ಉತ್ತರ ಕನ್ನಡಿಗರ ಜನಸಾಮಾನ್ಯರ ಹೃದಯದಲ್ಲಿ ನೆಲೆ ಪಡೆದ ವರ್ಷದ ವ್ಯಕ್ತಿಗಳು ಇಬ್ಬರು

"ಉತ್ತರ ಕನ್ನಡದ ವರ್ಷದ ವ್ಯಕ್ತಿಗಳು ಇಬ್ಬರು "
 ಸಾರ್ವಜನಿಕ  ಗಣೇಶೋತ್ಸವ ಹಬ್ಬಕ್ಕೆ
ಸೌಹಾರ್ದತೆಯ ದೀಪ ಹಚ್ಚಿದ ಎಸ್ ಆರ್ ಶ್ರೀಧರ "

ಉತ್ತರ ಕನ್ನಡ ಜನತೆಯ ಹೃದಯದಲ್ಲಿ ಸ್ಥಾನ ಪಡೆದ ಈ ವರ್ಷದ ಇಬ್ಬರು ವ್ಯಕ್ತಿಗಳೆಂದರೆ
ನಿರ್ಗಮಿತ ದಕ್ಷ ಪೊಲೀಸ್ ವರಿಷ್ಟಾಧಿಕಾರಿಣಿ ಡಾ : ಸುಮನ್ ಪೆನ್ನೇಕರ್
 ಹಾಗೂ ಹೊನ್ನಾವರದ ಸಿ ಪಿ ಐ ಶ್ರೀಧರ  ಎಸ್ ಆರ್. ಜಿಲ್ಲೆಯ  ಜನಸಾಮಾನ್ಯರ ಹೃದಯದಲ್ಲಿ ಸ್ಥಾನ ಪಡೆಯುತ್ತಾರೆ ಎಂದರೆ ಈ ದೇಶ ಕೋಡುವ ಎಲ್ಲ ಪ್ರಶಸ್ತಿಗಿಂತ ಇದು ಮಿಗಿಲು.  ಶರಣರ ಕಾಲವನ್ನು ಮರಣ ಕಾಲದಲ್ಲಿ ನೋಡು ಎನ್ನುವ ಮಾತಿದೆ, ಆದರೆ ಪೊಲೀಸ್ ಅಧಿಕಾರಿಗಳ ಕಾಲವನ್ನು ಅವರ ವರ್ಗಾವಣೆಯ  ಸಮಯದಲ್ಲಿ (ಕಾಲದಲ್ಲಿ ) ನೋಡು ಎಂದರೆ ಎಳ್ಳಷ್ಟೂ ತಪ್ಪಿಲ್ಲ ಎನಿಸುತ್ತದೆ.ಅದರಲ್ಲೂ ಪೊಲೀಸ್ ಸೇವೆಯಲ್ಲಿ ಇರುವವರು ಜನಾನುರಾಗಿ ಆಗುವುದು ಎಂದರೆ ದೊಡ್ಡ ಆಶ್ಚರ್ಯವೇ ಸರಿ. ಅಷ್ಟರ ಮಟ್ಟಿಗೆ ಜನಸಾಮಾನ್ಯರಿಗೆ ಈ ಇಲಾಖೆಯ ಮೇಲೆ ಇರುವ ನಂಬಿಕೆಯೇ ಬೇರೆ.
