ಬೆಂಗಳೂರು: ದಿನಾಂಕ 27-12-2022 ರಂದು ಕೆಬಿಸಿ ಪಿ.ಯು. ಕಾಲೇಜ್ ಕೆಂಗೇರಿ, ಬೆಂಗಳೂರಿನಲ್ಲಿ ವಿದ್ಯಾರ್ಥಿಗಳಿಗೆ "ಎಥ್ನಿಕ್ ಡೇ" (ಸಾಂಪ್ರದಾಯಿಕ ಉಡುಗೆಯ ದಿನ) ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ವಿದ್ಯಾರ್ಥಿಗಳು ವಿವಿಧ ಸಾಂಪ್ರದಾಯಿಕ ಉಡುಗೆಯಲ್ಲಿ ಬಂದುದ್ದರಿಂದ ಕಾಲೇಜು ಆವರಣದಲ್ಲಿ ಸಂಭ್ರಮ ಕಳೆಗಟ್ಟಿತ್ತು.
ಬೆಳಗ್ಗೆ ೧೧:೦೦ ಗಂಟೆಗೆ ಸರಿಯಾಗಿ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಸಂಸ್ಥೆಯ ಸ್ಥಾಪಕರಾದ ಶ್ರೀಯುತ ಕಟ್ಟಾ ಬಾಲಾಜಿಯವರು ದೀಪೋಜ್ವಲನ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭೆಯನ್ನು ಕುರಿತು ಮಾತಾಡುತ್ತ ಪಂಚೆ ಶಲ್ಯ ನನಗೆ ಇಷ್ಟವಾದ ಉಡುಗೆ , ಪ್ರತಿಯೊಂದು ಉಡುಗೆಗೂ ಅದರದೆ ಆದ ಮಹತ್ವವಿದೆ ಅದನ್ನು ಅರಿಯಬೇಕು. ನಾವು ತೊಡುವ ಬಟ್ಟೆ ಉತ್ತಮವಾಗಿದ್ದಾಗ ಅದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಹಾಗೆ ಪ್ರಾಂಶುಪಾಲರಾದ ಶ್ರೀಯುತ ಎನ್. ಆರ್ ಚಂದ್ರಶೇಖರ ಅವರು ಮಾತನಾಡಿ ಭಾರತ ಬಹು ಸಂಸ್ಕೃತಿಯನ್ನು ಹೊಂದಿರುವ ದೇಶ ವಿವಿಧತೆಯೇ ಇಲ್ಲಿನ ವಿಶೇಷತೆಯಾಗಿದೆ. ಕಾಲೇಜಿನಲ್ಲಿ ಎಥ್ನಿಕ್ ಡೇ ಆಚರಿಸುವುದರ ಉದ್ದೇಶ ಮಕ್ಕಳಿಗೆ ನಮ್ಮ ಸಂಸ್ಕೃತಿಯ ವೈವಿಧ್ಯತೆಯಲ್ಲಿ ಉಡುಗೆಯ ಮಹತ್ವವನ್ನು ತಿಳಿಸುವುದಾಗಿದೆ ಎಂದು ಹೇಳಿದರು.
ಕನ್ನಡ ಉಪನ್ಯಾಸಕರಾದ ಶ್ರೀ ಸುಬ್ರಹ್ಮಣ್ಯ ಗೌಡರವರು ಮಾತನಾಡಿ ʼಸಾಂಪ್ರದಾಯಿಕ ಉಡುಗೆಯ ದಿನʼ ವಿದ್ಯಾರ್ಥಿಗಳು ಧರಿಸುವ ವೇಷಭೂಷಣ ಹೇಗಿರಬೇಕೆಂದರೆ ಒಂದೊಂದು ಜನಾಂಗೀಯ ಉಡುಗೆಯ ರಾಯಭಾರಿಗಳು ಎಂಬತಿರಬೇಕು ಎಂದು ಸಲಹೆ ನೀಡಿದರು. ಸಾಂಪ್ರದಾಯಿಕ ಉಡುಗೆಯ ಪ್ರದರ್ಶನ ಸೇರಿದಂತೆ ಹಲವು ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಎಲ್ಲಾ ಉಪನ್ಯಾಸಕರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಹೊಸದಾಗಿ ಟೀಸರ್ ಬಿಡುಗಡೆ ಮಾಡಿ ಅಪಾರ ಜನಮನ್ನಣೆ ಜೊತೆಗೆ ಜನರಲ್ಲಿ ಕೂತುಹಲವನ್ನು ಮೂಡಿಸಿದ ನಮ್ಮ ಕನ್ನಡ ಸಿನಿಮಾ "ಸ್ಪೂಕಿ ಕಾಲೇಜ್ ". ಚಲನಚಿತ್ರದ ಹೆಸರೇ ಸ್ವಲ್ಪ ಗೊಂದಲಕ್ಕೆ ಈಡುಮಾಡುವಂತಿದ್ದರೆ ಟೀಸರ್ ಇನ್ನೂ ಹೆಚ್ಚಿನ ಕೂತೂಹಲ ಮೂಡಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ದಿನ ನಿತ್ಯ ತಮ್ಮ ಕಾರ್ಯ ವೈಖರಿಗಳಲ್ಲಿ ಭಾಗಿಯಾಗುವ ಜನರ ಗಮನವನ್ನು ಸೆಳೆಯಲು ಚಲನ ಚಿತ್ರಗಳನ್ನು ತುಂಬಾ ವಿಷೇಷ ರೀತಿಯಲ್ಲಿ ಚಿತ್ರಿಸಬೇಕಾಗುತ್ತದೆ. ಅದರಲ್ಲಿ ರಹಸ್ಯದ ಚಿತ್ರಗಳು, ಐತಿಹಾಸಿಕ ಚಿತ್ರಗಳು, ಹಾರರ್ ಚಿತ್ರಗಳು ಮುಖ್ಯ ಪಾತ್ರವಹಿಸುತ್ತವೆ.
