ದತ್ತ ಸಾಲು: ಉತ್ತರವಿರದ ಪ್ರಶ್ನೆ ಪತ್ರಿಕೆ
🏵️🏵️🏵️🏵️🏵️🏵️🏵️🏵️
ಭಗವಂತ ಜೀವಿಗೆ ಬಾಳೆಂಬ ಉತ್ತರ ಪತ್ರಿಕೆ ನೀಡುವ
ನೀಡನೆಂದಿಗೂ ಪ್ರಶ್ನೆ ಪತ್ರಿಕೆಯೊಂದಿಗೆ ತಕ್ಕ ಉತ್ತರವ
ಕರ್ಮಕ್ಕೆ ತಕ್ಕಂತೆ ಒಬ್ಬೊಬ್ಬರದು ಒಂದೊಂದು ತರವು
ಒಬ್ಬರ ಗಮನಿಸಿ ಇನ್ನೊಬ್ಬರು ಉತ್ತರಿಸದಾ ಆಸ್ಕರವು
ಭೂತ, ಪ್ರಸ್ತುತ,ಭವಿಷ್ಯತ್ತಿನ ಸಮಾಗಮವೇ ಜೀವನ
ಊಹಿಸಬಹುದೇ ಹೊರತು ಇರಲಾರದು ತೀರ್ಮಾನ
ಕಗ್ಗಂಟಿನ ಪ್ರಶ್ನೆಗೆ ಉತ್ತರಿಸಬೇಕಾದರೆ ಇರಬೇಕು ಜ್ಞಾನ
ಸಿದ್ದತೆ, ನೈಪುಣ್ಯದಿ ಎದುರಿಸಿದಾಗ ಬಾಳು ನಿತ್ಯ ನೂತನ
ಸಮಸ್ಯೆಯಲ್ಲಿಯೇ ಸಮಾಧಾನ ಹುಡುಕಿಕೊಳ್ಳಬೇಕು
ಎಲ್ಲಾ ನೀಡಿದ ಅವನಿಗೆ ಕೈಚಾಚಿ ಬೇಡದಂತೆ ಇರಬೇಕು
ಅವ ಯಾರಿಗೇನು ನೀಡ ಬೇಕೆಂಬುದ ಅರಿತಿಹ ನಾಯಕ
ಹಿರಿ ಕಿರಿ ಎನ್ನದೆ ಬೇಡಿದರೆ ,ಆದೆವು ಅವ್ನ ದೃಷ್ಟಿಲಿ ಕ್ಷುಲ್ಲಕ
ಶಮಕ್ಕೆ ತಕ್ಕಂತೆ ಪ್ರತಿಫಲವು ದೊರೆಯದೆ ಭವಿತದಿ ಇರದು
ಅವನಿಚ್ಚೆಯಂತೆ ನಡೆದರೆ ಕಷ್ಟ ನಷ್ಟ ನಿಲ್ಲದೆ ಹೋಗುವುದು
ನಿಸ್ವಾರ್ಥ, ಸೇವಾ ಮನೋಭಾವವು ಸಾರ್ಥಕತೆ ತರುವುದು
ಉತ್ತರವಿರದ ಪ್ರಶ್ನೆಪತ್ರಿಕೆಗೆ ಅವನೆ ಉತ್ತರವಾಗಿ ಬರಬಹುದು
ಶ್ರೀಕಾಂತ್ ನಾಯ್ಕ್ ,ಆಧ್ಯಾತ್ಮಿಕ ಚಿಂತಕರು
0 Comments:
ಕಾಮೆಂಟ್ ಪೋಸ್ಟ್ ಮಾಡಿ