Madras Eye: Increase of infection among students
ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಸೋಂಕು
ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಕಣ್ಣುಬೇನೆ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಣಿಸಿಕೊಂಡ ಕಣ್ಣು ಬೇನೆ ಮೊದಲ ಕೇಸ್ ಶಿರಸಿಯಲ್ಲಿ ಕಂಡು ಬಂದಿದ್ದು ನಂತರ ಮುಂಡಗೋಡಿನಲ್ಲಿ ಮತ್ತೊಂದು ಪ್ರಕರಣ ಕಂಡು ಬಂದಿದ್ದು ಅತೀ ಶೀಘ್ರವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತಿದೆ. ಇದು ತೀವ್ರ ವಾದಾಗ ಜ್ವರ ಬರುತ್ತದೆ, ಸರಿಯಾದ ಚಿಕಿತ್ಸೆ ಮಾಡದಿದ್ದರೆ, ದೃಷ್ಟಿ ಕಡಿಮೆಯಾಗುವ ಸಂಭವವಿರುತ್ತದೆ. ಮಕ್ಕಳಲ್ಲಿ ಇದು ವಿಚಿತ್ರವಾಗಿ ಹರಡುತ್ತದೆ, ಇದಕ್ಕೆ ಕಾರಣ ಅವರ ಸ್ವಚ್ಛತೆ. ಮಕ್ಕಳು ಎಲ್ಲೆಂದರಲ್ಲಿ ಎಗ್ಗಿಲ್ಲದೇ ಸ್ಪರ್ಷ ಮಾಡಿ ಬಾಯಿಯೊಳಗೆ ಬೆರಳನ್ನ ಹಾಕುತ್ತಾರೆ, ಕಣ್ಣನ್ನ ಉಜ್ಜು ತ್ತಾರೆ ಹಾಗಾಗಿ ಕಣ್ಣಬೇನೆ ಅವರಲ್ಲಿ ತಕ್ಷಣವೇ ಬರುತ್ತದೆ.
ಶಾಲಾ ಕಾಲೇಜುಗಳಲ್ಲಿ ಮುಂಜಾಗ್ರತೆ ಹೇಗೆ?
ಶಾಲೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಕಣ್ಣಬೇನೆ ಬಂದವರಿಗೆ ಒಂದು ವಾರ ನೀಡಿ ಅವರಿಗೆ ವಿಶ್ರಾಂತಿಯನ್ನ ನೀಡಬೇಕು.
ಸೋಂಕಿತರ ಕಣ್ಣನ್ನು ನೋಡುವುದರಿಂದ ಕಣ್ಣುಬೇನೆ ಹರಡುತ್ತಾ?
ಒಬ್ಬರ ಕಣ್ಣು ಇನ್ನೊಬ್ಬರು ನೋಡುವುದರಿಂದ ಈ ಸಮಸ್ಯೆ ಹರಡುವುದಿಲ್ಲ. ಆದರೆ ಕಣ್ಣು ಬೇನೆ
ಬಂದ ವ್ಯಕ್ತಿ ಬಳಸಿದ ಟವಲ್ ನಂತಹ ವಸ್ತುಗಳನ್ನು ಇನ್ನೊಬ್ಬರು ಬಳಸಿದರೆ ಸುಲಭವಾಗಿ
ಹರಡುತ್ತದೆ. ಸಾಮಾನ್ಯವಾಗಿ ಮಕ್ಕಳಲ್ಲಿ
ಮದ್ರಾಸ್ ವಿ ಅಥವಾ ಕಣ್ಣು ಬೇನೆ ಕಾಣಿಸಿಕೊಳ್ಳುತ್ತದೆ. ಆದರಲ್ಲೂ ಮಳೆಗಾಲದ ವೇಳೆಯಲ್ಲಿ ಈ
ಸಮಸ್ಯೆ ಕಂಡು ಬರುತ್ತದೆ. ಜಿಲ್ಲೆಯಲ್ಲಿ ಹಲವು ಮಕ್ಕಳಲ್ಲಿ ಈ ಬೇನೆ ಕಂಡು ಬಂದಿದೆ. ಬ್ಯಾಕ್ಟಿರಿಯಾದಿಂದ ಆಗುತ್ತದೆ. ಇದು ಬರಿಂದ ಇನ್ನೊಬ್ಬರಿಗೆ ತಗಲುವುದರಿಂದ
ಮುನ್ನೆಚ್ಚರಿಕೆ ಮತ್ತು ಚಿಕಿತ್ಸೆ ಏನು? ತಜ್ಞ ನೇತ್ರ ವೈದ್ಯರು ಹೇಳುವುದೇನು?
