ಭಟ್ಕಳ - ಹೊನ್ನಾವರ ರಾಜಕಾರಣಕ್ಕೆ ಹೊಸ ಭಾಷ್ಯ.23 ರ ಓಟಿಗೆ ಕೋಳಿ ಪಡೆಯ ತಂತ್ರ "

ಹೊನ್ನಾವರ :  ಹಿಂಸೆ ಮತ್ತು  ಜನರ  ಆರ್ಥಿಕ ಅದೋಗತಿಗೆ ಕಾರಣವಾಗಿರುವ   ಕಾನೂನು ಬಾಹಿರವೆಂಬ  ಕಾರಣಕ್ಕೆ ನಿಂತು ಹೋದ ಕೋಳಿ ಪಡೆ, ಜೂಜು  ರದ್ದಾಗಿದ್ದು  ಎಲ್ಲರಿಗೂ  ತಿಳಿದ  ಸಂಗತಿಯೇ. ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ  ಕೋಳಿ   ಪಡೆ  ನಡೆಯುತ್ತಿರುವುದು ಮುಂದಿನ ಚುನಾವಣೆಯ  ಓಟಿನ  ಮೇಲೆ ಕಣ್ಣಿಟ್ಟ   ಸದ್ಯದ ರಾಜಕಾರಣದ  ತಂತ್ರ ಎಂದು   ಜನರಾಡಿಕೊಳ್ಳುತ್ತ  ಇರುವುದು  ಕೇಳಿ  ಬರುತ್ತಿದೆ.
     ಧರ್ಮವೇ  ನಮ್ಮ ಮೂಲ ಸಿದ್ದಂತಾವೆಂದು  ಮಾತೆತ್ತಿದರೆ  ಬಾಯಿ ತೆಗೆಯುವ ಆಡಳಿದ ರೂಢ  ಸರ್ಕಾರ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ  ತಾಲೂಕಿನ  ಹಳ್ಳಿ ಹಳ್ಳಿಯಲ್ಲಿ  ಕೋಳಿ ಪಡೆ ಹಾಗೂ ಜೂಗಾರಿ ಮಂಡ  ನಡೆಸುವುದಕ್ಕೆ  ಅವಕಾಶ ಮಾಡಿ ಕೊಟ್ಟು  ಅಧಿಕಾರಿಗಳನ್ನು   ಹಾಗೂ  ಸಂವಿಧಾನದ  ಕಾನೂನನ್ನು  ತಮಗೆ  ಬೇಕಾದ ಹಾಗೆ  ಬಳಸಿ ಕೊಳ್ಳುತ್ತದೆ ಎನ್ನುವುದು  ಮತ್ತೊಮ್ಮೆ ಸಾಭೀತಾಗಿದೆ.
    ಆಡಳಿತ  ರೂಢ   ಸರ್ಕಾರದ  "ಧರ್ಮ  " ಎನ್ನುವ  ಪದ  ಕೋಳಿಯ  ಕಾಲಿಗೆ  ಕತ್ತಿ  ಕಟ್ಟಿ  ಪರಸ್ಪರ ಹಿಂಸೆ ಅನುಭವಿಸುವ  ಸಂದರ್ಭದ  ಕೋಳಿ ಪಡೆಗೆ ಅನ್ವಯ ಆಗದೇ ಇರುವುದು ಆಶ್ಚರ್ಯವಾಗಿದೆ.
ಕಾನೂನು ಬಾಹಿರವಾದ ಜೂಗಾರಿ ಮಂಡ ಕೋಳಿ ಪಡೆಯಲ್ಲಿ  ಸಿಂಧೂವು ಆಗುವುದು  ಪರಮ ಆಶ್ಚರ್ಯದ ವಿಷವಾಗಿದೆ.
    ಪೊಲೀಸ್ ಇಲಾಖೆ, ರಾಜಕಾರಣದ ಒಳಗೆ ಬಂಧನವಾಗಿ, ಕಾನೂನು ಕರ್ತವ್ಯ ಮರೆತು ಮಲಗಿದೆ  ಎನಿಸುತ್ತದೆ.. ಹೆಲ್ಮೆಟ್ ಇಲ್ಲದೆ ಹೋದರೆ, ಅಪ್ಪಿತಪ್ಪಿ ಮೂರು ಜನ ಬೈಕಲ್ಲಿ ಪ್ರಯಾಣ ಮಾಡಿದರೆ  ದಂಡ ಹಾಕುವ, ಬೆತ್ತ ಎತ್ತಿ  ರುಚಿ ತೋರಿಸಿ ಕಾನೂನು  