿಯೇ ಇದೆ. ಪ್ರತಿಯೊಂದೂ ಅದರ ವಿಶಿಷ್ಟ ಸಾಮರ್ಥ್ಯಗಳೊಂದಿಗೆ ಬೇರೆ ಬೇರೆ ಕಡೆ ಬೇರೆ ಬೇರೆ ನೀರಿನ ಕಲ್ಮಶಗಳನ್ನ ತೆಗೆಯಲು ಸಿದ್ಧಮಾಡಿದ್ದಾರೆ. ಅವುಗಳನ್ನು ಈ ಕೆಳಗೆ ಚರ್ಚಿಸೋಣ
|
ಇಂಗಾಲದ ಶೋಧಕ (Carbon Filter) ಫಿಲ್ಟರ್ಗಳು
ನೀರಿನಲ್ಲಿ ಹುದುಗಿರುವ ಕ್ಲೋರಿನ್, ಕೆಸರು ಮತ್ತು ಅಹಿತಕರ ವಾಸನೆಯನ್ನು ತೆಗೆದುಹಾಕುವ ಸಲುವಾಗಿ ತಯಾರಿಸಲಾದ ಫಿಲ್ಟರ್ಗಳು ಇವು. ಇವುಗಳು ಸಾಮಾನ್ಯವಾಗಿ ಪ್ರತಿ ಮನೆಗಳಲ್ಲಿ ಕಂಡುಬರುತ್ತಿತ್ತು. ಅದು ನೀರಿನ ಮೂಲ ರುಚಿಯನ್ನು ಮತ್ತು ವಾಸನೆಯನ್ನು ಉಳಿಯುವ ಹಾಗೆ ಮಾಡುತ್ತದೆ. ಇಂಗಾಲದ ಶೋಧಕಗಳನ್ನು ಚಿಕ್ಕವಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಅದರ ಶೋಧನ ಸಾಮರ್ಥ್ಯ ಕಡಿಮೆಯಾದಂತೆ ಕ್ಯಾಂಡಲ್ನ್ನು ಬದಲಾಯಿಸಬೇಕಾಗುತ್ತದೆ. ಆದರೆ ಈಗ ಇದರ ಬಳಕೆ, ಮಾರಾಟ ತುಂಬಾ ಕಡಿಮೆಯಾಗಿದೆ. ಇದರ ವೈಶಿಷ್ಟ್ಯಗಳನ್ನ ಉಳಿದ ಫಿಲ್ಟರ್‌ಗಳ ಜೊತೆ ಸಮ್ಮಿಳಿತಗೊಳಿಸಿದ ಕಾರಣ ಈ ಫಿಲ್ಟರ್‌ಗಳ ಬೇಡಿಕೆ ತುಸು ಇಳಿದಿದೆ. ಇದರಲ್ಲಿ ಫಿಲ್ಟರ್ ಆದ ನೀರು ಯಾವುದೇ ರೀತಿಯಿಂದ ಹಾನಿಕಾರಕವಲ್ಲ.
