ಟ್ವೀಟರ್‌ನಲ್ಲೇ ಸಿಡಿದ ಕರ್ನಾಟಕದ ಮುಖ್ಯಮಂತ್ರಿ

ಮೋದಿಗೆ ಟ್ವೀಟಿನಲ್ಲೇ ಅಬ್ಬರಿಸಿದ ಸಿ.ಎಂ. ಸಿದ್ದರಾಮಯ್ಯ. 

ಏನಿದು #AnswerMadiModi ಹ್ಯಾಷ್ ಟ್ಯಾಗ್ ಟ್ವೀಟ್ ಸಮರ?

 ಪ್ರಧಾನಿ ಮೋದಿಯವರ ಟೀಕೆಗೆ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಭರ್ಜರಿ ಉದ್ದುದ್ದ ಟ್ವೀಟ್‌ನ್ನೇ ಬರೆದಿದ್ದಾರೆ. ಅಂತೂ ಚುನಾವಣೆಗೆ ಈಗಲೇ ತಯಾರಿ ನಡೆಸಿದಂತೆ ತೋರುತ್ತಿದೆ ಎಂದು ಕೆಲವರು ಮಾತನಾಡಿಕೊಂಡರು ಎಂದು ತಿಳಿದು ಬಂದಿದೆ.

ಹಾಗಾದರೆ ಮೋದಿಯವರಿಗೆ ಪ್ರತ್ಯುತ್ತರ ನೀಡಿದ ಒಕ್ಕಣಿ ಹೀಗಿತ್ತು ನೀವು ಓದಿ: 

 

ಕರ್ನಾಟಕದಲ್ಲಿ ಖಾತರಿ ಯೋಜನೆಗಳ ಅನುಷ್ಠಾನದಿಂದಾಗಿ ಉಂಟಾಗಿರುವ ಕರ್ನಾಟಕದ ಹಣಕಾಸಿನ ಪರಿಸ್ಥಿತಿ ಬಗೆಗಿನ ಅವರ ಕಾಳಜಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು.

ಶ್ರೀ ನರೇಂದ್ರ ಮೋದಿ ಅವರೇ, ಇದು ನಿಮ್ಮ ವೈಯಕ್ತಿಕ ಅಭಿಪ್ರಾಯವೋ, ಭಾರತದ ಪ್ರಧಾನ ಮಂತ್ರಿಯಾಗಿ ನಿಮ್ಮ ಅಭಿಪ್ರಾಯವೋ ಅಥವಾ ನಿಮ್ಮ ಪಕ್ಷದ ಅಭಿಪ್ರಾಯವೋ ಎಂಬುದನ್ನು ದಯವಿಟ್ಟು ಸ್ಪಷ್ಟಪಡಿಸಿ?

 ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವ ಮೊದಲು ದಯವಿಟ್ಟು ನಿಮ್ಮ ಮತ್ತು ನಿಮ್ಮ ಪಕ್ಷದ ನಿಲುವನ್ನು ಸ್ಪಷ್ಟವಾಗಿ ತಿಳಿಸಿ.

ನಮ್ಮ ಖಾತರಿ ಯೋಜನೆಗಳನ್ನ ಸಾರ್ವಜನಿಕವಾಗಿ ವಿರೋಧಿಸುವಂತೆ ಕರ್ನಾಟಕದ ಬಿಜೆಪಿ ನಾಯಕರಿಗೆ ಮಾರ್ಗದರ್ಶನ ಮಾಡಿ. ಖಾತರಿ ಯೋಜನೆಗಳನ್ನೇ ಮುಖ್ಯ ಅಜೆಂಡಾವನ್ನಾಗಿಟ್ಟುಕೊಂಡು ಮುಂದಿನ ಲೋಕಸಭೆ ಚುನಾವಣೆ ಎದುರಿಸಲು ಸಿದ್ಧರಿದ್ದೇವೆ. ಕರ್ನಾಟಕದ ಬಿಜೆಪಿ ನಾಯಕರು ನಮ್ಮ ಸರ್ಕಾರವು ಎಲ್ಲಾ ಖಾತರಿ ಯೋಜನೆಗಳನ್ನು ತಕ್ಷಣವೇ ಜಾರಿಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ವಿಚಾರವಾಗಿ ತೀವ್ರ ಪ್ರತಿಭಟನೆಯನ್ನೂ ನಡೆಸಿದರು. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಮಿಸ್ಟರ್ ನರೇಂದ್ರ ಮೋದಿ?

ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಮೂರು ಉಚಿತ ಗ್ಯಾಸ್ ಸಿಲಿಂಡರ್ ಮತ್ತು ದಿನಕ್ಕೆ ಅರ್ಧ ಲೀಟರ್ ಹಾಲು ನೀಡುವುದಾಗಿ ಘೋಷಿಸಿತ್ತು. ಇದು ಬಿಟ್ಟಿಯಾಗಿಲ್ಲವೇ ಮಿಸ್ಟರ್ ನರೇಂದ್ರ ಮೋದಿ?

ಮಧ್ಯಪ್ರದೇಶ ಮುಖ್ಯಮಂತ್ರಿಗಳು ಲಾಡ್ಲಿ-ಬೆಹೆನಾ ಯೋಜನೆಯನ್ನು ಘೋಷಿಸಿದ್ದಾರೆ, ಅಲ್ಲಿ ಸರ್ಕಾರವು ಮಹಿಳಾ ಫಲಾನುಭವಿಗಳ ಖಾತೆಗೆ ತಿಂಗಳಿಗೆ 1000 ರೂಪಾಯಿಗಳನ್ನು ಜಮಾ ಮಾಡುತ್ತಿದೆ ಮತ್ತು ಅದನ್ನು 3000 ರೂಪಾಯಿಗಳಿಗೆ ಹೆಚ್ಚಿಸುವುದಾಗಿ ಕೂಡ ಅವರು ಭರವಸೆ ನೀಡಿದ್ದಾರೆ. ಇದು ಉಚಿತ ಯೋಜನೆ ಅಲ್ಲವೇ? ಪಿಎಂ-ಕಿಸಾನ್ ಸಮ್ಮಾನ್ ಯೋಜನೆ, ಇದು ರೂ. ರೈತರ ಖಾತೆಗೆ ವಾರ್ಷಿಕವಾಗಿ 6000 ರೂಪಾಯಿಗಳನ್ನು ಜಮಾ ಮಾಡಲಾಗುತ್ತಿದೆ, ನಿಮ್ಮ ವ್ಯಾಖ್ಯಾನದಂತೆ ಬಿಟ್ಟಿಯಾಗಿಲ್ಲವೇ ಮಿಸ್ಟರ್ ಮೋದಿ?

ಕೇಂದ್ರ ಸರ್ಕಾರವು 1.25 ಲಕ್ಷ ಕೋಟಿ ರೂಪಾಯಿಗಳ ಅಂದಾಜು ಬಜೆಟ್ನಲ್ಲಿ ಎಂಟು ಉಚಿತ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈ ಯೋಜನೆಗಳು ನಿಮ್ಮ ಸ್ವಂತ ಹೇಳಿಕೆಗಳಿಗೆ ವಿರುದ್ಧವಾಗಿಲ್ಲವೇ ಮಿಸ್ಟರ್ ಮೋದಿ?

ಹಣದುಬ್ಬರ ಮತ್ತು ನಿರುದ್ಯೋಗದಿಂದ ಬಳಲುತ್ತಿದ್ದ ಕರ್ನಾಟಕದ ಜನತೆ ಬಿಜೆಪಿಯನ್ನು ಮತ್ತು ಅವರ ಆರ್ಥಿಕ ದುರಾಡಳಿತವನ್ನು ತಿರಸ್ಕರಿಸಿದ್ದಾರೆ. ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಹೋರಾಡಲು, ಸಾಲದ ಹೊರೆಯನ್ನು ನಿವಾರಿಸಲು ಮತ್ತು ಸಾಮಾನ್ಯ ಜನರಿಗೆ ಸಾಮಾಜಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಇಡೀ ದೇಶಕ್ಕೆ ಬೇಕಿರುವುದು ಕರ್ನಾಟಕದ ಮಾದರಿ ಆಡಳಿತ.

#ಆನ್ಸರ್‌ಮಾಡಿಮೋದಿ

 Thanks to Prime Minister @narendramodi for his concern about Karnataka's finances due to the implementation of the guarantee schemes in Karnataka. Mr. Narendra Modi, please make it clear whether this is your personal opinion, the opinion as the Prime Minister of India, or the opinion of your party? Please state your and your party's stance clearly about the guarantee schemes before opposing them. Direct the Karnataka BJP leaders to publicly oppose our guarantee schemes as well. We are ready to face the next Lok Sabha elections with the guarantee schemes as our main agenda. Karnataka BJP leaders are demanding our government to implement all our guarantee schemes immediately. Former Chief Minister B.S. Yediyurappa even made a loud protest on this issue. What is your opinion on this, Mr. Narendra Modi? BJP, in its manifesto, had announced to give three free gas cylinders and half a liter of milk a day. Is this not a freebie, Mr. Narendra Modi? Madhya Pradesh Chief Minister has announced the Ladli-Behena scheme, where the government will deposit Rs 1000 per month into the accounts of women beneficiaries, and he has promised to increase it to Rs 3000. Is this not a free scheme as well? Is the PM-Kisan Samman Yojana, which deposits Rs. 6000 annually into the accounts of farmers, not a freebie as per your definition, Mr. Modi? The Central Government is implementing eight freebie schemes with an estimated budget outlay of Rs 1.25 lakh crores. Do these schemes not contradict your own statements, Mr. Modi? The people of Karnataka, who have suffered from inflation and unemployment, have rejected the BJP and their economic mismanagement. We are making the best efforts to fight against the financial crisis, relieve the burden of debt, and ensure social security for the common people. Karnataka's model of governance is what is needed for the entire country. #AnswerMadiModi