ಅನೇಕ ಹಾರರ್ ಚಲನಚಿತ್ರಗಳನ್ನು ಚಿತ್ರಿಸಿದ ಕನ್ನಡ ಸಿನೆಮಾ ಇಂಡಸ್ಟ್ರಿ ಈಗ ಹೊಸದೊಂದು ಕಥೆಯನ್ನು ಆರಿಸಿ ಹೊಸ ರೀತಿಯಲ್ಲಿ ರಹಸ್ಯ, ಹಾಸ್ಯ, ಹಾರರ್ ಮೂರು ಅಂಶಗಳನ್ನು ಬೆರೆಸಿ ಹೆಣೆದ ಕಥೆಯೇ "ಸ್ಪೂಕಿ ಕಾಲೇಜ್" .
ಭರತ್ ಜಿ ಅವರ ನಿರ್ದೇಶನದಲ್ಲಿ ಚಿತ್ರಿಸಿದ ಈ ಕಥೆಗೆ ಪ್ರೋಡ್ಯುಸರ್ ಆಗಿ 2015 ರಲ್ಲಿ ಜನಮನ್ನಣೆ ಪಡೆದು "ಫಿಲಂಫೇರ್ ಅವಾರ್ಡ್ ಫಾರ್ ಬೆಸ್ಟ್ ಫಿಲ್ಮ್" ಪ್ರಶಸ್ತಿ ಮೂಡಿಗೆರಿಸಿಕೊಂಡ ರಂಗಿತರಂಗ ಚಿತ್ರದಲ್ಲಿ ತಮ್ಮ ಪಾತ್ರದಿಂದ ಅಪಾರ ಗೌರವ ಸಂಪಾದಿಸಿದ್ದ ಎಚ್. ಕೆ ಪ್ರಕಾಶ್ ರವರು ಕಾರ್ಯ ನಿರ್ವಹಿಸಿದ್ದಾರೆ. ಇದೇ ಮೊದಲ ಬಾರಿಗೆ ನಟಿಸಿದ ವಿವೇಕ್ ಸಿಂಹ ಅವರನ್ನು ಹೀರೋ ಆಗಿ ನಾವಿಲ್ಲಿ ಕಾಣಬಹುದು. ಜೊತೆಗೆ ದಿಯಾ ಚಲನಚಿತ್ರದಲ್ಲಿ ನಟಿಸಿ ಪ್ರಸಿದ್ಧತೆ ಪಡೆದ ಖುಷಿ ರವಿ ಅವರನ್ನು ನಾವಿಲ್ಲಿ "ಸೆಂಟರ್ ಆಫ್ ಅಟ್ರಾಕ್ಷನ್" ಎಂಬ ಪಾತ್ರದಂತೆ ಕಾಣಬಹುದು.