ರಿವರ್ಸ್ ಆಸ್ಮೋಸಿಸ್ (RO) ಫಿಲ್ಟರ್ಗಳು:
![]() |
![]() |
![]() |
ಸಧ್ಯಕ್ಕೆ ಇದು ಜಲ ಶೋಧಕದ ಪರಾಕಾಷ್ಠೆಯನ್ನು ತಲುಪಿದ ಸಂಶೋಧನೆ. ಫಿಲ್ಟರ್ ಬೇಕೆಂದು ಬಯಸುವವರಿಗೆ, ರಿವರ್ಸ್ ಆಸ್ಮೋಸಿಸ್ ಫಿಲ್ಟರ್ಗಳು ಉತ್ತಮ ಆಯ್ಕೆ ಎನ್ನಬಹುದು. ಈ ಫಿಲ್ಟರ್ಗಳು ತೀರಾ ಗಡಸು ನೀರನ್ನು ಸೋಸಿ ಮೆದು ನೀರನ್ನಾಗಿ ಬಳಸಲು ನೀಡುತ್ತದೆ. ಸಾಮಾನ್ಯ ಒತ್ತಡದಲ್ಲಿ ನೀರು ಪ್ರವೇಶಿಸಲು ಸಾಧ್ಯವಾಗದ ತೆಳು ಪದರಗಳ ಸುತ್ತನ್ನು ಬಳಸಿಕೊಂಡು ನೀರಿನ ಮೇಲೆ ಒತ್ತಡವನ್ನು ಹಾಕುವ ಮೂಲಕ ಅತ್ಯಂತ ಚಿಕ್ಕ ಚಿಕ್ಕ ಮಾಲಿನ್ಯಕಾರಕಗಳನ್ನು ಹೊರ ಹಾಕಿ ಶುದ್ಧ ನೀರನ್ನ ಬಳಸಲು ನೀಡುವ ತಂತ್ರಜ್ಞಾನ ಇದು. ಇದರಲ್ಲಿ ಕಾರ್ಬನ್ ಫಿಲ್ಟರ್ ಮತ್ತು ಕಣಗಳ ಶೋಧಕವನ್ನು ಬಳಸುವುದರಿಂದ ನೀರನ್ನು ಶುದ್ಧವಾಗಿಡುತ್ತದೆ. ಇದರಲ್ಲಿ 50% ಶುದ್ಧ ನೀರು ಹಾಗು 50% ನೀರು ವೇಸ್ಟೇಜ್ ಎಂದು ಪರಿಗಣಿಸಲಾಗುತ್ತದೆ. ಇದು ಸುಮ್ಮನೆ ಹೊರಗೆ ಹರಿಯುತ್ತದೆ. ಹೊರಗೆ ಹರಿಯುವ ನೀರನ್ನ ಮರು ಬಳಸಲು ಸಲಹೆ ನೀಡುವುದಿಲ್ಲ. ಇದರಲ್ಲಿ ಕಾಲಕಾಲಕ್ಕೆ ಫಿಲ್ಟರ್ಗಳ ಕ್ಯಾಂಡಲ್ಗಳನ್ನ ಬದಲಾಯಿಸಿ ನಿರ್ವಹಣೆ ಮಾಡಬೇಕಾಗುತ್ತದೆ. ಈ ಫಿಲ್ಟರನ್ನ ಅನೇಕರು ಬಳಸುತ್ತಿದ್ದು, ಅನೇಕ ವಿವಾದಕ್ಕೂ ಕಾರಣವಾಗಿದೆ. ಇದರ ಬಗ್ಗೆ ಪ್ರಶ್ನೆಗಳು ಅನೇಕ ಇವೆ. ಆದರೂ ಈಗ ಇದರ ಜೊತೆಗೆ ತಾಮ್ರ ಮತ್ತು ಝಿಂಕ್ ಫಿಲ್ಟರೇಷನ್ ಜೋಡಿಸಿರುವುದರಿಂದ ನೀರು ಉತ್ತಮವಾಗಿದ್ದು ಸುಳ್ಳಲ್ಲ
ಯುವಿ(Ultra Violet) ಫಿಲ್ಟರ್ಗಳು:
![]() |
![]() |
UV ಫಿಲ್ಟರ್ಗಳು, ನೇರಳಾತೀತ ಬೆಳಕಿನ ಶಕ್ತಿಯನ್ನು ಬಳಸಿಕೊಂಡು ನೀರಿನಲ್ಲಿರಬಹುದಾದ ಹಾನಿಕಾರಕ ಸೂಕ್ಷ್ಮಾಣುಜೀವಿಗಳನ್ನು ತಟಸ್ಥಗೊಳಿಸಿ ನೀರನ್ನ ಬಳಕೆಗೆ ನೀಡುತ್ತವೆ. ಇದರಲ್ಲಿ ಕಾರ್ಬನ್ ಫಿಲ್ಟರ್ ಮತ್ತು ಕಣಗಳ ಶೋಧಕವನ್ನು ಬಳಸುವುದರಿಂದ ನೀರನ್ನು ಶುದ್ಧವಾಗಿಡುವುದು ಮಾತ್ರವಲ್ಲದೆ ಇರಬಹುದಾದ ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ವೈರಸ್ಗಳಿಂದ ನೀರು ಮುಕ್ತವಾಗಿರುವುದನ್ನು ಖಚಿತಪಡಿಸುತ್ತದೆ. ಇದರಲ್ಲಿ ನೀರು ವೇಸ್ಟೇಜ್ ಎಂದು ಇರುವುದಿಲ್ಲ. ಕಾಲಕಾಲಕ್ಕೆ ಫಿಲ್ಟರ್ ಕ್ಯಾಂಡಲ್ಗಳನ್ನು ಬದಲಾಯಿಸುತ್ತಲೇ ಇರಬೇಕಾಗುತ್ತದೆ.
