ಶಿಕ್ಷಣ ಇಲಾಖೆಯ ವಿವಿಧ ಆದೇಶಗಳು

 

2023-24ನೇ ಸಾಲಿನ AWP & B ಅನುಮೋದಿತ ಚಟುವಟಿಕೆಗಳಾದ ಬಿ.ಆರ್.ಸಿ ಮತ್ತು ಸಿ.ಆರ್.ಸಿ. ಕೆಂದ್ರಗಳ ಚಟುವಟಿಕೆ/ಬಲವರ್ಧನೆಗಾಗಿ ಮೊದಲನೆಯ ಕಂತಿನ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.


ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣ, ಶಿಕ್ಷಕರ ವೃತ್ತಿ ಕೌಶಲ್ಯ, ಮಕ್ಕಳ ಕಲಿಕಾ ಸಾಮರ್ಥ್ಯ ಹಾಗೂ ಗುಣಮಟ್ಟ, ಅಭಿವೃದ್ಧಿ, ಗುಣಾತ್ಮಕ ಶಿಕ್ಷಣವನ್ನು ಅನುಷ್ಠಾನಗೊಳಿಸುವಲ್ಲಿ, ಶಿಕ್ಷಕರಿಗೆ ಆಗತ್ಯ ಮಾರ್ಗದರ್ಶನ ನೀಡುವಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರಗಳ ಪಾತ್ರ ಪ್ರಮುಖವಾದುದು. ಸಮೂಹ ಸಂಪನ್ಮೂಲ ವ್ಯಕ್ತಿಗಳ ಬಾಕ್ ಸಂಪನ್ಮೂಲ ವ್ಯಕ್ತಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯತತ್ಪರತೆ, ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಹಾಗೂ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಉತ್ತಮಪಡಿಸುವಲ್ಲಿ: ಬಿ.ಆರ್.ಸಿ/ಸಿ.ಆರ್.ಸಿ ಕೇಂದ್ರಗಳು ಪ್ರಮುಖ ಪಾತ್ರವಹಿಸುತ್ತಿವೆ. ಬಿ.ಆರ್.ಸಿ ಹಾಗೂ ಸಿ.ಆರ್.ಸಿ ಕೇಂದ್ರಗಳ ಬಲವರ್ಧನೆಗಾಗಿ ಒಟ್ಟಾರೆ ಮೊದಲನೇ ಕಂತಿನ ಅನುದಾನವಾಗಿ ರೂ.- 687215 ಲಕ್ಷಗಳನ್ನು ಬಿಡುಗಡೆಗೊಳಿಸಲಾಗಿದೆ.

ಈ ಕೆಳಗಿನ ಷರತ್ತನ್ನು ವಿಧಿಸಲಾಗಿದೆ:  

ಅನುದಾನದ ಬಳಕೆಯಲ್ಲಿ ಕೆಳಕಂಡ ಅಂಶಗಳನ್ನು ತಪ್ಪದೇ ಅನುಸರಿಸುವುದು:

1. ಬಿಡುಗಡೆ ಮಾಡಿದ ಅನುದಾನವನ್ನು ನಿಗದಿತ ಚಟುವಟಿಕೆಗಳಿಗೆ ಮಾತ್ರ ನಿಯಮಾನುಸಾರ ಬಳಸುವುದು.

2. ಬಿ.ಆರ್‌ಸಿ, ಮತ್ತು ಸಿ.ಆರ್‌ಸಿ ಕೇಂದ್ರಗಳಿಗೆ ಬಿಡುಗಡೆಯಾದ ಅನುದಾನವನ್ನು ಮಾರ್ಚ್ 2024 ರೊಳಗೆ ವೆಚ್ಚ ಮಾಡುವುದು, ಯಾವುದೇ ಕಾರಣಕ್ಕಾಗಿ ಮುಂದಿನ ಆರ್ಥಿಕ ವರ್ಷಕ್ಕೆ ಈ ಅನುದಾನವನ್ನು ಬಳಸಲು ಅವಕಾಶವಿರುವುದೀ 

3, ಸದರಿ ಅನುದಾನಗಳ, ವೆಚ್ಚಕ್ಕೆ ಚಟುವಟಿಕವಾರು ಪ್ರತ್ಯೇಕವಾಗಿ (ಬಿ.ಆರ್.ಸಿ. ಹಾಗೂ ಸಿ.ಆರ್.ಸಿ) ಉಪಯೋಗ ಪ್ರಮಾಣ ಪತ್ರವನ್ನು ತಪ್ಪದೇ 31.3.2024 ರ ಅಂತ್ಯಕ್ಕೆ ದೃಢೀಕರಿಸಿ ರಾಜ್ಯ ಕಛೇರಿಗೆ ಸಲ್ಲಿಸುವುದು.