ವ್ಯಕ್ತಿಯೊಬ್ಬ ಅಧಿಕಾರದ   ಗದ್ದುಗೆ   ಏರಿದಾಗ  ತನ್ನ   ಮೂಲವನ್ನು   ಮರೆಯದೆ  ಹೆಜ್ಜೆ   ಹೆಜ್ಜೆಗೆ   ತಾನು   ಬಂದ  ದಾರಿಯನ್ನು  ಸ್ಮರಿಸುತ್ತ  ಸಾಗಿದಾಗ  ತನ್ನ  ಅಧಿಕಾರವನ್ನು ಜನಾನುರಾಗಿಯಾಗಿ  ಬಳಸಿಕೊಳ್ಳುತ್ತಾನೆ. ಹಾಗೆ  ಬಳಸಿ ಕೊಂಡವರಲ್ಲಿ ಎಸ್ ಆರ್ ಶ್ರೀಧರ  ಒಬ್ಬರು ಎನ್ನುವುದನ್ನು  ಸಾರ್ವಜನಿಕ ಹೃದಯದಲ್ಲಿ ಇವರ  ಕುರಿತಾಗಿ ಮನೆಮಾಡಿರುವ  ಅಭಿಪ್ರಾಯವೆ  ಸಾಕ್ಷಿಯಾಗಿ ಕಂಡುಬರುತ್ತದೆ.
ಶಿವಮೊಗ್ಗ  ಜಿಲ್ಲೆ  ಇವರ  ಮೂಲ  ಊರಾದರು ಶ್ರೀಧರರ  ಊರು ಉತ್ತರ ಕನ್ನಡವೇ  ಎಂದರೆ  ತಪ್ಪಿಲ್ಲ.
ಉತ್ತರ  ಕನ್ನಡ   ಜಿಲ್ಲೆಯಲ್ಲಿಯೇ ತನ್ನ  ಬದುಕಿನ ಬಹು  ದಿನವನ್ನು  ಆರಂಭಸಿ  ಇಲ್ಲಿಯ  ಅನ್ನ  ನೀರು  ಕುಡಿದು  ಬೆಳದ  ವ್ಯಕ್ತಿ   ಶ್ರೀಧರ  ಎಸ್  ಆರ್. ತನ್ನ ತಂದೆ  ಮುಂಡಗೋಡಿನಲ್ಲಿ   ಶಿಕ್ಷಕರಾದ ಕಾರಣದಿಂದ ಇಲ್ಲಿಯೇ ತನ್ನ ವಿದ್ಯಾಭ್ಯಾಸ  ಮುಗಿಸಿದ  ಶ್ರೀಧರ್ ಎಸ್   ಆರ್   ಒಂದು   ಅರ್ಥದಲ್ಲಿ  ಉತ್ತರ  ಕನ್ನಡವೆ  ಅವರ  ರಕ್ತದಲ್ಲಿ ಇದೆ  ಎಂದರು  ತಪ್ಪಾಗಲಾರದು. ಈ ಕಾರಣಕ್ಕಾಗಿಯೇ ಜಿಲ್ಲೆಯ  ಋಣದ  ಭಾರ  ತನ್ನ  ಮೇಲಿದೆ  ಎನ್ನುವ ಕಾರಣದಿಂದ  ಜಿಲ್ಲೆಯ  ಹೃದಯ  ಗೆಲ್ಲುವ  ಕರ್ತವ್ಯ ನಿರ್ವಹಣೆ ಮಾಡುತ್ತಿರುವುದು  ಜನಸಾಮಾನ್ಯರ  ಬದುಕು ಅವರ  ಹೃದಯದ  ಒಳಗೆ  ಇದೆ  ಎನ್ನುವುದನ್ನು ಮರೆಯುವ ಹಾಗಿಲ್ಲ.
ತನ್ನ  ವೃತ್ತಿಯ ಮೊದಲ ದಿನವನ್ನು  ಗುಲ್ಬರ್ಗ, ಕೋಲಾರ, ಮಂಗಳೂರು, ಜಮಖಂಡಿ, ಯಲ್ಲಾಪುರ, ಕುಮಟಾ, ಜಿಲ್ಲಾ ಅಪರಾಧ ಪತ್ತೆದಳ, ಅಂಕೋಲ, ಕರಾವಳಿ ಕಾವಲು ಪಡೆ, ಹಾಗೆ ಹೊನ್ನಾವರ. ಒಟ್ಟು ತನ್ನ 15 ವರ್ಷದ ಸೇವೆಯಲ್ಲಿ ಎಲ್ಲಿಯೂ ಹೆಸರು ಕೆಡಿಸಿಕೊಂಡಿಲ್ಲ ಎಂದರೆ ಉತ್ತರ ಕನ್ನಡ ಅವರಿಗೆ ಒಳ್ಳೆಯದನ್ನು ನೀಡಿದೆ ಎನಿಸುತ್ತದೆ. ಮಾತ್ರವಲ್ಲ ತಾನು  ಬೆಳೆದ  ಜಿಲ್ಲೆಯಲ್ಲಿಯೇ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ವಿಶೇಷವೇ!