ಗುರುತ್ವ ಫಿಲ್ಟರ್ಗಳು (Gravitational Filters):
ಇದು ಯಾವುದೇ ವಿದ್ಯುತ್‌ನ್ನು ಬಳಸದೇ ನೀರನ್ನ ಅದರದೇ ವೇಗದಲ್ಲಿ ನಿಧಾನವಾಗಿ ಗುರುತ್ವ ಶಕ್ತಿಯನ್ನ ಬಳಸಿಕೊಂಡು, ನೀರನ್ನು ಶೋಧಿಸಲು ಅನುವು ಮಾಡಿಕೊಡುವ ತಂತ್ರ. ಇದರಲ್ಲಿ ಮೇಲಿನ ವಿಭಾಗದಲ್ಲಿ ನೀರನ್ನ ತುಂಬಿಸಲಾಗುತ್ತದೆ. ಅದೇ ಮೇಲಿನ ವಿಭಾಗದಲ್ಲಿ ಫಿಲ್ಟರ್ ಕ್ಯಾಂಡಲ್‌ನ್ನು ಸೇರಿಸಿರಲಾಗುತ್ತದೆ. ಆ ಕ್ಯಾಂಡಲ್ ಮೂಲಕ ನೀರು ಸೋಸಿಕೊಂಡು ಕೆಳಗಿನ ಸಂಗ್ರಾಹಕದಲ್ಲಿ ಬಂದು ಬಿದ್ದು ಸಂಗ್ರಹವಾಗುತ್ತದೆ. ಇದರಲ್ಲೂ ಬೇರೆ ಬೇರೆ ರೀತಿಯ ಫಿಲ್ಟರ್ಗಳನ್ನ ಕಾಣಬಹುದು. ಇದನ್ನ ಯಾವುದೇ ಜಾಗಕ್ಕೂ ಕೂಡಾ ಆರಾಮವಾಗಿ ಕೊಂಡೊಯ್ಯಬಹುದು. ಆದರೆ ನೀರಿನಲ್ಲಿರುವ ಅತೀಸೂಕ್ಷ್ಮ ಲೋಹಕಾರಕಗಳನ್ನ ಸೋಸಲಾಗುವುದಿಲ್ಲ. ಮೆದು ನೀರನ್ನ ಸೋಸಲು ಅನುಕೂಲಕರವೇ ಹೊರತು ಗಡಸು ನೀರನ್ನಲ್ಲ. ಇದರ ಒಂದು ವಿಧದಲ್ಲಿ ಕ್ಯಾಂಡಲ್ಗಳನ್ನ ಜಾಗರೂಕತೆಯಿಂದ ತೊಳೆದು ಮರು ಬಳಸಬಹುದು, ಮತ್ತೊಂದು ವಿಧದಲ್ಲಿ ನಿರ್ವಹಾಣಾ ವೆಚ್ಚ ಇರುತ್ತದೆ. ಕೆಂಟ್ ಬ್ರ್ಯಾಂಡಿನವರು ಇದರಲ್ಲಿ ಎಂತಹ ಕೊಳೆ ನೀರನ್ನು ಹಾಕಿದರೂ ಶುದ್ಧ ನೀರನ್ನ ಕೊಡುತ್ತೇವೆ ಎಂದು ಕ್ಲೇಮ್ ಮಾಡುತ್ತಾರೆ.
