ಈ ರಾಷ್ಟ್ರಕ್ಕೆ ನೀವು ಸ್ವಾಮಿಯೋ ಇಲ್ಲ ದ್ರೋಹಿಯೋ?

"ಸಂವಿಧಾನಕ್ಕೆ  ನೀವೆಷ್ಟು ಗೌರವ ಕೊಟ್ಟಿದ್ದೀರಿ?
ಇಂದೇ ಯೋಚನೆ ಮಾಡಿ"

ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ನಿಮಗೆಲ್ಲ ಗೊತ್ತಿದೆ, ಭಾರತದ ಸಂವಿದಾನ ಇಲ್ಲಿಯ ಪ್ರಜೆಗಳಿಗೆ ನೀಡಿರುವ ಅನೇಕ ಮೂಲಭೂತ ಹಕ್ಕುಗಳಲ್ಲಿ ಮತದಾನದ ಹಕ್ಕು ಸಹ ಒಂದಾಗಿದೆ. "ಪ್ರಜಾಪ್ರಭುತ್ವ " ಎಷ್ಟು ಮಹತ್ವದ ಪದ ಯೋಚನೆ ಮಾಡಿ. ಪ್ರಜೆಗಳ ಪ್ರಭುತ್ವ ಅಂದರೆ ಇಲ್ಲಿಯ ಪ್ರಜೆಗಳು ತಮಗೆ ಬೇಕಾದ ಪ್ರತಿನಿಧಿಯನ್ನು ಆಯ್ಕೆ ಮಾಡಿ ಕೊಳ್ಳಲು, ಸರ್ವಸ್ವತಂತ್ರರು. ಅಂದರೆ ಈ ರಾಷ್ಟ್ರವನ್ನು ಕಟ್ಟುವ, ನಿಯಂತ್ರಿಸುವ ಪೂರ್ಣ ಅಧಿಕಾರ ಇರುವುದು ಭಾರತೀಯ ಪ್ರಜೆಗಳಿಗೆ ಮಾತ್ರ. ಆದರೆ ಮತದಾನದ ಹಕ್ಕನ್ನು ಕೊಡುವಾಗ ಒಂದಿಷ್ಟು ವಿವೇಚನೆಯನ್ನು ನಮ್ಮ ಸಂವಿಧಾನ ಮತದಾರರಿಗೆ ಕೊಟ್ಟಿದೆ.
 
 ಮತದಾನ ಮಾಡುವಾಗ ಯಾವುದೇ ಆಮಿಷಗಳಿಗೆ ಒಳಗಾಗಿ ಮತದಾನ ಮಾಡಬಾರದು.
ಜಾತಿ, ಧರ್ಮ, ಹಣ, ಹೆಂಡ, ಉಡುಗೊರೆ, ಸುಳ್ಳು ಭರವಸೆ ಇವುಗಳನ್ನು ಇಟ್ಟುಕೊಂಡು ಓಟು ಒತ್ತಬಾರದು ಎನ್ನುವ ಎಚ್ಚರಿಕೆಯನ್ನು ಕೊಡುತ್ತದೆ. ಅಂದರೆ ಸ್ವ ಪ್ರಜ್ಞೆಯಿಂದ ಆಯ್ಕೆ ಮಾಡಿ, ರಾಜ್ಯ ರಾಷ್ಟ್ರದ ಭವಿಷ್ಯ ನಿಮ್ಮ ಕೈಯಲ್ಲಿ ಇದೆ ಎನ್ನುತ್ತದೆ. ಈಗ ಯೋಚನೆ ಮಾಡಿ, ಈ ರಾಷ್ಟ್ರದಲ್ಲಿ ಇದ್ದುಕೊಂಡು, ಇಲ್ಲಿಯ ಸಂವಿಧಾನ ಹೇಳುವ ಮಾತನ್ನು ಧಿಕ್ಕರಿಸಿ ಮತ ನೀಡುವವನು ಜನ್ಮಕೊಟ್ಟ ನೆಲಕ್ಕೆ ದ್ರೋಹ ಮಾಡಿದಂತೆ ಅಲ್ಲವೇ? ಹೆತ್ತ ತಾಯ್ ಭೂಮಿಯ ಕತ್ತು ಹಿಸುಕಿದಂತೆ ಅಲ್ಲವೇ? ನೆಲದ ಸಂವಿಧಾನಕ್ಕೆ ಮರ್ಯಾದೆ ಕೊಡದವರು ಇನ್ಯಾರಿಗೆ ಕೊಟ್ಟಾರು? ಕೊಟ್ಟರು ಆ ಮರ್ಯಾದೆ ಎಷ್ಟು ತೂಕದ್ದು ಇರಬಹುದು, ಅರ್ಥ ಆಗದೇ ಇರದೇ? ಹಣ, ಹೆಂಡ, ಧರ್ಮ, ಜಾತಿ, ಸುಳ್ಳು ಭರವಸೆ, ಉಡುಗೊರೆಗೆ ಮತದಾನ ಮಾಡಿ ರಾಷ್ಟ್ರ ದ್ರೋಹಿ ಆಗದಿರಿ.

ರಾಮಾಯಣದಲ್ಲಿ ರಾವಣನ ಗತಿಸಿದ ಮೇಲೆ ರಾಮ ಲಕ್ಷ್ಮಣನಿಗೆ ಒಂದು ಮಾತು ಹೇಳುತ್ತಾನೆ. ಸ್ವರ್ಣಮಯವಾದ ಲಂಕೆಯನ್ನು ಕಂಡು “ಇಲ್ಲೆಯೇ ಇದ್ದುಬಿಡೋಣ ಅಣ್ಣ” ಲಕ್ಷ್ಮಣ ಎಂದಾಗ.
"ಜನನಿ ಜನ್ಮ ಭೂಮಿಶ್ಚ,
ಸ್ವರ್ಗಾದಪಿ ಗರಿಯಸಿ."
ಜನ್ಮಕೊಟ್ಟ ಭೂಮಿ ಹಾಗೂ ಜನ್ಮ ಕೊಟ್ಟ ತಾಯಿ ಸ್ವರ್ಗಕ್ಕಿಂತ ಮಿಗಿಲು ಎಂದು ರಾಮ ತಿಳಿಹೇಳುತ್ತಾನೆ. ಹೀಗಿರುವಾಗ ಜನ್ಮ ನೀಡಿದ ಈ ತಾಯಿನೆಲದ ಸಂವಿಧಾನಕ್ಕೆ ಕ್ಷಣಿಕ ಆಮಿಷಕ್ಕೆ ಮರುಳಾಗಿ ದ್ರೋಹ ಮಾಡಿದರೆ, ನಮ್ಮದೆಂತ ಬಾಳು ಯೋಚನೆ ಮಾಡಿ ಒಮ್ಮೆ.

ಹಳ್ಳಿ ನ್ಯೂಸ್
ಗುಣವಂತೆ.
Share:

0 Comments:

ಕಾಮೆಂಟ್‌‌ ಪೋಸ್ಟ್‌ ಮಾಡಿ

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels