ಬಾಂಗ್ಲಾ ವಿರುದ್ದ ನಡೆಯುತ್ತಿರುವ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಅವರು ಬಾಂಗ್ಲಾದೇಶದಲ್ಲಿ ಸ್ಟಂಪ್‌ಗಳನ್ನು ಒಡೆದು ಅಂಪೈರ್ ಕಡೆ ನೋಡುತ್ತಾ ಜೋರಾಗಿ ಬಾಯಿ ಮಾಡಿದ ನಂತರ ಅವರು ಟೀಕೆಗೆ ಗುರಿಯಾಗುತ್ತಿದ್ದಾರೆ.
ಬಾಂಗ್ಲಾದೇಶದ ವಿರುದ್ಧ ಹರ್ಮನ್‌ಪ್ರೀತ್ ಅವರ ವರ್ತನೆಯು ಬೇಸರದಾಯಕವಾಗಿದೆ, ಅವರು ಭಾರತೀಯ ಕ್ರಿಕೆಟ್‌ಗೆ ತುಂಬಾ ಕೆಟ್ಟ ಹೆಸರನ್ನು ತಂದರು ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಭಾರತದ ತಂಡದ ನಾಯಕಿಯೂ ಆಗಿರುವ ಹರ್ಮನ್ ಎಲ್‌ಬಿಡಬ್ಲ್ಯೂ ಎಂದು ಘೋಷಿಸಲ್ಪಟ್ಟ ನಂತರ ನಿರಾಶೆಗೊಳಗಾದ ಅವರು ತನ್ನ ಬ್ಯಾಟ್‌ನಿಂದ ಸ್ಟಂಪ್‌ಗಳನ್ನ ಒಡೆದು ಅಂಪೈರ್‌ಗೆ ಜೋರು ಮಾಡಿ ಬಾಯಿ ಮಾಡುತ್ತಾ ತೆರಳಿದರು. ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಅಂಪೈರಿಂಗ್ ಅನ್ನು "ಕರುಣಾಜನಕ" ಎಂದು ಕರೆಯುವುದು ಅಗೌರವವೆಂದು ಪರಿಗಣಿಸಲ್ಪಟ್ಟಿತು.


ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ಎಎಫ್‌ಪಿಗೆ ತಿಳಿಸಿದರು, ಕೌರ್ ಅವರ ಪಂದ್ಯದ ಶುಲ್ಕದ 75% ದಂಡ ವಿಧಿಸಲಾಗುತ್ತದೆ ಎಂದು ತಿಳಿಸದರು - ಸ್ಟಂಪ್‌ಗಳನ್ನು ಒಡೆದಿದ್ದಕ್ಕಾಗಿ 50% ಮತ್ತು ಅಂಪೈರ್‌ಗಳ ಟೀಕೆಗಾಗಿ 25% ದಂಡ ವಿಧಿಸಬಹುದು ಎಂದು ವಿವರ ನೀಡಿದರು.
ಶನಿವಾರ
ನಡೆದ ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯದ ನಂತರ ಭಾರತ ಮಹಿಳಾ ಕ್ರಿಕೆಟ್
ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಕೌರ್ ಅವರ ವರ್ತನೆಯಿಂದ "ನಿರಾಶೆಗೊಂಡಿದ್ದೇವೆ" ಎಂದು ಹೇಳಿಕೆ ನೀಡಿದೆ.
ಹರ್ಮನ್‌ಪ್ರೀತ್ ಕೌರ್ ಬಗ್ಗೆ ವಿವರ:
ಹರ್ಮನ್‌ಪ್ರೀತ್ ಕೌರ್ ಭಾರತೀಯ ಮಹಿಳಾ ಕ್ರಿಕೆಟಿಗರಾಗಿದ್ದಾರೆ, ಅವರು ಎಲ್ಲಾ ಬಗೆಯ ಭಾರತ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಆಲ್ ರೌಂಡರ್ ಆಗಿ ಆಡುತ್ತಿದ್ದು, ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದಿಂದ 2017 ರಲ್ಲಿ ಕ್ರಿಕೆಟ್‌ಗಾಗಿ ಅರ್ಜುನ ಪ್ರಶಸ್ತಿಯನ್ನು ನೀಡಲಾಯಿತು.
- ಜನನ : 8 ಮಾರ್ಚ್ 1989 (ವಯಸ್ಸು 34 ವರ್ಷ), ಪಂಜಾಬ್ ನ ಮೊಗಾ ಜಿಲ್ಲೆಯಲ್ಲಿ ಜನನ.
- ಪೋಷಕರು: ತಂದೆ: ಹರ್ಮಂದರ್ ಸಿಂಗ್ ಭುಲ್ಲರ್, ತಾಯಿ: ಸತೀಂದರ್ ಕೌರ್
- ಕ್ರಿಕೇಟ್ ತಂಡದ ಸದಸ್ಯರು: ಸ್ಮೃತಿ ಮಂಧಾನ, ಜೆಮಿಮಾ ರೋಡ್ರಿಗಸ್ ಇತರರು
- ಒಡಹುಟ್ಟಿದವರು: ಹೇಮಜೀತ್ ಕೌರ್
- ಕ್ರಿಕೇಟ್ ಜಗತ್ತಿಗೆ ಸೇರಿದ ವಿವರ, ಸೇರಿದ ದಿನಾಂಕಗಳು: 2018 (ಸೂಪರ್ನೋವಾಸ್), 7 ಮಾರ್ಚ್ 2009 (ಭಾರತದ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡ)
- ಎತ್ತರ: 1.6 ಮೀ
- 2023–ಇಂದಿನವರೆಗೆ: ಮುಂಬೈ ಇಂಡಿಯನ್ಸ್
0 Comments:
ಕಾಮೆಂಟ್ ಪೋಸ್ಟ್ ಮಾಡಿ