ಅಯಾನು ವಿನಿಮಯ (Ion exchange Filter) ಫಿಲ್ಟರ್ಗಳು :
ನೀವು ಬಳಸುವ ನೀರು ಗಡಸಾಗಿದ್ದರೆ, ಅಯಾನು ವಿನಿಮಯ ಫಿಲ್ಟರ್ಗಳು ನಿಮಗೆ ಪರಿಹಾರ ನೀಡಬಹುದು. ಅದು ನೀರಿನಲ್ಲಿರುವ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಅಯಾನುಗಳನ್ನು ತೆಗೆದುಹಾಕುವ ಮೂಲಕ ನೀರನ್ನು ಮೃದುಗೊಳಿಸುತ್ತದೆ. ಇದರಲ್ಲಿಯೂ ಕೂಡ ನಿರ್ವಹಣಾ ವೆಚ್ಚ ಇರುತ್ತದೆ. ಇದನ್ನ ಸಾಮಾನ್ಯವಾಗಿ ಬೃಹತ್ ಪ್ರಮಾಣದ ನೀರಿನ ಸಂಗ್ರಹವನ್ನು ಸೋಸಲು ಬಳಸುತ್ತಾರೆ. ಗೃಹೋಪಯೋಗಿ ಫಿಲ್ಟರ್ ಆಗಿ ಇನ್ನೂ ಹೆಚ್ಚು ಪ್ರಚಲಿತಕ್ಕೆ ಬಂದಿಲ್ಲ.
ನಮಗೆ ಬೇಕಾದ ಅತ್ಯುತ್ತಮ ವಾಟರ್ ಫಿಲ್ಟರ್ ಅನ್ನು ಹೇಗೆ ನಿರ್ಧರಿಸುವುದು?
ಇದರಲ್ಲಿನ ಹಲವು ವಿಧಗಳನ್ನು ನಾವು ತಿಳಿದ ಮೇಲೆ, ನಿಮ್ಮ ಮನೆಗೆ ಉತ್ತಮ ನೀರಿನ ಫಿಲ್ಟರ್ ಅನ್ನು ಆಯ್ಕೆ ಮಾಡಲು, ಈ ಕೆಳಗಿನ ಅಂಶಗಳನ್ನು ಪರಿಗಣಿಸಿ:
1. ನೀರಿನ ಪರೀಕ್ಷೆ:
ನೀರಿನ ಸಂಯೋಜನೆ ಮತ್ತು ಪ್ರಸ್ತುತ ಮಾಲಿನ್ಯಕಾರಕಗಳನ್ನು ಅರ್ಥಮಾಡಿಕೊಳ್ಳಲು ನಿಮ್ಮ ನೀರನ್ನು ಪರೀಕ್ಷಿಸಿ. ನೀರಿನಲ್ಲಿ ಕೇವಲ ಕಲ್ಮಶಗಳಿದ್ದರೆ ಯುವಿ(Ultra Violet) ಫಿಲ್ಟರ್ಗಳು ಅಥವಾ ಇಂಗಾಲದ ಶೋಧಕ (Carbon Filter) ಫಿಲ್ಟರ್ಗಳು ಸಾಕು.
2. ಶೋಧನೆ ಅಗತ್ಯಗಳು:
ನೀರಿನ ಗಡಸುತನವನ್ನು ಗುರುತಿಸಿ. ಗಡಸು ಮತ್ತು ಸುಣ್ಣದ ಅಂಶ ಜಾಸ್ತಿ ಇದ್ದ ನೀರಿದ್ದರೆ ರಿವರ್ಸ ಓಸ್ಮೋಸಿಸ್ ಅಥವಾ ಅಯಾನು ವಿನಿಮಯ ಫಿಲ್ಟರ್ಗಳು ಫಿಲ್ಟರ್ ಉತ್ತಮ, ಗಡ ನಿರ್ದಿಷ್ಟ ಮಾಲಿನ್ಯಕಾರಕಗಳನ್ನು ಗುರುತಿಸಿ.
3. ನೀರಿನ ಹರಿವಿನ ಪ್ರಮಾಣ:
ನಿಮ್ಮ ಮನೆಯ ನೀರಿನ ಬಳಕೆಯನ್ನು ಪರಿಗಣಿಸಿ ಮತ್ತು ಸೂಕ್ತವಾದ ಹರಿವಿನ ಪ್ರಮಾಣದೊಂದಿಗೆ ಫಿಲ್ಟರ್ ಅನ್ನು ಆಯ್ಕೆಮಾಡಿ. ಗಮನಿಸಿ, ರಿವರ್ಸ್ ಆಸ್ಮೋಸಿಸ್ (RO) ಫಿಲ್ಟರ್ಗಳಿದ್ದರೆ ನೀರು ಸೋಸಲ್ಪಡುವಾಗ 50-60% ನೀರು ವೇಸ್ಟೇಜ್ ಇರುತ್ತದೆ. ನೀರಿನ ಕೊರತೆ ಇರುವಲ್ಲಿ ಇದರ ಬಳಕೆ ಮಾಡುವಾಗ ಯೋಚಿಸಬೇಕಾಗುತ್ತದೆ.
