style="display:block"
data-ad-client="ca-pub-9205039580908152"
data-ad-slot="7519900395"
data-ad-format="auto"
data-full-width-responsive="true">
ಭಟ್ಕಳ : ತಾಲೂಕಿನ 1400 ವರ್ಷದಷ್ಟು ಹಿಂದೆ ಭಟ್ಕಳದ ಮೊದಲ ಪ್ರಾರ್ಥನ ಮಂದಿರ "ಜಮಾತುಲ್ ಮುಸ್ಲಿಮಿನ್" ಸಹಸ್ರಮಾನೋತ್ಸವ ಇಂದು ನಡೆಯಿತು.ಇಡೀ ಸಭಾ ಮಂಡಳ ಸೌಹಾರ್ದತೆಗೆ ಸಾಕ್ಷಿಯಾಯಿತು. ವೇದಿಕೆಯ ಮೇಲಿನ ಗಣ್ಯರಿಗೆ ದೊರೆತ ಉಪಚಾರ ವೇದಿಕೆಯ ಕೊನೆಯ ಕುರ್ಚಿಯ ಮೇಲೆ ಕುಂತವನಿಗೂ ಒಂದೇ ರೀತಿಯಾಗಿ ಕಂಡು ಬಂತು. ವೇದಿಕೆಯ ಹಿಂಭಾಗದಲ್ಲಿ ಇದ್ದ ಭಿಕ್ಷುಕನಿಗೂ ವೇದಿಕೆ ಮೇಲಿದ್ದವರಿಗೆ ಮಾಡಿದ ಉಪಚಾರವೇ ಕಂಡು ಬಂದಿದ್ದು ಸೌಹಾರ್ದ ಪದಕ್ಕೆ ನಿಜವಾದ ಅರ್ಥ ಕೊಟ್ಟಿತು. ಎಲ್ಲಾ ಧರ್ಮದ ಪ್ರತಿನಿಧಿಗಳಿಂದ ಜಮಾತುಲ್ ಮುಸ್ಲಿಮಿನ್ ಸಹಸ್ರಮಾನೋತ್ಸವಕ್ಕೆ ಸಾಕ್ಷಿಯಾಗಿ, ಕೋಮು ಸೌಹಾರ್ದ ಕಾರ್ಯಕ್ರಮಕ್ಕೆ ಮುನ್ನುಡಿ ಬರದಂತೆ ಕಂಡು ಬಂತು.
ಕಾರ್ಯಕ್ರಮದ ಸಭಾಂಗಣವನ್ನು ( ಚಪ್ಪರ ) ನೆಯ್ದ ತೆಂಗಿನ ಗರಿಯಿಂದ ಮಾಡಿದ್ದು, ನೂರಾರು ವರ್ಷಗಳ ಹಿಂದಿನ ಸಂಪ್ರದಾಯವೊಂದನ್ನು ನೆನಪಿಸುವಂತೆ ಮಾಡುತ್ತಿತ್ತು. ತಾವು ಮಾಡಿದ ಕಾರ್ಯಕ್ರಮ ಎನ್ನುವ ಅಹಂ ಭಾವ ಇಲ್ಲದೆ ಬಂದ ಎಲ್ಲರಿಗೂ ಪ್ರೀತಿಯಿಂದ ಕರೆದು ಕುರಿಸುತ್ತಿದ್ದ ರೀತಿ ಭಾರತೀಯ ಸಂಪ್ರದಾಯಸ್ತ ಮನೆಯ ಸಂಸ್ಕೃತಿ, ಸಂಸ್ಕಾರಕ್ಕೆ ಉದಾಹರಣೆಯಾಗಿ ಕಂಡುಬರುವಂತೆ ಮಾಡುತ್ತಿತ್ತು.
crossorigin="anonymous">
style="display:block"
data-ad-client="ca-pub-9205039580908152"
data-ad-slot="7519900395"
data-ad-format="auto"
data-full-width-responsive="true">
ಸಮಾವೇಶದಲ್ಲಿ ಎಲ್ಲ ಜನಾಂಗದಿಂದ ಬಂದ ಅನೇಕ ಗಣ್ಯಮಾನ್ಯರ ಸಮಾಗಮವಾಗಿತ್ತು. ಜಮಾತುಲ್ ಮುಸ್ಲಿಮಿನ್ ಮಸೀದಿಯಲ್ಲಿ ನಡೆಯುವ ನಮಾಜ್ ರೀತಿಯನ್ನು ವೀಕ್ಷಿಸಲು ಶ್ರೀ ಬಸವಪ್ರಕಾಶ ಸ್ವಾಮೀಜಿ, ಬಸವ ಧರ್ಮಪೀಠ ಕೂಡಲ ಸಂಗಮ ಹಾಗೂ ನೆರೆದ ಅನೇಕರ ಜೊತೆಗೆ ಬೇರೆ ಬೇರೆ ಧರ್ಮದ ಎಲ್ಲರಿಗೂ ಅವಕಾಶ ಮಾಡಿ ಕೊಟ್ಟರು.
ನಂತರ ಸಮಾವೇಶ ಸಭೆ ಮುಂದುವರಿದು, ಶ್ರೀ ಬಸವಪ್ರಕಾಶ ಸ್ವಾಮೀಜಿ ಧರ್ಮೋಪದೇಶ ಮಾಡಿದರು, ಸಭೆಯಲ್ಲಿ ಇದ್ದ ಶ್ರೀ ಜೆಡಿ ನಾಯ್ಕ, ಶ್ರೀ ಮಂಕಾಳ್ ವೈದ್ಯ, ಶ್ರೀ ಪ್ರದೀಪ್ ಜಿ.ಪೈ ಮಾತನಾಡಿದರು. ಅಂತಿಮವಾಗಿ ತಂಜಿಮ್ ಅಧ್ಯಕ್ಷರಾದ ಶ್ರೀ ಇನಾಯತುಲ್ ಶಾಬಂದ್ರಿ ವಂದನಾರ್ಪಣೆ ಮಾಡಿದರು.
crossorigin="anonymous">
style="display:block"
data-ad-client="ca-pub-9205039580908152"
data-ad-slot="7519900395"
data-ad-format="auto"
data-full-width-responsive="true">
0 Comments:
ಕಾಮೆಂಟ್ ಪೋಸ್ಟ್ ಮಾಡಿ