ನಮ್ಮ ದೇಶದ ಅಭಿವೃದ್ಧಿ ಇನ್ನು ಎರಡೇ ಹೆಜ್ಜೆಗಳಲ್ಲಿ ತಿಳಿಯಲು ಇದನ್ನ ಓದಿ

 ನಮ್ಮ ದೇಶದ ಅಭಿವೃದ್ಧಿ ಇನ್ನು ಎರಡೇ ಹೆಜ್ಜೆಗಳಲ್ಲಿ ಎನ್ನುವ ತಲೆಬರಹ ನೋಡ ಕಂಗಾಲಾದಿರಾ?

    ಹೌದು ಎಲ್ಲರಿಗೂ ಅತ್ಯುತ್ತಮವಾದ ವ್ಯವಸ್ಥೆ ನಮ್ಮ ದೇಶದಲ್ಲಿ ಬೇಕೇ ಬೇಕು ಎನ್ನುವ ತುಡಿತ ಮನಸ್ಸಿನ ಆಳದಲ್ಲಿ ಇದ್ದೇ ಇದೆ. ಹಾಗಾದರೆ ಈ ವ್ಯವಸ್ಥೆ ನಿಜವಾಗಲೂ ಬೇಕು ಎಂದಾದರೆ ನಮ್ಮ ಮನಸ್ಥಿತಿಯು ಬದಲಾಗಬೇಕು. ಸರಕಾರ, ಕಾನೂನು, ವ್ಯವಸ್ಥೆ, ಅಧಿಕಾರಿಗಳು ಎಷ್ಟು ಅಂತ ನಮ್ಮನ್ನ ಕಾಯಲು ನಮ್ಮನ್ನ ರಕ್ಷಿಸಲು, ನಾವು ಮಾಡುವ ತಪ್ಪುಗಳನ್ನು ತಿದ್ದಲು ಸಾಧ್ಯ? ಹೌದು ಇವತ್ತು ಎಲ್ಲಾ ಕಡೆ ಲಂಚ, ಭ್ರಷ್ಟಾಚಾರ, ಕೆಟ್ಟ ರಾಜಕೀಯ, ಕೆಟ್ಟ ಹೊಂದಾಣಿಕೆಗಳು ಇದೆಲ್ಲವು ಕಣ್ಣಿಗೆ ಕಾಣಿಸುತ್ತದೆ, ಕಂಡಾಗಲೊಮ್ಮೆ ನಮಗೆ ಅಯ್ಯೋ ಎಂದು ಅನಿಸುತ್ತದೆ. ಆದರೆ ಇದಕ್ಕೆ ನಮ್ಮ ಕಾಣಿಕೆ ಕೂಡ ಇದೆ ಎನ್ನುವುದನ್ನು ನಾವು ಮರೆಯುವಂತಿಲ್ಲ. 

ನಿಮಗೆ ಒಳ್ಳೆಯ ವ್ಯವಸ್ಥೆ ಬೇಕು ಎನ್ನುವುದಿದ್ದರೆ ನೀವು ಕೂಡ ತಕ್ಕಮಟ್ಟಿಗೆ ನಮ್ಮ ದೇಶದ ಈ ವ್ಯವಸ್ಥೆಯಲ್ಲಿ ಭಾಗಿಯಾಗಲೇಬೇಕು- ಮಾತನಾಡಲೇಬೇಕು –ಹೋರಾಡಲೇಬೇಕು. ಯಾವುದೇ ಕಚೇರಿಗಳಿಗೆ ಹೋದರೂ ನಮಗೆಲ್ಲ ಏನು ಅನಿಸುತ್ತದೆ ಎಂದರೆ, ಎಲ್ಲವನ್ನು ದುಡ್ಡಿನಿಂದಲೇ ಅಳೆಯುತ್ತಾರೆ ಎಂದು. ದುಡ್ಡು ಕೊಟ್ಟರೆ ಮಾತ್ರ ಕೆಲಸ ಆಗುತ್ತದೆ ಎಂದು. ಆದರೆ ಎಲ್ಲಾ ಕಡೆ ಈ ರೀತಿಯಾಗಿ ಇಲ್ಲ ಎಂದು ಈ ಕೆಳಗಿನ ವಿಡಿಯೋ ನೋಡಿದರೆ ಅನ್ಸುತ್ತೆ. ಇದರಲ್ಲಿ ನಮ್ಮ ದೇಶದ ಜನರ ಕೆಟ್ಟ ದೃಷ್ಟಿಕೋನಗಳು ತುಂಬಾ ಕಡೆ ಇದೆ. ಸುಧಾರಿಸಿದ ಮನಸ್ಸು ನಮ್ಮೊಳಗೆ ಬರಬೇಕು. ನಾವು ಸುಧಾರಿಸಿದರೆ ಸರಿ ದಾರಿಯಲ್ಲಿ ನಡೆದರೆ ನಮಗೆ ಯಾಕೆ ಬುದ್ಧಿವಾದ ಹೇಳಬೇಕು? 