 ಇದಕ್ಕೂ ಮೊದಲು ಮಹಾರಾಷ್ಟ್ರದ ಪುಣೆ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಎರಡು ಮೆಟ್ರೊ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿದ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ 115 ಸಾವಿರ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅವರು ಶಿಲಾನ್ಯಾಸ ನೆರವೇರಿಸಿದರು ಅವರು ಮಾತನಾಡಿದರು. ಇದೇ ವೇಳೆ  ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಸ್ತ್ರೀಂಗಳ ಬಗ್ಗೆ ಪರೋಕ್ಷವಾಗಿ ಕಿಡಿಕಾರಿರುವ ಪ್ರಧಾನಿ ನರೇಂದ್ರ ಮೋದಿ, 'ಸ್ವಹಿತಾಸಕ್ತಿಗಾಗಿ ಯಾವುದೇ ಪಕ್ಷವು ರಾಜ್ಯದ ಬೊಕ್ಕಸವನ್ನು ಬರಿದು ಮಾಡಿದರೆ ಅದರ ಪರಿಣಾಮ ಅಭಿವೃದ್ಧಿ ಯೋಜನೆಗಳ ಮೇಲೆ ಆಗುತ್ತದೆ ಎಂಬುದು ಅಲ್ಪಾವಧಿಯಲ್ಲೇ ಕರ್ನಾಟಕದಲ್ಲಿ ಸಾಬೀತಾಗಿದೆ' ಎಂದು ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಆಡಳಿತದ ಇನ್ನೊಂದು ರಾಜ್ಯವಾದ ರಾಜಸ್ಥಾನ ಕೂಡಾ ಭಾರೀ ಸಾಲದ ಸುಳಿಗೆ ಸಿಕ್ಕಿರುವುದನ್ನು ಮೋದಿ ಎತ್ತಿ ಹೇಳಿದರು.

'ಬೆಂಗಳೂರು ಇಡೀ ವಿಶ್ವದಲ್ಲಿ ಹೂಡಿಕೆದಾರರ ಕೇಂದ್ರ ಸ್ಥಾನ ಮತ್ತು ಮಾಹಿತಿ ತಂತ್ರಜ್ಞಾನ ವಲಯದ ಕೇಂದ್ರ ಸ್ಥಾನ. ಆದರೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಕೆಲ ಯೋಜನೆಗಳ ಅಡ್ಡ ಪರಿಣಾಮಗಳು ಅಲ್ಪಾವಧಿಯಲ್ಲೇ ರಾಜ್ಯದಲ್ಲಿ ಕಾಣಿಸಿಕೊಂಡಿದೆ. ಸ್ವತಃ ಕರ್ನಾಟಕ ಸರ್ಕಾರವೇ ಬೆಂಗಳೂರು ಅಭಿವೃದ್ಧಿಗೆ ಹಣವಿಲ್ಲ ಎಂದು ಒಪ್ಪಿಕೊಂಡಿದೆ, ಯಾವುದೇ ಒಂದು ಪಕ್ಷವು ತನ್ನ ಸ್ವಹಿತಾಸಕ್ತಿಗಾಗಿ ರಾಜ್ಯದ ಬೊಕ್ಕಸವನ್ನು ಬರಿದು ಮಾಡಿದರೆ ಅದರ ಪರಿಣಾಮವನ್ನು ರಾಜ್ಯದ ಜನತೆ ಭರಿಸಬೇಕಾಗುತ್ತದೆ' ಎಂದರು. ಇದೇ ಪರಿಸ್ಥಿತಿ ರಾಜಸ್ಥಾನದಲ್ಲೂ ಇದೆ. ಅಲ್ಲೂ ಅಭಿವೃದ್ಧಿ ಚಟುವಟಿಕೆಗಳು ಪೂರ್ಣ ಸ್ಥಗಿತಗೊಂಡಿವೆ ಎಂದು ಮೋದಿ ಕಿಡಿಕಾರಿದರು. ಅವುಗಳ ಪತ್ರಿಕಾ ಪ್ರಕಟಣೆಗಳು:




 ಈ ರೀತಿಯ ರಾಜಕೀಯ ಹೇಳಿಕೆಗಳಿಗೆ ನಿಮ್ಮ ಪ್ರತಿಕ್ರಿಯೆ ಏನು? ದಯಮಾಡಿ ಕಮೆಂಟ್‌ ಮಾಡಿ


Share:

0 Comments:

ಕಾಮೆಂಟ್‌‌ ಪೋಸ್ಟ್‌ ಮಾಡಿ

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels

Blog Archive