ಮಾನ್ಯ ಮುಖ್ಯಮಂತ್ರಿಗಳ ಚಿನ್ನದ ಪದಕ ಅಪರಾಧ ಪತ್ತೆ ತನಿಖೆ ಕಾರ್ಯದಲ್ಲಿ ಉತ್ತಮ ಕರ್ತವ್ಯನಿರ್ವಣೆ ಹಿನ್ನೆಲೆಯಲ್ಲಿ ಪಡೆದರೆ , ಭಯೋತ್ಪಾನೇ ವಿರೋಧಿ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಗ್ರಹ ಸಚಿವರ ವಿಶೇಷ ಕಾರ್ಯಾಚರಣೆಯ ಪದಕ  ಒಲಿದಿದ್ದು  ಒಬ್ಬ ವ್ಯಕ್ತಿ  ಜನಪರ ಕರ್ತವ್ಯ  ನಿರ್ವಹಿಸಿದರೆ  ಯಾವ ಮೂಲೆಯಲ್ಲಿ  ಇದ್ದರು ಯೋಗ್ಯತೆ ಅವರನ್ನು ಅರಸಿ ಬರುತ್ತದೆ  ಎನ್ನುವುದಕ್ಕೆ ಶಶಿಧರರ  ಕಾರ್ಯವೇ ಸಾಕ್ಷಿ. ಇವರೊಬ್ಬ ಅಪರೂಪದ ಕರ್ತವ್ಯ  ಪ್ರಜ್ಞಾ ಪ್ರೀಯರು  ಎನ್ನುವುದಕ್ಕೆ  ಅವರು ಕೊಡುತ್ತಾ  ಬಂದಿರುವ  ವಾರದ ವ್ಯಕ್ತಿ ಪುರಸ್ಕಾರ  ಉತ್ತಮ ಉದಾಹರಣೆ. ಇಲಾಖೆಯಲ್ಲಿ ಒಳ್ಳೆಯ ಕೆಲಸ ಮಾಡಿದವರನ್ನು  ಅಲ್ಲಿರುವ  ಸಿಬ್ಬಂದಿಗಳೇ  ಆಯ್ಕೆ ಮಾಡಿ  ಕೊಡುವ ನಿಯಮವನ್ನು ಜಾರಿಗೆ ತಂದು ಸಿಬ್ಬಂದಿಗಳ ಕಾರ್ಯ  ಪ್ರಜ್ಞೆಯನ್ನು  ಆ ಮೂಲಕ  ಜಾಗ್ರತ ಗೊಳಿಸುವುದು  ಮಾತ್ರವಲ್ಲದೆ  ಕರ್ತವ್ಯವನ್ನು  ಗೌರವಿಸುವ ಕಾರ್ಯ ಮಾಡುತ್ತ  ಬಂದಿರುವುದು  ಇವರೊಬ್ಬ ಸಹೃದಯ ಮನೋಭಾವದ  ಚಿಂತಾನಶೀಲ  ಅಧಿಕಾರಿ ಎನ್ನುವುದಕ್ಕೆ ಸಾಕ್ಷಿ.
