ಭಟ್ಕಳ - ಶಿರಾಲಿಯ ಮಾವಿನಕಟ್ಟೆಯ ಬಳಿ, ಹೃದಯ ನೋಯುವ ಘಟನೆಯೊಂದು ನಡೆಯಿತು. ರಾಷ್ಟ್ರಿಯ ಹೆದ್ದಾರಿಯ ಪಕ್ಕದ ಅಂಗಡಿಯೊಂದರ ಮೇಲೆ ಕುಳಿತಿದ್ದ ಮಂಗವೊಂದು ಇದ್ದಕ್ಕಿದ್ದಂತೆ ರಸ್ತೆ ದಾಟಲು ಮುಂದಾದ ಕಾರಣ ವಾಹನವೊಂದಕ್ಕೆ ತಾಗಿ ರಸ್ತೆಯ ಮೇಲೆ ಉಸಿರು ಚಲ್ಲಿತು. ಅದೇ ಸಮಯಕ್ಕೆ ಅಲ್ಲಿಗೆ ಬಂದ ಶಂಕರ ಗೌಡ, ಗುಣವಂತೆ ಹಾಗೂ ಆಲ್ವಿನ್ ಡಿಸಿಲ್ವಾರವರು ಮಂಗನ ಅಸಾಯಕ ಸ್ಥಿತಿಗೆ ಮರುಗಿ ನೋವಿನಲ್ಲಿ ಒದ್ದಾಡುತ್ತಿದ್ದ ಮಂಗನ ರಕ್ಷಣೆಗೆ ಮುಂದಾದರೂ ಮಂಗನ ಉಸಿರು ನಿಂತಿತ್ತು. ಶಿರಾಲಿಯ ಮಾವಿನ ಕಟ್ಟೆಯ ಸಹೃದಯರೊಬ್ಬರು ರಕ್ಷಣೆಗೆ ಕೈ ಜೋಡಿಸಿ ನೀರು ತಂದರೂ ಮಂಗನ ಸಾವನ್ನು ತಡೆಯಲಾಗಲಿಲ್ಲ.
ಈ ಘಟನೆಗೆ ಮರುಗಿ, ಸತ್ತ ಮಂಗನನ್ನು ಅಲ್ಲಿಯೇ ಬಿಡದೆ ಅದ್ಕಕ್ಕೊಂದು ಅಂತ್ಯಸಂಸ್ಕಾರಕ್ಕೆ ಮುಂದಾದ ಶಂಕರ ಗೌಡರು, ತನ್ನೂರಿನ ಪುರೋಹಿತರಿಂದ ಮಾಹಿತಿ ಪಡೆದು ಶಿರಾಲಿ ಮಾವಿನ ಕಟ್ಟೆಯ ಸಹೃದಯರ ಸಹಕಾರದೊಂದಿಗೆ ಹೂವು, ಬಾಳೆಹಣ್ಣು, ಊದಬತ್ತಿ ತಂದು, ಪೂಜೆ ಸಲ್ಲಿಸಿ ಅಂತ್ಯ ಸಂಸ್ಕಾರಕ್ಕೆ ಹೊಂಡವೊಂದನ್ನು ತೆಗೆದು ಪುರೋಹಿತರು ಸೂಚಿಸಿದಂತೆ ಸತ್ತ ಮಂಗನಿಗೆ ಸಂಸ್ಕಾರ ಮಾಡುವ ಮೂಲಕ ಮಾನವೀಯತೆಗೆ ಸಾಕ್ಷಿಯಾದರು. ಮಾನವತೆ ಎನ್ನುವುದು ಅವಕಾಶ ಬಂದಾಗ ಅನುಷ್ಠಾನಕ್ಕೆ ಮುಂದಾದಲೇ ಮನುಷ್ಯನ ಹೃದಯ ಎಂತದ್ದು ಎನ್ನುವುದಕ್ಕೆ ಸಾಕ್ಷಿ ದೊರೆಯುವುದು.
0 Comments:
ಕಾಮೆಂಟ್ ಪೋಸ್ಟ್ ಮಾಡಿ