ನೆನಪಿಸುವ  ಪೊಲೀಸ್  ಇಲಾಖೆಯ  ಬೆತ್ತಕ್ಕೆ ಇದು ಕಾಣದೆ  ಇರುವುದು   ಆಶ್ಚರ್ಯ. ಲಾಭ ಬರುವಲ್ಲಿಗೆ  ರಾತ್ರಿ ಆದರೂ ಹೋಗಿ ವಸೂಲಿ ಮಾಡುವ  ವ್ಯವಸ್ಥೆ   ಮನೆಯ  ಬಾಗಿಲಿಗೆ   ಬಂದು   ತಲುಪಿದೆ  ಎನ್ನುವುದು  ಜನರಾಡಿ  ಕೊಳ್ಳುತ್ತಿರುವ  ಗುಸು ಗುಸು ಸುದ್ದಿಯಾಗುತ್ತಿದೆ.
    ಇದು ಆಡಳಿತ ರೂಢ  ಹೇಸಿಗೆಯ   ಅಧಿಕಾರ ದಾಹಕ್ಕೆ ಸಾಕ್ಷಿಯೇನೋ ಎನ್ನುವಂತೆ ಆಗಿದೆ. ಮೊನ್ನೆ ಮೊನ್ನೆ ಬೆಳಗಾವಿಯಲ್ಲಿ  ನಡೆದ  ಚಳಿಗಾಲದ ಅಧಿವೇಶನದಲ್ಲಿ "ಊರಿಗೊಂದು ದಾರಿ, ಅಲ್ಲೊಂದು ಕೋಳಿ ಪಡಿ " ಎನ್ನುವ ಹೊಸ ಯೋಜನೆ ಜಾರಿಗೆ ತಂದಿದ್ದಾರೆ ಎನಿಸುತ್ತದೆ.
    ಊರೂರಲ್ಲಿ ಜಾತ್ರೆ  ನಡೆದರೆ  ದೇವರು, ಧೈವ  ಎನ್ನುವ ಭಕ್ತಿಯ  ನೆಲೆಯಲ್ಲಿ  ಭಾವ  ಶುದ್ಧವಾಗಿ  ಕ್ಷಣವಾದರೂ  ಒಳ್ಳೆಯ ವಿಚಾರ ಮಾಡಿ  ಉನ್ನತಿಯ ಕಡೆಗೆ  ನಡೆಯಬಹುದು.
ಒಂದಿಷ್ಟು  ಜನರಿಗೆ  ಒಂದೆರಡು ದಿನದ  ಉದ್ಯೋಗ ಆಗುತ್ತದೆ.ಊರೂರಲ್ಲಿ ಕೋಳಿ ಪಡೆ, ಜೂಗಾರಿ ಮಂಡ  ನಡೆದರೆ  ಜನಸಾಮಾನ್ಯರ ಮನಸು  ಯಾವುದರ ಕಡೆ ಸಾಗಬಹುದು ಸ್ವಾಮಿ.ಊರಾಚೆ ಎಲ್ಲೋ ದೂರದಲ್ಲಿ  ನಡೆಯುವುದಕ್ಕೂ  ಊರ ಮದ್ಯೆ ನಡೆಯುವುದಕ್ಕೂ ವೆತ್ಯಾಸವಿಲ್ಲವೇ?ಇಲ್ಲಿ ಭಾಗವಹಿಸುವ  ಜನರೆಲ್ಲಾ ಸಾಮಾನ್ಯ ಬಡ ಕುಟುಂಬದಿಂದ  ಬಂದವರೇ ಆಗಿದ್ದು, ಆಯೋಜನೆ  ಮಾಡುವವರು  ಆರ್ಥಿಕ  ಸದೃಢರು  ರಾಜಕಾಣದ  ವಾಸನೆಯಲ್ಲಿ  ಮುಳುಗಿದವರೇ  ಎನ್ನುವ  ಮಾತು ನಿತ್ಯ ಸತ್ಯವಾಗಿದೆ.ಆದರೆ  ಒಬ್ಬ ಸಾಮಾನ್ಯನ  ಬದುಕು? ಮಕ್ಕಳು, ಹೆಂಗಸರು, ವಿದ್ಯಾರ್ಥಿಗಳು ಇರುವ  ಊರೂರಲ್ಲಿ   ಇಂಥ ಚಟುವಟಿಕೆ ನಡೆದರೆ   ಮುಂದೇನಾಗುವುದು? 

ಹಳ್ಳಿ ನ್ಯೂಸ್
ಗುಣವಂತೆ
Share:

0 Comments:

ಕಾಮೆಂಟ್‌‌ ಪೋಸ್ಟ್‌ ಮಾಡಿ

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels

Blog Archive