4, ಡಿ.ವೈ.ಪಿ.ಸಿ ಕಾರ್ಯಕ್ರಮರವರು ಸದರಿ ಚಟುವಟಿಕೆಯಡಿಯಲ್ಲಿನ ಭೌತಿಕ ಮತ್ತು ಆ ವೆಚ್ಚಗಳನ್ನು ಪ್ರತಿ ಮಾಹ 5ನೇ ತಾರೀಖಿನೊಳಗೆ ಕಡ್ಡಾಯವಾಗಿ PRABANDH POI ನಲ್ಲಿ ಅಪ್‌ಲೋಡ್ ಮಾಡುವುದು.

Download the Order 

ಮತಗಟ್ಟೆ ಅಧಿಕಾರಿಗಳ ಹುದ್ದೆಗೆ ಶಿಕ್ಷಕರನ್ನು ನಿಯೋಜನೆ ಮಾಡುವ ಕುರಿತು ಚುನಾವಣಾ ಆಯೋಗದ ಪತ್ರ ದಿನಾಂಕ: 03-08-2023 ರಂದು ಹೊರಬಿದ್ದಿದೆ.

1. ಭಾರತ ಚುನಾವಣಾ ಚುನಾವಣಾ ಆಯೋಗದ ಮತದಾರರ ಪಟ್ಟಿಗಳ ಕೈಪಿಡಿ, ಅಕ್ಟೋಬರ್, 2016 

2. ಭಾರತ ಚುನಾವಣಾ ಚುನಾವಣಾ ಆಯೋಗದ ಮತಗಟ್ಟೆ ಅಧಿಕಾರಿಗಳ ಕೈಪಿಡಿ, 2011, 

3. ಈ ಕಚೇರಿ ಸಮ ಸಂಖ್ಯೆ, ಸುತ್ತೋಲೆ ದಿನಾಂಕ 04.03.2022 

ಈ ಮೂರು ಆದೇಶಗಳಲ್ಲಿ ಉಲ್ಲೇಖವಾದಂತೆ ರಾಜ್ಯ ಚುನಾವಣಾ ಆಯೋಗವು ಶಿಕ್ಷಕರನ್ನು ನಿಯೋಜಿಸುವ ಕುರಿತು ಆದೇಶ ಮತ್ತು ಸ್ಫಷ್ಟೀಕರಣ ನೀಡಿದೆ.

ಚುನಾವಣಾ ಕಾರ್ಯಗಳಿಗೆ ಭಾರತ ಚುನಾವಣಾ ಚುನಾವಣಾ ಆಯೋಗದ ಮತದಾರರ ಪಟ್ಟಿಗಳ ಕೈಪಿಡಿ, ಅಕ್ಟೋಬರ್, 2016 ರ ಅಧ್ಯಾಯ 5ರ ಪ್ಯಾರಾ 5.2 ರಲ್ಲಿ ಮತಗಟ್ಟೆ, ಮಟ್ಟದ ಅಧಿಕಾರಿಗಳ ನಿಯೋಜನೆಗೆ 13 ವಿವಿಧ ಹುದ್ದೆಗಳ ವಿವರ ನೀಡಲಾಗಿರುತ್ತದೆ, ಅದರಲ್ಲಿ ಶಿಕ್ಷಕರ ಹುದ್ದೆಯೂ ಒಂದಾಗಿರುತ್ತದೆ. ಸರ್ವೋಚ್ಚ ನ್ಯಾಯಾಲಯದ ಅಪೀಲ್ (ಸಿವಿಲ್) 5659/2007 ರಲ್ಲಿ ಚುನಾವಣಾ ಕಾರ್ಯಗಳಿಗೆ ಶಿಕ್ಷಕರನ್ನು ನಿಯೋಜಿಸುವ ಬಗ್ಗೆ ಆದೇಶದಲ್ಲಿ ಈ ಕೆಳಕಂಡಂತೆ ಉಲ್ಲೇಖಿಸಲಾಗಿರುತ್ತದೆ.

We would, however notice that the Election Commission before us also categorically stated that as far as possible teachers would be put on electoral roll revision works on holidays, non-teaching days and non-teaching hours- whereas non teaching staff be put on duty any time. We therefore, direct that all teaching staff shall be put on the duties of electoral rolls revision and election works on holidays and non-teaching days. Teachers should not ordinarily be put on duty on teaching days and within teaching hours. Non- teaching staff, however, may be put on such duties on any days, any time, if permissible in law.

ಮೇಲ್ಕಂಡ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ನಿಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವಾಗ ಈ ಕೆಳಕಂಡಂತೆ ಕ್ರಮವಹಿಸುವುದು.

1. ಯಾವುದೇ ಶಾಲೆಯಲ್ಲಿ ಶೇಕಡಾ ನೂರಕ್ಕೆ ನೂರರಮ್ಮ ಎಲ್ಲಾ ಶಿಕ್ಷಕರನ್ನು ನಿಯೋಜಿಸಬಾರದು. 

2. ಶಿಕ್ಷಕರನ್ನು ನಿಯೋಜಿಸುವಾಗ ರಜಾ ದಿನಗಳಲ್ಲಿ ಹಾಗೂ ಬೋಧನಾ ಸಮಯವನ್ನು ಹೊರತುಪಡಿಸಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವುದು. 3. Terminal Illness ಹೊಂದಿರುವ ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬಾರದು.
4. ಮುಂದಿನ 6 ತಿಂಗಳ ಅವಧಿಯಲ್ಲಿ ಸೇವೆಯಿಂದ ವಯೋನಿವೃತ್ತಿ ಹೊಂದಲಿರುವ ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬಾರದು.

ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವಾಗ ಮೇಲ್ಕಂಡ ಅಂಶಗಳನ್ನು ಹಾಗೂ ಕಾಲ ಕಾಲಕ್ಕೆ ನೀಡುವ ಭಾರತ ಚುನಾವಣಾ ಆಯೋಗದ ಸುತ್ತೋಲೆ ಹಾಗೂ ಮಾರ್ಗಸೂಚಿಗಳನ್ವಯ ಸೂಕ್ತ ಕ್ರಮ ಕೈಗೊಳ್ಳುವಂತೆ ತಮ್ಮನ್ನು ಕೋರಲು

ಎಂಬ ಒಕ್ಕಣಿಕೊಂದಿಗೆ ಸ್ಫಷ್ಟೀಕರಣ ಮತ್ತು ಆದೇಶ ಚುನಾವಣಾ ಆಯೋಗವು ಹೊರಡಿಸಿದೆ.

Download the Order 

CCRT ನವದೆಹಲಿ ಯಿಂದ ನೀಡಲಾಗುವ ಪ್ರತಿಭಾ ಶೋಧ ವಿದ್ಯಾರ್ಥಿ ವೇತನದ ಆದೇಶ ಬಂದಿರುತ್ತದೆ.


 ವಿವಿಧ ಸಾಂಸ್ಕೃತಿಕ (ಸಂಗೀತ, ನೃಶ್ಯ, ನಾಟಕ, ಕ್ಷೇತ್ರಗಳಲ್ಲಿ ಮಕ್ಕಳ ಪ್ರತಿಭೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ 2023-24 ನೇ ಸಾಲಿಗೆ CCRT ನವದೆಹಲಿ ವತಿಯಿಂದ ನೃತ್ಯ, ಡ್ರಾಮಾ, ಚಿತ್ರಕಲೆ, ವಾಸ್ತುಶಿಲ್ಪ, ಕರಕುಶಲ, ಶೃಜನಾತ್ಮಕ ಬರವಣಿಗೆ, ಸಾಹಿತ್ಯ ಕಲೆಯಂಥಹ ಹಲವು ವಿಭಾಗಗಳಲ್ಲಿ ಸಾಧನೆಗೈದಿರುವ 10 ರಿಂದ 14 ವಯೋಮಾನದ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡಲಿದ್ದಾರೆ. ವಿದ್ಯಾರ್ಥಿ ವೇತನದ ಅರ್ಜಿಯು www.ccrtindia.gov.in ವೆಬ್ ಸೈಟ್ ನಲ್ಲಿ ಲಭ್ಯವಿರುತ್ತದೆ.
ಆದೇಶದಲ್ಲಿ ತಿಳಿಸಿರುವ ಸೂಚನೆ ಮತ್ತು ಷರತ್ತುಗಳನಯ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಸದರಿ ವಿಭಾಗಗಳಲ್ಲಿ ಸಾಧನೆಗೈದಿರುವ ಪ್ರತಿಭಾವಂತ ಮಕ್ಕಳನ್ನು ನೋಂದಾಯಿಸಿಕೊಳ್ಳಲು ಸೂಚಿಸಿ, ಅಗತ್ಯ ಸಹಕಾರ ನೀಡುವುದು ಹಾಗೂ ನೋಂದಾಯಿತ ವಿದ್ಯಾರ್ಥಿಗಳ ಪಟ್ಟಿಯನ್ನು ನೇರವಾಗಿ ddsch.ccrt@nicin & fosc.ccrt@gov.in ಇ-ಮೇಲ್ ವಿಳಾಸಕ್ಕೆ ದಿನಾಂಕ: 31-07-2022 ರ ಒಳಗಾಗಿ ತನ್ನದೆ ಸಲ್ಲಿಸಲು ತಿಳಿಸಿದೆ. ಹಾಗೂ ಜಿಲ್ಲಾವಾರು ಕ್ರೂಢೀಕೃತ ಮಾಹಿತಿಯನ್ನು ಈ ಕಛೇರಿಯ evg.kardsert1@gmail.com ಗೆ ಸಲ್ಲಿಸಲು ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಉಲ್ಲೇಖಿತ ಪತ್ರವನ್ನು ಪರಾಮರ್ಶಿಸುವುದು ಎಂದು ಆದೇಶದಲ್ಲಿ ತಿಳಿಸಿದೆ.

Download the Order 


ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ- 2023-24

2023-24 ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದೆ.

ಇಲಾಖೆ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ

ಲಿಂಕ:http://www.schooleducation.kar.nic.in

ವಿಸ್ತರಿಸಲ್ಪಟ್ಟ ದಿನಾಂಕ:05-08-2023

Download the Order 


Share:

0 Comments:

ಕಾಮೆಂಟ್‌‌ ಪೋಸ್ಟ್‌ ಮಾಡಿ

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels

Blog Archive