ಯಲ್ಲಾಪುರ ತಾಲೂಕಿನ ಮದ್ನೂರು ಕ್ಲಸ್ಟರ್ನ ಸರಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆ ಅಲ್ಕೇರಿಯಲ್ಲಿನ ಶಿಕ್ಷಕರಾದ ಶ್ರೀ ಇರ್ಫಾನ್ ಹೆಚ್. ಬಿಕ್ಭಾರವರ ವರ್ಗಾವಣಾ ನಿಮಿತ್ತ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. 16 ವರ್ಷಗಳ ಸೇವೆಯನ್ನು ಈ ಶಾಲೆಗೆ ಪ್ರೀತಿಯಿಂದ ಪ್ರಾಮಾಣಿಕವಾಗಿ ನೀಡಿದ ಶಿಕ್ಷಕರನ್ನು ಬೀಳ್ಕೊಡುವ ಕಾರ್ಯಕ್ರಮದಲ್ಲಿ ಅವರ ಪ್ರೀತಿಯ ವಿದ್ಯಾರ್ಥಿಗಳು, ಮೆಚ್ಚಿನ ಪಾಲಕರು, ಊರ ಎಲ್ಲಾ ನಾಗರಿಕರು, ಎಸ್ಡಿಎಂಸಿ ವೃಂದದವರು ಮತ್ತು ಶಿಕ್ಷಕರು ಹಮ್ಮಿಕೊಂಡಿದ್ದರು.

ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಬಿ. ಆರ್. ಪಿ. ಗಳಾದ ಶ್ರೀ ಪ್ರಶಾಂತ್ ಪಟಗಾರ, ಶ್ರೀ ಸಂತೋಷ್ ನಾಯ್ಕ, ಜಿಲ್ಲಾ ಪ್ರೌಢಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಅಜಯ್ ನಾಯಕ್, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಸತೀಶ್ ನಾಯಕ್ರವರು ಬಿ.ಐ.ಆರ್.ಟಿ. ದಂಪತಿಗಳಾದ ಶ್ರೀ ದಿಲೀಪ್ಕುಮಾರ ದೊಡ್ಡಮನಿ ದಂಪತಿಗಳು, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಹನುಮಂತ್ ವಾರೆಗೌಡರವರು, ಎಸ್.ಡಿ.ಎಂ.ಸಿ.ಯ ಶ್ರೀ ರಶೀದ್ ಬಂಕಾಪುರರವರು ಅಜಾದ್ ಶೇಖ್ರವರು ಮತ್ತು ಊರಿನ ಎಲ್ಲಾ ನಾಗರಿಕರು ವಿದ್ಯಾರ್ಥಿಗಳು ಶಿಕ್ಷಕರು ಉಪಸ್ಥಿತರಿದ್ದರು.
ಉದ್ಘಾಟಕನೆ ನೆರವೇರಿಸಿ ಮಾತನಾಡಿದ ಶ್ರೀ ಪ್ರಶಾಂತ್ ಪಟಗಾರರವರು ಶಿಕ್ಷಕರ ಬಹುಮುಖ ಪ್ರತಿಭೆಯ ಬಗ್ಗೆ, ನಿಜವಾದ ಶಿಕ್ಷಕನ ಯಶಸ್ಸು ತಮ್ಮ ಕೆಲಸದಲ್ಲಿದೆ ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಶ್ರೀ ಅಜಯ್ ನಾಯಕ್ ಮತ್ತು ಸತೀಶ್ ನಾಯಕರವರು ಶಿಕ್ಷಕರ ಪ್ರಾಮಾಣಿಕ ಸೇವೆ ಕರ್ತವ್ಯ ನಿಷ್ಠೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ವಿದ್ಯಾರ್ಥಿಗಳು ಅವರ ಪ್ರೀತಿಯ ಶಿಕ್ಷಕನ ಅಗಲುವಿಕೆಯನ್ನು ತಮ್ಮ ಅನಿಸಿಕೆಯಲ್ಲಿ ವ್ಯಕ್ತಪಡಿಸಿದರು
ಊರಿನ ಎಲ್ಲಾ ನಾಗರಿಕರು ತಮ್ಮ ಮೆಚ್ಚಿನ ಶಿಕ್ಷಕನ ಪ್ರಾಮಾಣಿಕ ಸೇವೆ ಸಮಯ ನಿಷ್ಠೆ ಕರ್ತವ್ಯ ಪರತೆಯ ಬಗ್ಗೆ ಶಿಕ್ಷಕರಿಗೆ ನೆನಪಿನ ಕಾಣಿಕೆಗಳನ್ನ ನೀಡುವ ಮೂಲಕ ಅಪಾರ ಅಭಿಮಾನವನ್ನು ತೋರ್ಪಡಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀ ದಿಲೀಪ್ ಕುಮಾರ್ ದೊಡ್ಮನಿ ದಂಪತಿಗಳು ಶಿಕ್ಷಕರು ಇನ್ನು ತಮ್ಮ ಕುಟುಂಬದೊಂದಿಗೆ ಇದ್ದು, ಕರ್ತವ್ಯ ನಿರ್ವಹಿಸುತ್ತಾರೆ ಎಂದರು.