4. ಅನುಸ್ಥಾಪನೆ ಮತ್ತು ನಿರ್ವಹಣೆ:
ಕೆಲವೊಂದು ಫಿಲ್ಟರ್ಗಳು ಉತ್ತಮ ನೀರನ್ನ ಒದಗಿಸುತ್ತವೆ ನಿಜ, ಆದರೆ ವರ್ಷದ ನಂತರ ಅದು ಒಂದು ವೇಳೆ ನಿರ್ವಹಣೆಗೆ ಬಂದದ್ದೇ ಹೌದಾದರೆ, ಯಾವ ಭಾಗ ಬದಲಾಯಿಸಬೇಕು ಎಂಬುದರ ಮೇಲೆ ಖರ್ಚು ನಿರ್ಧಾರವಾಗುತ್ತದೆ. ಸ್ಥಾಪಿಸಲು ಮತ್ತು ನಿರ್ವಹಿಸಲು ಸುಲಭವಾದ ಫಿಲ್ಟರ್ ಅನ್ನು ಆಯ್ಕೆಮಾಡಿ. ಸಾಮಾನ್ಯವಾಗಿ ರಿವರ್ಸ ಓಸ್ಮೋಸಿಸ್ ಅಥವಾ ಅಯಾನು ವಿನಿಮಯ ಫಿಲ್ಟರ್ಗಳ ನಿರ್ವಹಣೆ ತುಸು ವೆಚ್ಛದಾಯಕ. ಗುರುತ್ವ ಫಿಲ್ಟರ್ಗಳು (Gravitational Filters) ಮತ್ತು ಇಂಗಾಲದ ಮತ್ತು ಶೋಧಕ (Carbon Filter) ಫಿಲ್ಟರ್ಗಳು ತಕ್ಕ ಮಟ್ಟಿಗೆ ಕಡಿಮೆ ನಿರ್ವಹಣಾ ವೆಚ್ಚವನ್ನ ಹೊಂದಿದೆ.
5. ಬಜೆಟ್:
ಇದನ್ನೆಲ್ಲವನ್ನ ಗಮನಿಸಿ, ನಿಮ್ಮ ಬಜೆಟ್ಗೆ ಉತ್ತಮ ಫಲಿತಾಂಶ ನೀಡುವ ನೀಡುವ ಫಿಲ್ಟರ್ ಅನ್ನು ಹುಡುಕಿ ಖರೀದಿಸಿ. ಎಲ್ಲಾ ಮೌಲ್ಯಗಳ ಫಿಲ್ಟರ್ಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿದೆ. 1000 ರೂಪಾಯಿಯಿಂದ ಹಿಡಿದು ಲಕ್ಷಗಳವರೆಗೆ ಬೆಲೆಬಾಳುವ ಫಿಲ್ಟರ್ಗಳು ಲಭ್ಯವಿದೆ.
ಅತ್ಯುತ್ತಮ ನೀರಿನ ಫಿಲ್ಟರ್ ಆಯ್ಕೆ
ನಿಮ್ಮ ಮನೆಗೆ ಉತ್ತಮ ನೀರಿನ ಫಿಲ್ಟರ್ ಬೇಕು, ಅದು ಕೇವಲ ಕಲ್ಮಶಗಳನ್ನು ತೆಗೆದುಹಾಕುವುದು ಮಾತ್ರವಾಗಬಾರದು ಅದಲ್ಲದೇ, ಇದು ನಿಮ್ಮ ಆರೋಗ್ಯವನ್ನು ಕಾಪಾಡುವುದು ಮತ್ತು ನಿಮ್ಮ ದೈನಂದಿನ ಜೀವನವನ್ನು ಚಂದಗಾಣಿಸಿ ಕೊಡುವಂತಿರಬೇಕು. ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ, ನಿಮ್ಮ ಕುಟುಂಬದ ಅಗತ್ಯತೆಗಳಿಗೆ ಹೊಂದಿಕೆಯಾಗುವ ಅತ್ಯುತ್ತಮ ನೀರಿನ ಫಿಲ್ಟರ್ ಅನ್ನು ನೀವು ಈಗ ಆಯ್ಕೆ ಮಾಡಬಹುದು.