ಮುಖ್ಯವಾಗಿ ಹೇಳಬೇಕೆಂದರೆ ಈ ಕಥೆಗೆ ರೆಕ್ಕೆ ಗರಿಗಳಿಗಿಂತ ಹಕ್ಕಿಯೊಂದು ಬೇಕಾಗಿತ್ತು. ಎಂದರೆ ಚಿತ್ರೀಕರಣದ ಸ್ಥಳ. ಜನರ ಗಮನ ಸೆಳೆದು, ಭಯದ ವಾತಾವರಣ ಸ್ತೃಷ್ಟಿಸುವಂತದ್ದು ಆಗಿರಬೇಕಿತ್ತು. ಆದ್ದರಿಂದ ನೂರು ವರ್ಷಕ್ಕೂ ಹಳೆಯದಾದ ಬ್ರಿಟಿಷರ ಕಾಲಾವಧಿಯಲ್ಲಿ ಕಟ್ಟಿಸಿದ ಧಾರವಾಡದಲ್ಲಿರುವ ಕರ್ನಾಟಕ ಕಲಾ ಮಹಾವಿದ್ಯಾಲಯವನ್ನು ಆರಿಸಿ ಸಂಪೂರ್ಣ ಚಿತ್ರೀಕರಣ ಅಲ್ಲಿಯೇ ಮಾಡಲಾಗಿದೆ. ಹಳೆಯ ಈ ಬಿಲ್ಡಿಂಗನ್ನು ಹಾರರ್ ಬಿಲ್ಡಿಂಗ್ ರೂಪವಾಗಿ ಪರಿವರ್ತಿಸಿ ಅಲ್ಲಿ ಕಲಿಯುವ ವಿದ್ಯಾರ್ಥಿಗಳನ್ನೆ ಬೆರಗು ಮೂಡಿಸುವಷ್ಟು ಕಥೆಯನ್ನು ಹೆಣೆದಿದ್ದಾರೆ. ಈಗಾಗಲೇ ಟೀಸರ್ ಬಿಡುಗಡೆ ಮಾಡಿ ಎಲ್ಲರ ಗಮನ ಸೆಳೆದ "ಸ್ಪೂಕಿ ಕಾಲೇಜ್" ಜನವರಿ 6 ಕ್ಕೆ ರಾಜ್ಯಾದ್ಯಂತ ಬಿಡುಗೆಯಾಗುತ್ತಿದೆ ಜನರೆಲ್ಲ ಉತ್ಸಾಹದಿಂದ ಈ ಕಥೆಗಾಗಿ ಕಾಯುತ್ತಿದ್ದಾರೆ.
ನೋಟ: ದಿನಾಂಕಗಳು ಪ್ರತಿ ವರ್ಷ ಜನವರಿ-ಮಾರ್ಚ್ ನಡುವೆ ಬದಲಾಗುತ್ತದೆ. ನವೀಕರಿಸಿದ ತಾರೀಕುಗಳಿಗಾಗಿ ಈ ಪುಟವನ್ನು ನಿಯಮಿತವಾಗಿ ಪರಿಶೀಲಿಸಿ.
ಪ್ರವೇಶ ಪ್ರಕ್ರಿಯೆ ಬಗ್ಗೆ
ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಮತ್ತು ಪರಿಶಿಷ್ಠ ಜಾತಿ/ವರ್ಗಗಳ ಇಲಾಖೆಗಳು KREIS (ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ) ಮೂಲಕ ಉತ್ತರ ಕನ್ನಡ ಜಿಲ್ಲೆಯ 24 ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶ ಪರೀಕ್ಷೆ ನಡೆಸುತ್ತದೆ.
ಪ್ರಸ್ತುತ 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸುವ ಅರ್ಹತೆ ಹೊಂದಿರುತ್ತಾರೆ.
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
SATS ID: ವಿದ್ಯಾರ್ಥಿಯ ಎಲ್ಲಾ ಮೂಲಭೂತ ಮಾಹಿತಿಗಳು SATS ಸಿಸ್ಟಮ್ನಲ್ಲಿ ನವೀಕರಿಸಲ್ಪಟ್ಟಿರಬೇಕು
ಜಾತಿ ಮತ್ತು ಆದಾಯ ಪ್ರಮಾಣಪತ್ರ:
SC/ST/C-1: ₹2,50,000 ವಾರ್ಷಿಕ ಆದಾಯ ಮಿತಿ
2A, 2B, 3A, 3B: ₹1,00,000 ವಾರ್ಷಿಕ ಆದಾಯ ಮಿತಿ
ವಿದ್ಯಾರ್ಥಿಯ ಇತ್ತೀಚಿನ ಫೋಟೋ (2 ಕಾಪಿಗಳು)
ವಿಶೇಷ ಮೀಸಲಾತಿ ದಾಖಲೆಗಳು (ಯದಿ ಅನ್ವಯವಾಗುವುದಾದರೆ)