    ಇಷ್ಟೆಲ್ಲಾ ಪೀಠಿಕೆಯನ್ನು ಹೇಳಲು ಕಾರಣ ಈ ಕೆಳಗೆ ಇರುವ ವಿಡಿಯೋ. ಅದನ್ನು ನೋಡಿದಾಗ ಬರೆಯಲೇಬೇಕು ನಿಮಗೆ ತಿಳಿಸಲೇಬೇಕು ಎಂದು ಅನಿಸಿತು ನಿಜವಾದ ಭಾರತೀಯರಿಗೆ ಬುದ್ಧಿ ಹೇಳುವ ಅವಶ್ಯಕತೆ ಇಲ್ಲ ಅವರು ಮಾಡುವ ಕೆಲಸದಿಂದಲೇ ಎಷ್ಟು ಬುದ್ಧಿವಂತರು ಎಂದು ತಿಳಿದು ಬಿಡುತ್ತದೆ. ಇದರ ಜೊತೆಗೆ ಭ್ರಷ್ಟಾಚಾರ, ಲಂಚಗುಳಿತನ, ಕೆಟ್ಟ ರಾಜಕೀಯ ವ್ಯವಸ್ಥೆಗಳು ನಮ್ಮ ಭ್ರಷ್ಟ ಮನಸ್ಸುಗಳು ಇವುಗಳನ್ನೆಲ್ಲವನ್ನು ಮಟ್ಟ ಹಾಕಲೇಬೇಕು. ಇದಕ್ಕೆ ಸರಕಾರದಲ್ಲಿ ಆಗುವಂತಹ ಭ್ರಷ್ಟಾಚಾರಗಳನ್ನು ಸರಕಾರದ ಮಟ್ಟದಲ್ಲಿ ಇರುವಂತಹ ನಿಷ್ಠಾವಂತ ಅಧಿಕಾರಿಗಳು ಏಕ ಮನಸ್ಸಿನಿಂದ ಮಾಡಲೇಬೇಕು. ಸಮಾಜದಲ್ಲಿ ಇರುವಂತಹ ಅನಿಷ್ಟ ವಿಚಾರಗಳನ್ನು ಪದ್ಧತಿಗಳನ್ನು ಸಮಾಜದಲ್ಲಿರುವ ಮುಖಂಡರುಗಳು, ತಿಳುವಳಿಕೆ ಇರುವವರು ತಡೆಯಬೇಕು. ನಾನು ಅನೇಕ ಕಡೆ ನೋಡಿದ್ದೇನೆ ತಮ್ಮ ಕೆಲಸವನ್ನು ತಾವು ಮಾಡಿಕೊಂಡು ಕೆಟ್ಟತನವನ್ನು ವಿಜೃಂಭಿಸಿಕೊಂಡು ಹೋಗುತ್ತಿರುತ್ತಾರೆ. ಒಳ್ಳೆಯವರೆಲ್ಲ ದೇವರ ಹೆಸರಿನಲ್ಲಿ ದೇವರು ನೋಡಿಕೊಳ್ಳುತ್ತಾನೆ ಎಂದು ಮಾತನಾಡುತ್ತಾರೆ. ವಿಚಾರ ಮಾಡಲೇಬೇಕು ದೇವರು ನಮ್ಮನ್ನ ಭೂಮಿಯ ಮೇಲೆ ಹುಟ್ಟಿಸಿದ್ದು, ದೇವರು ನಾನು ಬರುವರಿಗೆ ನೀನು ಕಾಯಿ ಎಂದು ಹೇಳುವುದಕ್ಕಲ್ಲ. ನೀನು ಕೆಲಸವನ್ನು ಮಾಡು ಎಂದು ಹೇಳಿ ನಮ್ಮನ್ನು ಕಳಿಸಿರುತ್ತಾನೆ ಆದರೆ ಮತ್ತೆ ನಾವು ದೇವರ ಹೆಸರಿನಲ್ಲಿ ದೇವರು ಬರಲಿ ದೇವರೇ ಕೆಲಸ ಮಾಡಲಿ ಎಲ್ಲವನ್ನು ಎಂದು ಈ ರೀತಿಯಾಗಿ ದೇವರ ಹೆಸರಿನಲ್ಲಿ ಹೇಳುತ್ತಾ ಒಳ್ಳೆಯ ವ್ಯಕ್ತಿಗಳು ಹೇಳುತ್ತಾ ಮುಂದೆ ಸಾಗ್ತಿರ್ತಾರೆ.