ಸಾರ್ವಜನಿಕ  ಗಣೇಶೋತ್ವವಕ್ಕೆ  ಶಾಂತಿಃ,  ಶಿಸ್ತು,  ಸೌಹಾರ್ದ ಕಲ್ಪನೆಯನ್ನು  ತುಂಬಿ  ತಾವು  ಇರುವಲೆಲ್ಲಾ  ಉತ್ತಮ ಗಣೇಶೋತ್ಸವ  ಸಮಿತಿಗೆ ಪ್ರಶಸ್ತಿ  ಕೊಡುತ್ತಾ  ಬಂದಿರೋದು ತಮ್ಮ  ಹುದ್ದೆಯ  ಅರ್ಥವನ್ನು  ಸಮಾಜ ಮುಖಿಯಾಗಿಸಿ ಕೊಂಡಿದ್ದಾರೆ  ಎನ್ನುವುದಕ್ಕೆ  ಬೇರೆ  ಉದಾಹರಣೆ  ಬೇಕಿಲ್ಲ ಅಲ್ಲವೇ.?   ಹಬ್ಬವನ್ನು  ಈ ಅರ್ಥದಲ್ಲಿ   ಹಲವು  ಜಾತಿ ಜನಾಂಗ  ಸಂಸ್ಕೃತಿಗಳ  ಮದ್ಯೆ  ಏಕತೆಯ ಜ್ಯೋತಿ  ಬೆಳಗಿಸುವಲ್ಲಿ  ಹೆಜ್ಜೆ  ಇಡುತ್ತಾ  ಬಂದಿರೋದು  ತನ್ನ ಹುದ್ದೆಗೆ ಅರ್ಥ ಕಂಡು ಕೊಂಡಿದ್ದಾರೆ ಎನ್ನುವುದಕ್ಕೆ  ಒಂದು ಮೈಲಿ ಗಲ್ಲು.
ಕರಾವಳಿ ಮುಂಜಾವಿನ ವರದಿಗಾರರಾದ ಎಚ್ ಎಲ್ ನಗರೇ ಅವರು ಹೇಳುವ ಮಾತು 
ಪೊಲೀಸ್  ಭಾಷೆ ಅಂತ ಒಂದು ಭಾಷೆ ಇದೆ. ಕಳೇದ  ಎರಡೂ ವರ್ಷದಿಂದ ಗಮನಿಸಿದ್ದೇನೆ. ಆದರೆ ಒಂದೇ ಒಂದು  ಪೊಲೀಸ್ ಭಾಷೆಯ  ಪದ  ಅವರ  ಬಾಯಿಂದ ಯಾರಿಗೂ ಕೇಳಿಲ್ಲ. ಅಷ್ಟು  ಸೌಜನ್ಯದ   ಭಾಷೆ  ಅವರ  ಬಾಯಲ್ಲಿ ಇದೆ. ಮಾಧ್ಯಮದವರಾಗಿ  ಯಾವುದೇ ವಿಚಾರ, ವಿಷಯಕ  ಕೇಳಿದರು  ಹೇಳುವ  ರೀತಿ, ಅದಕ್ಕೆ ಅವರು ತೋರುವ ದಾರಿ ಬೇರೆ ಯಾರಿಂದಲೂ ಸಿಗಲು ಸಾಧ್ಯವಿಲ್ಲವೇನೋ ಅನಿಸುತ್ತೆ ನಮಗೆ.
ಎಲ್ಲಿಯೂ ಪೊಲೀಸ್ ಗಿರಿ, ಪೊಲೀಸ್ ದರ್ಪವಾಗಲಿ  ಎಂದು ಕಂಡು ಬಂದಿಲ್ಲ. ಪೊಲೀಸ್ ಅಂದ್ರೆ ಹಣ ಮಾಡುವವರು  ಎನ್ನುವ  ಮಾತು  ಇದೆ. ಆದ್ರೆ   ಇವರು ಹಣ ಮಾಡಿದ್ದಾರೋ  ಇಲ್ವೋ  ಗೊತ್ತಿಲ್ಲ. ಆದ್ರೆ ಯಾರ ಬಾಯಲ್ಲೂ ಸುಲಿಗೆ ಮಾಡಿದ್ದಾರೆ  ಎನ್ನುವ  ಒಂದೇ ಒಂದು  ಶಬ್ದ ಮಾಧ್ಯಮದವರ  ಹತ್ತಿರ  ಬಂದಿಲ್ಲ. ಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ  ಸಿಪಿಐ ಎನ್ನುವುದಕ್ಕಿಂತ ಒಬ್ಬ ಶಿಕ್ಷರಾಗಿ ಕೆಲಸಮಾಡಿದ್ದಾರೆ. ಕಂಪ್ಲೇಂಟ್  ಕೊಟ್ಟಿದ್ದನ್ನು  ನಿಭಾಯಿಸುವುದು ಬೇರೆ. ಆದ್ರೆ ಎಷ್ಟೋ  ಸಮಸ್ಯೆಯನ್ನು  ಹೇಳಿದಾಗ  ಎರಡೂ ಪಾರ್ಲಿಟಿಯನ್ನು    ಕರೆಸಿ  ಯಾವುದೇ  ಕಂಪ್ಲೇಂಟ್  ಇಲ್ಲದೆ ಬಗೆ  ಹರಿಸಿದ್ದು  ತುಂಬಾ ಇದೆ.ಒಳ್ಳೆಯ ಸೌಜನ್ಯದ  ವ್ಯಕ್ತಿ  ಅವರು  ಎನ್ನುತ್ತಾರೆ.
ನೂತನ ವಾಹಿನಿಯ ನಾಗರಾಜ್ ನಾಯ್ಕ  ತಮ್ಮ ಅಭಿಪ್ರಾಯವನ್ನು ಹೀಗೆ ದಾಖಲಿಸುತ್ತಾರೆ.
ಮಾಧ್ಯಮ ಮತ್ತು ಪೊಲೀಸ್ ಇಲಾಖೆ ಇವತ್ತಿನ ದಿನದಲ್ಲಿ ಒಂದು ರೀತಿ ತದ್ವಿರುದ್ದ ಇರುವಂತದ್ದಾಗಿದೆ.ಆದರೂ ಅವರು ಮಾಧ್ಯಮದವರನ್ನು ಅತ್ಯಂತ ಸೌಜನ್ಯದಿಂದ  ಮಾತನಾಡಿಸುತ್ತಾರೆ. ಸಮಾಜವನ್ನು  ಸರಿ ದಾರಿಗೆ ತರುವಲ್ಲಿ ಇಬ್ಬರ ಪಾತ್ರವು ಅಷ್ಟೇ ಮುಖ್ಯ ಎನ್ನುವ ವಿಚಾರವನ್ನು ಇಟ್ಟುಕೊಂಡವರು.ಅವರು ಕರ್ತವ್ಯ ನಿಷ್ಠೆಯನ್ನು ಅಷ್ಟೇ ಪ್ರಾಮಾಣಿಕವಾಗಿ ಮಾಡಿದ್ದಾರೆ. ಅವರಿಗೆ ಸಿಕ್ಕ  ಮಾನ ಸನ್ಮಾನ  ಅವರ ಪ್ರಾಮಾಣಿಕ ಸೇವೆಗೆ ಸಿಕ್ಕ ಫಲ ಎನ್ನುವುದು ನಾಗರಾಜ್ ನಾಯ್ಕರ ಮಾತಾಗಿದೆ.
ಅನೇಕ ಸಂದರ್ಭದಲ್ಲಿ  ವ್ಯಯಕ್ತಿಕವಾಗಿಯೂ  ಸಹಾಯ ಹಸ್ತ ನೀಡಿ  ನಿಮ್ಮೊಳಗಿನ ಮಾನವೀಯತೆಯ ಉಸಿರಿಗೆ ನೀವೇ ಸಾಕ್ಷಿಯನ್ನು  ಕಂಡು  ಕೊಂಡಿದ್ದೀರಿ.