ವಿಶೇಷ ಮೀಸಲಾತಿ ವರ್ಗಗಳು
ಕೆಳಗಿನ ವರ್ಗಗಳಿಗೆ ಹೆಚ್ಚುವರಿ ಮೀಸಲಾತಿ ಲಭ್ಯ:
ವಿಶೇಷ ಚೇತನ ಮಕ್ಕಳು (PH)
ಅಲೆಮಾರಿ/ಅರೆ-ಅಲೆಮಾರಿ ಮಕ್ಕಳು
ಮಾಜಿ ಸೈನಿಕರ ಮಕ್ಕಳು
ಆಶ್ರಮ ಶಾಲೆಗಳ ವಿದ್ಯಾರ್ಥಿಗಳು
ಸಫಾಯಿ ಕರ್ಮಚಾರಿಗಳ ಮಕ್ಕಳು
ಸ್ಥಳೀಯ ಅಭ್ಯರ್ಥಿಗಳು (ಅದೇ ತಾಲೂಕು)
ಪ್ರಮುಖ ಸೂಚನೆಗಳು
ಅರ್ಜಿಗಳನ್ನು ಆನ್ಲೈನ್ ಮಾತ್ರ ಸಲ್ಲಿಸಬೇಕು
ವಿದ್ಯಾರ್ಥಿಯು ತನ್ನ ಸ್ವಂತ ಜಿಲ್ಲೆಯ ವಸತಿ ಶಾಲೆಗಳಿಗೆ ಮಾತ್ರ ಅರ್ಜಿ ಸಲ್ಲಿಸಬಹುದು
ಶಾಲೆಗಳ ಆಯ್ಕೆಯನ್ನು ಆದ್ಯತಾ ಕ್ರಮದಲ್ಲಿ ಮಾಡಬೇಕು
ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಕಡ್ಡಾಯ
SATS ದತ್ತಾಂಶದಲ್ಲಿ ಯಾವುದೇ ತಪ್ಪಿದ್ದಲ್ಲಿ ನಿಮ್ಮ ಪ್ರಸ್ತುತ ಶಾಲೆಯಲ್ಲಿ ಸರಿಪಡಿಸಿ
ಸಂಪರ್ಕ ಮಾಹಿತಿ
ಹೆಚ್ಚಿನ ವಿವರಗಳಿಗಾಗಿ ನಿಮ್ಮ ಸಮೀಪದ KREIS ವಸತಿ ಶಾಲೆಯನ್ನು ಸಂಪರ್ಕಿಸಿ ಅಥವಾ ಜಿಲ್ಲಾ ಸಮಾಜ ಕಲ್ಯಾಣ ಕಚೇರಿಗೆ ಭೇಟಿ ನೀಡಿ.
ಜಿಲ್ಲಾ ಪ್ರವೇಶ ಪರೀಕ್ಷಾಧಿಕಾರಿಗಳು, ಉತ್ತರ ಕನ್ನಡ
ಗಮನಿಸಿ: ಈ ಪ್ರವೇಶ ಪ್ರಕ್ರಿಯೆ ಪ್ರತಿ ವರ್ಷ ನಡೆಯುತ್ತದೆ. ಹೊಸ ಸಾಲಿನ ಅರ್ಜಿ ಪ್ರಕ್ರಿಯೆಗೆ ಮುಂಚೆ ಈ ಪುಟವನ್ನು ನವೀಕರಿಸಲಾಗುತ್ತದೆ. ನಿಯಮಿತವಾಗಿ ಪರಿಶೀಲಿಸಿ.
"ಸಂವಿಧಾನಕ್ಕೆ ನೀವೆಷ್ಟು ಗೌರವ ಕೊಟ್ಟಿದ್ದೀರಿ? ಇಂದೇ ಯೋಚನೆ ಮಾಡಿ"
ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ನಿಮಗೆಲ್ಲ ಗೊತ್ತಿದೆ, ಭಾರತದ ಸಂವಿದಾನ ಇಲ್ಲಿಯ ಪ್ರಜೆಗಳಿಗೆ ನೀಡಿರುವ ಅನೇಕ ಮೂಲಭೂತ ಹಕ್ಕುಗಳಲ್ಲಿ ಮತದಾನದ ಹಕ್ಕು ಸಹ ಒಂದಾಗಿದೆ. "ಪ್ರಜಾಪ್ರಭುತ್ವ " ಎಷ್ಟು ಮಹತ್ವದ ಪದ ಯೋಚನೆ ಮಾಡಿ. ಪ್ರಜೆಗಳ ಪ್ರಭುತ್ವ ಅಂದರೆ ಇಲ್ಲಿಯ ಪ್ರಜೆಗಳು ತಮಗೆ ಬೇಕಾದ ಪ್ರತಿನಿಧಿಯನ್ನು ಆಯ್ಕೆ ಮಾಡಿ ಕೊಳ್ಳಲು, ಸರ್ವಸ್ವತಂತ್ರರು. ಅಂದರೆ ಈ ರಾಷ್ಟ್ರವನ್ನು ಕಟ್ಟುವ, ನಿಯಂತ್ರಿಸುವ ಪೂರ್ಣ ಅಧಿಕಾರ ಇರುವುದು ಭಾರತೀಯ ಪ್ರಜೆಗಳಿಗೆ ಮಾತ್ರ. ಆದರೆ ಮತದಾನದ ಹಕ್ಕನ್ನು ಕೊಡುವಾಗ ಒಂದಿಷ್ಟು ವಿವೇಚನೆಯನ್ನು ನಮ್ಮ ಸಂವಿಧಾನ ಮತದಾರರಿಗೆ ಕೊಟ್ಟಿದೆ.