ನನ್ನ ಮನೆಯಲ್ಲಿ ನಾನು ಕುಡಿಯಲು, ಅಡುಗೆ ಮಾಡಲು, ಕೆಲವೊಮ್ಮೆ ಸ್ನಾನ ಮಾಡಲು ಕೂಡ RO ಫಿಲ್ಟರ್ ನೀರನ್ನೇ ಬಳಸುತ್ತಿದ್ದೇನೆ. ಈ ಫಿಲ್ಟರ್ ಇಲ್ಲದಿದ್ದರೆ ನಮ್ಮ ಮನೆಯ ಪಾತ್ರೆಗಳಿಗೆಲ್ಲ ಬಿಳಿ ಪೌಡರ್ ಮೆತ್ತಿಕೊಂಡಿರುತ್ತಿತ್ತು. ಈ ಫಿಲ್ಟರ್ ನಮಗೆ ಈಗ ನಮ್ಮ ಜೀವ ನಾಡಿ, ಇದನ್ನ ಬಳಸುತ್ತಾ ಹನ್ನೆರಡು ವರ್ಷವಾಯ್ತು ಅದಕ್ಕೆ ನಿರ್ವಹಣೆಗೆ ಅಂತ ಖರ್ಚು ಮಾಡಿದ್ದು ಕೇವಲ ಮೂರು ಸಾವಿರ ಮಾತ್ರ. ನನಗಂತು ತೃಪ್ತಿ ಇದೆ. |
ನಮ್ಮ ಮನೆಯವರಿಗೆ ಬೋರವೆಲ್ ನೀರು ಕುಡಿಯೋದಿಕ್ಕೆ ಶುರು ಮಾಡಿದಾಗಿನಿಂದ ಕಿಡ್ನಿ ಸ್ಟೋನ್ ಆಗಿತ್ತು, ಡಾಕ್ಟರ್ ಹತ್ತಿರ ಹೋಗಿ ಸ್ಕ್ಯಾನ್ ಮಾಡಿಸಿದಾಗ ವಿಷಯ ಗೊತ್ತಾಯಿತು. ತಕ್ಷಣ ಹೋಗಿ ಫಿಲ್ಟರ್ ಹಾಕಿಸ್ಕೊಂಡ್ವಿ. ಅಂದಿನಿಂದ ಯಾರಿಗೂ ಕಿಡ್ನಿ ಸಮಸ್ಯೆ ಇಲ್ಲ. ನಮಗಂತೂ ಈ ಫಿಲ್ಟರ್ ವೈದ್ಯರಿದ್ದ ಹಾಗೆ. |
ಫಿಲ್ಟರ್ಗಳ ಇಂದಿನ ದರ ತಿಳಿಯಿರಿ
ನೆನಪಿಡಿ, ಅಂತಿಮ ನೀರಿನ ಗುಣಮಟ್ಟದ ಕೀಲಿಯು ನಿಮ್ಮ ಕೈಯಲ್ಲಿದೆ ಮತ್ತು ಈ ಬದುಕಿನ ಪ್ರಯಾಣದಲ್ಲಿ ಅತ್ಯುತ್ತಮ ನೀರಿನ ಫಿಲ್ಟರ್ ನಿಮ್ಮದಾಗಲಿ.
FAQ( ಸಾಮಾನ್ಯ ಪ್ರಶ್ನೆಗಳು ಮತ್ತು ಉತ್ತರಗಳು):
1. ವಾಟರ್ ಫಿಲ್ಟರ್‌ಗಳು ಸಾಮಾನ್ಯವಾಗಿ ಯಾವ ಮಾಲಿನ್ಯಕಾರಕಗಳನ್ನು ತೆಗೆದುಹಾಕುತ್ತವೆ?
