ಶ್ರೀ ಯಧುವೀರ ಕ್ರೆಡಿಟ್ ಸೌಹಾರ್ದ ಕೋ -ಆಪರೇಟಿವ್ ಸೊಸೈಟಿ (ರಿ) ಉದ್ಘಾಟನೆ: 🌹 ಸರ್ವರಿಗೂ ಸ್ವಾಗತ 🌹
ಹೊನ್ನಾವರ : ತಾಲೂಕಿನ ಕೇಂದ್ರ ಭಾಗದಲ್ಲಿರುವ ಶಿರಸಿ ಅರ್ಬನ್ ಬ್ಯಾಂಕ್ ರೋಡಗೆ ತಾಗಿರುವ ಬಿಲ್ಡಿಂಗ್ ಲ್ಲಿ ಶ್ರೀಕಾಂತ್ ನಾಯ್ಕ ಅಧ್ಯಕ್ಷೆತೆಯಲ್ಲಿ ಇರುವ '"ಶ್ರೀ ಯಧುವೀರ ಕ್ರೆಡಿಟ್ ಸೌಹಾರ್ದ ಕೋ -ಆಪರೇಟಿವ್ ಸೊಸೈಟಿ" ಯು 16/06/2023ರ ಶುಕ್ರವಾರ ಉದ್ಘಾಟನೆ ಗೊಳ್ಳಲಿದೆ. ಹೊನ್ನಾವರದ ಹಿರಿಯ ಪತ್ರಕರ್ತರಾದ ಜಿ. ಯು. ಭಟ್ ರಿಂದ ಉದ್ಘಾಟನೆಗೊಳ್ಳುವ ವೇದಿಕೆಯಲ್ಲಿ, ಉದ್ಯಮಿ ಜಿ ಟಿ ಪೈ,, ಡಾ : ಆಶಿಕ್ ಹೆಗಡೆ, ಜಿ ಜಿ ಶಂಕರ, ಯೋಗೇಶ್ ರಾಯ್ಕರ್, ಮೋಹನ್ ಸಾಳೆಹಿತ್ತಲ್, ಎಸ್ ಟಿ ನಾಯ್ಕ,ಮೊದಲಾದವರು ಪಾಲ್ಗೊಳ್ಳಲ್ಲಿದ್ದಾರೆ.
ಅಧ್ಯಕ್ಷರಾದ ಶ್ರೀಕಾಂತ್ ನಾಯ್ಕ ಇದರ ಮುಖ್ಯ ರೂವಾರಿ ಆಗಿದ್ದು ಜೀವನದಲ್ಲಿ ಅನೇಕ ಏರಿಳಿತದ ಮಧ್ಯ ದುಡಿಮೆ ಹಣವನ್ನು ಧರ್ಮ ಕಾರ್ಯಕ್ಕೂ ಬಳಸುತ್ತಾ, ಇದರ ಮಧ್ಯೆ ತಾನು ಏನಾಗಬೇಕು ಎನ್ನುವ ಎಚ್ಚರಿಕೆ ಹಾಗೂ ಕನಸನ್ನು ಮರೆಯದೆ ಸಾಗಿದ ಶ್ರೀಕಾಂತ ನಾಯ್ಕರು ಅನೇಕ ವರ್ಷಗಳ ಕಾಲ ಹೊರದೇಶದಲ್ಲಿ ಬದುಕಿಗಾಗಿ ಗುದ್ದಾಟ ಮಾಡಿದವರು. ನೋವುಂಡ ಬದುಕಿಗೆ ಮಾತ್ರ ನಿಜವಾದ ಸಾರ್ಥಕ ಬದುಕು ಎಲ್ಲಿದೆ ಕಾಣುವ ಮನಸು ಇರುವುದುರು. ಪ್ರಾಮಾಣಿಕತೆ, ನ್ಯಾಯ ನೀತಿ ಧರ್ಮಮಾರ್ಗದಲ್ಲಿ ಸಾಗುತ್ತ ತನ್ನ ದುಡಿಮೆಯ ಒಂದು ಪಾಲನ್ನು ಧರ್ಮಕಾರ್ಯಕ್ಕೆ ನೀಡುತ್ತ ಆ ಮೂಲಕ ಸಾಗಿದ ಶ್ರೀಕಾಂತ್ ನಾಯ್ಕರು ತನ್ನ ಕನಸಿನ ಮೂರ್ತರೂಪವನ್ನು ದಿನಾಂಕ : 16 ರ ಶುಕ್ರವಾರ ಉದ್ಘಾಟನೆ ಮಾಡಿಸುತ್ತಿದ್ದಾರೆ. ಬದುಕಿನಲ್ಲಿ ಎಚ್ಚರಿಕೆಯ ಹೆಜ್ಜೆಯನ್ನು ಇಟ್ಟವರು ನನಸಿನ ದಾರಿಯಲ್ಲಿ ಸಾಗಬಹುದು ಎನ್ನುವುದಕ್ಕೆ ಶ್ರೀಕಾಂತ್ ನಾಯ್ಕ ಒಬ್ಬರು.
ಬನ್ನಿ ಹಾರೈಸೋಣ. ಒಳ್ಳೆಯ ಜನರ ಕಾರ್ಯಕ್ಕೆ ಬೆಂಬಲವಾಗಿ ನಿಂತರೆ, ನಾಳೆ ಇಡೀ ಸುತ್ತಮುತ್ತಲಿನ ಸಮಾಜಕ್ಕೆ ಮತ್ತೆ ಇನ್ನೂ ಹೆಚ್ಚಿನ ಒಳ್ಳೆಯದೇ ಆಗುತ್ತದೆ. ಮರೆಯದೆ ಬನ್ನಿ ಶುಕ್ರವಾರ ಬೆಳಿಗ್ಗೆ 11:15ಕ್ಕೆ.ಆಡಳಿತ ಕಚೇರಿಯ ಉದ್ಘಾಟನೆಗೆ. ಶುಭವಾಗಲಿ.
ಹಳ್ಳಿ (ಸುದ್ಧಿ ) ನ್ಯೂಸ್
ಭಾವ ಶುದ್ಧಿ
0 Comments:
ಕಾಮೆಂಟ್ ಪೋಸ್ಟ್ ಮಾಡಿ