ಮತದಾನ ಮಾಡುವಾಗ ಯಾವುದೇ ಆಮಿಷಗಳಿಗೆ ಒಳಗಾಗಿ ಮತದಾನ ಮಾಡಬಾರದು. ಜಾತಿ, ಧರ್ಮ, ಹಣ, ಹೆಂಡ, ಉಡುಗೊರೆ, ಸುಳ್ಳು ಭರವಸೆ ಇವುಗಳನ್ನು ಇಟ್ಟುಕೊಂಡು ಓಟು ಒತ್ತಬಾರದು ಎನ್ನುವ ಎಚ್ಚರಿಕೆಯನ್ನು ಕೊಡುತ್ತದೆ. ಅಂದರೆ ಸ್ವ ಪ್ರಜ್ಞೆಯಿಂದ ಆಯ್ಕೆ ಮಾಡಿ, ರಾಜ್ಯ ರಾಷ್ಟ್ರದ ಭವಿಷ್ಯ ನಿಮ್ಮ ಕೈಯಲ್ಲಿ ಇದೆ ಎನ್ನುತ್ತದೆ. ಈಗ ಯೋಚನೆ ಮಾಡಿ, ಈ ರಾಷ್ಟ್ರದಲ್ಲಿ ಇದ್ದುಕೊಂಡು, ಇಲ್ಲಿಯ ಸಂವಿಧಾನ ಹೇಳುವ ಮಾತನ್ನು ಧಿಕ್ಕರಿಸಿ ಮತ ನೀಡುವವನು ಜನ್ಮಕೊಟ್ಟ ನೆಲಕ್ಕೆ ದ್ರೋಹ ಮಾಡಿದಂತೆ ಅಲ್ಲವೇ? ಹೆತ್ತ ತಾಯ್ ಭೂಮಿಯ ಕತ್ತು ಹಿಸುಕಿದಂತೆ ಅಲ್ಲವೇ? ನೆಲದ ಸಂವಿಧಾನಕ್ಕೆ ಮರ್ಯಾದೆ ಕೊಡದವರು ಇನ್ಯಾರಿಗೆ ಕೊಟ್ಟಾರು? ಕೊಟ್ಟರು ಆ ಮರ್ಯಾದೆ ಎಷ್ಟು ತೂಕದ್ದು ಇರಬಹುದು, ಅರ್ಥ ಆಗದೇ ಇರದೇ? ಹಣ, ಹೆಂಡ, ಧರ್ಮ, ಜಾತಿ, ಸುಳ್ಳು ಭರವಸೆ, ಉಡುಗೊರೆಗೆ ಮತದಾನ ಮಾಡಿ ರಾಷ್ಟ್ರ ದ್ರೋಹಿ ಆಗದಿರಿ.
ರಾಮಾಯಣದಲ್ಲಿ ರಾವಣನ ಗತಿಸಿದ ಮೇಲೆ ರಾಮ ಲಕ್ಷ್ಮಣನಿಗೆ ಒಂದು ಮಾತು ಹೇಳುತ್ತಾನೆ. ಸ್ವರ್ಣಮಯವಾದ ಲಂಕೆಯನ್ನು ಕಂಡು “ಇಲ್ಲೆಯೇ ಇದ್ದುಬಿಡೋಣ ಅಣ್ಣ” ಲಕ್ಷ್ಮಣ ಎಂದಾಗ.
"ಜನನಿ ಜನ್ಮ ಭೂಮಿಶ್ಚ, ಸ್ವರ್ಗಾದಪಿ ಗರಿಯಸಿ."
ಜನ್ಮಕೊಟ್ಟ ಭೂಮಿ ಹಾಗೂ ಜನ್ಮ ಕೊಟ್ಟ ತಾಯಿ ಸ್ವರ್ಗಕ್ಕಿಂತ ಮಿಗಿಲು ಎಂದು ರಾಮ ತಿಳಿಹೇಳುತ್ತಾನೆ. ಹೀಗಿರುವಾಗ ಜನ್ಮ ನೀಡಿದ ಈ ತಾಯಿನೆಲದ ಸಂವಿಧಾನಕ್ಕೆ ಕ್ಷಣಿಕ ಆಮಿಷಕ್ಕೆ ಮರುಳಾಗಿ ದ್ರೋಹ ಮಾಡಿದರೆ, ನಮ್ಮದೆಂತ ಬಾಳು ಯೋಚನೆ ಮಾಡಿ ಒಮ್ಮೆ.