ಒಟ್ಟಿನಲ್ಲಿ ಎಲ್ಲರ  ಹೃದಯ ಭಾವದಲ್ಲಿಯೂ ತನ್ನ ಬಗ್ಗೆ  ಗೌರವದ  ಭಾವನೆಯನ್ನು  ದಾಖಲೆ ಮಾಡಿದ್ದು  ಒಂದು ದೊಡ್ಡ ಸಾಧನೆಯೇ, ಅದು ಪೊಲೀಸ್  ಇಲಾಖೆಯಲ್ಲಿ  ಇದ್ದು ಕೊಂಡು.  ಒಂದು  ಅರ್ಥದಲ್ಲಿ  ಶ್ರೀಧರರ  ಜನ್ಮ ಹಾಗೂ  ಅವರ  ಅಧಿಕಾರ  ಧನ್ಯವಾಯಿತು. ಇದಕ್ಕೂ  ಅವರೇ  ಕಾರಣ. ವ್ಯಕ್ತಿ  ತನ್ನ  ವಾಸ್ತವ ಬದುಕಿನ  ಪ್ರಜ್ಞೆಯನ್ನು  ಮರೆಯದೆ  ಇದ್ದರೆ, ಇದ್ದಲ್ಲಿಯೇ  ಸಾಮಾನ್ಯರ  ಹೃದಯದಲ್ಲಿ  ಸ್ಥಾನ  ಪಡೆಯಬಹುದು. 
ವಿಶೇಷ  ಚುನಾವಣ  ಕರ್ತವ್ಯದ  ನಿಮಿತ್ತ  ಸಮೀಪದ ಹಾನಗಲ್ಲಿಗೆ  ವರ್ಗಾವಣೆ  ಆದರೂ  ಇದು ಕಾಯಂ  ವರ್ಗಾವಣೆಯೇ.
ಮನುಷ್ಯನಿಗೆ ಯಾವುದು ಗೊತ್ತಿಲ್ಲವೋ ಅದನ್ನು ತಿಳಿಸುವುದು ವಿದ್ಯಾಭ್ಯಾಸದ ಗುರಿಯಲ್ಲ. ಹೇಗೆ ವರ್ತಿಸಬೇಕೆಂದು ತಿಳಿಸುವುದೇ ವಿದ್ಯಾಭ್ಯಾಸದ ಗುರಿ...............ಜಾನ್ ರಸ್ಕಿನ್ 
ನೀವು ಕಲಿತ  ಶಿಕ್ಷಣ  ನಿಮಗೆ ಅರಿವನ್ನು ಕೊಟ್ಟಿದೆ.
ಸಾವಿರಾರು ವಿದ್ಯಾರ್ಥಿಗಳ  ಹೃದಯಕ್ಕೆ  ಸುಜ್ಞಾನದ  ಅಕ್ಷರ ಮಾಲೆಯನ್ನು  ತೋಡಿಸಿದ  ಶಿಕ್ಷಕರಾದ  ನಿಮ್ಮ  ತಂದೆಯ ವೃತ್ತಿಗೆ  ನಿಜವಾದ  ಅರ್ಥದಲ್ಲಿ  ಭಾರತ  ರತ್ನಕ್ಕಿಂತ   ಮಿಗಿಲಾದ ಗೌರವವನ್ನು  ಕಲ್ಪಿಸಿ  ಕೊಟ್ಟಿರಿ. ನಿಮ್ಮ ಜನ್ಮಕ್ಕೆ ಕಾರಣರಾದ ತಂದೆ ತಾಯಿ ಮಹಾ   ಸಂಸ್ಕಾರವಂತರು ಎನ್ನುವುದನ್ನು  ನಿಮ್ಮಿಂದಾಗಿ  ತಿಳಿಯಬಹುದಾಗಿದೆ. ಮುಂದಿನ  ದಾರಿಯು  ಶುದ್ಧವಾಗಿ  ಬದುಕಿನುದ್ದಕ್ಕೂ  ನೆಮ್ಮದಿಯ  ಮಹಾ ಮಲ್ಲಿಗೆ  ನಿಮ್ಮದಾರಿಗೆ  ಹಾಸಿರಲಿ.....


ಹಳ್ಳಿ ( ಸುದ್ದಿ ) ನ್ಯೂಸ್
ಭಾವ ಶುದ್ಧಿ.
Share:

0 Comments:

ಕಾಮೆಂಟ್‌‌ ಪೋಸ್ಟ್‌ ಮಾಡಿ

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels

Blog Archive