    ಅದೆಲ್ಲಾ ಬಿಡಿ ನಮ್ಮ ಮನೆಯನ್ನ ನಾವು ಹೇಗೆ ಕಟ್ಟಿಕೊಳ್ತೇವೋ ಹಾಗೆ ನಮ್ಮ ದೇಶವನ್ನ ಣಾವೇ ಕಟ್ಟ್ಕೊಳ್ಳಲೇಬೇಕು. ಸ್ವಲ್ಪ ಹೋರಾಟ ಮಾಡೋಣ ಬನ್ನಿ. ಭಗವಂತ ನಮ್ಮಲ್ಲೇ ಸಂಭಾವಾಮಿ ಯುಗೇ ಯುಗೇ  ಎಂದು ಆಗ್ತಾ ಇರ್ತಾನೆ. ಅದನ್ನ ಅರ್ಥ ಮಾಡ್ಕೊಳ್ಳಿ. ಒಂದೊಳ್ಳೇ ವ್ಯವಸ್ಥೆಗೆ ನಾವು ಹೋರಾಟ ಮಾಡಲೇ ಬೇಕಾಗಿದೆ.
     ನಿಮಗೆ ತೋರಿಸಬೇಕಾದ ವಿಡಿಯೋ ನಾನು ತೋರಿಸ್ತೇನೆ. ಇಲ್ಲೊಬ್ಬ ಈಶಾನ್ಯ ಭಾರತದ ಒಂದು ಪ್ರಾಂತ್ಯದ ಆರ್.ಎಫ್.ಒ ಅವರು ಜನರಿಗೆ ಎಷ್ಟು ಮನಮುಟ್ಟು ರೀತಿಯಲ್ಲಿ ವಿಷಯ ಹೇಳಿ ಕೊಟ್ಟಿದ್ದಾರೆ ಕೇಳಿ. ವಿಡಿಯೋ ಹಿಂದಿಯಲ್ಲಿದೆ ಕನ್ನಡದಲ್ಲಿ ಅದರ ಅರ್ಥವನ್ನು ಹೇಳುವ ಪ್ರಯತ್ನವನ್ನು ಮಾಡುತ್ತೇನೆ. ಅವರು ಹೇಳಿದ್ದು ಇಷ್ಟೆ “ನಮ್ಮ ಸಂಸ್ಕೃತಿಯಲ್ಲಿ ಹಿಂದೆ ಬಂದೂಕು ಇತ್ತಾ? ನೀವೆಲ್ಲ ಯಾಕೆ ಬಂದೂಕನ್ನ ತೆಗೆದುಕೊಂಡು ಸಂತೋಷವನ್ನ  ಹುಡುಕ್ತೀರಿ. ನಿಮ್ಮ ಕೈಲಿರುವ ಬಂದುಗಳನ್ನು ನೋಡಿದರೆ ನೀವು ತಾಲಿಬಾನ್ಗಳ ರೀತಿಯಲ್ಲಿ ಕಾಣಿಸ್ತಿದಿರಿ. ನಮಗೂ ಕೂಡ ಅಣ್ಣ ತಮ್ಮಂದಿರು ಸಂಬಂಧಿಗಳು ಎಲ್ಲರಿಗೂ ಇರುತ್ತಾರೆ ಅವರಲ್ಲಿ ಯಾರಾದರೂ ಸತ್ತರೆ ತುಂಬಾ ವೇದನೆಯನ್ನು ಅನುಭವಿಸುತ್ತೇವೆ. ಕಾಡಿನಲ್ಲಿರುವ ಪ್ರಾಣಿಗಳಿಗೂ ಕೂಡ ಬಂಧು ಬಳಗ ಎಲ್ಲಾ ಇರ್ತವೆ, ಹಾಗಾಗಿ ನೀವು ಕಾಡಿನಲ್ಲಿರುವ ಪ್ರಾಣಿಗಳನ್ನು ಕೊಂದು ಆನಂದ ತಗೊಳ್ಳಬೇಕಾಗಿಲ್ಲ. ನಿಮಗೆ ತಿನ್ನಬೇಕು ಅನ್ಸಿದ್ರೆ ಮಾರ್ಕೆಟಿಗೆ ಹೋಗಿ, ಮಾರ್ಕೆಟ್ನಲ್ಲಿ ಎಲ್ಲಾ ರೀತಿಯಾದ ತಿನ್ನೋದಕ್ಕೆ ಬೇಕಾದ ವಸ್ತುಗಳು ಸಿಗ್ತವೆ. ಕಾಡಿಗೆ ಹೋಗಿ ಹಿಂಸೆಗಳ ಮಾಡುವ ಮೂಲಕ ನಿಮ್ಮನ್ನು ನೀವು ಆನಂದಿಸುವುದು ಎಷ್ಟು ಸರಿ, ವಿಚಾರ ಮಾಡಿ, ಎಂದು ಹೇಳ್ತಾ ಇದ್ದಾರೆ. ನಿಜವಾಗಲೂ ಈ ರೀತಿಯ ಸರಕಾರಿ ಅಧಿಕಾರಿಗಳಿದ್ದರೆ ನಮ್ಮ ದೇಶದ ಅಭಿವೃದ್ಧಿ ಇನ್ನು ಎರಡೇ ಹೆಜ್ಜೆಗಳಲ್ಲಿ ಎಂದು ಹೇಳೋದಕ್ಕೆ ಸಾಧ್ಯ
Sri Jumgo Geiyi is RFO at Pasighat. Trying his best to convince people not to go for reckless hunting. Convincing such heavily armed people is another effort. Your views ?
ಅವರು ಜನರನ್ನ ಮನಸ್ಸನ್ನ ತಯಾರು ಗೊಳಿಸುತ್ತಿರುವುದು ಉತ್ತಮ ನಾಗರಿಕರನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿರುವುದು ಈ ವಿಡಿಯೋದಲ್ಲಿ ಕಂಡುಬಂದಿದೆ.  Parveen Kaswan, IFSರವರು ಷೇರ್‌ ಮಾಡಿರುವ ವಿಡಿಯೋ ವೈರಲ್‌ ಆಗ್ತಿದೆ. ಈ ವಿಡಿಯೋದ ಕುರಿತು ನಿಮ್ಮ ಅಭಿಪ್ರಾಯವನ್ನು ಖಂಡಿತವಾಗಿಯೂ ತಿಳಿಸಿ


 




Share:

0 Comments:

ಕಾಮೆಂಟ್‌‌ ಪೋಸ್ಟ್‌ ಮಾಡಿ

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels

Blog Archive