"ಸೇವಾ ನಿಷ್ಠಾ ಶ್ರೀಧರರಿಗೆ ಅಭಿನಂದನೆಗಳ ಮಹಾಪುರ "ಇದು ಹೊನ್ನಾವರ ಜನತೆಯ ನ್ಯಾಯ ಸಮ್ಮತ ಕರ್ತವ್ಯಕ್ಕೆ ಪ್ರಜ್ಞಾ ಶ್ರೀಮಂತಿಕೆಯ ಸಮರ್ಪಣೆ"
ಹೊನ್ನಾವರ : ಹೊನ್ನಾವರದ ಇತಿಹಾಸದಲ್ಲಿ ಒಬ್ಬ ಪೊಲೀಸ್ ಅಧಿಕಾರಿಗೆ ಈ ಪ್ರಮಾಣದ ಗೌರವ ಸಮರ್ಪಣೆ ಇದೆ ಮೊದಲ ಬಾರಿ ಎನಿಸುತ್ತದೆ. ಅಷ್ಟರ ಮಟ್ಟಿಗೆ ಎಸ್ ಆರ್ ಶ್ರೀಧರ್ ಜನರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ ಎನ್ನುವುದು ಸಾಕ್ಷಿಯಾಗಿ ಹೋಯಿತು.
ಸಾಮಾನ್ಯವಾಗಿ ಪೊಲೀಸರು ಎಂದರೆ ಒಪ್ಪಿತ ಭಾವ ಕಡಿಮೆಯೇ ಇದೆ, ಎಲ್ಲರಿಗೂ ಗೊತ್ತಿರುವ ಮಾತೇ. ಆದರೆ ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದರೆ ಅಲ್ಲೇನೋ ಒಂದು ಒಳ್ಳೆಯ ತನ ಮಾನದಂಡವಾಗಿದೆ ಎಂತಲೇ ಅರ್ಥ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ತನ್ನ ಬದುಕನ್ನು ಕಳೆದು , ಉತ್ತರ ಕನ್ನಡಕ್ಕೆ ಹೆಚ್ಚಿನ ಸೇವೆ ಸಲ್ಲಿಸಿದ ಶ್ರೀಧರರಿಗೆ ಗೌರವ ಸಮರ್ಪಸಿದ್ದು ಒಂದು ಅರ್ಥದಲ್ಲಿ ಹೊನ್ನಾವರ ಜನತೆಯ ಹೃದಯದಲ್ಲಿ ಇರುವ ನ್ಯಾಯ ಸಮ್ಮತ ಕರ್ತವ್ಯಕ್ಕೆ ಪ್ರಜ್ಞಾ ಶ್ರೀಮಂತಿಕೆಯ ಸಮರ್ಪಣೆ ಎಂದರೆ ತಪ್ಪಾಗಲಾರದು. ಇದು ಹೊನ್ನಾವರ ಜನತೆಯ ದೊಡ್ಡ ಗುಣವು ಹೌದು.
ಮಾತ್ರವಲ್ಲ ಒಳ್ಳೆಯವರನ್ನು ಅಷ್ಟೇ ದೊಡ್ಡ ಮಟ್ಟದಲ್ಲಿ ಗೌರವಿಸುತ್ತಾರೆ ಹೊನ್ನಾವರದ ಜನತೆ ಎನ್ನುವುದಕ್ಕೆ ಇಲ್ಲಿಗೆ ಅಧಿಕಾರದ ಕುದುರೆ ಏರಿ ಬರುವ ಆಡಳಿತ ವರ್ಗದ ಸದಸ್ಯರಿಗೆ ಇದೊಂದು ದೊಡ್ಡ ಉದಾಹರಣೆ.
ತಾಲೂಕಿನ ಬಹುತೇಕ ಎಲ್ಲ ಕಡೆಯಿಂದಲೂ ನಿನ್ನೆ ಹೊನ್ನಾವರದ ಪ್ರತಿಭೋದಯದಲ್ಲಿ ನಡೆದ ವೇದಿಕೆಯಯಲ್ಲಿ ಶ್ರೀಧರರಿಗೆ ಗೌರವ ಸಮರ್ಪಣೆ ಆಗಿದೆ.
ಅಷ್ಟರ ಮಟ್ಟಿಗೆ ಜನಸಾಮಾನ್ಯರ ಹೃದಯಕ್ಕೆ ತಮ್ಮ ಕರ್ತವ್ಯ, ಸೇವಾ ನಿಷ್ಠೆ, ಪ್ರಾಮಾಣಿಕವಾದ ತನ್ನ ಹುದ್ದೆಯ ಅರ್ಥವನ್ನು ಅರಿತು ಹತ್ತಿರ ಆಗಿದ್ದಾರೆ ಎಸ್ ಆರ್ ಶ್ರೀಧರರು.