- ಸಮಸ್ಯೆ ಬಂದರೆ ಕಣ್ಣಿನಲ್ಲಿ ಪಿಸುರು ಬರುವುದು. ಕಣ್ಣು ಭಾವು ಬರುವುದು, ಕಣ್ಣು ಕೆಂಪಾಗುವುದು ಸೇರಿ ನಾನಾ ಸಮಸ್ಯೆಗಳೂ ಎದುರಾಗಲಿದೆ.
- ಕಣ್ಣು ಬೇನೆ ಸಮಸ್ಯೆ ಕಂಡು ಬಂದರೆ ಐಸೋಲೇಟ್ ಆಗುವುದೇ ಇದಕ್ಕೆ ಮೊದಲ ಮದ್ದು ಎಂದು ವೈದ್ಯರು ತಿಳಿಸಿದ್ದಾರೆ.
- ಈ ಸಮಸ್ಯೆ ಕಡಿಮೆಯಾಗಲಿದೆ ಎಂದಿದ್ದಾರೆ.
- ಮೇಲಿಂದ ಮೇಲೆ ಶುದ್ಧನೀರಿನಿಂದ ಕೈ ತೊಳೆಯಬೇಕು.
- ಕಣ್ಣು ಆಗಾಗ್ಗೆ ಮುಟ್ಟುಕೊಳ್ಳಬಾರದು.
- ಸ್ಯಾನಿಟೈಸರ್ ಬಳಕೆ ಮಾಡಿ, ಕೈ ಶುದ್ಧ ಮಾಡಿಕೊಳ್ಳುವುದು ಒಳ್ಳೆಯದು
- ಫಿಲ್ಟರ್ (ಶುದ್ಧ) ನೀರನ್ನೇ ಬಳಸಬೇಕು.
- ಸೋಂಕಿತ ಮಕ್ಕಳ ಬಗ್ಗೆ ಹೆಚ್ಚಿನ ಕಾಳ
- ಕಣ್ಣುಗಳನ್ನು ಮುಟ್ಟದಾಗ - ಮುಟ್ಟವ ಮುನ್ನ ಕೈತೊಳೆದುಕೊಳ್ಳಬೇಕು
- ಸೌಂದರ್ಯವರ್ಧಕ, ಮೊಬೈಲ್ ಫೋನ್ ಪ್ರತ್ಯೇಕವಾಗಿ ಬಳಸಿ, ಬೇರೆಯವರಿಗೆ ನೀಡಬೇಡಿ.
- ಕಣ್ಣು ಒರೆಸಲು ಕರವಸ್ತ್ರಗಳ ಬದಲಿಗೆ ಶೂ ಪೇಪರ್ ಬಳಸಿದರೆ ಉತ್ತಮ.
- ಆದರೆ ಒಂದೊಮ್ಮೆ ಮಕ್ಕಳಲ್ಲ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು, ಅವರು ನೀಡಿದ ಔಷಧಿಗಳನ್ನೇ ಬಳಸಬೇಕು. ಒಂದು ವಾರದೊಳಗೆ ಕಣ್ಣಿನ ಬೇನೆ ಕಡಿಮೆಯಾಗುತ್ತದೆ ಎಂದಿದ್ದಾರೆ.
0 Comments:
ಕಾಮೆಂಟ್ ಪೋಸ್ಟ್ ಮಾಡಿ