ಉತ್ತರ:ಮಣ್ಣು, ಸಣ್ಣ ಕರಗಿದ ಲೋಹದ ಅಂಶಗಳನ್ನು, ಹೆಚ್ಚುವರಿ ಸುಣ್ಣ ಮತ್ತು ಕ್ಯಾಲ್ಸಿಯಂ ಅಂಶಗಳನ್ನ, ಜಲ ಮಾಲಿನ್ಯಕ್ಕೆ ಸಂಬಂಧಿಸಿದ ಮಾಲಿನ್ಯಕಾರಕ ಅಂಶಗಳನ್ನ ಸುಲಭವಾಗಿ ತೆಗೆದು ಹಾಕುತ್ತದೆ. ಈಗಿನ ವಿದ್ಯುಚ್ಛಾಲಿತ ಫಿಲ್ಟರ್‌ಗಳಲ್ಲಿ ಫಿಲ್ಟರ್ ಗೂ ಬರುವ ಮೊದಲೇ ಪ್ರೀ-ಫಿಲ್ಟರ್ ಸೇರಿಸಿರುವುದರಿಂದ ಅರ್ಧ ಅಲ್ಲೇ ಸೋಸಲ್ಪಡುತ್ತದೆ.
2. ನೀರಿನ ಫಿಲ್ಟರ್‌ಗಳು ನೀರಿನಿಂದ ಖನಿಜಗಳನ್ನು ತೆಗೆದುಹಾಕುತ್ತವೆಯೇ?
ಉತ್ತರ: ಇಲ್ಲ. ಉಪಯುಕ್ತ ಖನಿಜಗಳನ್ನ ಸೇರಿಸಿ ನಮಗೆ ಬಳಸಲು ನೀಡುತ್ತದೆ.
3. ಬಾವಿ ನೀರನ್ನು ಕುಡಿಯಲು ವಾಟರ್ ಫಿಲ್ಟರ್‌ಗಳು, ಉತ್ತಮವೇ?
ಉತ್ತರ: ಭಾವಿ ನೀರು ಶುದ್ಧವಾಗಿದ್ದರೆ ಫಿಲ್ಟರ್‌ನ ಅವಶ್ಯಕತೆಯೇ ಇಲ್ಲ, ಆದರೆ ಭಾವಿ ನೀರನ್ನು ನೀವೊಮ್ಮೆ ಪರೀಕ್ಷಿಸಿ ನೋಡಿ. ನಿಮಗೆ ತಿಳಿಯುತ್ತದೆ. ಫಿಲ್ಟರ್ ಬಳಸಬೇಕೇ ಬೇಡವೇ ಎಂದು. ಗಡಸು ನೀರಿದ್ದರೆ ಖಂಡಿತವಾಗಿಯೂ ಫಿಲ್ಟರ್ ಬಳಸಿ.
4. ಫಿಲ್ಟರ್‌ಗಳು ಶುದ್ಧೀಕರಿಸಲು ಸಾಧ್ಯವಾಗದ ಯಾವುದೇ ನೀರಿನ ಮೂಲಗಳಿವೆಯೇ?
ಉತ್ತರ: ರಿವರ್ಸ ಓಸ್ಮೋಸಿಸ್ ಫಿಲ್ಟರ್ ಎಲ್ಲಾ ರೀತಿಯ ನೀರನ್ನ ಶುದ್ಧೀಕರಿಸುತ್ತವೆ.
5. ನನ್ನ ನೀರಿನ ಫಿಲ್ಟರ್ ಅನ್ನು ನಾನು ಎಷ್ಟು ಬಾರಿ ಬದಲಾಯಿಸಬೇಕು?
ಉತ್ತರ: ಫಿಲ್ಟರ್‌ನ್ನು ಬದಲಾಯಿಸುವುದು ಬೇಡ. ಅದರ ಭಾಗಗಳನ್ನ ಬದಲಾಯಿಸಬೇಕಾಗುತ್ತದೆ..
6. ನಾನೇ ನೀರಿನ ಫಿಲ್ಟರ್ ಅನ್ನು ಸ್ಥಾಪಿಸಬಹುದೇ ಅಥವಾ ನಾನು ವೃತ್ತಿಪರರನ್ನು ನೇಮಿಸಿಕೊಳ್ಳಬೇಕೇ?
ಉತ್ತರ: ನೀವೇ ನಿರ್ವಹಿಸಿದರೆ ತುಂಬಾ ಉತ್ತಮ. ನಿಮಗೆ ತಿಳಿದಿರಲಿ ವೃತ್ತಿಪರರು ಬಂದರೆ ಕೆಲಸ ನೀಟಾಗುತ್ತದೆ, ಹಾಗೇಯೇ ಸ್ವಲ್ಫ ಹಣವೂ ಖರ್ಚಾಗುತ್ತದೆ.