ಭಾರತದಲ್ಲಿ ಆಚರಣೆಗಳು ನೆಲಮೂಲ ಸಂಸ್ಕೃತಿಯನ್ನು ಬಿಂಬಿಸುತ್ತಲೇ ಇರುತ್ತದೆ. ನಾವೇನು ಈಗ ಆಧುನಿಕತೆ ಎಂದು ಬೊಬ್ಬೆಹೊಡೆದರೂ, ಹೊಸ ಪ್ಯಾಶನ್ನಿನ ಒಳಗೆ ಆಚರಣೆ ಮೈದಳೆಯುತ್ತಲೇ ಇರುತ್ತದೆ. ಆಚರಣೆಗಳು ನಮ್ಮ ಬದುಕಿನ ಬಗೆಗಿನ ಒಳನೋಟಗಳನ್ನ ನೀಡುತ್ತಲೇ ಇರುತ್ತದೆ. ಸನಾತನ ಆಚರಣೆಗಳು ನಮ್ಮ ಬದುಕಿಗೊಂದು ಚೈತನ್ಯ ನೀಡುತ್ತಲೇ ಇರುತ್ತದೆ. ಆಚರಣೆಯ ಒಳಗುಟ್ಟು ತನಗೆ ತಿಳಿದಿದೆ ಎನ್ನುವವರು ಹಲವರಿದ್ದರೂ, ಅದನ್ನ ತಿಳಿದವರು ಬಹಳ ವಿರಳವೆ. ಬಹುಶಃ ಯಾವುದೋ ಕಾರಣಕ್ಕೆ, ಇನ್ನೇನನ್ನೋ ಉಳಿಸುವ, ನೆನಪಿಸುವ ಘನ ಕಾರ್ಯಕ್ಕಾಗಿ ಆಚರಣೆಗಳನ್ನ ನಡೆಸಲಾಗುತ್ತಿದೆ, ಇದು ಮಾತ್ರ ಸುಳ್ಳಲ್ಲ ಎನ್ನಬುದು. ಇಂತಹ ಹಲವಾರು ಆಚರಣೆಗಳ ಪೈಕಿ ಕಾರ್ತಿಕ ಮಾಸದ ಆಚರಣೆಯೂ ಒಂದು, ಹೊನ್ನಾವರ ತಾಲೂಕಿನ ಗುಣವಂತೆಯಲ್ಲಿ ಇದರ ಆಚರಣೆ ವಿಶಿಷ್ಟ. ತನ್ನಿಮಿತ್ತ ಈ ಲೇಖನ, ಓದಿ ನಿಮ್ಮ ಅಭಿಪ್ರಾಯ ತಿಳಿಸಲು ಮತ್ತು ಹಂಚಿಕೊಳ್ಳಲು ವಿನಂತಿಸಿದೆ
ಕಾರ್ತಿಕ ಮಾಸ ಕಳೆದ ಮೇಲೆ ಬರುವ ಮಾರ್ಗಶಿರ ಮಾಸದಲ್ಲಿ, ದೇವ, ದೈವ ಸಾನಿಧ್ಯದಲ್ಲಿ ವನಭೋಜನವೆಂಬ ಧಾರ್ಮಿಕ ಆಚರಣೆ ನಡೆಯುತ್ತದೆ. ಹಿಂದೆಲ್ಲ ವನ, ಅಂದರೆ ಗಿಡ ಮರಗಳಿಂದ ಕೂಡಿದ ಸ್ಥಳಗಳೆ ಹೆಚ್ಚಿಗೆ ಇದ್ದಿದರಿಂದ, ದೇವ, ದೈವ ಸಾನಿಧ್ಯದ ಸುತ್ತ ಮುತ್ತಲು ವನಗಳು ಇರುವುದರಿಂದ ವನಗಳಿಂದ ಕೂಡಿದ ದೈವ ಸಾನಿಧ್ಯದಲ್ಲಿ ನಡೆಯುವ ಭೋಜನ ಆಗಿರುವುದರಿಂದ ಅದು ವನಭೋಜನ ಎಂದಾಗಿದೆ. ಊರಿನ ಪ್ರಧಾನ ದೇವಾಲಯದ ಉತ್ಸವ ಮೂರ್ತಿ ಪಲ್ಲಕ್ಕಿಯ ಮೂಲಕ ಊರಿನ ಸುತ್ತಮುತ್ತಲ ದೇವಾಲಯಕ್ಕೆ ಹೋಗಿ ಅಲ್ಲಿ ಪೂಜಿಸಲ್ಪಡುವ ಆಚರಣೆ ಒಂದೆಡೆಯಾದರೆ, ಊರಲ್ಲೇ ಇರುವ ದೇವಾಲಯದಲ್ಲೂ ವನಭೋಜನ ನಡೆಯುತ್ತದೆ. ಇದೊಂದು ಗ್ರಾಮೀಣ ಭಾಗದ ಎಲ್ಲ ಜಾತಿ ಜನಾಂಗದ ಸಹಭೋಜನದ ಆಚರಣೆ.ಈ ದಿನ ಒಂದು ಮನೆಗೆ ಇಂತಿಷ್ಟು ಅಕ್ಕಿ ಹಾಗೂ ಕಾಯಿ ಕೊಡಬೇಕು ಎಂದು ತೀರ್ಮಾನ ಗ್ರಾಮದ ಅಥವಾ ದೈವ ಸಾನಿಧ್ಯದ ಪ್ರಧಾನರು ನಿರ್ಧಾರ ಮಾಡುತ್ತಾರೆ. ಆಯಾ ಕೇರಿಯ ವಂತಿಕೆಯನ್ನು ಸಂಗ್ರಹ ಮಾಡಲು ಇರುವವರು, ಎಲ್ಲವನ್ನು ತಂದು ದೇವಾಲಯಕ್ಕೆ ಅಥವಾ ಗ್ರಾಮದ ಪ್ರಧಾನರಿಗೆ ತಂದು ಮುಟ್ಟಿಸುತ್ತಾರೆ. ಮಾತ್ರವಲ್ಲ ಕನಿಷ್ಠ ಮನೆಗೆ ಒಬ್ಬರಾದರೂ ಭೋಜನಕ್ಕೆ ಬರಲೇ ಬೇಕು.
