ಬೆಂಗಳೂರು: ದಿನಾಂಕ 27-12-2022 ರಂದು ಕೆಬಿಸಿ ಪಿ.ಯು. ಕಾಲೇಜ್ ಕೆಂಗೇರಿ, ಬೆಂಗಳೂರಿನಲ್ಲಿ ವಿದ್ಯಾರ್ಥಿಗಳಿಗೆ "ಎಥ್ನಿಕ್ ಡೇ" (ಸಾಂಪ್ರದಾಯಿಕ ಉಡುಗೆಯ ದಿನ) ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ವಿದ್ಯಾರ್ಥಿಗಳು ವಿವಿಧ ಸಾಂಪ್ರದಾಯಿಕ ಉಡುಗೆಯಲ್ಲಿ ಬಂದುದ್ದರಿಂದ ಕಾಲೇಜು ಆವರಣದಲ್ಲಿ ಸಂಭ್ರಮ ಕಳೆಗಟ್ಟಿತ್ತು.
ಬೆಳಗ್ಗೆ ೧೧:೦೦ ಗಂಟೆಗೆ ಸರಿಯಾಗಿ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಸಂಸ್ಥೆಯ ಸ್ಥಾಪಕರಾದ ಶ್ರೀಯುತ ಕಟ್ಟಾ ಬಾಲಾಜಿಯವರು ದೀಪೋಜ್ವಲನ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭೆಯನ್ನು ಕುರಿತು ಮಾತಾಡುತ್ತ ಪಂಚೆ ಶಲ್ಯ ನನಗೆ ಇಷ್ಟವಾದ ಉಡುಗೆ , ಪ್ರತಿಯೊಂದು ಉಡುಗೆಗೂ ಅದರದೆ ಆದ ಮಹತ್ವವಿದೆ ಅದನ್ನು ಅರಿಯಬೇಕು. ನಾವು ತೊಡುವ ಬಟ್ಟೆ ಉತ್ತಮವಾಗಿದ್ದಾಗ ಅದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಹಾಗೆ ಪ್ರಾಂಶುಪಾಲರಾದ ಶ್ರೀಯುತ ಎನ್. ಆರ್ ಚಂದ್ರಶೇಖರ ಅವರು ಮಾತನಾಡಿ ಭಾರತ ಬಹು ಸಂಸ್ಕೃತಿಯನ್ನು ಹೊಂದಿರುವ ದೇಶ ವಿವಿಧತೆಯೇ ಇಲ್ಲಿನ ವಿಶೇಷತೆಯಾಗಿದೆ. ಕಾಲೇಜಿನಲ್ಲಿ ಎಥ್ನಿಕ್ ಡೇ ಆಚರಿಸುವುದರ ಉದ್ದೇಶ ಮಕ್ಕಳಿಗೆ ನಮ್ಮ ಸಂಸ್ಕೃತಿಯ ವೈವಿಧ್ಯತೆಯಲ್ಲಿ ಉಡುಗೆಯ ಮಹತ್ವವನ್ನು ತಿಳಿಸುವುದಾಗಿದೆ ಎಂದು ಹೇಳಿದರು.
ಕನ್ನಡ ಉಪನ್ಯಾಸಕರಾದ ಶ್ರೀ ಸುಬ್ರಹ್ಮಣ್ಯ ಗೌಡರವರು ಮಾತನಾಡಿ ʼಸಾಂಪ್ರದಾಯಿಕ ಉಡುಗೆಯ ದಿನʼ ವಿದ್ಯಾರ್ಥಿಗಳು ಧರಿಸುವ ವೇಷಭೂಷಣ ಹೇಗಿರಬೇಕೆಂದರೆ ಒಂದೊಂದು ಜನಾಂಗೀಯ ಉಡುಗೆಯ ರಾಯಭಾರಿಗಳು ಎಂಬತಿರಬೇಕು ಎಂದು ಸಲಹೆ ನೀಡಿದರು. ಸಾಂಪ್ರದಾಯಿಕ ಉಡುಗೆಯ ಪ್ರದರ್ಶನ ಸೇರಿದಂತೆ ಹಲವು ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಎಲ್ಲಾ ಉಪನ್ಯಾಸಕರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
0 Comments:
ಕಾಮೆಂಟ್ ಪೋಸ್ಟ್ ಮಾಡಿ