7. ಫಿಲ್ಟರ್ ಮಾಡಿದ ನೀರನ್ನು ಬಳಸುವುದರಿಂದ ಯಾವುದೇ ಆರೋಗ್ಯ ಪ್ರಯೋಜನಗಳಿವೆಯೇ?
ಉತ್ತರ: ಆರೋಗ್ಯದ ರಕ್ಷಣೆಯಾಗುತ್ತದೆ, ನೀರಿನಿಂದ ಉಂಟಾಗುವ ಖಾಯಿಲೆಗಳು ಬರುವುದಿಲ್ಲ.
8. ವಿಭಿನ್ನ ಫಿಲ್ಟರ್ ಪ್ರಕಾರಗಳು ನೀರಿನ ಒತ್ತಡವನ್ನು ವಿಭಿನ್ನವಾಗಿ ಪರಿಣಾಮ ಬೀರುತ್ತವೆಯೇ?
ಉತ್ತರ: ಹೌದು, ರಿವರ್ಸ ಓಸ್ಮೋಸಿಸ್ ಫಿಲ್ಟರ್‌ಗಳಲ್ಲಿ ನೀರನ್ನ ಒತ್ತಡ ಹಾಕಿ ಫಿಲ್ಟರ್ ಮಾಡಲಾಗುತ್ತದೆ.
9. ಪಾಯಿಂಟ್-ಆಫ್-ಯೂಸ್ ಮತ್ತು ಪಾಯಿಂಟ್-ಆಫ್-ಎಂಟ್ರಿ ಫಿಲ್ಟರ್‌ಗಳ ನಡುವಿನ ವ್ಯತ್ಯಾಸವೇನು?
ಉತ್ತರ: ಪಾಯಿಂಟ್-ಆಫ್-ಯೂಸ್ ಫಿಲ್ಟರ್‌ಗಳು ನಿಮ್ಮ ಬಳಕೆಯ ಆಧಾರದ ಮೇಲೆ ನಿರ್ಧರಿತವಾಗುತ್ತದೆ. ಭಾವಿಯ ನೀರು ಮೆದುವಾಗಿ ಚೊಕ್ಕವಾಗಿದ್ದರೆ ಗ್ರಾವಿಟೇಷನಲ್ ಫಿಲ್ಟರ್‌ಗಳು ಸಾಕು. ಗಡಸು ನೀರಿದ್ದರೆ ಖಂಡಿತವಾಗಿಯೂ RO, UV, Carbon, Active copper. ಸಮ್ಮಿಳಿತವಾಗಿರುವ ಫಿಲ್ಟರ್ ಬೇಕು. ಸಾಮಾನ್ಯವಾಗಿ ಭಾವಿ ನೀರು ಮೆದುವಾಗಿದ್ದಲ್ಲಿ ಪಾಯಿಂಟ್-ಆಫ್-ಎಂಟ್ರಿ ಫಿಲ್ಟರ್‌ಗಳು ಸಾಕು. ಆದರೂ ಕಣ್ಣಿಗೆ ಕಾಣದ ಜೀವಿಗಳನ್ನ ಸೋಸಲು ಫಿಲ್ಟರ್ ಬೇಕೇ ಬೇಕು, ನೆನಪಿಡಿ.
10. ನೀರಿನ ಫಿಲ್ಟರ್ ಎಲ್ಲಾ ರುಚಿ ಮತ್ತು ವಾಸನೆ ಸಮಸ್ಯೆಗಳನ್ನು ನಿವಾರಿಸಬಹುದೇ?
ಉತ್ತರ: ಮೂಲ ರುಚಿ ಮತ್ತು ವಾಸನೆಯನ್ನ ಬಿಟ್ಟು ಬೇಡದ್ದನ್ನು ಸೋಸುತ್ತದೆ. ನಿಮಗೆ ಕುಡಿಯಲು ಉತ್ತಮ ನೀರನ್ನ ನೀಡುತ್ತದೆ.
0 Comments:
ಕಾಮೆಂಟ್ ಪೋಸ್ಟ್ ಮಾಡಿ