ಹಿಂದಿನಿಂದಲೂ ನಡೆದು ಬಂದ ಪದ್ದತಿಯ ಆಚರಣೆ ಇದಾಗಿರುವುದರಿಂದ ಎಲ್ಲರೂ ಭಾಗಿಯಾಗುತ್ತಾರೆ. ಬಹಳ ವಿಶೇಷವಾಗಿ ನಡೆಯುವ ಆಚರಣೆಯಾಗಿ, ಊರಿನ ಎಲ್ಲರೂ ದೇವರ ಉತ್ಸವದ ಹೆಸರಿನಲ್ಲಾದರೂ ಸೇರುವ, ಕೂಡಿ ಊಟ ಮಾಡುವ ಸಂದರ್ಭ ಏರ್ಪಡುತ್ತಿತ್ತು. ಪರಸ್ಪರ ವೈಮನಸು ಮರೆತು ಏಕತೆಯ ಭಾವ ಪ್ರಕಟಣೆಗೆ, ಒಗ್ಗಟ್ಟಿನ ಕಾರ್ಯ ಸಾಧನೆಗೆ ದಾರಿಯಗುತ್ತಿತ್ತು.ಮಾತ್ರವಲ್ಲ ಊರಿನ ಸುಖ ಶಾಂತಿ, ಬೆಳೆ, ಬೇಸಾಯದ ಉನ್ನತಿಗೆ ಇದು ಕಾರಣವಾಗುತ್ತದೆ ಎನ್ನುವ ಬಲವಾದ ಭಕ್ತಿಯ ನಂಬಿಕೆಯು ಮನೆ ಮಾಡಿತ್ತು. ದೈವ ಸಾನಿಧ್ಯದಲ್ಲಿ ಪೂಜೆಯ ಸಂದರ್ಭದಲ್ಲಿ ಊರಿನ ಸಮಸ್ತರ, ಬೆಳೆ ಬೇಸಾಯದ, ಸಾಕು ಪ್ರಾಣಿ ಮರಿ ಮಕ್ಕಳ ಕುರಿತಾಗಿ ವಿಶೇಷ ಪ್ರಾರ್ಥನೆ ನಡೆಯುತ್ತಿತ್ತು. ಪಲ್ಲಕ್ಕಿ ಹೋಗುವ ಮಾರ್ಗದುದ್ದಕ್ಕೂ ಪೂಜೆ ಕೊಡುವವರು, ಅಶ್ವಥ್ ಕಟ್ಟೆಯ ಮೇಲೆ ಕುಳ್ಳಿಸಿ ವಿಶೇಷ ಸೇವೆ ಸಲ್ಲಿಸುವವರು ಸೇವಾ ಕಾರ್ಯ ಮಾಡುತ್ತಿದ್ದರು.