ವರ್ಗಾವಣೆಗೊಂಡ ಶಿಕ್ಷಕರಾದ ಶ್ರೀ ಇರ್ಫಾನ ಬಿಕ್ಬಾರವರು ತನ್ನ ೧೬ ವರ್ಷದ ಸೇವೆ ಮತ್ತು ಅದಕ್ಕೆ ಸಂಬಂದಿತ ಘಟನೆಗಳನ್ನು ಸ್ಫುಟವಾಗಿ ನೆನಪಿಸಿಕೊಂಡರು. ಊರವರ ಸಹಕಾರ, ಪ್ರೀತಿ ಕಾಳಜಿ ಹೇಗೆ ತನ್ನನ್ನು ಒಬ್ಬ ಉತ್ತಮ ಕರ್ತವ್ಯ ಮಾಡುವ ಹಾಗೆ ರೂಪಿಸಿತು ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ವಿನೂತನವಾಗಿ ಎರಡು ತೆಂಗಿನ ಗಿಡಗಳನ್ನು ಶಿಕ್ಷಕರ ನೆನಪಿನಲ್ಲಿ ನೆಡುವ ಮೂಲಕ ಮಾಡಿದ್ದು ಜನರಲ್ಲಿನ ಪರಿಸರ ಕಾಳಜಿಯನ್ನು ಎತ್ತಿ ತೋರಿಸಿತು. ಬಿ ಆರ್ ಪಿ ಗಳಾದ ಶ್ರೀ ಸಂತೋಷ್ ನಾಯ್ಕರವರು ಕಾರ್ಯಕ್ರಮದ ನಿರೂಪಣೆಯನ್ನು ಮತ್ತು ಪ್ರಾಸ್ತಾವಿಕವನ್ನು ನಿರ್ವಹಿಸಿದ್ದರು. ಸ್ವಾಗತವನ್ನು ಶಾಲೆಯ ಸಹ ಶಿಕ್ಷಕರಾದ ಶ್ರೀ ನಾಗರಾಜ ಡಿ. ನಾಯ್ಕರವರು ಕೋರಿ, ವಂದನಾರ್ಪಣೆಯನ್ನು ಕನ್ನಡ ಶಾಲೆಯ ಶ್ರೀಮತಿ ಪದ್ಮಾವತಿ ಪಟಗಾರರು ನಿರ್ವಹಿಸಿದರು. ಈ ಬಿಳ್ಕೊಡುಗೆ ಕಾರ್ಯಕ್ರಮವು ಶಿಕ್ಷಕನ ಪ್ರಾಮಾಣಿಕ ಸೇವೆ, ಕರ್ತವ್ಯೆನಿಷ್ಠೆ, ಮಕ್ಕಳೊಂದಿಗಿನ ಮಧುರ ಬಾಂಧವ್ಯ, ಊರಿನ ಗೌರವ ಎಲ್ಲಾ ಭಾವನೆಗಳ ಸಮ್ಮಿಳತಕ್ಕೆ ಸಾಕ್ಷಿಯಾಗಿತ್ತು. ಬಂದ ನೆರೆದ ಎಲ್ಲರ ಕಣ್ಣಂಚಲ್ಲಿ ನೀರು ಜಿನುಗುತ್ತಿದ್ದುದು ಇದಕ್ಕೆ ಸಾಕ್ಷಿಯಾಯಿತು.
0 Comments:
ಕಾಮೆಂಟ್ ಪೋಸ್ಟ್ ಮಾಡಿ