ವಿದ್ಯಾರ್ಥಿಗಳ ಭವಿತವ್ಯ ವರ್ತಮಾನದಲ್ಲಿದೆ- ಶಂಕರ ಗೌಡ, ಗುಣವಂತೆ.
ಹೊನ್ನಾವರ : ತಾಲೂಕಿನ ಗುಣವಂತೆಯ ಕರಾವಳಿ ಪ್ರೌಢ ಶಾಲೆಯಲ್ಲಿ, ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನೆರವೇರಿತು. ಇದೊಂದು ವಿದ್ಯಾರ್ಥಿಗಳ ಉತ್ತಮ ಚಾರಿತ್ರ್ಯ ನಿರ್ಮಾಣದ ಕಾರ್ಯಕ್ರಮವಾಗಿದ್ದು, ಉದ್ಘಾಟನೆಯನ್ನು ಸುಭಾಷ್ ಯುವಕ ಸಂಘದ ಅಧ್ಯಕ್ಷರು ಹಾಗೂ ಸಂಚಾರಿ ಡಾಟ್ ಕಾಮ್ ವೆಬ್ ನ ಸಂಪಾದಕರು ಆಗಿರುವ ಶ್ರೀ ಶಂಕರ ಗೌಡ ಗುಣವಂತೆ ನೆರವೇರಿಸಿ ಮಾತನಾಡುತ್ತ, ವಿದ್ಯಾರ್ಥಿಗ ಉತ್ತಮ ಭವಿತವ್ಯ ವರ್ತಮಾನದಲ್ಲಿದೆ. ಬರದಿರುವ ನಾಳೆಯ ಬಗ್ಗೆ, ಹಾಗೆ ಕಳೆದು ಹೋದ ದಿನಗಳ ಬಗ್ಗೆ ಯೋಚಿಸದೆ ಎದುರಿಗೆ ಇರುವ ವರ್ತಮಾನವನ್ನು ಸರಿಯಾಗಿ ಬಳಸಿ ಕೊಂಡಾಗ ಉತ್ತಮ ಭವಿತವ್ಯ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಭಾರೆ ಮುಖ್ಯೋಪಾಧ್ಯಾಯರಾದ ಶ್ರೀ ಎಸ್ ವಿ ಕಾಣೆಕರ್ ವಹಿಸಿದರು, ವಿಶೇಷ ಸಂಪನ್ಮೂಲ ವ್ಯಕ್ತಿಗಳಾಗಿ ಆರೋಗ್ಯ ಕೇಂದ್ರದ ಅಧಿಕಾರಿಗಳಾದ ಶ್ರೀ ಅನಿಲ್ ಗಣಾಚಾರ ಇವರು ವಿದ್ಯಾರ್ಥಿಗಳಿಗೆ ದುಶ್ಚಟಗಳನ್ನು ಪ್ರಾಥಮಿಕವಾಗಿ ಹೇಗೆ ನಾವು ರೂಡಿಸಿಕೊಳ್ಳುತ್ತೇವೆ, ಹಾಗೂ ದುಶ್ಚಟಗಳು ಎಂದರೆ ಯಾವವು, ಅದರಿಂದ ನಾವು ಹೇಗೆ ದೂರವಿರಬೇಕು ನಮ್ಮ ಆರೋಗ್ಯವನ್ನ ಸ್ವಾಸ್ತ್ಯವಾಗಿ ಹೇಗೆ ಕಾಪಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ಉತ್ತಮವಾದ ಮಾಹಿತಿ ನೀಡಿದರು.
ವಲಯದ ಮೇಲ್ವಿಚಾರಕರಾದ ಶ್ರೀ ಉದಯ್ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು, ಸೇವಾ ಪ್ರತಿನಿಧಿ ಉಷಾ ಗೌಡ ನಿರೂಪಿಸಿದರು, ಶಿಕ್ಷಕರಾದ ಎಸ್.ವಿ. ಕಾಣೆಕರ್ ಕಾರ್ಯಕ್ರಮದ ಸ್ವಾಗತ ಹಾಗೂ ವಂದನಾರ್ಪಣೆ ಮಾಡಿದರು
ಹಳ್ಳಿ ನ್ಯೂಸ್
ಗುಣವಂತೆ.
0 Comments:
ಕಾಮೆಂಟ್ ಪೋಸ್ಟ್ ಮಾಡಿ