ಖ್ಯಾತ ಸಂಗೀತ ನಿರ್ದೇಶಕ, ನಾದ ಬ್ರಹ್ಮ ಹಂಸಲೇಖರಿಂದ ಈ ಬಾರಿಯ ದಸರಾ ಉದ್ಘಾಟನೆಯನ್ನು ಮಾಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದರು.
ಮೈಸೂರು ದಸಾರಗೆ ಇನ್ನು ಒಂದೂವರೆ ತಿಂಗಳಷ್ಟೇ ಬಾಕಿ ಇದ್ದು. ದಸರಾ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಂಸಲೇಖ ರವರ ಹೆಸರು ಘೋಷಣೆಯಾಯಿತು.
https://twitter.com/siddaramaiah/status/1696445603549675611?t=BWR23WEBgSG4QIVm9G_w7A&s=19
ಸಂಗೀತ ಮಾಂತ್ರಿಕ, ಸ್ಯಾಂಡಲ್ವುಡ್ನ ನಾದಬ್ರಹ್ಮ ಎಂದೇ ಖ್ಯಾತಿ ಪಡೆದ ಸಂಗೀತ ನಿರ್ದೇಶಕ ಹಾಗೂ ಗೀತ ರಚನಕಾರ ಹಂಸಲೇಖ ರವರು ತಮ್ಮ ವಿಶೇಷವಾದ ಸಂಗೀತದಿಂದ ಕನ್ನಡ ಚಿತ್ರರಂಗವನ್ನ ಮತ್ತೊಂದು ಹತ್ತಕ್ಕೆ ಕೊಂಡೊಯ್ದಿದ್ದಾರೆ. ಕನ್ನಡ ನಾಡು-ನುಡಿ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಹಂಸಲೇಖ ಅವರು ಕ್ಷಣದಲ್ಲೇ ಜಾನಪದ ಹಾಡಿನ ತಂಡದ ಮೂಲಕ ದೇಸಿ ಸೊಗಡಿನ ಕಾರ್ಯಕ್ರಮವನ್ನು ನೀಡಿಯೂ ಖ್ಯಾತರಾಗಿದ್ದಾರೆ. ಹಾಡುಗಳನ್ನು ರಚಿಸುವುದರಲ್ಲಿಯೂ ಇವರು ನಿಪುಣರು, ಈ ಬಾರಿ ಹಂಸಲೇಖ ಅವರು ದಸರಾ ಉದ್ಘಾಟಿಸುತ್ತಿರುವುದು ಅಪಾರ ಸಂಚಯ ಅವರ ಅಭಿಮಾನಿಗಳಿಗೆ ಇದು ಖುಷಿ ವಿಚಾರವಾಗಿದೆ.
ಈ ಕುರಿತು ಮಾತನಾಡಿದ ಹಂಸಲೇಖರವರು "ನಾನು ಕಲಾ ಪ್ರತಿನಿಧಿ ಆಗಿದ್ದೇನೆ. ಅವರ ಪರವಾಗಿ ನಾನು ದಸರಾ ದೀಪ ಹಚ್ಚುತ್ತೇನೆ. ನನಗೆ ದಸರಾ ಹಾಡನ್ನ ಮಾಡೋಕೆ ಈಗ ಆಸೆ ಉಕ್ಕುತ್ತಾ ಇದೆ. ಈಗ ಒಂದು ಸಾಲು ಬರ್ತಿದೆ. ಅದನ್ನ ಹೇಳುತ್ತೇನೆ. 'ಬದುಕಿದು ಕನ್ನಡ ಭಿಕ್ಷೆ. ಇಲ್ಲಿ ಸಮರಸವೇ ನಮ್ಮ ರಕ್ಷೆ" ಎಂದು ಹಂಸಲೇಖ ಹಾಡಿನ ಸಾಲು ಹೇಳಿದರು. ದಸರಾ ಅನ್ನೋದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕನಸಾಗಿತ್ತು. ನಾನು ಅವರ ಕನಸಿನ ಭಾಗವಾಗಿದ್ದೇನೆ. ರಾಜ್ಯ ಸರ್ಕಾರಕ್ಕೆ ಎಲ್ಲಾ ಕಲಾವಿದರ ಪರವಾಗಿ ಧನ್ಯವಾದ ಹೇಳುತ್ತೇನೆ. ನಾನು ಅನಾರೋಗ್ಯದಿಂದ ಬಳಲುತ್ತಿದ್ದಾಗ ಈಗಿನ ಸಿಎಂ, ಡಿಸಿಎಂ ನನ್ನ ಆರೋಗ್ಯ ವಿಚಾರಿಸಿದ್ದರು. ಈಗ ನನಗೆ ಈ ಅವಕಾಶ ಮಾಡಿ ಕೊಟ್ಟಿದ್ದಕ್ಕೆ ಧನ್ಯವಾದ ಹೇಳುತ್ತೇನೆ ಎಂದರು.
ಈಗಾಗಲೇ ದಸರಾ ಉತ್ಸವಕ್ಕೆ ಸಂಬಂಧಪಟ್ಟ ಚಟುವಟಿಕೆಗಳು ಆರಂಭವಾಗಿದೆ, ಸೆಪ್ಟಂಬರ್ 1 ನೇ ತಾರೀಖು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಮೊದಲ ಹಂತದ ದಸರಾ ಗಜಪಡೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಚಾಲನೆ ನೀಡಲಿದ್ದಾರೆ.
0 Comments:
ಕಾಮೆಂಟ್ ಪೋಸ್ಟ್ ಮಾಡಿ