ಉತ್ತರ ಕನ್ನಡಕ್ಕೆ ಅಂಟಬೇಕಾದ ಕಳಂಕ ತಪ್ಪಿಸಿದ ಕುಮಟಾ ಪೊಲೀಸರು
ಗುಣವಂತೆ : ಕತಗಾಲ ದೇವಿಮನೆ ಘಟ್ಟದಲ್ಲಿ ಅಪರಿಚಿತ ಮಹಿಳೆಯ ಶವದ ಪ್ರಕರಣ ಭೇದಿಸಿದ ಕುಮಟಾ ಪೋಲಿಸರು, ಉತ್ತರ ಕನ್ನಡ ಜಿಲ್ಲೆಗೆ ಅಂಟಬೇಕಾದ ಕಳಂಕ ತಪ್ಪಿಸಿದ್ದಾರೆ. ಒಂದು ವೇಳೆ ಸಾವಿನ ಹಿಂದೆ ಇರುವವರ ಪತ್ತೆ ಆಗದೇ ಇದ್ದಲ್ಲಿ ಉತ್ತರ ಕನ್ನಡಕ್ಕೆ ಹಾಗೆ ದೇವಿಮನೆ ಘಟ್ಟಕ್ಕೂ ಕಳಂಕ ಅಂಟಿರುತ್ತಿತ್ತು. ಇದನ್ನು ತಪ್ಪಿಸಿದ ಪೊಲೀಸ್ ಪಡೆ ಕರ್ತವ್ಯ ನಿಷ್ಟೇಯ ಸತ್ಯ ಮೆರೆದಿದ್ದಾರೆ.
ಈ ಹಿಂದೆ ಉತ್ತರ ಕನ್ನಡಲ್ಲಿ ಆದ ಕೊಲೆಗೆ ನ್ಯಾಯ ಸಿಗದ ಪ್ರಕರಣ ಇನ್ನೂ ಇದೆ. ಇದಕ್ಕೆ ಪ್ರಮುಖ ಹಾಗೂ ಮುಖ್ಯ ಕಾರಣ ರಾಜಕಾರಣ. ದೇವಿಮನೆ ಘಟ್ಟದ ಸಾವಿನ ಪ್ರಕರಣದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ರಾಜಕೀಯ ಹಸ್ತ ಬಂದು ಸೇರುವ ಮೊದಲೇ ಹಾವೇರಿ ಮೂಲದ ಶಿಗ್ಗಾವಿಯ ಯಲ್ಲಮ್ಮ ಉರ್ಫ ತನುಜಾ ಕೋಂ ಲೋಹಿತ್ ದೊಡ್ಡಮನಿ,( 26) ಹತ್ಯೆಯಾದ ಮಹಿಳೆಯ ಸಾವಿನ ಪ್ರಕರಣದಲ್ಲಿ ಇರುವ ಪಾಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ರಾಜಕಾರಣದ ವಾಸನೆ ಸೇರಿ ಬಿಟ್ಟಿದ್ದರೆ ತನುಜಾ ಎಂಬ ಮಹಿಳೆಯ ಸಾವಿನ ನ್ಯಾಯ ಆ ವಾಸನೆಯಲ್ಲಿ ಮುಳುಗಿ ಹೋಗುತ್ತಿತ್ತು. ದೇವಿಮನೆ ಘಟ್ಟದಲ್ಲಿ ಹೆಣವಾಗಿರುವ ಇವಳ ಸಾವಿಗೆ ಕಾರಣ ಆದವರು ಕಾಣದೆ ಹೋಗಿದ್ದರೆ ಸಾವಿನ ಸತ್ಯ ಇಲ್ಲೆಯೇ ಸುತ್ತುತ್ತ ಉತ್ತರ ಕನ್ನಡಕ್ಕೆ ಅಂಟುತ್ತಿತ್ತು. ಕಾರಣ ಸತ್ತ ಮಹಿಳೆ ಹೊರ ಜಿಲ್ಲೆಯವಳು. ಇದೆ ಮುಖ್ಯ ಮಹತ್ವದ ಸಂಗತಿಯಾಗಿ ಉಹಾಪೊಹಗಳಿಗೆ ಆಹಾರ ಆಗುತ್ತಿತ್ತು. ಇದನ್ನು ತಪ್ಪಿಸಿದ ಕುಮಟಾ ಅಥವಾ ಉತ್ತರ ಕನ್ನಡ ಪೊಲೀಸ್ ತಂಡ ಯಾವುದೇ ಪ್ರಕರಣದಲ್ಲಿ ಯಾರ ಹಸ್ತಕ್ಷೇಪ ಇಲ್ಲದೆ ಹೋದರೆ ಪ್ರಕರಣ ಭೇದಿಸಿ ಸತ್ಯ ಬಯಲಿಗೆ ತರುವುದು ನಮಗೇನು ದೊಡ್ಡ ಕೆಲಸ ಅಲ್ಲವೇ ಅಲ್ಲ ಎನ್ನುವುದನ್ನು ಸಾಕ್ಷಿ ಸಹಿತ ಸಾಬೀತು ಮಾಡಿದ್ದಾರೆ.
ನಮ್ಮ ಪೊಲೀಸ್ ಪಡೆ ಸ್ವತಂತ್ರವಾಗಿದ್ದರೆ ಎಂತ ಪ್ರಕರಣ ಬೇಕಾದರೂ ಭೇದಿಸಬಲ್ಲರು ಎನ್ನುವುದಕ್ಕೆ ಇದೊಂದು ಸಾಕ್ಷಿ. ತನಿಖಾಧಿಕಾರಿ ತಿಮ್ಮಪ್ಪ ನಾಯ್ಕ ರವರ ನೇತೃತ್ವದಲ್ಲಿ PSI ಈ.ಸಿ ಸಂಪತ್ ,PSI ನವೀನ ನಾಯ್ಕ, ಹಾಗೂ ಸಿ.ಹೆಚ್.ಸಿ ದಯಾನಂದ ನಾಯ್ಕ, ಸಿಹೆಚ್‌ಸಿ ಲೋಕೇಶ ಅರಿಶಿಣಗುಪ್ಪಿ, ಸಿಪಿಸಿ ಗುರು ನಾಯಕ ಸಿಪಿಸಿ ಪ್ರದೀಪ್ ನಾಯಕ ರವರನ್ನೊಳಗೊಂಡ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ಕರ್ತವ್ಯ ಮೆರೆದ ನಿಮಗೆ ಅಭಿನಂದನೆಗಳು.
ಹಳ್ಳಿ (ಸುದ್ದಿ ) ನ್ಯೂಸ್
ಗುಣವಂತೆ.