ಪಂಚವಾದ್ಯದೊಂದಿಗೆ, ಪಲ್ಲಕ್ಕಿ ಹೋಗುವ ಮಾರ್ಗದುದ್ದಕ್ಕೂ ಹೂಕಾಯಿ ಹಣ್ಣುಗಳನ್ನು ಹಿಡಿದು ಕೇರಿಯ ಮಹಿಳೆಯರು ಮಕ್ಕಳು ಗಂಡಸರೆಲ್ಲ ಅಲ್ಲಲ್ಲಿ ಗುಂಪು ಗುಂಪಾಗಿ ಪೂಜೆ ಕೊಡುವವರು ಕಾಯುತ್ತಿರುತ್ತಾರೆ . ತಾವು ದೇವರ ಪಲ್ಲಕ್ಕಿಯನ್ನು ನಿಲ್ಲಿಸಿ ಪೂಜೆ ಕೊಡುವ ಸ್ಥಳವನ್ನು ಸಗಣಿಯಿಂದ ಸಾರಿಸಿ ಸೇಡಿಯಿಂದ ರಂಗೋಲಿ ಹಾಕಿ ಶುಭ್ರವಾಗಿ ಇಡುತ್ತಾರೆ. ಮಾತ್ರವಲ್ಲ ಅಶ್ವಥ ಕಟ್ಟೆಯ ಮೇಲೆ ಕುಳ್ಳಿಸಿ ವಿಶೇಷ ಪೂಜಾ ಸೇವೆ ಸಲ್ಲಿಸುವವರು ಸೇವಾ ಕಾರ್ಯ ಮಾಡುತ್ತಾರೆ. ಪಂಚ-ಕಜ್ಜಾಯ, ಬೆಲ್ಲದ ಪಾನಕ ಮಾಡಿ ದೇವರಿಗೆ ನೈವೇದ್ಯಕ್ಕೆ ಇಟ್ಟು ನಂತರ ನೆರೆದವರಿಗೆ ನೀಡುತ್ತಾರೆ.
ಈ ವನಭೋಜನ ಕಾರ್ತೀಕ ಮಾಸದ ನಂತರ ಬರುವ ಮಾರ್ಗಶಿರ ಮಾಸದಲ್ಲಿ ಆಗುವುದರ ಹಿಂದೆ ಕೆಲವು ತಿಳಿದು ಕೊಳ್ಳಬೇಕಾದ ಸಂಗತಿ ಇದೆ. ಈ ಸಮಯದಲ್ಲಿ ಕಾತಗಿ ಬೆಳೆ ಮನೆಗೆ ಬಂದಿರುತ್ತದೆ. ಬೆಳೆಗೆ ಕಾರಣ ಆಗಿದ್ದು ಉತ್ತಮ ಮಳೆ. ಉತ್ತಮ ಮಳೆ ಆಗಲೂ ಮುಖ್ಯ ಕಾರಣ ವನ. ಹಾಗಾಗಿ ತಾನು ಧಾನ್ಯವನ್ನು ಅಥವಾ ಕೃಷಿ ಮಾಡಲು ಕಾರಣವಾದ ವನದೇವತೆಯನ್ನು, ದೇವಾನು ದೇವತೆಗಳನ್ನು ವನಗಳನ್ನು ಪೂಜಿಸಿ, ಕೃತಜ್ಞತೆ ಅರ್ಪಿಸುವ ಕಾಲವು ಹೌದು. ಅಲ್ಲದೆ ಮುಂದಿನ ಸುಗ್ಗಿ ಬೆಳೆ ಈ ಮಾರ್ಗಶಿರ ಮಾಸದಿಂದಲೇ ಮತ್ತೆ ಪ್ರಾರಂಭ ಆಗುತ್ತದೆ. ಈಗ ಈ ಆಚರಣೆಯ ಹಿಂದಿರುವ ಸಂಬಂಧವನ್ನು ತಿಳಿದಾಗ ನಮ್ಮ ತಿಳುವಳಿಕೆ, ಪ್ರಜ್ಞೆ, ಉಪಕಾರ ಸ್ಮರಣೆ ಎಷ್ಟು ಸೌಜನ್ಯವಾದುದ್ದು. ಈ ನಾಡಿನ ಮಣ್ಣಿನ ಸಂಸ್ಕೃತಿ, ಸಂಸ್ಕಾರ ಎಷ್ಟು ಅದಮ್ಯ ಆಗಿದ್ದು ಎನ್ನುವುದು ತಿಳಿದು ಬರುತ್ತದೆ. ಭಾರತದ ಕಣ ಕಣದಲ್ಲೂ ದೇವರನ್ನು ಪ್ರತಿ ಸಂದರ್ಭದಲ್ಲಿಯು ಗೌರವ ಸಲ್ಲಿಸುವುದನ್ನು ಕಾಣಬಹುದಾಗಿದೆ
ಭಾರತೀಯ ಸಂಪ್ರದಾಯಕಾರ್ತಿಕ ಮಾಸಮಾರ್ಗಶಿರ ಮಾಸವನಭೋಜನದೈವ ಸಾನಿಧ್ಯಗ್ರಾಮೀಣ ಆಚರಣೆಸನಾತನ ಪದ್ಧತಿಭಾರತೀಯ ಸಂಸ್ಕೃತಿಹೊನ್ನಾವರ ತಾಲೂಕುಗುಣವಂತೆಪಲ್ಲಕ್ಕಿ ಉತ್ಸವಸಹಭೋಜನಕೃಷಿ ಸಂಸ್ಕೃತಿ