ತಾವು ಅಧಿಕಾರಕ್ಕೆ ಹೋದಲೆಲ್ಲಾ ಪೊಲೀಸ್ ಗಿರಿಯ ಪ್ರದರ್ಶನ ಎಂದು ಮಾಡಿದವರಲ್ಲ. ಬದಲಾಗಿ ಅಲ್ಲೊಂದು ಒಳಗಿರುವ ಹೃದಯ ದರ್ಶನ ಮಾಡಿಸಿ ತನ್ನ ಹೆಸರಿನ ಹಿಂದೆ ಇರುವ ಅರ್ಥವನ್ನು ಉಳಿಸಿ ಕೊಂಡು ಜನ ಮೆಚ್ಚುಗೆ ಪಡೆದು ಬಂದಿದ್ದಾರೆ.
ಇಂತವರಿಗೆ ಗೌರವ ಸಮರ್ಪಣೆ ಆದಾಗ ಸಮಾಜವು ಎಚ್ಚರದಿಂದ ಇದೆ ಎನ್ನುವುದಕ್ಕೆ ಇದೊಂದು ಮೈಲಿ ಗಲ್ಲು. ಹೊನ್ನಾವರಕ್ಕೆ ಬರುವ ಅಧಿಕಾರಿ ವರ್ಗ ಇದನ್ನು ಸೂಕ್ಷ್ಮವಾಗಿ ತಿಳಿದು ಕೊಳ್ಳಲೇ ಬೇಕು.ಸಮಾಜ ಸತ್ತಿಲ್ಲ, ಆದರೆ ಸೂಕ್ಷ್ಮವಾಗಿ ನಮ್ಮನ್ನು ನೋಡುತ್ತಿದೆ ಎಂದು.
ಉತ್ತರ ಕನ್ನಡಲ್ಲಿ ಬೆಳೆದ ಶ್ರೀಧರರಿಗೆ ಉತ್ತರ ಕನ್ನಡ ಅರ್ಥವಾಗಿದೆ ಎನಿಸುತ್ತದೆ. ಜೊತೆಗೆ ಉತ್ತರ ಕನ್ನಡ ಅವರಿಗೆ ಒಳ್ಳೆಯ ಗುಣವನ್ನು ಕೊಟ್ಟಿದೆ ಎನ್ನುವುದರಿಂದ ಉತ್ತರ ಕನ್ನಡದ ನಾವು ತಿಳಿಯಬೇಕಾಗಿರುವುದು ಉತ್ತರ ಕನ್ನಡದ ನೆಲದಲ್ಲಿ ಸದ್ಗುಣ, ಸದ್ಭಾವ ತುಂಬಿದೆ ಎನ್ನುವುದನ್ನ ತಿಳಿಯಬೇಕಾಗಿದೆ. ವಿಶೇಷವಾಗಿ ಇಲ್ಲಿರುವ ರಾಜಕೀಯ ನಾಯಕರಿಗೆ ಅರ್ಥ ಆಗ್ಬೇಕು.ಅವರಿಗೆ ಸಿಕ್ಕಿರೋದು ನಮಗೆ ಏಕೆ ಸಿಕ್ಕಿಲ್ಲ ಎನ್ನುವ ಪ್ರಶ್ನೆಯು ನಿಮಗಿರಬೇಕು.
ಏನೇ ಇರಲಿ ನಿಮಗೆ ಸಿಕ್ಕ ಜನತೆಯ ಹೃದಯದ ಸನ್ಮಾನ ಇದು ನಿಮ್ಮ ಪ್ರಾಮಾಣಿಕ ಸೇವೆಗೆ ಸಿಕ್ಕ ಸನ್ಮಾನ. ಇಂತ ಉತ್ತಮ ಸೇವೆ ಇನ್ನೂ ಹೆಚ್ಚಿನ ರೀತಿಯಲ್ಲಿ ಜನತೆಗೆ ಸಿಗಲಿ.
ಶುಭವಾಗಲಿ ನಿಮಗೆ.
ಹಳ್ಳಿ (ಸುದ್ದಿ ) ನ್ಯೂಸ್
ಭಾವ ಶುದ್ಧಿ
0 Comments:
ಕಾಮೆಂಟ್ ಪೋಸ್ಟ್ ಮಾಡಿ